ಬ್ರೇಕಿಂಗ್ ನ್ಯೂಸ್
01-03-24 10:11 pm Bangalore Correspondent ಕರ್ನಾಟಕ
ಬೆಂಗಳೂರು, ಮಾ.1: ವೈಟ್ ಫೀಲ್ಡ್ ನಲ್ಲಿರುವ ರಾಮೇಶ್ವರ ಕೆಫೆಯಲ್ಲಿ ಬಾಂಬ್ ಇಟ್ಟು ಹೋಗಿರುವ ವ್ಯಕ್ತಿಯ ಗುರುತು ಪತ್ತೆಯಾಗಿದ್ದು, ಪೊಲೀಸರು ಸಿಸಿಟಿವಿ ಚಹರೆ ಆಧರಿಸಿ ಆರೋಪಿಯ ಬೆನ್ನು ಬಿದ್ದಿದ್ದಾರೆ.
25- 30 ವರ್ಷ ವ್ಯಕ್ತಿ ಹೊಟೇಲಿಗೆ ಬಂದು ರವೆ ಇಡ್ಲಿ ಆರ್ಡರ್ ಮಾಡಿ ತಿಂದ ಬಳಿಕ ಕೈತೊಳೆಯುವ ಜಾಗದಲ್ಲಿ ತನ್ನಲ್ಲಿದ್ದ ಬ್ಯಾಗನ್ನು ಇಟ್ಟು ಹೋಗಿದ್ದ ಎಂಬುದು ಸಿಸಿಟಿವಿಯಲ್ಲಿ ತಿಳಿದುಬಂದಿದೆ. ಆರೋಪಿಯನ್ನು ಕೆಲವೇ ಗಂಟೆಯಲ್ಲಿ ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಸಂಜೆ 7 ಗಂಟೆಯ ವೇಳೆ ಘಟನಾ ಸ್ಥಳಕ್ಕೆ ಬಂದ ಡಿಸಿಎಂ ಡಿಕೆ ಶಿವಕುಮಾರ್, ಸಿಸಿಟಿವಿಯಲ್ಲಿ ಆರೋಪಿ ಬಗ್ಗೆ ಚಹರೆ ಲಭ್ಯವಾಗಿದೆ. ಆರೋಪಿ ಮೊದಲು ಬಾಂಬ್ ಇಟ್ಟುಕೊಂಡಿದ್ದ ಬ್ಯಾಗಿನ ಜೊತೆಗೆ ಹೊಟೇಲಿಗೆ ಬಂದಿದ್ದಾನೆ. ಆನಂತರ, ರವೆ ಇಡ್ಲಿ ಆರ್ಡರ್ ಮಾಡಿ ತಿಂದಿದ್ದಾನೆ. ಹಿಂತಿರುಗಿ ಹೋಗುವಾಗ ಬ್ಯಾಗ್ ಬಿಟ್ಟು ಹೋಗಿದ್ದಾನೆ. ಸಿಸಿಟಿವಿಯಲ್ಲಿ ಸ್ಪಷ್ಟ ಚಹರೆ ಲಭ್ಯವಾಗಿದ್ದು, ಪೊಲೀಸರು ಶೀಘ್ರದಲ್ಲಿ ಆರೋಪಿ ಬಂಧಿಸಲಿದ್ದಾರೆ ಎಂದಿದ್ದಾರೆ.
ಬ್ಯಾಗನ್ನು ಇಟ್ಟು ಹೋಗುವ ಮೊದಲು ಅದರಲ್ಲಿ ಒಂದು ಗಂಟೆಯ ಬಳಿಕ ಬ್ಲಾಸ್ಟ್ ಆಗುವಂತೆ ಟೈಮರ್ ಇಟ್ಟಿದ್ದ. 25ರಿಂದ 30 ವರ್ಷ ಪ್ರಾಯದ ಯುವಕನ ಗುರುತು ಸಿಕ್ಕಿದ್ದು ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧನ ಮಾಡಲಿದ್ದಾರೆ ಎಂದು ಡಿಕೆಶಿ ವಿವರಿಸಿದ್ದಾರೆ. ಆರೋಪಿ ಬಸ್ಸಿನಲ್ಲಿ ಬಂದಿದ್ದು ಹೊಟೇಲ್ ಒಳಹೊಕ್ಕಿದ್ದಾನೆ. ಆತನ ಪ್ರತಿ ಚಲನವಲನವೂ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು ಆರೋಪಿ ಬಂದು ಹೋದ ಒಂದು ಗಂಟೆಯ ನಂತರ ಬ್ಲಾಸ್ಟ್ ಆಗಿದೆ. ಪ್ರಕರಣ ಭೇದಿಸಲು ಏಳರಿಂದ ಎಂಟು ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿದೆ. ಜೊತೆಗೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ಹಿಂದಿನ ಶಕ್ತಿಯನ್ನು ಪೊಲೀಸರು ಪತ್ತೆ ಮಾಡಲಿದ್ದಾರೆ ಎಂದು ಡಿಕೆಶಿ ತಿಳಿಸಿದ್ದಾರೆ.
ಉಗ್ರವಾದಿ ಕೃತ್ಯವೋ, ದ್ವೇಷದ ಕೃತ್ಯವೋ ಅನ್ನುವುದು ತಿಳಿದುಬಂದಿಲ್ಲ. ಪ್ರಾಥಮಿಕ ತನಿಖೆಯ ಪ್ರಕಾರ, ಸಣ್ಣ ಮಟ್ಟದ ಸುಧಾರಿತ ಸ್ಫೋಟಕವನ್ನು ಸ್ಫೋಟಕ್ಕೆ ಬಳಸಲಾಗಿದೆ. ಆದರೆ ಯಾರು ಕೃತ್ಯ ಎಸಗಿದ್ದಾರೆ, ಆತನ ಉದ್ದೇಶ ಏನಿತ್ತು ಎಂಬುದು ಗೊತ್ತಾಗಿಲ್ಲ. ಗಾಯಗೊಂಡವರು ಅಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
Authorities have made a significant breakthrough in the investigation of the blast at Rameshwaram Cafe in Bengaluru's Kundalahalli area. The accused responsible for the explosion, which left several injured, has been identified through CCTV footage.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am