ಬ್ರೇಕಿಂಗ್ ನ್ಯೂಸ್
27-02-24 07:47 pm Bangalore Correspondent ಕರ್ನಾಟಕ
ಬೆಂಗಳೂರು, ಫೆ 27: ಬಿಜೆಪಿಯಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿರುವ ಹೊಂದಾಣಿಕೆ ರಾಜಕೀಯದ ಬಗ್ಗೆ ಶಾಸಕ ಯತ್ನಾಳ್ ಮತ್ತೊಮ್ಮೆ ಕಿಡಿಕಾರಿದ್ದಾರೆ.
ಕೆಲವು ದಿನಗಳ ಹಿಂದೆ ಭಜರಂಗದಳದ ಮುಖಂಡರೊಬ್ಬರು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರನ್ನು ಅಡ್ಜಸ್ಟ್ಮೆಂಟ್ ಅಶೋಕ್ ಎಂದು ಲೇವಡಿ ಮಾಡಿದ್ದರು.
ರಾಜ್ಯಸಭಾ ಚುನಾವಣೆಗೆ ಮತಚಲಾಯಿಸಿದ ನಂತರ ಮಾತನಾಡಿದ ಯತ್ನಾಳ್, " ಬಿಜೆಪಿಯಲ್ಲಿ ಹೊಂದಾಣಿಕೆ ರಾಜಕೀಯ ಜೋರಾಗಿದೆ ಎಂದು ಎರಡು ದಿನಗಳ ಹಿಂದೆ ಕೂಡಾ ನಾನು ಹೇಳಿದ್ದೆ. ಬಿಜೆಪಿ ಯಾಕೆ ಕೆಲವೊಂದು ಕ್ಷೇತ್ರದಲ್ಲಿ ಸೋತಿತು, ಯಾರಿಂದ ಸೋತಿತು ಎನ್ನುವುದನ್ನು ಹೇಳಿದ್ದೆ " ಎಂದು ಪಕ್ಷದ ಕೆಲವು ನಾಯಕರ ವಿರುದ್ದ ಪರೋಕ್ಷವಾಗಿ ಗುಡುಗಿದ್ದಾರೆ.
ಶಿಕಾರಿಪುರದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬ 70 - 72 ಸಾವಿರ ವೋಟ್ ತಗೋತಾನೆ, ನಮ್ಮ ಸೋಮಣ್ಣನವರನ್ನು ಎರಡೂ (ವರುಣಾ, ಚಾಮರಾಜನಗರ) ಕಡೆ ಹೀನಾಯವಾಗಿ ಸೋಲಿಸುತ್ತಾರೆ. ಕನಕಪುರದಲ್ಲಿ ಚುನಾವಣೆ ಪ್ರಚಾರಕ್ಕೆ ಹೋಗುವುದಿಲ್ಲ. ಹೊಂದಾಣಿಕೆ ರಾಜಕೀಯಕ್ಕೆ ಇದಕ್ಕಿಂತ ಹೆಚ್ಚಿನ ಉದಾಹರಣೆ ಇನ್ನೇನು ಬೇಕು " ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ.
ಸೋಮಣ್ಣನವರನ್ನು ಸೋಲಿಸುವಲ್ಲಿ ನಮ್ಮವರ ಪಾತ್ರ ದೊಡ್ಡದಿದೆ, ಪೂಜ್ಯ ತಂದೆಯವರ ಮಗ ನಿಷ್ಟಾವಂತ ಕಾರ್ಯಕರ್ತನೊಬ್ಬನನ್ನು ವರುಣಾ ಮತ್ತು ಚಾಮರಾಜನಗರದಲ್ಲಿ ಬಿಟ್ಟಿದ್ದ. ರಾಜ್ಯಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ರಾಜಕೀಯದಲ್ಲಿ ಕೆಲವೊಂದು ನಡೆಯಬಾರದ್ದು ನಡೆಯುತ್ತದೆ, ಅದಕ್ಕೆ ನಿತೀಶ್ ಕುಮಾರ್ ವಾಪಸ್ ಎನ್ಡಿಎ ಮೈತ್ರಿಕೂಟಕ್ಕೆ ಬರಲಿಲ್ಲವೇ " ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅಭಿಪ್ರಾಯ ಪಟ್ಟಿದ್ದಾರೆ.
ಸೋಮಶೇಖರ್ ಮತ್ತು ಯಡಿಯೂರಪ್ಪನವರು ಬಹಳ ಆತ್ಮೀಯರು, ನನ್ನ ಮಗ ರಾಜ್ಯಾಧ್ಯಕ್ಷ ಆಗುತ್ತಾನೆ ಎಂದು ಯಡಿಯೂರಪ್ಪ ಅವರಿಗೆ ಹಿಂದೆನೇ ಹೇಳಿದ್ದರು. ಈಗ ರಾಜ್ಯಸಭಾ ಚುನಾವಣೆಯಲ್ಲಿ ಆಗಿರುವ ಹಿನ್ನಡೆಗೆ ಜೋಡೆತ್ತುಗಳು (ವಿಜಯೇಂದ್ರ, ಆರ್.ಅಶೋಕ್) ಉತ್ತರ ನೀಡಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಎರಡು ತಿಂಗಳ ಹಿಂದೆ ವಿ.ಸೋಮಣ್ಣನವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ದ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ನನ್ನನ್ನು ಸೋಲಿಸಿದವರ ಜೊತೆಗೆ ಅವರಿಗೇನು ಕೆಲಸ ? ಅವರ ಜೊತೆ ಅಂತರ ಕಾಯ್ದುಕೊಂಡರೆ ಸರಿ, ಇಲ್ಲದಿದ್ದರೆ ನಾನು ನೇರವಾಗಿ ವರಿಷ್ಠರಿಗೆ ದೂರು ನೀಡಬೇಕಾಗುತ್ತದೆ ಎಂದು ಸೋಮಣ್ಣ ಗುಡುಗಿದ್ದರು.
ಶಿಕಾರಿಪುರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದ ಎಸ್.ಪಿ.ನಾಗರಾಜ ಗೌಡ 70,802 ಮತಗಳನ್ನು ಪಡೆದಿದ್ದರು. ಯತ್ನಾಳ್ ಉಲ್ಲೇಖಿಸಿರುವ ಪಕ್ಷೇತರ ಅಭ್ಯರ್ಥಿ ಇವರೇ. ಇನ್ನು ಚಾಮರಾಜನಗರದಲ್ಲಿ ವಿ.ಸೋಮಣ್ಣ 76,325 ಮತಗಳನ್ನು ಪಡೆದಿದ್ದರೂ, ಕಾಂಗ್ರೆಸ್ಸಿನ ಪುಟ್ಟರಂಗ ಶೆಟ್ಟಿ ವಿರುದ್ದ 7,533 ಮತಗಳ ಅಂತರದಿಂದ ಸೋಲುಂಡಿದ್ದರು. ಕನಕಪುರದಲ್ಲಿ ಆರ್.ಅಶೋಕ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ದ ಸ್ಪರ್ಧಿಸಿದ್ದರು. ಆದರೆ ಪದ್ಮನಾಭ ನಗರ ಕ್ಷೇತ್ರಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದ ಅಶೋಕ್, ಕನಕಪುರದಲ್ಲಿ ಕಾಟಾಚಾರಕ್ಕೆ ಪ್ರಚಾರ ನಡೆಸಿದ್ದರು. ಡಿ.ಕೆ.ಶಿವಕುಮಾರ್ ಅವರ ವಿರುದ್ದ ಆರ್.ಅಶೋಕ್ ಸೇರಿ ಎಲ್ಲರೂ ಠೇವಣಿಯನ್ನು ಕಳೆದುಕೊಂಡಿದ್ದರು.
Yatnal slams Yediyurappa and son says there are reason for Somannas defeat. The great son B. Y. Vijayendra is the mastermind for Somanna to lose elections he added.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am