ಬ್ರೇಕಿಂಗ್ ನ್ಯೂಸ್
07-09-23 07:22 pm HK News Desk ದೇಶ - ವಿದೇಶ
ನವದೆಹಲಿ, ಸೆ 07: ಗಣಿಯೊಳಗೆ ಸಿಲುಕಿದ 65 ಕಾರ್ಮಿಕರ ರಕ್ಷಣೆಯ ಕಥೆಯುಳ್ಳ ಅಕ್ಷಯ್ ಕುಮಾರ್ ನಟನೆಯ ‘ಮಿಷನ್ ರಾಣಿಗಂಜ್: ದಿ ಗ್ರೇಟ್ ಇಂಡಿಯಾ ರೆಸ್ಕ್ಯೂ’ ಚಿತ್ರದಲ್ಲಿದ್ದ ‘ಇಂಡಿಯಾ’ ಪದವನ್ನು ಈಗ ‘ಭಾರತ್’ ಎಂದು ಬದಲಿಸಿರುವ ಸಂಗತಿ ಈಗ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.
ಜಿ20 ಶೃಂಗದಲ್ಲಿ ಪಾಲ್ಗೊಳ್ಳುವ ವಿಶ್ವದ ನಾಯಕರಿಗೆ ರಾಷ್ಟ್ರಪತಿ ನೀಡಿರುವ ಭೋಜನಕೂಟದ ಆಹ್ವಾನ ಪತ್ರಿಕೆಯಲ್ಲಿ ‘ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಮುದ್ರಿಸಿದ ನಂತರ ಇಂಡಿಯಾ ಹಾಗೂ ಭಾರತ್ ಎಂಬ ಹೆಸರಿನ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ. ಈ ಚರ್ಚೆಗೆ ಮಿಷನ್ ರಾಣಿಗಂಜ್ ಚಿತ್ರ ಈಗ ಹೊಸ ಸೇರ್ಪಡೆ.
ಹೆಸರು ಬದಲಾವಣೆ ಕುರಿತು ಅಕ್ಷಯ್ ಕುಮಾರ್ ಅವರು ತಮ್ಮ ಮೈಕ್ರೊ ಬ್ಲಾಗಿಂಗ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರ ಟ್ವೀಟ್ ಕುರಿತು ವ್ಯಾಪಕ ಪರ ಹಾಗೂ ವಿರೋಧ ಚರ್ಚೆಗಳು ನಡೆಯುತ್ತಿವೆ. ಅಕ್ಷಯ್ ಕುಮಾರ್ ಅವರು ತಮ್ಮ ಹಿಂದಿನ ಟ್ವೀಟ್‌ನಲ್ಲಿ ಚಿತ್ರದ ಹೆಸರಿನಲ್ಲಿದ್ದ ‘ಇಂಡಿಯಾ’ವನ್ನು ಬಳಸಿದ್ದರು. ಆದರೆ ಆ ಟ್ವೀಟ್ ಈಗ ಎಲ್ಲಿ ಹೋಯಿತು? ಎಂದು ಕೆಲವರು ಪ್ರಶ್ನಿಸಿದ್ದಾರೆ.
ಹಾಗಿದ್ದರೆ ನಿಮ್ಮ ಮುಂದಿನ ಚಿತ್ರವೂ ’ಭಾರತ್’ ಆಗಿರುತ್ತದೆಯೇ ಎಂದು ಮತ್ತೊಬ್ಬರು ಕೇಳಿದ್ದಾರೆ. ಕಳೆದ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಭಾರತದ ಪೌರತ್ವ ಪಡೆದಿರುವ ಅಕ್ಷಯ್ ಕುಮಾರ್ ಅವರ ಕೆನಡಾ ಪೌರತ್ವದ ಕುರಿತೂ ಎಕ್ಸ್ ವೇದಿಕೆಯಲ್ಲಿ ಚರ್ಚೆಗಳು ನಡೆದಿವೆ.
ಮಿಷನ್ ರಾಣಿಗಂಜ್ ಚಿತ್ರವು ಕಲ್ಲಿದ್ದಲ್ಲಿ ಗಣಿ ಕುರಿತಾಗಿದ್ದು, ಎಂಜಿನಿಯರ್ ಜಸ್ವಂತ್ ಸಿಂಗ್ ಗಿಲ್ ಎಂಬುವವರ ಜೀವನಾಧಾರಿತವಾಗಿದೆ. 1989ರಲ್ಲಿ ಕಲ್ಲಿದ್ದಲ್ಲು ಗಣಿಯಲ್ಲಿ ಉಂಟಾದ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಯಲ್ಲಿ ಅವರು ಮಹತ್ತರ ಪಾತ್ರ ವಹಿಸಿದ್ದರು. ಚಿತ್ರದಲ್ಲಿ ಪರಿಣೀತಿ ಛೋಪ್ರಾ, ಕುಮುದ್ ಮಿಶ್ರಾ, ಪವನ್ ಮಲ್ಹೋತ್ರಾ, ರವಿ ಕಿಶನ್, ವರುಣ್ ಬಡೋಲಾ, ದಿಬ್ಯೇಂದು ಭಟ್ಟಾಚಾರ್ಯ, ರಾಜೇಶ್ ಶರ್ಮಾ, ವಿಜೇಂದ್ರ ಸೆಕ್ಸೆನಾ ನಟಿಸಿದ್ದಾರೆ. ಟಿನು ಸುರೇಶ್ ದೇಸಾಯಿ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
Akshay Kumar is back with a new film, and it has an interesting ‘Bharat’ connection. The actor dropped the motion poster of Mission Raniganj on Wednesday, but the internet noticed a couple of altered references to ‘Bharat’ in his Instagram post.
18-04-26 05:59 pm
HK News Staffer
ದುಬೈನಲ್ಲಿ ಕಚೇರಿ, ಟ್ರೇಡಿಂಗ್ ಹೆಸರಲ್ಲಿ ಕೋಟಿ ಕೋಟಿ...
18-04-26 02:43 pm
ರಾಹುಲ್ ಗಾಂಧಿ ದ್ವಿಪೌರತ್ವ ; ಬ್ರಿಟಿಷ್ ಪ್ರಜೆಯೆಂದು...
18-04-26 10:20 am
ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ...
17-04-26 07:27 pm
ಯಾದಗಿರಿ ದೇವಸ್ಥಾನದಿಂದ ಮರಳುತ್ತಿದ್ದವರ ದುರಂತ ಅಂತ್...
17-04-26 01:39 pm
18-04-26 11:39 pm
HK News Desk
ಗಲ್ಫ್ ಸಂಘರ್ಷ ಸದ್ಯಕ್ಕೆ ತೆರೆ ; ಹೊರ್ಮುಜ್ ಜಲಸಂಧಿ...
18-04-26 10:31 am
ದುರಂತ ಅಂತ್ಯ ಕಂಡ ವಿಚ್ಛೇದನ ಕಲಹ ; ಪತ್ನಿಗೆ ಗುಂಡಿಕ...
17-04-26 08:08 pm
ಹೊಟ್ಟೆನೋವೆಂದು ಆಸ್ಪತ್ರೆಗೆ ಹೋಗಿದ್ದ ವ್ಯಕ್ತಿಗೆ ಬಿ...
17-04-26 11:27 am
250 ರೋಹಿಂಗ್ಯಾಗಳಿದ್ದ ಬೋಟ್ ಅಂಡಮಾನ್ ಸಮುದ್ರದಲ್ಲಿ...
16-04-26 01:09 pm
20-04-26 05:28 pm
HK News Staffer
2026ನೇ ಸಾಲಿನ ಫೆಮಿನಾ ಮಿಸ್ ಇಂಡಿಯಾ ಕಿರೀಟ ಮುಡಿಗೇರ...
20-04-26 01:02 pm
ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳು ಖಾಸಗಿ ತೆಕ್ಕ...
19-04-26 10:41 pm
ಪುತ್ತೂರು ಜಾತ್ರೆ ; ಸುಡುಮದ್ದು ಉತ್ಸವದಲ್ಲಿ ಬೆಂಕಿ...
18-04-26 11:31 pm
ಕುಂಪಲದಲ್ಲಿ ಏಕಾಏಕಿ ಕುಸಿದು ಬಿದ್ದ ಭಾರೀ ಗಾತ್ರದ ಆವ...
18-04-26 11:09 pm
20-04-26 03:44 pm
HK News Staffer
ಮಣಿಪಾಲದ ಸಾಫ್ಟ್ವೇರ್ ಕಂಪನಿಗೆ ಕೋಟ್ಯಂತರ ಮೌಲ್ಯದ ಷ...
20-04-26 11:13 am
ಬೈಕಿನಲ್ಲಿ 46 ಲಕ್ಷ ಮೌಲ್ಯದ ಡ್ರಗ್ಸ್ ಇಟ್ಟುಕೊಂಡು ವ...
19-04-26 10:23 pm
ಶಿವಮೊಗ್ಗ ; ಹುಟ್ಟುಹಬ್ಬದ ಪಾರ್ಟಿ ವೇಳೆ ಚಿಕನ್ ಮೂಳೆ...
19-04-26 02:58 pm
15 ವರ್ಷಗಳ ಹಿಂದೆ ಜೈಲಿನಿಂದ ತಪ್ಪಿಸಿಕೊಂಡು ಮುಂಬೈ,...
19-04-26 02:24 pm