ಬ್ರೇಕಿಂಗ್ ನ್ಯೂಸ್
17-07-26 10:25 pm HK News Staffer ಕರಾವಳಿ
ಮಂಗಳೂರು, ಜು.17: ಬಿಸಿರೋಡ್ನಲ್ಲಿ ನಡುರಸ್ತೆಯಲ್ಲೇ ಯುವತಿ ಲಾವಣ್ಯಳನ್ನ ಮಾರಕಾಸ್ತ್ರದಿಂದ ಹತ್ಯೆ ಮಾಡಿದ ಪ್ರಕರಣ ಇಡೀ ಕರಾವಳಿಯನ್ನು ಬೆಚ್ಚಿಬೀಳಿಸಿದೆ. ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಚೇತನ್ನನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದು, ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಇದೇ ವೇಳೆ ಮಗಳನ್ನು ಕಳೆದುಕೊಂಡ ನೋವಿನಲ್ಲಿ ಮುಳುಗಿರುವ ಲಾವಣ್ಯ ಕುಟುಂಬಸ್ಥರು ಆರೋಪಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಬಂಧಿಸಬೇಡಿ... ನಡುರಸ್ತೆಯಲ್ಲೇ ಎನ್ಕೌಂಟರ್ ಮಾಡಿ’
ನ್ಯೂಸ್18 ಕನ್ನಡದೊಂದಿಗೆ ಮಾತನಾಡಿದ ಲಾವಣ್ಯ ತಂದೆ ಬಾಲಕೃಷ್ಣ ಗೌಡ, ಆರೋಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಚೇತನ್ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಅವನು ನಮ್ಮ ಮನೆಗೆ ಎಂದಿಗೂ ಬಂದಿರಲಿಲ್ಲ. ದೂರದ ಸಂಬಂಧಿ ಅಷ್ಟೇ. ಲಾವಣ್ಯ ಅವನೊಂದಿಗೆ ಮಾತನಾಡುತ್ತಿದ್ದಳೋ ಇಲ್ಲವೋ ನಮಗೆ ಗೊತ್ತಿರಲಿಲ್ಲ. ಯಾವುದೇ ವಿಚಾರವನ್ನೂ ಆಕೆ ನಮ್ಮ ಬಳಿ ಹೇಳಿರಲಿಲ್ಲ. ಇಂತಹವನನ್ನು ಬಂಧಿಸುವುದಲ್ಲ, ನಡುರಸ್ತೆಯಲ್ಲೇ ಎನ್ಕೌಂಟರ್ ಮಾಡಬೇಕು" ಎಂದು ಅವರು ಆಗ್ರಹಿಸಿದರು.

‘ಅವನನ್ನು ಇಲ್ಲಿಗೆ ಕರೆತನ್ನಿ... ನಾನೇ ಮುಗಿಸುತ್ತೇನೆ’ ಎಂದ ತಾಯಿ
ಮಗಳ ಸಾವಿನಿಂದ ಕಂಗಾಲಾಗಿರುವ ಲಾವಣ್ಯ ತಾಯಿ ಕಣ್ಣೀರಿಡುತ್ತಾ, "ಆತನನ್ನು ಇಲ್ಲಿಗೆ ಕರೆತನ್ನಿ. ಊರಿನ ಜನರೆಲ್ಲರ ಎದುರೇ ನಾನೇ ಅವನನ್ನು ಮುಗಿಸುತ್ತೇನೆ. ನನ್ನ ಮಗಳು ಅಮಾಯಕಳು. ಅವಳು ಯಾರೊಂದಿಗೂ ಅನಗತ್ಯವಾಗಿ ಮಾತನಾಡುವ ಸ್ವಭಾವದವಳಲ್ಲ. ಕೆಲಸಕ್ಕೆ ಹೋಗಬೇಡ ಎಂದರೂ, ಮನೆಯಲ್ಲಿ ಕೂರುವುದಿಲ್ಲ ಎಂದು ಹಠ ಹಿಡಿದು ಕೆಲಸಕ್ಕೆ ಹೋಗಿದ್ದಳು. ಹಣದ ಅನಿವಾರ್ಯತೆ ಇರಲಿಲ್ಲ. ಕಲಿತಿದ್ದಾಳೆ ಎಂಬ ಕಾರಣಕ್ಕೆ ಕಳುಹಿಸಿದ್ದೆವು. ಅವಳು ಎಲ್ಲ ವಿಚಾರವನ್ನೂ ನಮ್ಮ ಬಳಿ ಹಂಚಿಕೊಳ್ಳುತ್ತಿದ್ದಳು. ಆದರೆ ಈ ವಿಚಾರವನ್ನು ಹೇಳಿರಲಿಲ್ಲ. ಯಾವುದೇ ಕಾರಣಕ್ಕೂ ಆರೋಪಿಯನ್ನು ಸುಮ್ಮನೆ ಬಿಡಬಾರದು" ಎಂದು ಆಕ್ರಂದನ ವ್ಯಕ್ತಪಡಿಸಿದರು.
ಲಾವಣ್ಯ ಸ್ವಗ್ರಾಮ ಕಕ್ಕೆಪದವಿನ ಕೊಡಂಗೆ ಉಳಿ ಪ್ರದೇಶದ ಮನೆಯಲ್ಲಿ ಶೋಕದ ವಾತಾವರಣ ಮನೆ ಮಾಡಿದೆ. ಮಂಗಳೂರಿನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು, ಮನೆ ಬಳಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆಗಳು ನಡೆಯುತ್ತಿವೆ.
ನಾಲ್ಕು ವರ್ಷಗಳ ಹಿಂದೆಯೇ ಬ್ರೇಕಪ್?
ಪ್ರಾಥಮಿಕ ತನಿಖೆಯ ಪ್ರಕಾರ, ಲಾವಣ್ಯ ಮತ್ತು ಚೇತನ್ ನಡುವಿನ ಸಂಬಂಧ ಸುಮಾರು ನಾಲ್ಕು ವರ್ಷಗಳ ಹಿಂದೆಯೇ ಮುರಿದು ಹೋಗಿತ್ತು ಎನ್ನಲಾಗಿದೆ. ಆದರೂ ಚೇತನ್ ಲಾವಣ್ಯರನ್ನು ನಿರಂತರವಾಗಿ ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಈ ಎಲ್ಲಾ ಆಯಾಮಗಳ ಬಗ್ಗೆ ಬಂಟ್ವಾಳ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಹುಟ್ಟೂರಿನಲ್ಲಿ ಅಂತಿಮ ಸಂಸ್ಕಾರ :
ಲಾವಣ್ಯ ಗೌಡ ಅಂತಿಮ ಸಂಸ್ಕಾರ ಹುಟ್ಟೂರಿನ ಅವರ ನಿವಾಸದ ಬಳಿ ನಡೆಯಿತು. ಅದಕ್ಕೂ ಮುನ್ನ ದೇರಳಕಟ್ಟೆ
ಕೆ.ಎಸ್ ಹೆಗ್ಡೆ ಆಸ್ಪತ್ರೆಯಿಂದ ಮರಣೋತ್ತರ ಪರೀಕ್ಷೆ ಬಳಿಕ ಅವರ ಪಾರ್ಥಿವ ಶರೀರವನ್ನು ಅಂಬ್ಯಲೆನ್ಸ್ ನಲ್ಲಿ ಮೆರವಣಿಗೆಯಲ್ಲಿ ಹುಟ್ಟೂರಿಗೆ ತರಲಾಯಿತು.
ದಾರಿ ಮಧ್ಯೆ ಅವರು ಸೇವೆ ಸಲ್ಲಿಸುತ್ತಿದ್ದ ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಮ್ ಮುಂಭಾಗದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಯಿತು. ಅವರ ಸಹೋದ್ಯೋಗಿಗಳು, ಆಸ್ಪತ್ರೆಯ ಸಿಬಂದಿ, ಸ್ನೇಹಿತರು ಹಾಗೂ ಸ್ಥಳೀಯರು ಅಂತಿಮ ದರ್ಶನ ಪಡೆದು ಕಣ್ಣೀರಿನ ವಿದಾಯ ಸಲ್ಲಿಸಿದರು.
ಅಲ್ಲಿಂದ ಮೃತದೇಹವನ್ನು ಕಕ್ಯಪದವು ಜಂಕ್ಷನ್ಗೆ ತರಲಾಗಿದ್ದು, ಅಲ್ಲಿಯೂ ಸಾರ್ವಜನಿಕರಿಗಾಗಿ ಅಂತಿಮ ದರ್ಶನಕ್ಕೆ ಕೆಲಕಾಲ ವ್ಯವಸ್ಥೆ ಮಾಡಲಾಗಿತ್ತು. ಸಾರ್ವಜನಿಕರು ಹಾಗೂ ಊರವರು ಶೋಕತಪ್ತರಾಗಿ ನೆರೆದಿದ್ದರು. ನಂತರ ಹುಟ್ಟೂರಿಗೆ ಕೊಂಡೊಯ್ಯಲಾಯಿತು. ನಿವಾಸದಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ನೆರೆದಿದ್ದ ರಾಜಕೀಯ ನಾಯಕರು, ಸಂಘಟನೆಗಳ ಮುಖಂಡರು ಬಂಧು-ಬಳಗ, ಸ್ನೇಹಿತರು, ಹಾಗೂ ಗ್ರಾಮಸ್ಥರು ಮರುಗಿ ಕಣ್ಣೀರಿನೊಂದಿಗೆ ಅಂತಿಮ ನಮನ ಸಲ್ಲಿಸಿದರು.
ಕುಟುಂಬದ ಸದಸ್ಯರು ಹಾಗೂ ಬಂಧುಗಳ ಸಮ್ಮುಖದಲ್ಲಿ ಅಂತ್ಯಕ್ರಿಯೆಯ ವಿಧಿ- ವಿಧಾನಗಳು ನೆರವೇರಿದವು. ಹೂವಿನ ಹಾರಗಳಿಂದ ಅಲಂಕರಿಸಲಾಗಿದ್ದ ಲಾವಣ್ಯಳ ಪಾರ್ಥಿವ ಶರೀರವನ್ನು ಅಗ್ನಿಗೆ ಸಮರ್ಪಿಸಲಾಯಿತು.
ಸಚಿವ ಯು.ಟಿ.ಖಾದರ್, ಸಂಸದ ಕ್ಯಾ.ಬೃಜೇಶ್ ಚೌಟ, ಮಾಜಿ ಸಚಿವ ಬಿ.ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ, ಹಿಂದೂ ಸಂಘಟನೆಯ ಮುಖಂಡ ಶರಣ್ ಪಂಪ್ವೆಲ್ ಮತ್ತಿತರರು ಅಂತಿಮ ನಮನ ಸಲ್ಲಿಸಿದರು.
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 05:29 pm
HK News Staffer
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm