ಬ್ರೇಕಿಂಗ್ ನ್ಯೂಸ್
16-03-24 10:32 am HK News Desk ಕರ್ನಾಟಕ
ಬೆಂಗಳೂರು, ಮಾ.16: ಇದು ಸ್ವಪತ್ರಿಷ್ಠೆಯ ಪ್ರದರ್ಶನವಲ್ಲ, ಸ್ವಾಭಿಮಾನದ ಸಂಘರ್ಷ ಎಂಬ ಹೆಸರಿನಡಿ ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ತೊಡೆ ತಟ್ಟಿದ್ದಾರೆ. ತಮ್ಮ ಪುತ್ರ ಕೆ.ಈ. ಕಾಂತೇಶ್ ಗೆ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ಕೊಟ್ಟಿಲ್ಲ ಎಂಬ ಸಿಟ್ಟಿನಲ್ಲಿ ಈಶ್ವರಪ್ಪ ಗರಂ ಆಗಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಆಕ್ರೋಶದಲ್ಲಿ ಬೆಂಬಲಿಗರ ಸಭೆ ಕರೆದು ಪಕ್ಷದ ಅಭ್ಯರ್ಥಿ ರಾಘವೇಂದ್ರ ವಿರುದ್ಧವೇ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ.
ಶಿವಮೊಗ್ಗದ ಬಂಜಾರ ಕನ್ವೆಷನಲ್ ಹಾಲ್ ನಲ್ಲಿ ಕಿಕ್ಕಿರಿದು ಸೇರಿದ್ದ ಬೆಂಬಲಿಗರು, ಅಭಿಮಾನಿಗಳ ಸಭೆಯಲ್ಲಿ ಈಶ್ವರಪ್ಪ ಈ ಘೋಷಣೆ ಮಾಡಿದ್ದಾರೆ. ಸಭೆಯಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ವಿವಿಧ ಸಮುದಾಯಗಳ ಮುಖಂಡರು, ಈಶ್ವರಪ್ಪ ನಿರ್ಧಾರಕ್ಕೆ ನಾವು ಬದ್ಧ ಎಂದು ಹೇಳಿದ್ರೆ, ಮತ್ತೆ ಕೆಲ ಮುಖಂಡರು, ಈಶ್ವರಪ್ಪನವರೇ, ಯೋಚಿಸಿ, ನಿರ್ಧಾರ ತೆಗೆದುಕೊಳ್ಳಿ. ಆತುರದ ನಿರ್ಧಾರ ಮಾಡಬೇಡಿ ಎಂದು ಕಿವಿಮಾತು ಹೇಳಿದ್ದಾರೆ.
ಇತ್ತ ಈಶ್ವರಪ್ಪ, ಸಭೆಯಲ್ಲಿ ತಮ್ಮ ಭಾಷಣದುದ್ದಕ್ಕೂ ಯಡಿಯೂರಪ್ಪ ವಿರುದ್ಧ ಹರಿಹಾಯ್ದಿದ್ದಾರೆ. ನನ್ನ ಎದೆ ಬಗೆದರೆ ಶ್ರೀರಾಮ, ಮೋದಿ ಕಾಣುತ್ತಾರೆ. ಆದ್ರೆ ಯಡಿಯೂರಪ್ಪರ ಎದೆ ಬಗೆದರೆ ಒಂದು ಕಡೆ ಶೋಭಾ ಕರಂದ್ಲಾಜೆ ಮತ್ತೊಂದು ಕಡೆ ಇಬ್ಬರು ಮಕ್ಕಳು ಕಾಣ್ತಾರೆ ಅಷ್ಟೇ ಎಂದರು. ನಾನು ಈ ಲೋಕಸಭಾ ಚುನಾವಣೆಯಲ್ಲಿ ಮೋದಿಯ ಭಕ್ತನಾಗಿ, ಸ್ಪರ್ಧೆ ಮಾಡ್ತೀನಿ ಎಂದು ಘೋಷಿಸಿದ್ದಾರೆ. ಆಮೂಲಕ ಲೋಕಸಭೆ ಚುನಾವಣೆ ಹೊತ್ತಲ್ಲಿ ಶಿವಮೊಗ್ಗದಲ್ಲಿಯೂ ಬಂಡಾಯ ಕಾಣಿಸಿಕೊಳ್ಳುವ ಸೂಚನೆ ಲಭಿಸಿದೆ.
Senior BJP leader and former Deputy Chief Minister of Karnataka, K.S. Eshwarappa, announced on Friday that he will contest as an Independent candidate from Shivamogga in the upcoming Lok Sabha elections. Eshwarappa announced this after a meeting with his supporters in Shivamogga on Friday, March 15
21-05-25 01:50 pm
Bangalore Correspondent
KG Halli Police Sub inspector Nagraj, Wife su...
21-05-25 12:12 pm
Accident in Vijaypura, 5 Killed, VRL volvo bu...
21-05-25 11:33 am
Darshan, Pavitra, Court case: ರೇಣುಕಾಸ್ವಾಮಿ ಹತ...
20-05-25 10:49 pm
Speaker UT Khader: ವಿಧಾನಸಭೆ ಗ್ರೂಪ್ ಸಿ, ಡಿ ಹುದ...
20-05-25 08:22 pm
21-05-25 12:57 pm
HK News Desk
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
Operation Sindhoor, Rahul Gandhi,.Pakistan: ಆ...
20-05-25 01:42 pm
ಆಡಲು ಹೋಗಿದ್ದಾಗ ಮಳೆ ಬಂತೆಂದು ನಿಲ್ಲಿಸಿದ್ದ ಕಾರಿನ...
19-05-25 02:25 pm
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
20-05-25 11:12 pm
Mangalore Correspondent
ಕೊಂಡಾಣ ಜಾತ್ರೆಯಲ್ಲಿ ಮುತ್ತಣ್ಣ ಶೆಟ್ಟಿ ಮುಂಡಾಸು ಕಟ...
20-05-25 06:59 pm
Manipal Rain, Udupi: ಕರಾವಳಿಯಲ್ಲಿ ದಿಢೀರ್ ಮಳೆಗಾ...
20-05-25 02:03 pm
Job Scam Mangalore, Police Suspend, Hireglow...
19-05-25 11:07 pm
Jail Attack, Suhas Shetty, Mangalore, Chotte...
19-05-25 10:14 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm