ಬ್ರೇಕಿಂಗ್ ನ್ಯೂಸ್
16-10-22 10:56 am HK News Desk ಕರ್ನಾಟಕ
ಹಾಸನ, ಅ.16 : ಧರ್ಮಸ್ಥಳಕ್ಕೆ ಬಂದಿದ್ದ ಕುಟುಂಬ ಪ್ರಯಾಣಿಸುತ್ತಿದ್ದ ಟೆಂಪೋ ಟ್ರಾವೆಲರ್ ಅಪಘಾತಕ್ಕೀಡಾಗಿ ಒಂದೇ ಕುಟುಂಬದ ಒಂಬತ್ತು ಜನರು ಸಾವನ್ನಪ್ಪಿದ ಘಟನೆ ಅರಸೀಕೆರೆ ತಾಲೂಕಿನ ಗಾಂಧಿ ನಗರದ ಬಳಿ ನಡೆದಿದೆ.
ಟಿಟಿ ವಾಹನ, ಕೆಎಸ್ಸಾರ್ಟಿಸಿ ಬಸ್ ಹಾಗೂ ಕೆಎಂಎಫ್ ಹಾಲಿನ ಟೆಂಪೋ ಸರಣಿ ಅಪಘಾತಕ್ಕೀಡಾಗಿದೆ. ಒಂದೇ ವಾಹನದಲ್ಲಿ ಧರ್ಮಸ್ಥಳ, ಸುಬ್ರಹ್ಮಣ್ಯ, ಹಾಸನಾಂಬೆ ದರ್ಶನಕ್ಕೆ ಪ್ರವಾಸ ಹೋಗಿಧ್ದ ಅಣ್ಣ, ತಮ್ಮಂದಿರ ಕುಟುಂಬ ಸದಸ್ಯರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ದೊಡ್ಡಯ್ಯ(60), ಅವರ ಪತ್ನಿ ಭಾರತಿ(50), ದೊಡ್ಡಯ್ಯ ಸಹೋದರ ರಮೇಶ್ ಪತ್ನಿ ಲೀಲಾವತಿ(45), ಮೊಮ್ಮಕ್ಕಳಾದ ಧ್ರುವ (2) ಮತ್ತು ತನ್ಮಯ್(10) ಸಾವು ಕಂಡಿದ್ದಾರೆ. ಮಕ್ಕಳ ತಾಯಿ ಮಂಜುಳಾ ಗಂಭೀರ ಗಾಯಗೊಂಡಿದ್ದಾರೆ. ದೊಡ್ಡಯ್ಯ ಅವರ ಮತ್ತೋರ್ವ ಸಹೋದರ ಕುಮಾರಸ್ವಾಮಿ ಅವರ ಪುತ್ರಿ ಚೈತ್ರ(33) ಮತ್ತು ಚೈತ್ರಾ ಮಕ್ಕಳಾದ ಸಮರ್ಥ ರಾಯ್(10) ಮತ್ತು ಸೃಷ್ಟಿ ಸಾವನ್ನಪ್ಪಿದ್ದಾರೆ. ಕುಮಾರಸ್ವಾಮಿ ಅವರ ಬಾವ ಮೈದುನನ ಮಗಳು ವಂದನ(20) ಕೂಡ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸಾಲಾಪುರ ಗ್ರಾಮದ ಏಳು ಹಾಗು ದೊಡ್ಡೇನಹಳ್ಳಿಯ ಎರಡು ಮಕ್ಕಳು ಸೇರಿ ಒಂಬತ್ತು ಜನ ಸಾವು ಕಂಡಿದ್ದಾರೆ. ರಮೇಶ್ ಅವರ ಪುತ್ರಿ ಮಂಜುಳಾರನ್ನು ದೊಡ್ಡೇನಹಳ್ಳಿಯ ಸಂತೋಷ ಜೊತೆ ಮದುವೆ ಮಾಡಲಾಗಿತ್ತು. ತಾಯಿ ಜೊತೆ ಮಕ್ಕಳೊಂದಿಗೆ ಧಾರ್ಮಿಕ ಕ್ಷೇತ್ರದ ದರ್ಶನಕ್ಕೆ ತೆರಳಿದ್ದರು. ಅಪಘಾತದಲ್ಲಿ ಮಂಜುಳಾರ ತಾಯಿ ಹಾಗು ಮಕ್ಕಳು ಸಾವನ್ನಪ್ಪಿದ್ದಾರೆ.
ಕುಮಾರಸ್ವಾಮಿ ಅವರ ಪುತ್ರಿ ಚೈತ್ರಾ ಪತಿ ಎರಡು ವರ್ಷದ ಹಿಂದೆ ಕೋವಿಡ್ ನಿಂದ ಮೃತರಾಗಿದ್ದರು. ಚೈತ್ರಾ ಪತಿ ಸಾರಿಗೆ ಇಲಾಖೆ ನೌಕರನಾಗಿದ್ದು ಅನುಕಂಪದ ಆಧಾರದಲ್ಲಿ ಪತಿಯ ಕೆಲಸಕ್ಕೆ ಸೇರಬೇಕಿದ್ದರು. ಮುಂದಿನ ವಾರ ಕರ್ತವ್ಯಕ್ಕೆ ಹಾಜರಾಗಲಿದ್ದು ಅದಕ್ಕೂ ಮೊದಲೇ ಮಕ್ಕಳ ಸಹಿತ ತಾಯಿ ಕೂಡ ಬಲಿಯಾಗಿದ್ದಾರೆ. ಟಿಟಿ ವಾಹನದಲ್ಲಿ ಒಟ್ಟು 16 ಜನರು ಪ್ರಯಾಣ ಮಾಡುತ್ತಿದ್ದರು. ನಿನ್ನೆ ರಾತ್ರಿ 10-50 ರ ವೇಳೆಯಲ್ಲಿ ಭೀಕರ ಅಪಘಾತ ನಡೆದಿದ್ದು 9 ಜನರು ಸ್ಥಳದಲ್ಲೇ ದುರಂತ ಸಾವು ಕಂಡಿದ್ದಾರೆ. ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ತೆರಳಿ ನಿನ್ನೆ ಸಂಜೆ ಹಾಸನಾಂಬೆಯನ್ನೂ ದರ್ಶನ ಮಾಡಿಕೊಂಡು ಮನೆ ಕಡೆಗೆ ತೆರಳುತ್ತಿದ್ದರು. ಅರಸೀಕೆರೆಯಿಂದ ಇವರ ಮನೆಯಿದ್ದ ಹಳ್ಳಿಕೆರೆಗೆ ಕೇವಲ ಮೂರು ಕಿಮೀ ಇತ್ತು. ಅಷ್ಟರಲ್ಲಿ ಅಪಘಾತ ಆಗಿದೆ.
ಹಾಲಿನ ಟ್ಯಾಂಕರ್ ಚಾಲಕನ ಎಡವಟ್ಟು
ಹಾಲಿನ ಟ್ಯಾಂಕರ್ ಚಾಲಕ ವಿರುದ್ಧ ದಿಕ್ಕಿನಿಂದ ಬಂದಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಟ್ಯಾಂಕರ್ ಗುದ್ದಿದ ರಭಸಕ್ಕೆ ಟಿಟಿ ವಾಹನ ನಜ್ಜುಗುಜ್ಜಾಗಿದ್ದು ಹಿಂದಿನಿಂದ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಕೂಡ ಡಿಕ್ಕಿಯಾಗಿದೆ. ಇದರಿಂದ ಹಿಂದೆ ಮುಂದಿನಿಂದ ಡಿಕ್ಕಿಯಾಗಿದ್ದರಿಂದ ತೀವ್ರ ರೀತಿಯಲ್ಲಿ ಟಿಟಿ ವಾಹನಕ್ಕೆ ಪೆಟ್ಟು ಬಿದ್ದು ಉರುಳಿ ಬಿದ್ದಿದೆ. ಅದರಲ್ಲಿದ್ದ ಪ್ರಯಾಣಿಕರು ಚೆಲ್ಲಾಪಿಲ್ಲಿಯಾಗಿ ರಸ್ತೆಗೆ ಬಿದ್ದಿದ್ದಾರೆ. ಅಪಘಾತ ನಡೆದ ಕೂಡಲೇ ಟ್ಯಾಂಕರ್ ಚಾಲಕ ನವೀನ್ ಪರಾರಿಯಾಗಿದ್ದ. ಭಾನುವಾರ ಬೆಳಗ್ಗೆ ಆತನನ್ನು ಪೊಲೀಸರು ಬಂಧಿಸಿದ್ದಾರೆ.
Nine people, including four children, were killed and 10 injured in a pile-up involving three vehicles in Hassan, police sources said. The accident involving a KMF milk tanker, a Karnataka State Road Transport Corporation (KSRTC) bus, and a tempo traveller took place in Arsikere taluk at around 11:00 pm on Saturday.
06-05-25 09:38 pm
HK News Desk
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
Hubballi Accident, Sagara, Five Killed: ಹುಬ್ಬ...
06-05-25 01:35 pm
Hassan Suicide, Police Constable Harrasment:...
05-05-25 01:30 pm
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
06-05-25 02:45 pm
HK News Desk
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
06-05-25 06:36 pm
Mangalore Correspondent
Suhas Shetty Murder, Bommai, Dinesh Gundurao:...
06-05-25 06:17 pm
Mangalore, Kodikere Loki Arrest: ಕಮ್ಯುನಲ್ ಕೇಸ...
06-05-25 04:02 pm
Suhas Shetty Murder, Mangalore, Police: ಅಹಿತಕ...
06-05-25 12:32 pm
Mangalore Police, Sharan Pumpwell: ದಕ್ಷಿಣ ಕನ್...
05-05-25 10:59 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm