ಬ್ರೇಕಿಂಗ್ ನ್ಯೂಸ್
27-02-24 05:15 pm Bangalore Correspondent ಕರ್ನಾಟಕ
ಬೆಂಗಳೂರು, ಫೆ 27: ಎಸ್.ಟಿ. ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರು ನಿನ್ನೆ ರಾತ್ರಿವರೆಗೂ ಪಕ್ಷದ ಸಂಪರ್ಕದಲ್ಲಿದ್ದರು. ಯಾವ ಕಾರಣಕ್ಕೂ ತಾಯಿಗೆ ದ್ರೋಹ ಮಾಡಲ್ಲ ಎಂದು ಹೇಳಿದ್ದರು. ಆದರೆ, ಮಾಡಿದ್ದೇನು? ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಅಶೋಕ್ ಬೇಸರ ವ್ಯಕ್ತಪಡಿಸಿದ್ದಾರೆ .
ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ ಅಡ್ಡ ಮತದಾನ ಮಾಡಿದ ಸೋಮಶೇಖರ್ ಮತ್ತು ಮತದಾನಕ್ಕೇ ಬಾರದ ಶಿವರಾಮ ಹೆಬ್ಬಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ʻಬಿಜೆಪಿ ಅಭ್ಯರ್ಥಿ ನಾರಾಯಣ ಭಾಂಡಗೆ ಅವರಿಗೆ ಮತ ಹಾಕುವಂತೆ 47 ಬಿಜೆಪಿ ಶಾಸಕರಿಗೆ ವಿಪ್ ಕೊಟ್ಟಿದ್ದೆವು. ಎಸ್ ಟಿ ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ಗೂ ವಿಪ್ ಕಳಿಸಿದ್ದೆವು. ಸೋಮಶೇಖರ್ ಅವರ ಮನೆಗೇ ವಿಪ್ ಜಾರಿ ಮಾಡಲಾಗಿತ್ತು. ಶಿವರಾಮ ಹೆಬ್ಬಾರ್ ಅವರ ಶಾಸಕರ ಭವನದ ಕೊಠಡಿಗೇ ವಿಪ್ ಕಳುಹಿಸಲಾಗಿತ್ತುʼʼ ಎಂದು ಅಶೋಕ್ ವಿವರಿಸಿದರು.
ʻಕಳೆದ ವಾರದಿಂದ ಸೋಮಶೇಖರ್, ಹೆಬ್ಬಾರ್ ಮಾತನಾಡುತ್ತಿದ್ದರು. ಹೆಬ್ಬಾರ್ ಅವರಂತೂ ಕೊನೆ ಕ್ಷಣದ ವರೆಗೂ ಮಾತಾಡಿದ್ರು. ನಾವು ಪಕ್ಷಕ್ಕೆ ಮೋಸ ಮಾಡಲ್ಲ ಅಂದ್ರು. ತಾಯಿಗೆ ಮೋಸ ಮಾಡಲ್ಲ ಅಂದಿದ್ರು. ಆದರೆ, ಈಗ ಮೋಸ ಮಾಡಿದ್ದಾರೆ ಎಂದು ಹೇಳಿದರು.
ಸೋಮಶೇಖರ್ ಅಡ್ಡ ಮತದಾನ ಮಾಡಿದಾರೆ ಅಂತ ಗೊತ್ತಾಗಿದೆ. ಈ ರೀತಿ ಪದೇಪದೆ ಮೋಸ ಮಾಡೋದನ್ನು ಜನರು ಸಹಿಸಲ್ಲ, ಸೋಮಶೇಖರ್ ಅವರಿಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ ಎಂದು ವಿವರಣೆ ನೀಡಿದರು.
ಸೋಮಶೇಖರ್ ಅವರನ್ನು ಮಂತ್ರಿ ಮಾಡಿದೆವು. ಮೈಸೂರು ಇನ್ ಚಾರ್ಜ್ ಮಾಡಿದ್ದೆವು. ಅಭಿವೃದ್ಧಿಗೆ ಹಣ ಅಂತ ಈಗ ಹೇಳುತ್ತಾರೆ. ಅವರಿಗೆ ಹಿಂದೆ ಎಷ್ಟು ಬಾರಿ ಹಣ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು ಆರ್. ಅಶೋಕ್.
ಸೋಮಶೇಖರ್ ಅವರೇ ನಿನ್ನೆ ಕರೆ ಮಾಡಿದರು. ದ್ರೋಹ ಬಗೆಯಲ್ಲ ಅಂತ ಹೇಳಿದರು. ಅವರು ಸಿಎಂ ಸಿದ್ದರಾಮಯ್ಯ ಅವರ ಜತೆ ಓಡಾಟ ಶುರು ಮಾಡಿದಾಗಿನಿಂದಲೇ ನಮಗೆ ಗುಮಾನಿ ಇತ್ತು. ಆದರೂ ಅವರನ್ನು ನಂಬಿದ್ದೆವು. ಇವತ್ತು ಅವರು ರಾಜಕೀಯವಾಗಿ ಸೂಸೈಡ್ ಮಾಡಿಕೊಂಡಿದ್ದಾರೆ. ಯಾವ ಕಾರಣಕ್ಕೂ ಜನ ಅವರನ್ನು ಕ್ಷಮಿಸುವುದಿಲ್ಲ. ಈ ರೀತಿ ಪಕ್ಷ ದ್ರೋಹ ಮಾಡಿರುವ ಇಬ್ಬರು ನಾಯಕರ ಬಗ್ಗೆ ಏನು ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ನಮ್ಮ ಶಾಸಕರಾಗಿರುವ ವಿವೇಕ್ ರೆಡ್ಡಿ ಅವರ ಜೊತೆ ಚರ್ಚೆ ಮಾಡಿದ್ದೇನೆ. ಅವರು ಏನೆಲ್ಲಾ ಮಾಡಬಹುದು ಅನ್ನೋದು ತಿಳಿಸಿದ್ದಾರೆ ಎಂದು ಹೇಳಿದರು.
R Ashok angry over ST Somashekhar, Shivaram Hebbar for backstabbing BJP party. The BJP and the Janata Dal (Secular) coalition on Tuesday suffered a jolt in the Rajya Sabha elections as some from within its ranks voted for the Congress candidates. Amid cross-voting, JD(S) candidate and real estate businessman D Kupendra Reddy stands to lose out on an Upper House berth.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am