ಬ್ರೇಕಿಂಗ್ ನ್ಯೂಸ್
01-03-24 04:24 pm Bangalore Correspondent ಕರ್ನಾಟಕ
ಬೆಂಗಳೂರು, ಮಾ.1: ಕುಂದಲಹಳ್ಳಿಯ ಬ್ರೂಕ್ ಫೀಲ್ಡ್ ನಲ್ಲಿರುವ ಪ್ರಖ್ಯಾತ ರಾಮೇಶ್ವರಂ ಕೆಫೆ ಎನ್ನುವ ಹೊಟೇಲ್ ನಲ್ಲಿ ಮಧ್ಯಾಹ್ನ ಜನಜಂಗುಳಿ ಇದ್ದಾಗಲೇ ಭಾರೀ ಸ್ಫೋಟ ಸಂಭವಿಸಿದ್ದು, ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಹೊಟೇಲ್ ಸಿಬಂದಿ, ಗ್ರಾಹಕರು ಸೇರಿದ್ದಾರೆ.
ಊಟ ಮಾಡುತ್ತಿದ್ದ ಜಾಗದಲ್ಲಿ ಗ್ರಾಹಕರೊಬ್ಬರು ಹಿಡಿದುಕೊಂಡಿದ್ದ ಬ್ಯಾಗಿನಲ್ಲಿದ್ದ ವಸ್ತು ಸ್ಫೋಟ ಆಗಿದೆ ಎನ್ನುವುದು ಪ್ರಾಥಮಿಕ ಮಾಹಿತಿ. ಆದರೆ, ಬ್ಯಾಗಿನಲ್ಲಿ ಏನಿತ್ತು.. ಅದು ಹೇಗೆ ಸ್ಫೋಟಗೊಂಡಿದೆ ಎಂಬ ಮಾಹಿತಿ ಇಲ್ಲ. ಮಧ್ಯಾಹ್ನ 1 ಗಂಟೆ ಸುಮಾರಿಗೆ ದೊಡ್ಡ ಸದ್ದಿನೊಂದಿಗೆ ಸ್ಫೋಟವಾಗಿದ್ದು, ಭಾರೀ ಹೊಗೆ ಆವರಿಸಿದೆ. ಎಫ್ಎಸ್ಎಲ್ ತಜ್ಞರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದು, ಯಾವ ಮಾದರಿಯ ಸ್ಫೋಟ ಮತ್ತು ಯಾವುದರಿಂದ ಆಗಿದೆ ಎನ್ನುವುದನ್ನು ಖಚಿತಪಡಿಸಲಿದ್ದಾರೆ.
ಘಟನೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಸ್ಫೋಟ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ವಿಧಿ ವಿಜ್ಞಾನ ತಂಡದವರು ಪರಿಶೀಲನೆ ನಡೆಸಿದ್ದು, ವರದಿ ಬಂದ ಮೇಲಷ್ಟೇ ಯಾವುದರಿಂದ ಸ್ಫೋಟ ಆಗಿದೆ ಎನ್ನುವುದು ಖಚಿತವಾಗಲಿದೆ. ಸಿಲಿಂಡರ್ ಬ್ಲಾಸ್ಟ್ ಆಗಿದೆಯೇ ಎನ್ನುವ ಶಂಕೆಯೂ ಇದೆ ಎಂದು ತಿಳಿಸಿದ್ದಾರೆ. ಹೆಚ್ಚು ಅಪಾಯಕಾರಿ ಆಗುವ ಗಾಯವಾಗಿಲ್ಲ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಹೇಳಿದ್ದಾರೆ.
ಬಾಂಬ್ ನಿಷ್ಕ್ರಿಯ ದಳ ಆಗಮಿಸಿದ್ದು, ಪೊಲೀಸರು ಸಿಸಿಟಿವಿ ಚೆಕ್ಕಿಂಗ್ ಮಾಡುತ್ತಿದ್ದಾರೆ. ಓಪನ್ ಕೆಫೆಯಾಗಿರುವ ಹೊಟೇಲಿನಲ್ಲಿ ಮಧ್ಯಾಹ್ನ ಭಾರೀ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಇಂಥ ಜಾಗದಲ್ಲೇ ಬ್ಲಾಸ್ಟ್ ಘಟನೆಯಾಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಸದ್ಯಕ್ಕೆ ಆ ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದು, ತನಿಖೆ ನಡೆಸುತ್ತಿದ್ದಾರೆ.
Bangalore Rameshwaram Cafe blast, BJP alleges bomb instead of cylinder blast. Five people were injured in an explosion at Bengaluru's popular eatery, The Rameshwaram Cafe, in Whitefield on Friday. The cause is suspected to be an LPG cylinder blast, according to police officials. Forensic experts also arrived at the cafe and are reportedly assessing the exact cause for the blast. Further probe is underway and more details are awaited.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 06:14 pm
Mangalore Correspondent
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
Headline Karnataka, Social Campaigning, Manga...
11-09-25 11:34 am
ಧರ್ಮಸ್ಥಳ ಕೇಸ್ ; ವಿಚಾರಣೆ ಮುಗಿಸಿ ಸತ್ಯಕ್ಕೆ ಜಯ ಎನ...
10-09-25 10:50 pm
11-09-25 02:25 pm
HK STAFF
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm