ಬ್ರೇಕಿಂಗ್ ನ್ಯೂಸ್
09-07-25 10:43 am HK News Desk ಉದ್ಯೋಗ
ಬೆಂಗಳೂರು, ಜುಲೈ 8 : ಸಿಲಿಕಾನ್ ಸಿಟಿ ಬೆಂಗಳೂರಿಗೆ ಅದೆಷ್ಟೋ ಯುವಕ, ಯುವತಿಯರು ಉದ್ಯೋಗಕ್ಕೆ ಬರುತ್ತಾರೆ. ಎಲ್ಲರಿಗೂ ಎನಿಸಿದಷ್ಟು ವೇತನ, ಸೌಲಭ್ಯ ಸಿಗೋದಿಲ್ಲ. ಇದೀಗ ಉದ್ಯೋಗ ಹುಡುಕ್ತಿರೋರಿಗೆ ಭರ್ಜರಿ ವೇತನದ ಆಫರ್ ಒಂದನ್ನು ಉದ್ಯಮಿಯೊಬ್ಬರು ನೀಡಿದ್ದಾರೆ. ಭಾರತೀಯ ಮೂಲದ ಅನಿವಾಸಿ ಉದ್ಯಮಿಯೊಬ್ಬರು ನಾಲ್ಕು ವರ್ಷಗಳ ಅನುಭವ ಇರುವ ಅಭ್ಯರ್ಥಿಗಳಿಗೆ ವಾರ್ಷಿಕ 1 ಕೋಟಿ ರೂ. ಸಂಬಳದ ಆಫರ್ ಘೋಷಿಸಿದ್ದಾರೆ.
ಈ ಹುದ್ದೆಗೆ ಯಾವುದೇ ಪದವಿ ಹಿನ್ನೆಲೆ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ. ಈ ಕುರಿತ ಪೋಸ್ಟ್ ಜಾಲತಾಣದಲ್ಲಿ ವೈರಲ್ ಆಗಿದ್ದು, ಸದ್ಯ ಭಾರೀ ಗಮನ ಸೆಳೆದಿದೆ. ಸ್ಮಾಲೆಸ್ಟ್ ಎಐ (Smallest AI) ಎಂಬ ಕಂಪನಿಯ ಸಂಸ್ಥಾಪಕ ಸುದರ್ಶನ ಕಾಮತ್ ಈ ಜಾಬ್ ಆಫರ್ ಮಾಡಿದ್ದಾರೆ.
ತಮ್ಮ ಎಕ್ಸ್ ಖಾತೆ @kamath_sutra ಮೂಲಕ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು ಬೆಂಗಳೂರಿನಲ್ಲಿ ಫುಲ್ ಸ್ಟಾಕ್ ಲೀಡ್ ಹುದ್ದೆಗೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಮುಂದಾಗಿದ್ದಾರೆ. ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗೆ ವಾರ್ಷಿಕ 1 ಕೋಟಿ ರೂಪಾಯಿ ಸಂಬಳ ನೀಡುವುದಾಗಿ ಹೇಳಿದ್ದಾರೆ.
ಈ ಉದ್ಯೋಗಕ್ಕೆ ಯಾವುದೇ ಪದವಿ ಅಥವಾ ರೆಸ್ಯೂಮ್ ಅಗತ್ಯವಿಲ್ಲ ಎಂದು ಸುದರ್ಶನ್ ಕಾಮತ್ ಸ್ಪಷ್ಟಪಡಿಸಿದ್ದಾರೆ. ಆದರೆ, ಅಭ್ಯರ್ಥಿಗಳು ಕನಿಷ್ಠ 4 ರಿಂದ 5 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು. ಅಲ್ಲದೆ, ಈ ಕೆಳಗಿನ ತಾಂತ್ರಿಕ ಕೌಶಲ್ಯಗಳಲ್ಲಿ ಪರಿಣತಿ ಹೊಂದಿರಬೇಕು ಎಂದು ಬರೆದಿದ್ದಾರೆ. ನೆಕ್ಸ್ಟ್ ಜೆಎಸ್ (Next.js), ಪೈಥಾನ್ (Python), ಮತ್ತು ರಿಯಾಕ್ಟ್ ಜೆಎಸ್ (React.js) ಕೋಡಿಂಗ್‌ನಲ್ಲಿ ಪರಿಣತಿ. 0 ಇಂದ 100 ರ ವರೆಗಿನ ಸಿಸ್ಟಮ್ ಸ್ಕೇಲಿಂಗ್ (System Scaling) ಸಿಸ್ಟಮ್‌ಗಳೊಂದಿಗೆ ಕೆಲಸ ಮಾಡಿದ ಅನುಭವವಿದ್ದರೆ ಪ್ರಯೋಜನ ಆಗಲಿದ್ಯಂತೆ.
ಜುಲೈ 7, 2025 ರಂದು ಶೇರ್ ಮಾಡಲಾದ ಈ ಪೋಸ್ಟ್ ಎಕ್ಸ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೆಲವರು ಈ ಆಫರ್‌ನ ಸಾಧಕ-ಬಾಧಕಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಅರ್ಜಿ ಸಲ್ಲಿಸುವುದು ಹೇಗೆ?
ನಿಮ್ಮನ್ನು ಪರಿಚಯಿಸಿಕೊಳ್ಳುವ 100 ಪದಗಳ ಒಂದು ಟೆಕ್ಸ್ಟ್ ಜೊತೆಗೆ ಮತ್ತು ನಿಮ್ಮ ಅತ್ಯುತ್ತಮ ಕೃತಿಗಳ ಲಿಂಕ್‌ಗಳನ್ನು [email protected] ಗೆ 'ಕ್ರ್ಯಾಕ್ಡ್ ಫುಲ್ ಸ್ಟ್ಯಾಕ್ ಲೀಡ್' ಶೀರ್ಷಿಕೆಯೊಂದಿಗೆ ಕಳುಹಿಸಿ ಎಂದು ಬರೆದಿದ್ದಾರೆ. ಆಸಕ್ತ ಅಭ್ಯರ್ಥಿಗಳು ಅವರ ಖಾತೆಯ ಮೂಲಕ (@kamath_sutra) ಸಂಪರ್ಕಿಸಬಹುದಾಗಿದೆ. ಆದರೆ, ಈ ಆಫರ್‌ಗೆ ಸಂಬಂಧಿಸಿದಂತೆ ಅಧಿಕೃತ ದೃಢೀಕರಣವನ್ನು ಅವರ ಸಂಸ್ಥೆಯಿಂದಲೇ ಪಡೆಯಬೇಕಷ್ಟೆ.
Hiring a cracked full-stack lead at Smallest AI
— Sudarshan Kamath (@kamath_sutra) July 7, 2025
Salary CTC - 1 Cr
Salary Base - 60 LPA
Salary ESOPs - 40 LPA
Joining - Immediate
Location - Bangalore (Indiranagar)
Experience - 4-5 years minimum
Languages - Next JS, Python, React JS
Work from Office - 5 days a week (slightly…
In a city known as India’s Silicon Valley, job opportunities are abundant — but one recent offer has stood out and gone viral for its impressive salary and unconventional requirements. A non-resident Indian (NRI) entrepreneur has announced a ₹1 crore annual salary for the right candidate, and surprisingly, no formal degree or resume is required.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm