ಬ್ರೇಕಿಂಗ್ ನ್ಯೂಸ್
15-09-23 08:26 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.15: ಬಿಜೆಪಿ ಟಿಕೆಟ್ ಕೊಡಿಸುತ್ತೇವೆಂದು ಮತ್ತೊಂದು ವಂಚನೆ ಪ್ರಕರಣ ಕೊಪ್ಪಳ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಉದ್ಯಮಿ ಗೋವಿಂದ ಪೂಜಾರಿ ರೀತಿಯಲ್ಲೇ ಕೊಪ್ಪಳ ಜಿಲ್ಲೆಯ ಬಿಜೆಪಿ ಮುಖಂಡನಿಂದ 21 ಲಕ್ಷ ಪಡೆದು ಟೋಪಿ ಹಾಕಲಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯ ಕನಕಗಿರಿ ಎಸ್ಸಿ ಮೀಸಲು ಕ್ಷೇತ್ರದ ಟಿಕೆಟ್ ಕೊಡಿಸುತ್ತೇವೆಂದು ಬಿಜೆಪಿ ಮುಖಂಡ ಜಿ.ತಿಮ್ಮಾರೆಡ್ಡಿ ಗಿಲ್ಲೆಸೂಗುರ್ ಅವರನ್ನು ನಂಬಿಸಿ ಹಣ ಪಡೆದಿದ್ದಾರೆ. ತಿಮ್ಮಾರೆಡ್ಡಿ ಅವರು ತಮ್ಮ ಪತ್ನಿ ಗಾಯತ್ರಿಗೆ ಟಿಕೆಟ್ ಕೊಡಿಸುವಲ್ಲಿ ಭಾರಿ ಪ್ರಯತ್ನ ಮಾಡಿದ್ದರು. ಬಿಜೆಪಿ ಟಿಕೆಟಿಗಾಗಿ ಭಾರೀ ಪೈಪೋಟಿ ನಡೆಸಿದ್ದ ತಿಮ್ಮಾರೆಡ್ಡಿಯನ್ನು ಚೈತ್ರಾ ಕುಂದಾಪುರ ತಂಡದ ಮಾದರಿಯಲ್ಲೇ ಮೂವರ ತಂಡ ಸಂಪರ್ಕಿಸಿ ಮೋಸ ಮಾಡಿದೆ.

ಅಮಿತ್ ಷಾ ಹೆಸರಲ್ಲಿ ವಂಚನೆ
ತಾವು ಗೃಹ ಸಚಿವ ಅಮಿತ್ ಷಾ ಆಪ್ತರೆಂದು ಹೇಳಿಕೊಂಡು ದೆಹಲಿ ಮೂಲದ ವಿಶಾಲ್ ನಾಗ್ ಮತ್ತು ಬೆಂಗಳೂರಿನ ಜೀತು, ಗೌರವ್ ಎಂಬವರು ತಿಮ್ಮಾರೆಡ್ಡಿಯನ್ನು ಸಂಪರ್ಕಿಸಿದ್ದರು. 19 ಲಕ್ಷ ನಗದು ಮತ್ತು ಎರಡು ಲಕ್ಷ ರೂ. ಖಾತೆಗೆ ಹಾಕಿಸಿಕೊಂಡಿದ್ದರು. ಚೈತ್ರಾಳ ಡೀಲ್ ಪುರಾಣ ಹೊರಬರುತ್ತಲೇ ತಿಮ್ಮಾರೆಡ್ಡಿ ಅವರು ಮೂವರು ವಂಚಕರ ವಿರುದ್ಧ ಬೆಂಗಳೂರಿನ ಅಶೋಕ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.



ಅಮಿತ್ ಷಾ ಸೂಚನೆಯಂತೆ, ರಾಜ್ಯದಲ್ಲಿ ಸಮೀಕ್ಷೆ ಮಾಡ್ತಿದ್ದೇವೆ. ಅದರಲ್ಲಿ ನಿಮ್ಮ ಹೆಸರು ಮುಂಚೂಣಿಗೆ ತರುತ್ತೇವೆ ಎಂದು ಹೇಳಿಕೊಂಡಿದ್ದ ತಂಡದ ವಿಶಾಲ್ ನಾಗ್ ಎಂಬಾತ ತಾನು ಕೇಂದ್ರ ಬಿಜೆಪಿ ಚುನಾವಣೆ ಸಮೀಕ್ಷೆ ತಂಡದಲ್ಲಿ ಮುಖ್ಯಸ್ಥನೆಂದು ಪರಿಚಯಿಸಿಕೊಂಡಿದ್ದ. ಹೀಗಾಗಿ ಆತನನ್ನ ನಂಬಿ ವಿಶಾಲ್ ನಾಗ್ ಅವರ ಬ್ಯಾಂಕ್ ಖಾತೆಗ 2 ಲಕ್ಷ ರೂ., 19 ಲಕ್ಷ ನಗದನ್ನು ನೇರವಾಗಿ ನೀಡಿದ್ದೆ. ಇವರು, ನನ್ನ ರೀತಿ ಬಹಳ ಜನರಿಗೆ ಮೋಸ ಮಾಡಿದ್ದಾರೆ ಎಂದು ತಿಮ್ಮಾರೆಡ್ಡಿ ತಿಳಿಸಿದ್ದಾರೆ.
ಹೀಗಾಗಿ ಬಿಜೆಪಿ ಟಿಕೆಟ್ ಗಾಗಿ ರಾಜ್ಯದಲ್ಲಿ ಹಲವಾರು ಮಂದಿ ಆಕಾಂಕ್ಷಿಗಳು ಕೋಟ್ಯಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಚೈತ್ರಾ ಕುಂದಾಪುರ ಮತ್ತು ತಂಡ ಬೈಂದೂರು ಕ್ಷೇತ್ರದ ಟಿಕೆಟ್ ಕೊಡಿಸುತ್ತೇವೆಂದು ಐದು ಕೋಟಿ ಡೀಲ್ ಮಾಡಿರೋದು ಬೆಳಕಿಗೆ ಬರುತ್ತಲೇ ಮತ್ತೊಂದು ವಂಚನೆ ಪುರಾಣ ಹೊರಬಂದಿದೆ.
Another fraud case exposed like Chaitra Kundapura in Bangalore by the name of Amith Shah, Thimareddy duped of 19 lakhs in the name of BJP Ticket.
17-10-26 07:30 pm
HK News Staffer
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
17-10-26 11:04 pm
Mangaluru Staffer
ಎಂಆರ್ ಪಿಎಲ್ ದುರಂತ ; ಮೃತ ರಾಜೇಶ್ ಡಿಸಿಲ್ವ ಕುಟುಂಬ...
17-10-26 07:34 pm
ಸೆ.30ರ ಸ್ಫೋಟ ಘಟನೆಯಲ್ಲಿ 118.76 ಕೋಟಿ ನಷ್ಟ ; ಎಂಆ...
17-10-26 12:25 pm
ಪದ್ಮಶ್ರೀ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡ...
16-10-26 10:28 pm
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
18-10-26 10:36 am
Mangaluru Staffer
ಎಂಆರ್ ಪಿಎಲ್ ಘಟಕದಲ್ಲಿ ಸ್ಫೋಟ ಘಟನೆ ; ತೀವ್ರ ಗಾಯಗೊ...
17-10-26 11:09 am
LanchuLal, Astra Fraud, Mangalore: ‘ಅಕ್ಷಯ ಪಾತ...
16-10-26 03:37 pm
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am