ಬ್ರೇಕಿಂಗ್ ನ್ಯೂಸ್
12-11-22 12:01 pm HK News Desk ಕರ್ನಾಟಕ
ಹಾಸನ, ನ.12 : ಎರಡನೇ ಮದುವೆ ರಾದ್ಧಾಂತದಿಂದ ಮನನೊಂದ ಯೋಧನೊಬ್ಬ ತಾನು ಪ್ರೀತಿಸುತ್ತಿದ್ದ ವಿಧವೆ ಮಹಿಳೆಯ ಜೊತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನದ ಶಾಂತಿಗ್ರಾಮ ಹೋಬಳಿಯಲ್ಲಿ ನಡೆದಿದೆ. ಸೇನೆಯಲ್ಲಿ ಯೋಧನಾಗಿದ್ದ ಕಿರಣ್ ಕುಮಾರ್ ಹಾಗೂ ಆಶಾ ಮೃತ ದುರ್ದೈವಿಗಳು.
ಯೋಧ ಕಿರಣ್ ಕುಮಾರ್, ಗಂಡನನ್ನು ಕಳಕೊಂಡಿದ್ದ ವಿಧವೆ ಆಶಾ ಎಂಬವರನ್ನು ಗುಟ್ಟಾಗಿ ಮದುವೆಯಾಗಿದ್ದರು ಎನ್ನಲಾಗಿದೆ. ಆದರೆ ಈ ಮದುವೆಗೆ ಆತನ ಮನೆಯವರ ಒಪ್ಪಿಗೆ ಇರಲಿಲ್ಲ. ಇದರಿಂದಾಗಿ ಮೊದಲ ಮದುವೆ ವಿಚಾರ ಬಚ್ಚಿಟ್ಟು ಯೋಧ ಕಿರಣ್ ಕುಮಾರ್ 2ನೇ ಮದುವೆಯಾಗಲು ತಯಾರಿ ನಡೆಸಿದ್ದ. ಗುರುವಾರ ಹಾಸನ ನಗರದ ಹೊರ ವಲಯದ ಬೂವನಹಳ್ಳಿ ಬಳಿಯ ಕಲ್ಯಾಣ ಮಂಟಪದಲ್ಲಿ ಮದುವೆಗೆ ಸಿದ್ಧತೆ ನಡೆದಿತ್ತು. ವಧು-ವರ ಸಪ್ತಪದಿ ತುಳಿಯುವಷ್ಟರಲ್ಲಿ ಮೊದಲ ಪತ್ನಿ ಎನ್ನಲಾದ ಆಶಾ ಕಲ್ಯಾಣ ಮಂಟಪಕ್ಕೆ ಬಂದು ರಾದ್ಧಾಂತ ಮಾಡಿ ಮದುವೆ ನಿಲ್ಲಿಸಿದ್ದಳು. ಬಳಿಕ ಪೊಲೀಸರು ಬಂದು ವರನನ್ನು ವಶಕ್ಕೆ ಪಡೆದಿದ್ದರೆ, ಮದುವೆಯಾಗಲು ರೆಡಿಯಾಗಿ ಬಂದಿದ್ದ ಹುಡುಗಿ ಕಡೆಯವರು ವಿಷಯ ತಿಳಿದು ಜಾಗ ಖಾಲಿ ಮಾಡಿದ್ದರು.



ಕಿರಣ್ ಕುಮಾರ್ 6 ತಿಂಗಳ ಹಿಂದೆ ಮನೆಯಲ್ಲೇ ತಾಳಿ ಕಟ್ಟಿ ತನ್ನನ್ನು ಮದುವೆಯಾಗಿದ್ದರು. ಈಗ ಮತ್ತೊಂದು ಮದುವೆ ಆಗುತ್ತಿದ್ದಾರೆಂಬುದು ಆಶಾ ಆರೋಪ ಆಗಿತ್ತು. ಯೋಧ ಕಿರಣ್ ಕುಮಾರ್ ತನಗೆ ವಂಚನೆ ಮಾಡಿದ್ದಾನೆಂದು ಮಹಿಳೆ ಮದುವೆ ಮಂಟಪದಲ್ಲೇ ರಂಪ ಮಾಡಿದ್ದಳು. ಬಳಿಕ ಹುಡುಗಿ ಮನೆಯವರು ಯೋಧನನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದರು.


ಸಂಧಾನ ಬಳಿಕ ಸಾವಿಗೆ ಶರಣು
ವಿಷಯ ತಿಳಿದು ಸ್ಥಳೀಯ ಪೊಲೀಸರು ಸ್ಥಳಕ್ಕೆ ಬಂದಿದ್ದು ರಂಪಾಟ, ಪರಿಸ್ಥಿತಿ ತಿಳಿಗೊಳಿಸಿದ್ದರು. ನಂತರ ಪೊಲೀಸರು ಎಲ್ಲರನ್ನೂ ಠಾಣೆಗೆ ಕರೆದೊಯ್ದು, ವಿಚಾರಣೆಯನ್ನೂ ನಡೆಸಿದ್ದರು. ಪೊಲೀಸರ ಸಮ್ಮುಖದಲ್ಲಿ ರಾಜಿ ಸಂಧಾನ ಬಳಿಕ ಯೋಧ ಕಿರಣ್ ಕುಮಾರ್ ಮತ್ತು ಆಶಾ ತಮ್ಮ ಹೊಂಗೆರೆ ಗ್ರಾಮಕ್ಕೆ ತೆರಳಿದ್ದರು. ಅಲ್ಲಿ ತನ್ನ ಸಂಬಂಧಿಯೊಬ್ಬರಿಗೆ ವಾಟ್ಸಾಪ್ ಮೆಸೇಜ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಾಂತಿ ಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಎರಡನೇ ಮದುವೆ ರಾದ್ಧಾಂತ, ಮರ್ಯಾದೆಗೆ ಅಂಜಿ ಯೋಧ ಆತ್ಮಹತ್ಯೆ ಮಾಡಿಕೊಂಡಿದ್ದು ಆನಂತರ ವಿಧವೆ ಮಹಿಳೆಯೂ ಸಾವಿಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಒಂದೇ ದಿನಕ್ಕೆ ಆಗಿರುವ ವೈರುಧ್ಯ ಹಾಸನದಲ್ಲಿ ಚರ್ಚೆಯ ವಸ್ತುವಾಗಿದೆ.
An incident of a man who was offended by marriage raddhanta committed suicide along with a woman in Hobli village of Shanti village of Hassan. Kiran Kumar, who was a soldier by profession, and Asha are unfortunate deceased.It is said that Kiran, who had been living a peaceful life with Asha who lost her husband for the past two years, agreed to her parents and got married. However, Asha broke the marriage due to some reasons.
17-07-26 02:55 pm
HK News Staffer
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
18-07-26 09:31 pm
HK News Staffer
ಮಾಜಿ ಪ್ರಧಾನಿ ದೇವೇಗೌಡರ ಧರ್ಮಪತ್ನಿ ಚನ್ನಮ್ಮ ನಿಧನ...
18-07-26 06:22 pm
ಡೊನಾಲ್ಡ್ ಟ್ರಂಪ್ ಕೊಂದವರಿಗೆ 10 ಮಿಲಿಯನ್ ಡಾಲರ್ ಬಹ...
18-07-26 12:48 pm
‘ಪ್ರಾಜೆಕ್ಟ್ ಮೇಘಾಲಯ’ ಸಂಚು ಸ್ಫೋಟ! ವಿಜಯ್ ಸರ್ಕಾರ...
18-07-26 12:22 pm
51 ಬಾರಿ ವಿಷಸರ್ಪದಿಂದ ಕಚ್ಚಿಸಿಕೊಂಡರೂ ಸಾವಿನಿಂದ ಪಾ...
17-07-26 10:32 am
17-07-26 10:25 pm
HK News Staffer
ಎಸ್ಐಆರ್ ನಡುವೆ ಶಾಶ್ವತ ನಿವಾಸಿ ಪತ್ರ ಜಾರಿ ಅಕ್ರಮ ಬ...
17-07-26 07:58 pm
ಉಳ್ಳಾಲ ತೀರಕ್ಕೆ ಅಪ್ಪಳಿಸಿದ ಬೂತಾಯಿ ಮೀನುಗಳ ರಾಶಿ !...
17-07-26 07:22 pm
ಸುರತ್ಕಲ್ ಬಳಿ ಮೀನುಗಾರಿಕಾ ದೋಣಿ ಪಲ್ಟಿ ; ಸಮುದ್ರಕ್...
17-07-26 03:55 pm
ಸೌಂದರ್ಯ ಕೆಡಿಸಿದೆ ತೊಕ್ಕೊಟ್ಟು ಫ್ಲೈ ಓವರಿನ ಅನಧಿಕೃ...
15-07-26 10:44 pm
18-07-26 10:06 pm
HK News Staffer
ಮೈಸೂರು ; ಹೊಸ ಬದುಕಿನ ಕನಸು 15 ದಿನದಲ್ಲೇ ನುಚ್ಚುನ...
18-07-26 07:27 pm
ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ ; 8 ಕಾರ್...
18-07-26 07:21 pm
ಸಂಪಾಜೆ ಮೀಸಲು ಅರಣ್ಯದಲ್ಲಿ ಕಾಡುಕೋಣ ಬೇಟೆ ; ತಡೆದು...
18-07-26 12:34 pm
ಬಿ.ಸಿ. ರೋಡಿನಲ್ಲಿ ಯುವತಿ ಹತ್ಯೆ ಘಟನೆ ನೆಪದಲ್ಲಿ ಜಾ...
17-07-26 09:07 pm