ಬ್ರೇಕಿಂಗ್ ನ್ಯೂಸ್
20-10-22 09:07 pm HK News Desk ಕರ್ನಾಟಕ
ಮೈಸೂರು, ಅ.20 : ಕಾಂಗ್ರೆಸ್ ಸೇರುತ್ತಾರೆ ಎನ್ನಲಾಗಿದ್ದ ಜಿಟಿ ದೇವೇಗೌಡ ವರಸೆ ಬದಲಿಸಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಗುರುವಾರ ತಮ್ಮ ಮನೆಗೆ ಬರುತ್ತಲೇ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ವಿರಸ ಮರೆತು ಪಕ್ಷದಲ್ಲಿ ಮುಂದುವರಿಯುವ ಸೂಚನೆ ನೀಡಿದ್ದಾರೆ.
ಕುಮಾರಸ್ವಾಮಿ ಅವರ ಬಗ್ಗೆ ಮುನಿಸಿಕೊಂಡು ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದ ಮತ್ತು ಪಕ್ಷದಿಂದ ಒಂದು ಕಾಲು ಆಚೆ ಇಟ್ಟಿದ್ದ ಜಿಟಿ ದೇವೇಗೌಡ ಅವರು ಗುರುವಾರ ದಯವಿಟ್ಟು ಕ್ಷಮಿಸಿ, ನಾನು ಜೆಡಿಎಸ್ ಬಿಡಲ್ಲ ಎಂದು ಹೇಳುವ ಮೂಲಕ ತಾವು ಕಾಂಗ್ರೆಸ್ ಅಥವಾ ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಜೆಡಿಎಸ್ ಆಯೋಜಿಸಿದ್ದ ಪಂಚರತ್ನ ಕಾರ್ಯಾಗಾರದಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸಿದ್ದ ಮಾಜಿ ಪ್ರಧಾನಿ ದೇವೇಗೌಡ ಅವರು ನಗರದ ವಿವಿ ಮೊಹಲ್ಲಾದಲ್ಲಿರುವ ಜಿ.ಟಿ.ದೇವೇಗೌಡ ಅವರ ನಿವಾಸಕ್ಕೆ ಅಚ್ಚರಿ ಭೇಟಿ ನೀಡಿದರು. ಈ ಮೂಲಕ ಜಿಟಿಡಿಯನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ದೇವೇಗೌಡರು ತಮ್ಮ ಮನೆಗೆ ಆಗಮಿಸಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಟಿ ದೇವೇಗೌಡ ಅವರು, ದಯವಿಟ್ಟು ನನ್ನ ಕ್ಷಮಿಸಿ. ಜೆಡಿಎಸ್ ಬಿಟ್ಟು ಹೋಗಲ್ಲ. ಎಲ್ಲ ಪಕ್ಷದವರೂ ನನ್ನನ್ನ ಕರೆದಿದ್ದಾರೆ, ಕಾಂಗ್ರೆಸ್ನಿಂದ ಸಿದ್ದರಾಮಯ್ಯನವರೂ ನನ್ನನ್ನು ಕರೆದಿದ್ದಾರೆ. ಬಿಜೆಪಿಯವರೂ ನನಗೆ ಬಂದು ಬಿಡಿ ಎಂದು ಹೇಳಿದ್ದಾರೆ. ಆದರೆ ನಾವು ಜೆಡಿಎಸ್ ಪಕ್ಷದಿಂದ ಬೆಳೆದಿದ್ದೇವೆ. ಜೆಡಿಎಸ್ ಪಕ್ಷವನ್ನ ಕಟ್ಟುವುದೇ ನಮ್ಮ ಗುರಿ ಎಂದ ಸ್ಪಷ್ಟಪಡಿಸಿದರು.

ಈ ಮೂಲಕ ಕಾಂಗ್ರೆಸ್, ಬಿಜೆಪಿ ಸೇರುವ ವದಂತಿಗಳಿಗೆ ತೆರೆ ಎಳೆದಿದ್ದಾರೆ. ತಮ್ಮ ಪಕ್ಷಕ್ಕೆ ಬರ್ತಾರೆ ಎಂದು ಭಾರೀ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಹಾಗೂ ಬಿಜೆಪಿಗೆ ನಿರಾಸೆಯಾಗಿದೆ. ಮೈಸೂರಿನಲ್ಲಿ ಜಿಟಿ ದೇವೇಗೌಡ ಮತ್ತು ಅವರ ಪುತ್ರ ಪ್ರಭಾವ ಹೊಂದಿದ್ದು ಅವರನ್ನು ತಮ್ಮ ಪಕ್ಷಕ್ಕೆ ಸೆಳೆದಲ್ಲಿ ಅನುಕೂಲ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ತುದಿಗಾಲಲ್ಲಿ ನಿಂತಿದ್ದರು. ಕುಮಾರಸ್ವಾಮಿ ಜೊತೆಗೆ ಮುನಿಸು ಹೊಂದಿದ್ದ ಜಿಟಿಡಿ ಮೈಸೂರಿನಲ್ಲಿ ಪಕ್ಷದ ಚಟುವಟಿಕೆಯಿಂದ ದೂರ ಉಳಿದಿದ್ದರು.
It was a matter of rejoice for JD-S leaders as Party Supremo and former Prime Minister H.D. Deve Gowda took part on the second and concluding day of the two-day Consultation Meet organised for the party’s probable candidates for next year’s Assembly elections, at Silent Shores Resort, near Hootagalli here this morning. He was given a rousing welcome with thunderous applause from JD(S) leaders. Only the party Supremo Deve Gowda, JD(S) Legislature party leader H.D. Kumaraswamy and State JD(S) President C.M. Ibrahim were on the dais.
05-03-26 11:42 pm
HK News Desk
ಸಂಘರ್ಷದಿಂದ ಸಮಸ್ಯೆ ಪರಿಹರಿಸಲಾಗದು, ಪಶ್ಚಿಮ ಏಷ್ಯಾ,...
05-03-26 09:40 pm
Lokayukta Raid: 8 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳ...
05-03-26 08:41 pm
ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ ; ಮಕ್ಕಳೆದುರೇ ಹಾಸ...
04-03-26 06:47 pm
ಅಡುಗೆ ವಿಚಾರದಲ್ಲಿ ಅತ್ತೆಯೊಂದಿಗೆ ಜಗಳ ಕಾದು ಯುವತಿ...
04-03-26 05:06 pm
05-03-26 08:51 pm
HK News Staffer
ಭಾರತ ಗಡಿಯಿಂದ ಸುಮಾರು 300 ಕಿ.ಮೀ. ದೂರದಲ್ಲೇ ಇರಾನ್...
05-03-26 05:02 pm
ಬಿಹಾರದಲ್ಲಿ ಕ್ಷಿಪ್ರ ರಾಜಕೀಯ ಬದಲಾವಣೆ ; 'ಸುದೀರ್ಘ...
04-03-26 11:13 pm
ಹರ್ಮುಜ್ ಜಲಸಂಧಿ ನಿರ್ಬಂಧ ಉಲ್ಲಂಘಿಸಿದ 10 ತೈಲ ಹಡಗಿ...
04-03-26 10:09 pm
ಇರಾನ್ ಹಡಗು ಸ್ಫೋಟ ಬೆನ್ನಲ್ಲೇ ಅಮೆರಿಕದ ಯುದ್ಧ ನೌಕೆ...
04-03-26 10:03 pm
05-03-26 07:38 pm
HK News Staffer
Dr Nagalakshmi Choudhary, Mangalore: ಸಾಕ್ಷಿಗಳ...
05-03-26 04:36 pm
ಅರಣ್ಯಾಧಿಕಾರಿ ಮನೆಗೆ ಕನ್ನ ಹಾಕಿದ ಕಳ್ಳರು ; ಹೊರಗೆ...
05-03-26 02:34 pm
Aadhaar Card Found, Mangalore: ಫರಂಗಿಪೇಟೆ ನದಿ...
05-03-26 12:42 pm
ತುಳು ಎರಡನೇ ಅಧಿಕೃತ ಭಾಷೆ; ಆಂಧ್ರಪ್ರದೇಶದಲ್ಲಿ ಕೈಗೊ...
04-03-26 09:31 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm