ಬ್ರೇಕಿಂಗ್ ನ್ಯೂಸ್
15-05-25 09:09 pm HK News Desk ದೇಶ - ವಿದೇಶ
ಲಕ್ನೋ, ಮೇ 15 : ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಎಲ್ಲ ಪತ್ನಿಯರನ್ನು ಸಮಾನವಾಗಿ ನಡೆಸಿಕೊಂಡರೆ ಆತನಿಗೆ ಕುರಾನ್ ಪ್ರಕಾರ ಬಹು ವಿವಾಹವಾಗುವ ಅರ್ಹತೆ ಇದೆ. ಆದರೆ ಪುರುಷರು ಈ ನೀತಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಕುರಾನ್ ಅಡಿಯಲ್ಲಿ 'ಮಾನ್ಯ ಕಾರಣಕ್ಕಾಗಿ' ಷರತ್ತು ಬದ್ಧವಾಗಿ ಬಹುಪತ್ನಿತ್ವಕ್ಕೆ ಅವಕಾಶ ನೀಡಲಾಗಿದೆ. ಆದರೆ ಈ ರಿಯಾಯ್ತಿಯನ್ನು ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ಫರ್ಕಾನ್ ಎಂಬ ವ್ಯಕ್ತಿಯ ವಿರುದ್ಧ ಹೊರಡಿಸಿದ ಆರೋಪಪಟ್ಟಿ, ದೂರು ಮತ್ತು ಸಮನ್ಸ್ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿ ಅರುಣ್ ಕುಮಾರ್ ಸಿಂಗ್ ದೇಸ್ವಾಲ್ ಅವರಿದ್ದ ಏಕಸದಸ್ಯ ಪೀಠ ಈ ಅಭಿಪ್ರಾಯ ನೀಡಿದೆ. 2020ರಲ್ಲಿ ಮಹಿಳೆಯೊಬ್ಬರು ಫರ್ಕಾನ್ ವಿರುದ್ಧ ದೂರು ನೀಡಿದ್ದು, ಬೇರೆ ಮಹಿಳೆಯನ್ನು ಮದುವೆಯಾಗಿರುವ ವಿಷಯ ತಿಳಿಸದೆ ತನ್ನನ್ನು ಮದುವೆಯಾಗಿದ್ದಾರೆ. ಫರ್ಕಾನ್ ಮದುವೆ ಸಮಯದಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಈ ಬಗ್ಗೆ ಮೊರಾದಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಫರ್ಕಾನ್ ಸೇರಿದಂತೆ ಮೂವರು ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಲಾಗಿತ್ತು.
ಮಹಿಳೆ ಫರ್ಕಾನ್ ಜೊತೆ ಸಂಬಂಧ ಹೊಂದಿದ ಬಳಿಕವೇ ಮದುವೆಯಾಗಿದ್ದರು. ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 494 ರ ಅಡಿಯಲ್ಲಿ ಇನ್ನೊಬ್ಬರನ್ನು ಮದುವೆಯಾಗಿರುವ ವ್ಯಕ್ತಿಯನ್ನು ಮರು ಮದುವೆ ಆಗುವುದು ಅಮಾನ್ಯ ಎಂದು ಮಹಿಳೆ ಪರ ವಕೀಲರು ವಾದಿಸಿದರು.
ಏಕರೂಪ ನಾಗರಿಕ ಸಂಹಿತೆಯಡಿ ಮಾತ್ರ ಎಲ್ಲರಿಗೂ ಒಂದೇ ರೀತಿಯ ವಿವಾಹ ಕಾಯ್ದೆ ಅನ್ವಯವಾಗುತ್ತದೆ. ಈಗಿನ ಕಾನೂನಿನಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ಅವಕಾಶ ಇರುವಾಗ ಈ ಕಾನೂನು ಚಾಲ್ತಿಗೆ ಬರುತ್ತದೆಯೇ ಎಂದು ಪ್ರಶ್ನಿಸಿದ ನ್ಯಾಯಮೂರ್ತಿ ದೇಸ್ವಾಲ್, ಮುಸ್ಲಿಂ ಪುರುಷನಿಗೆ ನಾಲ್ಕು ಮದುವೆಯಾಗಲು ಕುರಾನ್ ಪ್ರಕಾರ ಅವಕಾಶವಿದೆ. ಮದುವೆ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು 1937ರ ಶರಿಯತ್ ಕಾಯ್ದೆ ಪ್ರಕಾರ ನಿರ್ಧರಿಸಬೇಕಾಗುತ್ತದೆ. ಹಿಂದು ವಿವಾಹ ಕಾಯ್ದೆಯಾಗಲೀ, ಇತರ ಕಾನೂನು ಅವರಿಗೆ ಅನ್ವಯ ಆಗಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಅಲಹಾಬಾದ್ ಹೈಕೋರ್ಟ್ ತನ್ನ 18 ಪುಟಗಳ ತೀರ್ಪಿನಲ್ಲಿ ಫರ್ಕಾನ್ ಅವರ ಇಬ್ಬರು ಪತ್ನಿಯರೂ ಮುಸ್ಲಿಮರೇ ಆಗಿರುವುದರಿಂದ ಎರಡನೇ ವಿವಾಹವು ಮಾನ್ಯವಾಗಿದೆ ಎಂದು ಹೇಳಿದೆ. ಮುಂದಿನ ವಿಚಾರಣೆಗೆ ನ್ಯಾಯಾಲಯವು ಮೇ 26 ರಂದು ದಿನಾಂಕ ನಿಗದಿ ಪಡಿಸಿದೆ.
The Allahabad High Court recently observed that a Muslim man is entitled to marry multiple times as long as he treats all his wives equally. The court underscored that polygamy was conditionally permitted under the Quran for a "valid reason", but is "misused" by men for "selfish reasons".
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 11:00 pm
Mangalore Correspondent
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
Loudspeaker, Punjalkatte,Farangipete: ಪುಂಜಾಲ...
28-08-25 02:51 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm