ಬ್ರೇಕಿಂಗ್ ನ್ಯೂಸ್
11-03-24 08:46 pm HK News Desk ಕರ್ನಾಟಕ
ಕಾರವಾರ, ಮಾ.11: ದಿನಕ್ಕೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಉತ್ತರ ಕನ್ನಡದ ಸಂಸದ ಅನಂತ ಕುಮಾರ್ ಹೆಗಡೆ ಸೋಮವಾರ ಮತ್ತೊಂದು ವಿವಾದಕ್ಕೆ ತುತ್ತಾಗಿದ್ದಾರೆ. ನಾನು ಹೇಳಿದ್ದರ ಬಗ್ಗೆ ಬೇವರ್ಸಿ ಮಾಧ್ಯಮಗಳು ಬೇಕಾದ್ದನ್ನು ಬರೆಯಲಿ, ಸಾಮಾಜಿಕ ಜಾಲತಾಣದಲ್ಲಿ ಬೇಕಾದ್ದು ಚರ್ಚೆ ಆಗಲಿ. ಆದರೆ, ನೀವೆಲ್ಲಾ (ಜನರು) ಇದಕ್ಕೆ ವಿಚಲಿತರಾಗಬಾರದು ಎಂದು ಅನಂತ ಕುಮಾರ್ ಹೆಗಡೆ ಪರೋಕ್ಷವಾಗಿ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.
“ನೀವು ಯಾವುದೋ ಪಕ್ಷದ ಕಾರ್ಯಕರ್ತರಲ್ಲ. ದೇಶ ಆಡಳಿತ ಮಾಡುತ್ತಿರುವ ಪಕ್ಷದ ಕಾರ್ಯಕರ್ತರು. ಬೇರೆ ಯಾರೋ ಪತ್ರಿಕೆಯಲ್ಲಿ, ವಾಟ್ಸಪ್ ನಲ್ಲಿ ಏನೇನೋ ಹೇಳಿದರು ಅಂತ ವಿಚಲಿತರಾಗಬಾರದು. ಆನೆ ನಡೆದಿದ್ದೇ ದಾರಿ ಎಂಬಂತೆ ನಾವು ನಡಿಯಬೇಕು ಎಂದು ಹೇಳಿದ ಅವರು, “ಆನೆ ನಡೀತಾ ಇದ್ರೆ ಯಾವಾಗಲಾದರೂ ನಾಯಿ ಕಡೆ ಗಮನ ಕೊಡುತ್ತಾ.? ನಾಯಿಗಳಿಗೂ ಗೊತ್ತು ನಾವು ಎಷ್ಟೇ ಬೊಗಳಿದ್ರೂ ಆನೆಗೆ ಏನೂ ಮಾಡೋಕೆ ಆಗಲ್ಲ ಅಂತ. ನಾಯಿಗಳು ಬೊಗಳದೆ ಇದ್ರೆ ಆನೆ ಗಾಂಭೀರ್ಯಕ್ಕೆ ಬೆಲೆ ಇರಲ್ಲ’’ ಎಂದು ಹೇಳಿದ್ದಾರೆ.
ನಮ್ಮ ಸಿದ್ದಾಮುಲ್ಲಾ ಖಾನ್ ಸರಕಾರದಲ್ಲಿ ದುಡ್ಡಿಲ್ಲ, ಗ್ಯಾರಂಟಿ ಗ್ಯಾರಂಟಿ ಹೇಳಿ ಒಂದೇ ವರ್ಷದಲ್ಲಿ ರಾಜ್ಯ ದಿವಾಳಿ ಎದ್ದು ಹೋಗಿದೆ. ಅಂಗನವಾಡಿ ಮಕ್ಕಳಿಗೆ ನೀಡುವ ಪೌಷ್ಠಿಕ ಆಹಾರ ನೀಡಲು ಕೂಡಾ ಹಿಂದೆ ಮುಂದೆ ನೋಡ್ತಿದ್ದಾರೆ. ಗ್ರಾ.ಪಂ. ಸದಸ್ಯರಿಗೆ ದೊರೆಯುವ ಮಾಸಾಶನ ಕೂಡಾ ಸರಿಯಾಗಿ ತಲುಪುತ್ತಿಲ್ಲ. ಬಿಜೆಪಿ ಸದಸ್ಯರು ಹೋಗಿ ಗಲಾಟೆ ಮಾಡಿದ ನಂತರ ಕೇವಲ ನಾಲ್ಕು ತಿಂಗಳದ್ದು ನೀಡಿದ್ದಾರೆ. ಬಿಜೆಪಿ ಸರಕಾರವಿದ್ದಾಗ ಹಣವಿರುತ್ತೆ, ಕಾಂಗ್ರೆಸ್ ಸರಕಾರವಿದ್ದಾಗ ಹಣವಿರುವುದಿಲ್ಲ ಎಂದವರು ಹೇಳಿದ್ದಾರೆ.
ಎರಡು ದಿನಗಳ ಹಿಂದೆ ನಾವು 400 ಸ್ಥಾನ ಪಡೆದಲ್ಲಿ ಸಂವಿಧಾನ ಬದಲಾವಣೆ ಮಾಡುತ್ತೇವೆ. ಕಾಂಗ್ರೆಸ್ ಮಾಡಿರುವ ತಪ್ಪುಗಳನ್ನು ತಿದ್ದುತ್ತೇವೆ. ಜಾತ್ಯತೀತ ಪದವನ್ನು ಸಂವಿಧಾನದಿಂದ ತೆಗೆದು ಹಾಕುತ್ತೇವೆ ಎಂದು ಹೇಳಿರುವುದು ಭಾರೀ ವಿವಾದಕ್ಕೆ ಗುರಿಯಾಗಿತ್ತು.
MP Ananth kumar hegde calls media as Dogs and pigs sparks controversy. Says when elephant is walking will it bother about the dogs barking in the street he added.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm