ಬ್ರೇಕಿಂಗ್ ನ್ಯೂಸ್
19-10-22 08:34 pm HK News Desk ಕರ್ನಾಟಕ
ಮೈಸೂರು, ಅ.19 : ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ರಾಹುಲ್ ಗಾಂಧಿಗೆ ದಾಖಲೆ ಕಳಿಸಿಕೊಡುತ್ತೇನೆಂಬ ಸಿಎಂ ಬೊಮ್ಮಾಯಿ ಹೇಳಿಕೆಗೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ನಿಮಗೆ ಧಮ್ ಇದ್ದರೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಿ, ಶಿಕ್ಷೆ ಕೊಡಿಸಿ. ಭ್ರಷ್ಟಾಚಾರದ ಬಗ್ಗೆ ರಾಹುಲ್ ಗಾಂಧಿಗೆ ಏಕೆ ಕಳುಹಿಸುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೀದರಿನಲ್ಲಿ ಜನಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಕಾಂಗ್ರೆಸ್ ಸರ್ಕಾರದ ಹಗರಣದ ಬಗ್ಗೆ ರಾಹುಲ್ ಗಾಂಧಿಗೆ ದಾಖಲೆ ಕಳಿಸಿಕೊಡುತ್ತೇನೆ ಎಂದಿದ್ದರು. ಮೈಸೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಕುಮಾರಸ್ವಾಮಿ, ಜೆಡಿಎಸ್ ಪಕ್ಷ ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಜೆಡಿಎಸ್ ಮಿಷನ್ 123 ಗುರಿ ದಾಟಿ, ಅಧಿಕಾರ ಹಿಡಿಯಲಿದೆ. ಕಾಂಗ್ರೆಸ್ ನವರು 150 ಸ್ಥಾನ ಗೆಲ್ಲುತ್ತೇವೆ ಎನ್ನುತ್ತಾರೆ. ಅವರಿಗೆ ಎಲ್ಲಿ ಅಭ್ಯರ್ಥಿಗಳು ಇದ್ದಾರೆ. ಇನ್ನೂ ಕೂಡ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಸಿಕ್ಕಿಲ್ಲ ಎಂದು ಟೀಕಿಸಿದರು.

ನಮ್ಮ ಪಂಚರತ್ನ ಕಾರ್ಯಕ್ರಮಕ್ಕೆ ಸಿಗುತ್ತಿರುವ ಉತ್ತಮ ಬೆಂಬಲ ನೋಡಿ ಹಲವರು ನಮ್ಮ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ. ನವೆಂಬರ್ 1ರ ಪಂಚರತ್ನ ಯಾತ್ರೆ ವೇಳೆ 126 ಸಂಭವನೀಯ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಲಾಗುವುದು.ಶಾಸಕ ಜಿ.ಟಿ.ದೇವೇಗೌಡರು ನನ್ನ ಅನುಮತಿ ಪಡೆದು ಇಲ್ಲಿ ಗೈರು ಹಾಜರಾಗಿದ್ದಾರೆ. ಮೈಸೂರು ಸೇರಿದಂತೆ ಇಡೀ ರಾಜ್ಯದಲ್ಲಿ ಯಾವುದೇ ಕ್ಷೇತ್ರದಲ್ಲೂ ಭಿನ್ನಾಭಿಪ್ರಾಯ ಇಲ್ಲ.
ತೆಲಂಗಾಣದಲ್ಲಿ ಪ್ರತಿ ದಲಿತ ಕುಟುಂಬಕ್ಕೆ 10 ಲಕ್ಷ ನೀಡಲಾಗುತ್ತಿದೆ. ದಲಿತರ ಕಲ್ಯಾಣ ಕಾರ್ಯಕ್ರಮ ರೂಪಿಸಲಾಗಿದೆ. ಅದೇ ರೀತಿ ಹಲವು ವಿಶೇಷ ಕಾರ್ಯಕ್ರಮಗಳನ್ನು ಜೆಡಿಎಸ್ ಕಡೆಯಿಂದ ರಾಜ್ಯದಲ್ಲಿಯೂ ರೂಪಿಸಲಾಗುವುದು ಎಂದು ಹೇಳಿದರು.
HD Kumaraswamy slams CM Bommai over sending corrpurtiom of congress leaders to Rahul Gandhi. He has asked CM to show the documents with proof and share it before the media.
26-04-26 08:05 pm
HK News Staffer
ಅಧಿಕಾರಕ್ಕೆ ತಂದವರಿಗೆ ಕೆಳಗಿಳಿಸುವುದೂ ಗೊತ್ತಿದೆ, ಚ...
26-04-26 12:41 pm
ಬಿಎಂಟಿಸಿ ಬಸ್ ಚಲಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘ...
25-04-26 10:56 pm
ಫೇಲ್ ಎನ್ನಲಾಗಿದ್ದ ವಿದ್ಯಾರ್ಥಿನಿ ಟಾಪರ್ ; SSLC...
24-04-26 10:52 pm
ದಾವಣಗೆರೆ ಬಿಸಿ ; ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಜೋ...
24-04-26 02:35 pm
27-04-26 02:48 pm
HK News Staffer
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:53 pm
ಆಗಷ್ಟೇ ಕಣ್ಬಿಟ್ಟಿದ್ದ ಮಗಳ ಅಂಗಾಂಗ ದಾನದಿಂದ ಮರುಜೀವ...
24-04-26 07:35 pm
27-04-26 10:29 am
HK News Staffer
ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ; 67 ಕ...
26-04-26 04:30 pm
ತಾಕೋಡೆ ಧರ್ಮನೇಮಕ್ಕೆ ಭಂಡಾರ ಒಯ್ಯುತ್ತಿದ್ದಾಗ ಕುಸಿದ...
25-04-26 01:45 pm
Commissioner Sudheer Reddy, Mangalore: ಕಮಿಷನರ...
24-04-26 07:10 pm
ಬೆಳ್ತಂಗಡಿ, ಬಂಟ್ವಾಳ ತಾಲೂಕು ಆಸ್ಪತ್ರೆ ಖಾಸಗಿ ತೆಕ್...
23-04-26 04:43 pm
27-04-26 10:04 pm
HK News Staffer
ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ; ಪ್ರಮುಖ ಆ...
27-04-26 05:42 pm
ಉಡುಪಿಯಲ್ಲಿ ಕಟ್ಟಡಕ್ಕೆ ಬೆಂಕಿ ; ಮೊಬೈಲ್, ಹಾರ್ಡ್...
26-04-26 09:26 pm
ಚಾರ್ಮಾಡಿ ಘಾಟಿಯಲ್ಲಿ ಬಸ್ ಪಲ್ಟಿ; ಧರ್ಮಸ್ಥಳದಲ್ಲಿ ಮ...
26-04-26 09:23 pm
ನಿಶ್ಚಿತಾರ್ಥ ಮುನ್ನಾ ದಿನವೇ ಯುವತಿ ನಾಪತ್ತೆ ; ಮುಸ್...
26-04-26 08:07 pm