ಬ್ರೇಕಿಂಗ್ ನ್ಯೂಸ್
20-03-24 03:06 pm Bangalore Correspondent ಕರ್ನಾಟಕ
ಬೆಂಗಳೂರು, ಮಾ.20: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸುಾಮಾರು 4 ಲಕ್ಷಕ್ಕೂ ಅಧಿಕ ಕುಕ್ಕರ್ ಗಳನ್ನು ಮತದಾರರಿಗೆ ಹಂಚಿದೆ. ಚುನಾವಣಾ ಆಯೋಗ ದಿನಾಂಕಗಳನ್ನು ಘೋಷಿಸಿದ ಬಳಿಕವೇ ಈ ಬೆಳವಣಿಗೆ ನಡೆದಿದ್ದು ಮಂಗಳವಾರ ಒಂದೇ ದಿನದಲ್ಲಿ 220ಕ್ಕೂ ಹೆಚ್ಚು ಕುಕ್ಕರ್ ಅನ್ನು ನಿರ್ಭೀತಿಯಿಂದ ಹಂಚಿದ್ದಾರೆ ಎಂದು ಎಚ್ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ರಾಜ್ಯ ಚುವಾವಣಾ ಆಯೋಗಕ್ಕೆ ಈ ಬಗ್ಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕೇಂದ್ರ ಚುನಾವಣಾ ಆಯೋಗ ಮಧ್ಯ ಪ್ರವೇಶಿಸಿ ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಆರೋಪಿಸಿದ್ದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮತದಾರರಿಗೆ ಕುಕ್ಕರ್ ಹಂಚಲಾಗುತ್ತಿದೆ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಡಿಕೆ ಸುರೇಶ್ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ಕೆಲವರು ಪ್ರಚಾರಕ್ಕೆ ಏನೇನೋ ಮಾಡ್ತಾ ಇರ್ತಾರೆ ಎಂದು ಟೀಕಿಸಿದ್ದಾರೆ.
ಎಚ್ಡಿ ಕುಮಾರಸ್ವಾಮಿ ಅವರ ಆರೋಗ್ಯ ಸರಿಯಿಲ್ಲ, ಹಾಗಾಗಿ ಅವರು ಆಸ್ಪತ್ರೆಗೆ ಹೋಗಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ಕೇಳಿಕೊಳ್ತೀನಿ. ಅವರು ಕ್ಷೇಮವಾಗಿ ವಾಪಸ್ ಬರಲಿ, ಆಮೇಲೆ ಅವರ ಬಗ್ಗೆ ನಾನು ಮಾತನಾಡುತ್ತೇನೆ ಎಂದರು.
ದೇವೇಗೌಡ್ರು ದೇಶ ಬಿಡ್ತೀನಿ ಅಂದಿದ್ರಲ್ಲಾ?
ಎಚ್ ಡಿ ಕುಮಾರಸ್ವಾಮಿ ಹೇಳಿಕೆಗಳಿಗೆ ಉತ್ತರ ಕೊಡೋ ಸ್ಥಿತಿಯಲ್ಲಿ ನಾನಿಲ್ಲ. ರಾಜ್ಯದ ಜನ ಎಚ್ ಡಿ ಕುಮಾರಸ್ವಾಮಿ ಎಷ್ಟು ಸೀರಿಯಸ್ ಆಗಿ ತೆಗೆದುಕೊಂಡಿದ್ದಾರೋ ಗೊತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಕುರಿತಾಗಿ ಮಾಜಿ ಪ್ರಧಾನ ಮಂತ್ರಿ ಎಚ್ ಡಿ ದೆವೇಗೌಡರು ಹೇಳಿರೋದನ್ನ ನೀವು ತೋರಿಸಿ. ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗ್ತೀನಿ ಅಂತಾ ಹೇಳಿದ್ರಲ್ಲಾ, ಅದನ್ನ ನೀವು ತೋರಿಸಿ ಎಂದು ಸವಾಲು ಹಾಕಿದರು.
ನಾವು ಯಾರ ಕುತ್ತಿಗೆಯನ್ನೂ ಕೊಯ್ದಿಲ್ಲ. ಅವ್ರನ್ನು ಸಿಎಂ, ಪಿಎಂ ಎಲ್ಲಾ ಮಾಡಿದ್ವಿ. ಕಾಂಗ್ರೆಸ್ ಅವ್ರನ್ನ ಪ್ರಧಾನ ಮಂತ್ರಿ ಮಾಡಿದ್ದಕ್ಕೆ ಎಲ್ಲಾರು ನೆನೆಸಿಕೊಳ್ತಿರೋದು. ನಾವು ಯಾರನ್ನೂ ಬಲಿಷ್ಠರೆಂದು ತಿಳಿದುಕೊಂಡಿಲ್ಲ ಎಂದರು.
ಕೃಷ್ಣಗಿರಿಯಲ್ಲಿ ಏನಾಗ್ತಿದೆ ತನಿಖೆ ಮಾಡ್ಲಿ ;
ನಾವು ಗ್ಯಾರಂಟಿ ಯೋಜನೆಗಳು ಹಾಗೂ ವಾಗ್ದಾನಗಳ ಮೇಲೆ ಚುನಾವಣೆಗೆ ಹೋಗ್ತಾ ಇದ್ದೀವಿ ಎಂದ ಅವರು ಇದೇ ಸಂದರ್ಭದಲ್ಲಿ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟದ ಆರೋಪಿ, ಕೃಷ್ಣಗಿರಿಯಲ್ಲಿ ಬಾಂಬ್ ಸ್ಪೋಟ ತರಬೇತಿ ಪಡೆದಿದ್ದಾನೆ ಎಂದು ಎಂದು ಶೋಭಾ ಕರಂದ್ಲಾಜೆ ಆರೋಪ ವಿಚಾರವಾಗಿ ಮಾತನಾಡಿ, ಕೇಂದ್ರ ಸರ್ಕಾರ ಅವರದ್ದೇ ಇದೆ. ಬೇಹುಗಾರಿಕಾ ಸಂಸ್ಥೆಗಳು ಅವ್ರ ಕೈಯಲ್ಲೇ ಇದೆ. ಅವ್ರು ಕಂಟ್ರೋಲ್ ಮಾಡಬಹುದು ಅಲ್ವಾ. ಕೃಷ್ಣಗಿರಿಯಲ್ಲಿ ಮಾಡ್ತಾ ಇದ್ರೆ ಯಾಕೆ ಮುಚ್ಚಿಟ್ಟಿದ್ದಾರೆ ಎಂದು ಪ್ರಶ್ನಿಸಿದರು.
ಈ ಕುರಿತಾಗಿ ಬೇಹುಗಾರಿಕಾ ಸಂಸ್ಥೆಗಳು ಮಾಹಿತಿ ಕೊಡ್ತಿಲ್ವಾ? ಯಾವ ರೀತಿಯ ರಾಜಕಾರಣ ಅವರು ಮಾಡ್ತಾ ಇದ್ದಾರೆ ಇವರು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಇದೇ ಸಂದರ್ಭದಲ್ಲಿ ಹನುಮಾನ್ ಚಾಲೀಸಾ ಗಲಾಟೆ ವಿಚಾರವಾಗಿ, ಮಾಧ್ಯಮದವರು ಇಂಥದ್ದಕ್ಕೆಲ್ಲಾ ಪುಷ್ಠಿ ಕೊಡ್ತಿದ್ದಾರೆ ಎಂದು ಬಿಜೆಪಿಗರು ಪ್ರತಿಭಟನೆ ಮಾಡ್ತಾ ಇದ್ದಾರೆ. ನೀವು ಲೈವ್, ಪ್ರಚಾರ ಕೊಡ್ತೀರಿ ಅಂತಾ ಮಾಡ್ತಾ ಇದ್ದಾರೆ ಎಂದರು.
JD(S) state president H D Kumaraswamy on Tuesday accused Bangalore Rural Congress candidate D K Suresh of distributing lakhs of cookers to woo voters.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm