ಬ್ರೇಕಿಂಗ್ ನ್ಯೂಸ್
12-03-24 10:41 pm HK News Desk ಕರ್ನಾಟಕ
ಚಿಕ್ಕಬಳ್ಳಾಪುರ, ಮಾ 12: ‘ಯಾರು ಚುನಾವಣೆಯಲ್ಲಿ ಸೋತಿದ್ದಾರೊ ಅವರ ಹಿಂಬಾಲಕರು ನರಸತ್ತವರು. ಯಾರು ಗೆದ್ದಿದ್ದಾರೊ ಅವರ ಹಿಂಬಾಲಕರು ಗಂಡಸರು’–ಇದು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುವಾಗ ಶಾಸಕ ಪ್ರದೀಪ್ ಈಶ್ವರ್, ಮಾಜಿ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಹರಿಹಾಯ್ದ ಪರಿ.
ಸೋಮವಾರ ನಡೆದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಹಾಲು ಉತ್ಪಾದಕರ ಸಹಕಾರ ಸಂಘಗಳ ನೂತನ ನಿರ್ದೇಶಕರಿಗೆ ಅಭಿನಂದನಾ ಸಮಾರಂಭದಲ್ಲಿ, ಡಾ.ಕೆ.ಸುಧಾಕರ್, ‘ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದವರಲ್ಲದ ಗೌರಿಬಿದನೂರಿನ ಮುಖಂಡರನ್ನು ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಚಿಕ್ಕಬಳ್ಳಾಪುರ ನಾಯಕರಿಗೆ ಮೀಟರ್ ಇಲ್ಲವೆ’ ಎಂದಿದ್ದರು.
‘ನಮ್ಮ ಚಿಕ್ಕಬಳ್ಳಾಪುರ ಸ್ಥಳೀಯ ಕಾಂಗ್ರೆಸ್ ನಾಯಕರು ಸಮರ್ಥರಿದ್ದಾರೆ. ಸುಧಾಕರ್ ಜೊತೆ ಇರುವವರು ನರಸತ್ತವರು. ಎಲ್ಲ ಜಿಲ್ಲಾ ಅಧ್ಯಕ್ಷರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನ ಕೊಡಬೇಕಾಗಿತ್ತು. ಆದರೆ ತಡವಾಗುತ್ತದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ ಕಷ್ಟದಲ್ಲಿ ಪಕ್ಷವನ್ನು ನಡೆಸಿದ್ದಾರೆ. ಅವರಿಗೆ ಅವಕಾಶ ನೀಡಲಾಗಿದೆ ಎಂದರು.
ಟಿಕೆಟ್ಗಾಗಿ ಸುಧಾಕರ್ ಅವರಿವರ ಕಾಲಿಗೆ ಬೀಳುತ್ತಿದ್ದಾನೆ. ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ಕಾಂಗ್ರೆಸ್ ನಾಯಕರ ಕಾಲಿಗೆ ಬಿದ್ದಿದ್ದಾರೆ. ಸುಧಾಕರ್ ಡಬಲ್ ಗೇಮ್ ರಾಜಕಾರಣಿ ಎಂದು ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಕಿಡಿಕಾರಿದ್ದಾರೆ. ತಾಕತ್ತು ಇದ್ರೆ ದಮ್ಮು ಇದ್ರೆ ಚಿಕ್ಕಬಳ್ಳಾಪುರದಲ್ಲಿ ಇನ್ನೂ ಮುಂದೆ ಒಂದು ಓಟು ಹೆಚ್ಚಿಗೆ ತೆಗೆದುಕೊಳ್ಳಿ ನೋಡೋಣ. ದಲಿತರನ್ನು ಕಂಡ್ರೆ ದೂರ ಓಡುತ್ತಿದ್ರು, ಈಗ ದಲಿತರ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
ಇನ್ನು ಇದೇ ವೇಳೆ ಒಂದು ಅನ್ನ, ದಾನ, ಧರ್ಮ ಮಾಡದೆ ಪ್ರದೀಪ್ ಈಶ್ವರ್ ಶಾಸಕರಾಗಿದ್ದಾರೆ ಅನ್ನೊ ಡಾ.ಕೆ.ಸುಧಾಕರ್ ಹೇಳಿಕೆಗೆ ಪ್ರದೀಪ್ರ ಈಶ್ವರ್ ತಿರುಗೇಟು ನೀಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಸಮಾಜ ಸೇವೆ ಶಿಕ್ಷಣ ಸೇವೆಯಲ್ಲಿ ತೊಡಗಿದ್ದೇನೆ. ಶಾಸಕರಾದ ಮೇಲೆ ಶಾಲಾ ಕಾಲೇಜು ಅಂಗನವಾಡಿಗಳಿಗೆ ಬಟ್ಟೆ ಬರೆ ಅನ್ನ ದಾನ ಧರ್ಮ ಪ್ರೋತ್ಸಾಹ ಧನ ನೀಡುತ್ತಿದ್ದೇನೆ. ಶಾಸಕರಾದ ಮೇಲೆ ಆರೋಗ್ಯ ಸೇವೆ, ಶಿಕ್ಷಣ ಸೇವೆ, ದಲಿತರು ಬಡವರ ಸೇವೆಯಲ್ಲಿ ತೊಡಗಿದ್ದೇನೆ. ಅಯೋಗ್ಯ ಡಾ.ಕೆ.ಸುಧಾಕರ್ಗೆ ದಲಿತರ ಸ್ಮಶಾನಕ್ಕೆ ಜಾಗ ಕೊಡೊ ಯೋಗ್ಯತೆ ಇಲ್ಲ. ನಾನು ಶಾಸಕನಾದ ಮೇಲೆ ಸ್ವಗ್ರಾಮದಲ್ಲಿ ದಲಿತರ ಸ್ಮಶಾನಕ್ಕೆ ಜಾಗ ಕೊಟ್ಟಿದ್ದೇನೆ ಎಂದು ವಾಗ್ದಾಳಿ ನಡೆಸಿದರು.
ಸುಧಾಕರ್ ಡಬಲ್ ಗೇಮ್ ರಾಜಕಾರಣ ಬಿಟ್ಟು ರಾಜಕಾರಣ ಮಾಡಲಿ. ಬಿಜೆಪಿಯಲ್ಲೇ ಇರಿ ಇಲ್ಲಾ ಕಾಂಗ್ರೇಸ್ನಲ್ಲೇ ಇರಿ. ಇಲ್ಲೊ ಡಬಲ್ ಗೇಮ್ ಅಲ್ಲೂ ಡಬಲ್ ಗೇಮ್ ಆಡ್ತಿದ್ದರೆ ಕೊನೆಗೆ ಕೆಪಿಸಿಸಿ ಕಚೇರಿಯಲ್ಲಿ ಜವಾನ ಕೆಲಸನೂ ಸಿಗಲ್ಲ ಎಂದು ಸುಧಾಕರ್ಗೆ ಶಾಸಕ ಪ್ರದೀಪ್ ಈಶ್ವರ್ ಎಚ್ಚರಿಕೆ ನೀಡಿದ್ದಾರೆ.
Congress pradeep eshwar slams Sudhakar, says he's falling to Congress leaders feet for loksabha ticket. He's unfit even for a Javan job at KPCC office, let him stay back at BJP he added.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
20-04-25 12:51 pm
Mangalore Correspondent
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm