ಬ್ರೇಕಿಂಗ್ ನ್ಯೂಸ್
17-07-26 10:32 am HK News Staffer ದೇಶ - ವಿದೇಶ
ಪಾಟ್ನಾ, ಜುಲೈ 17: ಜಗತ್ತಿನ ಅಪಾಯಕಾರಿ ಸರ್ಪಗಳಲ್ಲಿ ಒಂದಾದ ಕಿಂಗ್ ಕೋಬ್ರಾ ಅಥವಾ ಕಾಳಿಂಗ ಸರ್ಪದಿಂದ ಬರೋಬ್ಬರಿ 51 ಬಾರಿ ಕಚ್ಚಿಸಿಕೊಂಡರೂ ಬಿಹಾರದ ಸ್ನೇಕ್ ಲೇಡಿ ಜಾನಕಿ ದೇವಿ ಪವಾಡಸದೃಶ ಬದುಕುಳಿದಿದ್ದಾರೆ ಎನ್ನುವುದು ದೇಶದ ಗಮನ ಸೆಳೆದಿದೆ. ಬಿಹಾರದಲ್ಲಿ "ಸ್ನೇಕ್ ಲೇಡಿ" ಎಂದೇ ಖ್ಯಾತಿ ಪಡೆದಿರುವ ಜಾನಕಿ ದೇವಿ ಅವರಿಗೆ ಹಾವು ರಕ್ಷಣೆ ಕಾರ್ಯಾಚರಣೆ ವೇಳೆ 51 ಬಾರಿ ವಿಷದ ಹಾವುಗಳು ಕಚ್ಚಿದರೂ, ಸಕಾಲದಲ್ಲಿ ಚಿಕಿತ್ಸೆ ದೊರೆತಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
56 ವರ್ಷದ ಜಾನಕಿ ದೇವಿ ಜುಲೈ 15ರ ಸಂಜೆ ಬಿಹಾರದ ಪಶ್ಚಿಮ ಚಂಪಾರಣ ಜಿಲ್ಲೆಯ ಭಾರತ-ನೇಪಾಳ ಗಡಿಭಾಗದ ವಾಲ್ಮೀಕಿನಗರ ಸಮೀಪದ ಬಿಸಾಹಾ ಗ್ರಾಮದಲ್ಲಿ ಮನೆಯೊಂದಕ್ಕೆ ನುಗ್ಗಿದ್ದ ಕಿಂಗ್ ಕೋಬ್ರಾ ಹಾವನ್ನು ರಕ್ಷಿಸಲು ತೆರಳಿದ್ದರು. ಈ ವೇಳೆ ಹಾವನ್ನು ಹಿಡಿದು ಪೋಸು ನೀಡುತ್ತಿದ್ದಾಗ ಜಾನಕಿ ದೇವಿಗೆ ಕಚ್ಚಿದ್ದು, ಕೂಡಲೇ ಅವರನ್ನು ನೇಪಾಳದ ತ್ರಿವೇಣಿ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಚಿಕಿತ್ಸೆ ನೀಡಿದ್ದು, ಚೇತರಿಕೆ ಕಂಡಿದ್ದಾರೆ ಎಂದು ತಿಳಿಸಿದ್ದಾರೆ.
ಫೋಟೋಗೆ ಪೋಸ್ ನೀಡುತ್ತಿದ್ದಾಗ ಕಚ್ಚಿದ ಸರ್ಪ
ಬಿಸಾಹಾ ಗ್ರಾಮದ ನಿವಾಸಿಯೊಬ್ಬರ ಮನೆಗೆ ಕಿಂಗ್ ಕೋಬ್ರಾ ನುಗ್ಗಿತ್ತು. ಸ್ಥಳೀಯರ ಮಾಹಿತಿ ಮೇರೆಗೆ ಜಾನಕಿ ದೇವಿ ಸ್ಥಳಕ್ಕೆ ತೆರಳಿ ಹಾವನ್ನು ಸುರಕ್ಷಿತವಾಗಿ ಹಿಡಿದು ರಕ್ಷಿಸಿದ್ದರು. ಬಳಿಕ ಅದನ್ನು 6 ಆರ್‌ಡಿ ಪ್ರದೇಶಕ್ಕೆ ಕೊಂಡೊಯ್ದು, ಕುತ್ತಿಗೆಯ ಸುತ್ತ ಕಿಂಗ್ ಕೋಬ್ರಾವನ್ನು ಸುತ್ತಿಕೊಂಡು ಛಾಯಾಚಿತ್ರಗಳಿಗೆ ಪೋಸ್ ನೀಡಿದ್ದು ಈ ವೇಳೆ, ಏಕಾಏಕಿ ಹಾವು ಅವರ ಕೈಗೆ ಕಚ್ಚಿದೆ. ತಕ್ಷಣವೇ ಅವರನ್ನು ನೇಪಾಳದ ನವಲ್ಪರಾಸಿ ಜಿಲ್ಲೆಯ ತ್ರಿವೇಣಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
12ನೇ ವಯಸ್ಸಿನಿಂದಲೇ ಹಾವು ಹಿಡಿಯುತ್ತಿದ್ದ ಜಾನಕಿ ದೇವಿ
ಅಂದಹಾಗೆ ಜಾನಕಿ ದೇವಿ ಬಿಹಾರದಲ್ಲಿ ಸ್ನೇಕ್ ಲೇಡಿ ಎಂದೇ ಹೆಸರು ಗಳಿಸಿದ್ದಾರೆ. ಸ್ಥಳೀಯರ ಪ್ರಕಾರ, ಜಾನಕಿ ದೇವಿ 12ನೇ ವಯಸ್ಸಿನಿಂದಲೇ ಹಾವುಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಸಿದ್ದಾರೆ. ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಅವಧಿಯಲ್ಲಿ ಸಾವಿರಾರು ವಿಷಕಾರಿ ಹಾವುಗಳನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡುವ ಮೂಲಕ ಜನರ ಮೆಚ್ಚುಗೆ ಗಳಿಸಿದ್ದಾರೆ. ಅಚ್ಚರಿ ಸಂಗತಿಯೆಂದರೆ, ಇದುವರೆಗೆ 50ಕ್ಕೂ ಹೆಚ್ಚು ಬಾರಿ ವಿಷಕಾರಿ ಹಾವುಗಳಿಂದ ಕಚ್ಚಿಸಿಕೊಂಡರೂ ಪ್ರತೀ ಬಾರಿಯೂ ಸಾವಿನಿಂದ ಪಾರಾಗಿ ಮತ್ತೆ ಹಾವು ರಕ್ಷಣೆಯಲ್ಲಿ ತೊಡಗಿಸಿದ್ದಾರೆ.
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm