ಬ್ರೇಕಿಂಗ್ ನ್ಯೂಸ್
20-06-22 03:37 pm HK News Desk ದೇಶ - ವಿದೇಶ
ಚಂಡೀಗಢ, ಜೂನ್ 20: 16 ವರ್ಷದ ಅಪ್ರಾಪ್ತ ಮುಸ್ಲಿಂ ಯುವತಿಯನ್ನು ಮದುವೆಯಾದ ಪ್ರಕರಣದಲ್ಲಿ ಪಂಜಾಬ್- ಹರ್ಯಾಣ ಹೈಕೋರ್ಟ್, ಮುಸ್ಲಿಂ ಪರ್ಸನಲ್ ಕಾನೂನು ಪ್ರಕಾರ ಯುವತಿಗೆ ಮದುವೆಯಾಗಲು 16 ವರ್ಷ ಪೂರ್ತಿಯಾದರೆ ಕಾನೂನು ಸಮ್ಮತ ಎಂದು ತೀರ್ಪು ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಪಂಜಾಬ್ ರಾಜ್ಯದ ಪಠಾಣ್ ಕೋಟ್ ಮೂಲದ 16 ವರ್ಷದ ಯುವತಿ ಮತ್ತು 21 ವರ್ಷದ ಹುಡುಗ ಹೆತ್ತವರ ವಿರೋಧ ಇದ್ದರೂ ಮದುವೆಯಾಗಿದ್ದರು. ಮದುವೆಯ ಬಳಿಕ ಯುವತಿ ಮನೆಯವರು ಬೆದರಿಕೆ ಹಾಕಿದ್ದರಿಂದ ತಮಗೆ ರಕ್ಷಣೆ ನೀಡಬೇಕೆಂದು ಯುವ ಜೋಡಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿತ್ತು.
ವಿಚಾರಣೆ ನಡೆಸಿದ ಜಸ್ ಜಿತ್ ಸಿಂಗ್ ಬೇಡಿ ಅವರಿದ್ದ ಏಕಸದಸ್ಯ ಪೀಠವು, ವಕೀಲರು ಮುಂದಿಟ್ಟ ವಾದವನ್ನು ಪುರಸ್ಕರಿಸಿದ್ದು ಮುಸ್ಲಿಂ ಯುವತಿಯರ ಮದುವೆ ನಿರ್ಣಯವನ್ನು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನಿಯಮದ ಪ್ರಕಾರ ಅನುಸರಿಸಲಾಗುವುದು. ಸರ್ ದಿನ್ಶಾ ಫರ್ದುಂಜಿ ಮುಲ್ಲಾ ಅವರು ಬರೆದಿರುವ ‘ಪ್ರಿನ್ಸಿಪಲ್ ಆಫ್ ಮೊಹಮ್ಮಡನ್ ಲಾ’ ಎನ್ನುವ ಪುಸ್ತಕದಲ್ಲಿ ಉಲ್ಲೇಖಿತ 195 ಆರ್ಟಿಕಲ್ ಪ್ರಕಾರ, ಮುಸ್ಲಿಮ್ ಯುವತಿಯರು ತನ್ನ ಸಂಗಾತಿಯನ್ನು ಆಯ್ದುಕೊಳ್ಳಲು 16 ವರ್ಷ ಆಗಿರಬೇಕು. ಆದರೆ ಹುಡುಗ ಮಾತ್ರ 21 ವರ್ಷ ಪೂರ್ತಿಗೊಳಿಸಿರಬೇಕು. ಇದರ ಪ್ರಕಾರ, ಈ ಮದುವೆ ಮುಸ್ಲಿಂ ಲಾ ಬೋರ್ಡ್ ಪ್ರಕಾರ ಕಾನೂನು ಸಮ್ಮತ ಎಂದು ತೀರ್ಪು ನೀಡಿದ್ದಾರೆ.
ಇತ್ತೀಚೆಗೆ ಜೂನ್ 8ರಂದು ಯುವಕ ಮತ್ತು ಯುವತಿ ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿದ್ದರು. ಆದರೆ, ಹುಡುಗಿ ಹೆತ್ತವರ ವಿರೋಧ ಇದ್ದುದರಿಂದ ಹುಡುಗನಿಗೆ ಬೆದರಿಕೆ ಹಾಕಿದ್ದರು. ಆನಂತರ, ಯುವ ಜೋಡಿ ಮುಸ್ಲಿಂ ಲಾ ಬೋರ್ಡನ್ನು ಮುಂದಿಟ್ಟು ಹೈಕೋರ್ಟಿಗೆ ಅಪೀಲು ಮಾಡಿತ್ತು. ಮುಸ್ಲಿಂ ಲಾ ಬೋರ್ಡ್ ಪ್ರಕಾರ, ಯುವತಿಯರ ಪ್ರೌಢಾವಸ್ಥೆ ಬಗ್ಗೆ ಉಲ್ಲೇಖ ಇದೆ, ಅದರಂತೆ ನಮಗೆ ರಕ್ಷಣೆ ನೀಡಬೇಕೆಂದು ಮನವಿ ಮಾಡಿದ್ದರು.
ಆದರೆ ಕೋರ್ಟ್ ಈ ತೀರ್ಪು ನೀಡಿದ ಬಳಿಕ ದೇಶದ ವಿವಿಧೆಡೆ ಇದಕ್ಕೆ ವ್ಯತಿರಿಕ್ತ ಅಭಿಪ್ರಾಯಗಳು ಕೇಳಿಬಂದಿವೆ. 16 ವರ್ಷದ ಅಪ್ರಾಪ್ತ ವಯಸ್ಕರಿಗೆ ಮದುವೆಗೆ ಕಾನೂನು ಸಮ್ಮತಿ ನೀಡುವುದರಿಂದ ಮುಸ್ಲಿಂ ಹೆಣ್ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಹೀಗಾಗಿ ಈ ರೀತಿಯ ತೀರ್ಪು ನೀಡಬಾರದಿತ್ತು ಎಂದು ಮುಸ್ಲಿಂ ನಾಯಕರೇ ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ, ಸಾರ್ವಜನಿಕರಿಂದಲೂ ಭಾರತೀಯ ಕಾನೂನು ಹೊರತುಪಡಿಸಿ ಅಪ್ರಾಪ್ತ ವಯಸ್ಸನ್ನು ನಿರ್ಧರಿಸುವುದು ತಪ್ಪು ಎನ್ನುವ ಅಭಿಪ್ರಾಯ ಕೇಳಿಬಂದಿದೆ.
While giving protection to a Muslim couple aged 16 and 21 years from their family members, the Punjab and Haryana High Court ruled on Monday that a Muslim girl over 16 years of age is competent to enter into a contract of marriage with a person of her choice.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 01:47 pm
HK News Staffer
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm