ಬ್ರೇಕಿಂಗ್ ನ್ಯೂಸ್
12-10-22 04:58 pm HK News Desk ಕರ್ನಾಟಕ
ಚಿಕ್ಕಮಗಳೂರು, ಅ.12 : ಚಿಕ್ಕಮಗಳೂರು ತಾಲೂಕು ಹುಣಸೆಹಳ್ಳಿಪುರದ ಕಾಫಿ ಎಸ್ಟೇಟ್ ಒಂದರಲ್ಲಿ ಕೆಲಸಕ್ಕಿದ್ದ ಪರಿಶಿಷ್ಟ ಜಾತಿಯ ಒಂದೇ ಕುಟುಂಬದ 14 ಮಂದಿ ಕಾರ್ಮಿಕರನ್ನು ಎಸ್ಟೇಟ್ ಮಾಲೀಕ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ ಘಟನೆ ಬಗ್ಗೆ ಪ್ರಕರಣ ದಾಖಲಾಗಿದೆ.
ಹಣದ ವಿಚಾರದಲ್ಲಿ ಕಾರ್ಮಿಕರನ್ನು ಹಿಂಸಿಸಿ ಸೆರೆಯಲ್ಲಿಟ್ಟ ಆರೋಪದ ಮೇಲೆ ಕಾಫಿ ಎಸ್ಟೇಟ್ ಮಾಲೀಕ ಜಗದೀಶ್ ಗೌಡ ಮತ್ತು ಆತನ ಪುತ್ರ ತಿಲಕ್ ವಿರುದ್ಧ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಗೀಡಾದ ಮಹಿಳೆಗೆ ಗರ್ಭಪಾತ
ಹಲ್ಲೆಗೊಳಗಾದ ಕಾರ್ಮಿಕರು ಒಂದೇ ಹಳ್ಳಿಗೆ ಸೇರಿದವರು. ಹೆಚ್ಚಿನವರು ಮಹಿಳೆಯರು. ಕಾರ್ಮಿಕರಲ್ಲಿ ಒಬ್ಬ ಮಹಿಳೆ ಗರ್ಭಿಣಿಯಾಗಿದ್ದು ಚಿತ್ರಹಿಂಸೆಯಿಂದ ರಕ್ತಸ್ರಾವ ಉಂಟಾಗಿ ಗರ್ಭಪಾತ ಆಗಿರುವ ಆರೋಪ ಕೇಳಿಬಂದಿದೆ. ಆ ಮಹಿಳೆ ನೀಡಿರುವ ದೂರಿನಂತೆ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆಯ ಪತಿ ವಿಜಯ್ ಸಂಬಂಧಿಕರು ಮತ್ತು ನೆರೆಮನೆಯವರ ನಡುವೆ 15 ದಿನಗಳ ಹಿಂದೆ ಜಗಳವಾಗಿತ್ತು. ವಿಜಯ್ ಸಂಬಂಧಿಕರಾದ ಸತೀಶ್ ಮತ್ತು ಮಂಜು ಕಾಫಿ ಎಸ್ಟೇಟ್ ಮಾಲೀಕ ಜಗದೀಶ್ ಗೌಡರಿಂದ 9 ಲಕ್ಷ ರೂ. ಹಣ ಸಾಲ ಪಡೆದಿದ್ದಾರೆ ಎನ್ನಲಾಗುತ್ತಿದ್ದು ಹಣ ಪಾವತಿ ಮಾಡುವ ವರೆಗೆ 14 ಕಾರ್ಮಿಕರನ್ನು ಬಿಡೋದಿಲ್ಲ ಎಂದು ಎಸ್ಟೇಟ್ ಮಾಲೀಕರು ತಮ್ಮ ಕ್ವಾಟ್ರರ್ಸ್ನಲ್ಲಿ ಕೂಡಿ ಹಾಕಿ ಬೀಗ ಹಾಕಿದ್ದರು ಎಂದು ಆರೋಪಿಸಲಾಗಿದೆ. ಅ.8ರಂದು ಘಟನೆ ನಡೆದಿದ್ದು ತಡವಾಗಿ ಪೊಲೀಸ್ ದೂರು ನೀಡಲಾಗಿದೆ.
A Case has been filed against coffee estate owner Jagadeesh Gowda (a BJP member) and his son Tilak, allegedly for keeping 14 female Dalit labourers under house arrest in Hunasehalli village over a financial issue. Gowda assaulted a pregnant woman labour too."The Dalit women were kept imprisoned inside the house. There was a pregnant woman among them. All the female labourers including the pregnant woman have been rescued" Chikkamagaluru SP said on Wednesday.
06-05-25 08:18 pm
Bangalore Correspondent
Hubballi Accident, Sagara, Five Killed: ಹುಬ್ಬ...
06-05-25 01:35 pm
Hassan Suicide, Police Constable Harrasment:...
05-05-25 01:30 pm
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
06-05-25 02:45 pm
HK News Desk
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
06-05-25 06:36 pm
Mangalore Correspondent
Suhas Shetty Murder, Bommai, Dinesh Gundurao:...
06-05-25 06:17 pm
Mangalore, Kodikere Loki Arrest: ಕಮ್ಯುನಲ್ ಕೇಸ...
06-05-25 04:02 pm
Suhas Shetty Murder, Mangalore, Police: ಅಹಿತಕ...
06-05-25 12:32 pm
Mangalore Police, Sharan Pumpwell: ದಕ್ಷಿಣ ಕನ್...
05-05-25 10:59 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm