ಬ್ರೇಕಿಂಗ್ ನ್ಯೂಸ್
19-06-22 01:02 pm HK News Desk ದೇಶ - ವಿದೇಶ
ಪಾಟ್ನಾ, ಜೂ 19: ನಾಲ್ಕು ದಿನಗಳಲ್ಲಿ ಬಿಹಾರದಲ್ಲಿ 11 ಇಂಜಿನ್ಗಳ ಜೊತೆಗೆ 60 ರೈಲುಗಳ ಬೋಗಿಗಳನ್ನು ಪ್ರತಿಭಟನಾಕಾರರು ಸುಟ್ಟಿದ್ದಾರೆ. ಪ್ರತಿಭಟನೆ ಕಿಚ್ಚಿಗೆ ಸುಮಾರು 700 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಸುಟ್ಟು ಹೋಗಿದೆ. ಇದಲ್ಲದೇ ರೈಲ್ವೇ ನಿಲ್ದಾಣಗಳಲ್ಲಿ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಿ, ರೈಲ್ವೆ ಸೇರಿದ ಇತರೆ ಆಸ್ತಿಗಳನ್ನು ಧ್ವಂಸಗೊಳಿಸಿದ್ದಾರೆ.
ಬಿಹಾರ ರಾಜ್ಯದ 15 ಜಿಲ್ಲೆಗಳಲ್ಲಿ ವಿಧ್ವಂಸಕ ಕೃತ್ಯಗಳು ವರದಿಯಾಗಿವೆ. ರೈಲ್ವೇ ಅಧಿಕಾರಿಗಳ ಪ್ರಕಾರ, ಒಂದು ಸಾಮಾನ್ಯ ಕೋಚ್ ನಿರ್ಮಿಸಲು 80 ಲಕ್ಷ ರೂಪಾಯಿ ಸ್ಲೀಪರ್ ಕೋಚ್ ನಿರ್ಮಾಣಕ್ಕೆ 1.25 ಕೋಟಿ ರೂಪಾಯಿ ಮತ್ತು ಎಸಿ ಕೋಚ್ ನಿರ್ಮಿಸಲು 3.5 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಒಂದು ರೈಲ್ ಇಂಜಿನ್ ನಿರ್ಮಿಸಲು 20 ಕೋಟಿ ರೂ. 12 ಬೋಗಿಗಳ ಪ್ಯಾಸೆಂಜರ್ ರೈಲಿಗೆ 40 ಕೋಟಿ ರೂ. ಮತ್ತು 24 ಬೋಗಿಗಳ ರೈಲಿಗೆ 70 ಕೋಟಿ ರೂಪಾಯಿಯನ್ನು ಸರ್ಕಾರ ವೆಚ್ಚ ಮಾಡುತ್ತದೆ.
ಈಸ್ಟ್-ಸೆಂಟ್ರಲ್ ರೈಲ್ವೇ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವೀರೇಂದ್ರ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿ, ಆಸ್ತಿ ಹಾನಿಯ ಅಂದಾಜನ್ನು ಇನ್ನೂ ಮಾಡಲಾಗುತ್ತಿದೆ, ಆದರೆ ಸುಮಾರು 700 ಕೋಟಿ ರುಪಾಯಿಗಳಷ್ಟು ಆಸ್ತಿ ಹಾನಿಯಾಗಿದೆ. ಐದು ರೈಲುಗಳು, 60 ಬೋಗಿಗಳು ಮತ್ತು 11 ಇಂಜಿನ್ಗಳು ಸುಟ್ಟುಹೋಗಿವೆ ಎಂದು ಅವರು ಹೇಳಿದರು, ರೈಲ್ವೆಯು ಆಸ್ತಿ ಹಾನಿಗೆ ಸಂಪೂರ್ಣ ವರದಿಯನ್ನು ಸಿದ್ಧಪಡಿಸುತ್ತಿದೆ.
ಇದಲ್ಲದೇ, ರೈಲ್ವೇ ಪ್ರಕಾರ 60 ಲಕ್ಷ ಪ್ರಯಾಣಿಕರು ತಮ್ಮ ಟಿಕೆಟ್ಗಳನ್ನು ರದ್ದುಗೊಳಿಸಿದ್ದಾರೆ. ಹಳಿಗಳ ಮೇಲಿನ ಅಡಚಣೆ ಮತ್ತು ರೈಲುಗಳ ರದ್ದತಿಯು ರೈಲ್ವೆಗೆ ದೊಡ್ಡ ಆರ್ಥಿಕ ಹೊಡೆತವನ್ನು ಉಂಟುಮಾಡಿದೆ, ಆದರೂ ಇಲಾಖೆಯು ಅಧಿಕೃತ ಅಂದಾಜನ್ನು ನೀಡಲು ಇನ್ನೂ ಸಾಧ್ಯವಾಗಿಲ್ಲ.
ಪ್ರತಿಭಟನೆ, ಹಿಂಸಾಚಾರದ ವರದಿಗಳು ಬಿಹಾರದಿಂದ ಇನ್ನೂ ಬರುತ್ತಿವೆ, ಪ್ರತಿಭಟನಾಕಾರರು ರೈಲುಗಳು ಮತ್ತು ಆಂಬ್ಯುಲೆನ್ಸ್ಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆ. ಶನಿವಾರ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ 25 ಎಫ್ಐಆರ್ ದಾಖಲಿಸಲಾಗಿದೆ ಮತ್ತು ಬಿಹಾರದಲ್ಲಿ 250 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ.
718 ಪ್ರತಿಭಟನಾಕಾರರ ಬಂಧನ;
ಮೂರು ದಿನಗಳಲ್ಲಿ ಒಟ್ಟು 138 ಎಫ್ಐಆರ್ಗಳು ದಾಖಲಾಗಿದ್ದು, 718 ಮಂದಿಯನ್ನು ಬಂಧಿಸಲಾಗಿದೆ. ಸಿಸಿಟಿವಿ ಮತ್ತು ವಿಡಿಯೋ ದೃಶ್ಯಾವಳಿಗಳ ಆಧಾರದ ಮೂಲಕ ಹಿಂಸಾಚಾರದಲ್ಲಿ ತೊಡಗಿರುವವರನ್ನು ಬಂಧಿಸಲಾಗುತ್ತಿದೆ.
ಪ್ರತಿಭಟನೆಯನ್ನು ಕೈಬಿಡುವಂತೆ ಸರ್ಕಾರ ಮನವಿ ಮಾಡುತ್ತಿದೆ. ಇನ್ನೂ ಅಗ್ನಿಪಥ್ ಯೋಜನೆಯ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಕೇಂದ್ರ ಹೇಳಿದೆ. ಹಿಂಸಾಚಾರ ಹೆಚ್ಚಾಗುತ್ತಿದ್ದಂತೆ ಅಗ್ನಿಪಥ್ ಸೇವೆಯ ವಯೋಮಿತಿಯನ್ನು 23 ವರ್ಷಕ್ಕೆ ಹೆಚ್ಚಿಸಲಾಗಿದೆ.
Altogether 718 people were identified and arrested as the police lodged as many as 138 separate FIRs against the protesters for vandalizing government property and causing mayhem across the state in the last four days of protests against the Centre’s Agnipath scheme for recruitment in armed forces for 4 years only.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm