ಬ್ರೇಕಿಂಗ್ ನ್ಯೂಸ್
22-09-21 07:32 pm Source ; One India Kannada ಉದ್ಯೋಗ
ಬೆಂಗಳೂರು, ಸೆಪ್ಟಂಬರ್ 22 : ಭಾರತದ ದೇಶಿ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ಕಾರ್ಟ್ ವ್ಯಕ್ತಿಗಳಿಗೆ, ಸೇವಾ ಏಜೆನ್ಸಿಗಳಿಗೆ ಮತ್ತು ಟೆಕ್ನಿಶಿಯನ್ ಗಳಿಗೆ ಸುಲಭವಾಗಿ ಆದಾಯ ಗಳಿಕೆಯ ಅವಕಾಶಗಳನ್ನು ಕಲ್ಪಿಸುವ 'ಫ್ಲಿಪ್ಕಾರ್ಟ್ ಎಕ್ಸ್ಟ್ರಾ' ಮಾದರಿಯ ಪ್ರತ್ಯೇಕ ಮಾರ್ಕೆಟ್ ಪ್ಲೇಸ್ ಅನ್ನು ಪರಿಚಯಿಸಿದೆ. ಈ ಹೊಸ ಪ್ಲಾಟ್ಫಾರ್ಮ್ ಫ್ಲಿಪ್ಕಾರ್ಟ್ನ ಪೂರೈಕೆ ಜಾಲವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ವ್ಯಕ್ತಿಗಳಿಗೆ ಅರೆಕಾಲಿಕ ಅವಕಾಶಗಳನ್ನು ಸೃಷ್ಟಿಸುವ ಸಂದರ್ಭದಲ್ಲಿ ದೇಶಾದ್ಯಂತ ಗ್ರಾಹಕರಿಗೆ ಸರಕು ಮತ್ತು ಸೇವೆಯ ತಡೆರಹಿತ ಮತ್ತು ವೇಗದ ವಿತರಣೆಯನ್ನು ಖಚಿತಪಡಿಸುತ್ತದೆ. ಜೊತೆಗೆ ಹಬ್ಬದ ಸೀಸನ್ ನಲ್ಲಿ 4,000ಕ್ಕೂ ಅಧಿಕ ಟೆಕ್ನಿಶಿಯನ್ಗಳು ಮತ್ತು ಸೇವಾ ಏಜೆನ್ಸಿಗಳಿಗೆ ಹೆಚ್ಚುವರಿಯಾದ ಕೆಲಸದ ಅವಕಾಶಗಳನ್ನು ಒದಗಿಸಲಿದೆ.
ಈ 'ಫ್ಲಿಪ್ಕಾರ್ಟ್ ಎಕ್ಸ್ಟ್ರಾ' ಆ್ಯಪ್ ಗೂಗಲ್ ಪ್ಲೇಸ್ಟೋರ್ನಲ್ಲಿ ಲಭ್ಯವಿದೆ. ಆಸಕ್ತಿ ಇರುವ ವ್ಯಕ್ತಿಗಳಿಗೆ ಫ್ಲಿಪ್ಕಾರ್ಟ್ ಸುಲಭವಾಗಿ ಮತ್ತು ತಡೆರಹಿತವಾಗಿ ಆನ್ ಬೋರ್ಡಿಂಗ್ ಅನುಭವವನ್ನು ನೀಡಲಿದೆ. ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವುದು ಮತ್ತು ಬ್ಯಾಕ್ ಗ್ರೌಂಡ್ ಪರಿಶೀಲನೆಗೆ ಮಾಹಿತಿಯನ್ನು ಹಂಚಿಕೊಳ್ಳುವುದಕ್ಕೆ ನೆರವು ನೀಡುತ್ತದೆ. ಈ ಮೂಲಕ ವ್ಯಕ್ತಿಗಳು ಫ್ಲಿಪ್ಕಾರ್ಟ್ ಆನ್ಬೋರ್ಡ್ನಲ್ಲಿ ಸೇರ್ಪಡೆಗೊಂಡು ಮುಂಬರುವ ತಿಂಗಳುಗಳಲ್ಲಿ ವಿತರಣೆ ಪ್ರತಿನಿಧಿಗಳಾಗುವ ಮತ್ತು ಸೇವಾ ಪಾಲುದಾರರು ಹಾಗೂ ಟೆಕ್ನಿಶಿಯನ್ ಗಳಾಗಿ ಸೇರ್ಪಡೆಗೊಂಡು ವಿವಿಧ ಪಾತ್ರಗಳನ್ನು ನಿರ್ವಹಣೆ ಮಾಡಬಹುದಾಗಿದೆ.
ಮುಂಬರುವ ತಿಂಗಳುಗಳಲ್ಲಿ ಹಬ್ಬದ ಸೀಸನ್ ಮತ್ತು ಕಂಪನಿಯ ಬಿಗ್ ಬಿಲಿಯನ್ ಡೇಸ್ಗೆ ಮುಂಚಿತವಾಗಿ ಇದನ್ನು ಪರಿಚಯಿಸಿರುವುದರಿಂದ ಈ ಪ್ಲಾಟ್ಫಾರ್ಮ್ ಬಳಕೆ ಹೆಚ್ಚಾಗುತ್ತದೆ. ಇದರಿಂದ ದೇಶಾದ್ಯಂತ ಸಾವಿರಾರು ಜನರಿಗೆ, ಟೆಕ್ನಿಶಿಯನ್ಗಳು ಮತ್ತು ಸೇವಾ ಏಜೆನ್ಸಿಗಳಿಗೆ ಹೆಚ್ಚುವರಿಯಾದ ಕೆಲಸದ ಅವಕಾಶಗಳು ಲಭ್ಯವಾಗಲಿವೆ ಮತ್ತು ವಿತರಣಾ ಪಾಲುದಾರರಾಗಿ ಗಳಿಕೆಯನ್ನು ಹೆಚ್ಚು ಮಾಡಿಕೊಳ್ಳಲು ನೆರವಾಗುತ್ತದೆ.
ಇ-ಕಾಮರ್ಸ್ ಯಾವುದೇ ಸಂದರ್ಭದಲ್ಲಿ ಮತ್ತು ಎಲ್ಲಿ ಬೇಕಾದರೂ ಉತ್ಪನ್ನಗಳಿಗೆ ಆರ್ಡರ್ ಮಾಡಲು ಅವಕಾಶ ಕಲ್ಪಿಸುತ್ತದೆ. ಈ ಸಕ್ರಿಯಗೊಳಿಸುವುದರೊಂದಿಗೆ ಫ್ಲಿಪ್ಕಾರ್ಟ್ ಎಕ್ಸ್ಟ್ರಾ ವಿತರಣೆಯನ್ನು ಹೆಚ್ಚಿಸಿಕೊಳ್ಳುವಾಗ ಆದಾಯ ಗಳಿಕೆಯ ಅವಕಾಶಗಳನ್ನು ಮತ್ತಷ್ಟು ಸೃಷ್ಟಿಸಿಕೊಳ್ಳಲು ಸಹಾಯ ಮಾಡುತ್ತದೆ.
''ಫ್ಲಿಪ್ಕಾರ್ಟ್ ಎಕ್ಸ್ಟ್ರಾ'' ಆ್ಯಪ್ ಪಾಲುದಾರರಿಗೆ ಎಲ್ಲಿಂದ ಬೇಕಾದರೂ ಸೈನ್ ಅಪ್ ಮಾಡುವ ಅನುಕೂಲ ಮತ್ತು ಸಾಗಾಣಿಕೆಗಳನ್ನು ತಲುಪಿಸಲು ಅವರ ಆದ್ಯತೆಯ ವೇಳಾಪಟ್ಟಿಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶಗಳನ್ನು ನೀಡುತ್ತದೆ. ಇದು ಫ್ಲಿಪ್ಕಾರ್ಟ್ ಪರ್ಯಾಯ ವಿತರಣಾ ಮಾದರಿಗಳ ವಿಸ್ತರಣೆಯಾಗಿದ್ದು ಫ್ಲಿಪ್ಕಾರ್ಟ್ ಕಿರಾಣ ಕಾರ್ಯಕ್ರಮವನ್ನು ಒಳಗೊಂಡಿರುತ್ತದೆ. ಇದು ಇತ್ತೀಚಿನ ವರ್ಷಗಳಲ್ಲಿ ಸ್ಥಿರವಾದ ಬೆಳವಣಿಗೆಯನ್ನು ಕಂಡಿದೆ. ಕಳೆದ ವರ್ಷದ ಹಬ್ಬದ ಸಂದರ್ಭದಲ್ಲಿ ಕಿರಾಣ ವಿತರಣಾ ಮಾದರಿಯು 10 ಮಿಲಿಯನ್ ಸಾಗಣೆಗಳನ್ನು ಪೂರೈಸಿದೆ.
ಈ ಬಗ್ಗೆ ಮಾತನಾಡಿದ ಫ್ಲಿಪ್ಕಾರ್ಟ್ನ ಸಪ್ಲೈ ಚೇನ್ನ ಮುಖ್ಯಸ್ಥ ಮತ್ತು ಹಿರಿಯ ಉಪಾಧ್ಯಕ್ಷ ಹೇಮಂತ್ ಬದ್ರಿ ಅವರು, ''ಮಾರಾಟಗಾರರು, ಕುಶಲಕರ್ಮಿಗಳು, ಎಂಎಸ್ಎಂಇಗಳು, ಕಿರಾಣಗಳು ಮತ್ತು ಗ್ರಾಹಕರು ಸೇರಿದಂತೆ ಎಲ್ಲಾ ರೀತಿಯ ಪಾಲುದಾರರಿಗೆ ಮೌಲ್ಯವನ್ನು ಸೃಷ್ಟಿಸಲು ಸಂಸ್ಥೆಯು ಬದ್ಧವಾಗಿದೆ. ಇ-ಕಾಮರ್ಸ್ ನ ಪ್ರಯೋಜನಗಳನ್ನು ಸಮನಾಗಿ ವಿತರಣೆ ಮಾಡಲು ನಾವು ನಮ್ಮ ಪಾಲುದಾರಿಕೆಯ ವ್ಯಾಪ್ತಿಯನ್ನು ನಿರಂತರವಾಗಿ ವಿಸ್ತರಣೆ ಮಾಡುತ್ತಾ ಬಂದಿದ್ದೇವೆ. ಈ ಪ್ರಯತ್ನದಲ್ಲಿ ನಾವು ಅಪಾರ ಜನಪ್ರಿಯ ಕಿರಾಣ ವಿತರಣಾ ಕಾರ್ಯಕ್ರಮದಂತಹ ಹಲವಾರು ಉಪಕ್ರಮಗಳನ್ನು ಪರಿಚಯಿಸಿದ್ದೇವೆ ಮತ್ತು ವ್ಯಕ್ತಿಗಳು, ಸ್ಥಳೀಯ ಮಳಿಗೆಗಳು ಹಾಗೂ ಸೇವಾ ತಂತ್ರಜ್ಞರಿಗೆ ಹೊಂದಿಕೊಳ್ಳುವಂತಹ ಆದಾಯ ಗಳಿಕೆಯ ಅವಕಾಶಗಳನ್ನು ನೀಡಲು ಫ್ಲಿಪ್ಕಾರ್ಟ್ ಎಕ್ಸ್ಟ್ರಾ ಅನ್ನು ಆರಂಭಿಸಲು ನಮಗೆ ಹರ್ಷವೆನಿಸುತ್ತಿದೆ'' ಎಂದು ತಿಳಿಸಿದರು.
ಬಿಸಿಜಿಯ ಕೈಗಾರಿಕಾ ವರದಿಗಳು ಭಾರತದ ಕೃಷಿಯೇತರ ಆರ್ಥಿಕತೆಯನ್ನು ಬರೋಬ್ಬರಿ 90 ಮಿಲಿಯನ್ ಉದ್ಯೋಗಗಳನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ತಿಳಿಸಿವೆ. ಕೆಲಸದ ಒಟ್ಟು ಮೊತ್ತದಲ್ಲಿ 250 ಬಿಲಿಯನ್ ಡಾಲರ್ ಗಿಂತ ಹೆಚ್ಚಿನ ವಹಿವಾಟು ನಡೆಸುತ್ತವೆ ಮತ್ತು ಶೇಕಡಾ 1.25 ರಷ್ಟು ಭಾರತದ ಜಿಡಿಪಿಗೆ ಕೊಡುಗೆಯನ್ನು ನೀಡುತ್ತವೆ ಎಂದೂ ವರದಿಗಳು ಹೇಳಿವೆ.
3 ಸುಲಭ ಹಂತಗಳಲ್ಲಿ 'ಫ್ಲಿಪ್ಕಾರ್ಟ್ ಎಕ್ಸ್ಟ್ರಾ'ಗೆ ಸೇರ್ಪಡೆ:
ಹೊಸ ಪಟ್ಟಣಗಳು, ನಗರಗಳು ಮತ್ತು 2, 3 ನೇ ಶ್ರೇಣಿಯ ನಗರಗಳಿಂದ ಇ-ಕಾಮರ್ಸ್ ಅನ್ನು ಅನ್ವೇಷಣೆ ಮಾಡುವ ಗ್ರಾಹಕರೊಂದಿಗೆ ವೇಗ ಮತ್ತು ಚುರುಕುತನದೊಂದಿಗೆ ಕಡೆಯ ಮೈಲಿ ವ್ಯಾಪ್ತಿಯನ್ನು ಬಲಪಡಿಸುವುದು ಮುಖ್ಯವಾಗಿದೆ. ಇ-ಕಾಮರ್ಸ್ ಗ್ರಾಹಕರನ್ನು ಮತ್ತು ಹೊಂದಿಕೊಳ್ಳುವ ಉದ್ಯೋಗಾಕಾಂಕ್ಷಿಗಳನ್ನು ಸಂಪರ್ಕಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಗಿಗ್ ಎಕಾನಮಿ ಉದ್ಯೋಗಿಗಳಿಗೆ ಹೆಚ್ಚುವರಿ ಆದಾಯದ ಮೂಲವನ್ನು ಒದಗಿಸುವ ಮೂಲಕ ಅತ್ಯುತ್ತಮವಾದ ಗ್ರಾಹಕ ಅನುಭವವನ್ನು ಒದಗಿಸುತ್ತದೆ. ಗ್ರಾಹಕ ಸೇವೆ, ವಿತರಣೆ, ಸ್ಥಾಪನೆ, ಸುರಕ್ಷತೆ ಮತ್ತು ನೈರ್ಮಲ್ಯ ಕ್ರಮಗಳು ಹಾಗೂ ಕೈಲಿರುವ ಸಾಧನಗಳು, ಪಿಒಎಸ್ ಯಂತ್ರಗಳು, ಸ್ಕ್ಯಾನರ್ಗಳು, ವಿವಿಧ ಮೊಬೈಲ್ ಅಪ್ಲಿಕೇಷನ್ ಗಳು ಮತ್ತು ಇಆರ್ಪಿಗಳ ಬಳಕೆಯ ತರಬೇತಿಯನ್ನು ನೀಡಲಾಗುತ್ತದೆ.
Flipkart introduces service marketplace ‘Flipkart Xtra’ to onboard thousands of part-time job seekers; aims to create over 4,000 jobs this festive season.
14-03-25 11:11 pm
Bangalore Correspondent
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 10:35 pm
Mangalore Correspondent
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm