ಬ್ರೇಕಿಂಗ್ ನ್ಯೂಸ್
21-04-25 07:46 pm HK News Desk ದೇಶ - ವಿದೇಶ
ನವದೆಹಲಿ, ಏ.21: ರೋಮನ್ ಕ್ಯಾಥೋಲಿಕ್ ಧರ್ಮದ ಅತ್ಯುನ್ನತ ಧಾರ್ಮಿಕ ಸ್ಥಾನವಾದ ಪೋಪ್ ಫ್ರಾನ್ಸಿಸ್ 88 ನೇ ವಯಸ್ಸಿನಲ್ಲಿ ನಿಧನರಾದರು. ಇದರಿಂದಾಗಿ ಕ್ಯಾಥೋಲಿಕ್ಗಳ ಅತ್ಯುನ್ನತ ಧರ್ಮಗುರುವಿನ ಹುದ್ದೆ ಖಾಲಿಯಾಗಿದ್ದು, ಇದನ್ನು ವ್ಯಾಟಿಕನ್ನಲ್ಲಿ ದೀರ್ಘ ಪ್ರಕ್ರಿಯೆಯ ಮೂಲಕ ಭರ್ತಿ ಮಾಡಬೇಕಾಗಿದೆ. ಮುಂದಿನ ಪೋಪ್ ಅನ್ನು ಆಯ್ಕೆ ಮಾಡಲು ಎರಡು ಮೂರು ವಾರಗಳಲ್ಲಿ ಪೋಪ್ ಸಮಾವೇಶ ನಡೆಯುವ ಸಾಧ್ಯತೆಯಿದೆ.
ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ್ ಫ್ರಾನ್ಸಿಸ್ ಸೋಮವಾರ (ಏ.21) ತಮ್ಮ 88ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕ್ರೈಸ್ತ ಧರ್ಮದ ಅತಿದೊಡ್ಡ ಶಾಖೆಯ ನಾಯಕರಾಗಿ, ಪೋಪ್ ಫ್ರಾನ್ಸಿಸ್ ಜಗತ್ತಿನಾದ್ಯಂತ 1.4 ಶತಕೋಟಿ ಜನರಿಗೆ ಆಧ್ಯಾತ್ಮಿಕ ಧರ್ಮಗುರುವಾಗಿದ್ದರು. 2013ರಿಂದ ಪೋಪ್ ಆಗಿ ಸೇವೆ ಸಲ್ಲಿಸುತ್ತಿದ್ದ ಫ್ರಾನ್ಸಿಸ್, ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ವ್ಯಾಟಿಕನ್ ಸಿಟಿಯಲ್ಲಿ 9 ದಿನಗಳ ಶೋಕಾಚರಣೆ ನಡೆಯಲಿದೆ.
ಕ್ಯಾಥೋಲಿಕ್ ಚರ್ಚ್ನ ಮುಂದಿನ ಪೋಪ್ ಯಾರಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಈಗಾಗಲೇ ಕಾರ್ಡಿನಲ್ ಪಿಯೆಟ್ರೊ ಪರೋಲಿನ್, ಕಾರ್ಡಿನಲ್ ಪೀಟರ್ ಟರ್ಕ್ಸನ್, ಕಾರ್ಡಿನಲ್ ಲೂಯಿಸ್ ಆಂಟೋನಿಯೊ ಟ್ಯಾಗ್ಲೆ, ಕಾರ್ಡಿನಲ್ ಪೀಟರ್ ಎರ್ಡೋ ಮತ್ತು ಕಾರ್ಡಿನಲ್ ಮೈಕೋಲಾ ಬೈಚೋಕ್ ಮುಂತಾದವರು ಪೋಪ್ ಆಗುವ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿದ್ದಾರೆ.
ಪೋಪ್ ಫ್ರಾನ್ಸಿಸ್ ನಿಧನರಾದ ನಂತರ, ಹೊಸ ಪೋಪ್ ಅನ್ನು ಆಯ್ಕೆ ಮಾಡುವ ಪ್ರಕ್ರಿಯೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ಪ್ರಮುಖ ಅಭ್ಯರ್ಥಿಗಳ ಬಗ್ಗೆ ಮಾಹಿತಿ ಇಲ್ಲಿದೆ.
ಪೋಪ್ ಆಯ್ಕೆ ಹೇಗೆ;
ಪೋಪ್ ಆಯ್ಕೆಯು ಶತಮಾನಗಳಷ್ಟು ಹಳೆಯದಾದ ವ್ಯಾಟಿಕನ್ ಸಂಪ್ರದಾಯದಂತೆ ನಡೆಯುತ್ತದೆ. ಕಾಲೇಜ್ ಆಫ್ ಕಾರ್ಡಿನಲ್ಸ್ ಸದಸ್ಯರು ರಹಸ್ಯ ಮತದಾನ ಮಾಡುವ ಮೂಲಕ ಹೊಸ ಪೋಪ್ ಅನ್ನು ಆಯ್ಕೆ ಮಾಡುತ್ತಾರೆ. ಆದರೆ, 80 ವರ್ಷಕ್ಕಿಂತ ಮೇಲ್ಟಟ್ಟವರಿಗೆ ಮತ ಚಲಾಯಿಸುವ ಹಕ್ಕು ಇರುವುದಿಲ್ಲ.
ಕಾಲೇಜ್ ಆಫ್ ಕಾರ್ಡಿನಲ್ಸ್ನಲ್ಲಿ 120ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಯುರೋಪ್ ಅತಿ ಹೆಚ್ಚು ಕಾರ್ಡಿನಲ್ಸ್ಗಳನ್ನು ಹೊಂದಿದ್ದು, ಆಫ್ರಿಕಾ, ಲ್ಯಾಟಿನ್ ಅಮೆರಿಕದ ನಂತರದ ಸ್ಥಾನಗಳಲ್ಲಿವೆ. ಪೋಪ್ ನಿಧನದ 15ರಿಂದ 20 ದಿನಗಳ ನಂತರ ವ್ಯಾಟಿಕನ್ ಸಿಟಿಯಲ್ಲಿ ಸೇರುವ ಕಾರ್ಡಿನಲ್ಸ್ಗಳು ಸಿಸ್ಟಿನ್ ಚಾಪೆಲ್ನಲ್ಲಿ ರಹಸ್ಯ ಮತದಾನ ಮಾಡುತ್ತಾರೆ. ಹೊಸ ಪೋಪ್ ಆಯ್ಕೆ ಮಾಡಲು ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಬಹುಮತ ಸಿಗುವವರೆಗೂ ಮತದಾನ ಮುಂದುವರಿಯುತ್ತದೆ.
ಪ್ರತಿ ಸುತ್ತಿನಲ್ಲಿಯೂ ಅಭ್ಯರ್ಥಿ ಆಯ್ಕೆಯಾಗದೇ ಹೋದರೆ, ಆ ಬ್ಯಾಲೆಟ್ ಪೇಪರ್ಗಳನ್ನು ಸುಡಲಾಗುತ್ತದೆ. ಆಗ ಸಿಸ್ಟಿನ್ ಚಾಪೆಲ್ ಚಿಮಣಿಯಲ್ಲಿ ಕಪ್ಪು ಹೊಗೆ ಕಾಣಿಸಿಕೊಳ್ಳುತ್ತದೆ. ಇದು ಪೋಪ್ ಆಯ್ಕೆಯಾಗಿಲ್ಲ ಎಂಬುವುದನ್ನು ಸೂಚಿಸುತ್ತದೆ. ಯಾವಾಗ ಬಿಳಿ ಹೊಗೆ ಕಾಣಿಸುತ್ತದೆಯೋ ಆಗ ಹೊಸ ಪೋಪ್ ಆಯ್ಕೆಯಾಗಿದ್ದಾರೆ ಎಂದರ್ಥ.
ಹೀಗೆ ಹಲವು ಹೆಸರುಗಳು ಪೋಪ್ ಹುದ್ದೆಗೆ ಕೇಳಿ ಬರುತ್ತಿವೆ. ಮುಂದಿನ ದಿನಗಳಲ್ಲಿ ಯಾರು ಪೋಪ್ ಆಗುತ್ತಾರೆ ಎಂದು ಕಾದು ನೋಡಬೇಕಿದೆ.
Pope Francis passed away at the age of 88 on Easter Monday after prolonged illness. He was the first Latin American pontiff to lead the Roman Catholic Church after taking over from Pope Benedict XVI on March 13, 2013.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
18-05-25 08:23 pm
HK News Desk
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
18-05-25 12:42 pm
Mangalore Correspondent
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
18-05-25 07:45 pm
Mangaluru HK Staff
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm