ಬ್ರೇಕಿಂಗ್ ನ್ಯೂಸ್
15-04-21 11:28 am Source: Gizbot Bureau ಡಿಜಿಟಲ್ ಟೆಕ್
ಭಾರತದ ಜನಪ್ರಿಯ ಡೈರೆಕ್ಟ್ ಟು ಹೋಮ್ (ಡಿಟಿಎಚ್) ಸೇವಾ ಪೂರೈಕೆದಾರ ಕಂಪನಿಗಳಲ್ಲಿ ಒಂದಾದ ಟಾಟಾಸ್ಕೈ ಈಗಾಗಲೇ ಗ್ರಾಹಕರಿಗೆ ಹಲವು ಉಪಯುಕ್ತ ಸೌಲಭ್ಯಗಳನ್ನು ಪರಿಚಯಿಸಿದೆ. ಇದೀಗ ತನ್ನ ಗ್ರಾಹಕರಿಗೆ ಕ್ರಿಯಾತ್ಮಕ ಸೇವೆಗಳನ್ನು ಮತ್ತು ಯೋಜನೆಗಳನ್ನು ನೀಡುತ್ತದೆ. ಬಳಕೆದಾರರಿಗೆ ಅನುಕೂಲತೆ ಮತ್ತು ತೊಂದರೆಯಿಲ್ಲದ ಸೇವೆಗಳನ್ನು ಒದಗಿಸುವ ಉದ್ದೇಶದಿಂದ, ಟಾಟಾಸ್ಕೈ ಸಂಸ್ಥೆಯು ಈ ಶೈಲಿಯ ಡಿಟಿಎಚ್ ಪ್ಯಾಕೇಜ್ಗಳನ್ನು ಲಭ್ಯವಾಗಿಸಿದೆ. ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು, ಚಂದಾದಾರರು ತಮ್ಮ ಯೋಜನೆಗಳು ಮತ್ತು ಪ್ಯಾಕೇಜ್ಗಳನ್ನು ಸುಲಭವಾಗಿ ಬದಲಾಯಿಸಬಹುದಾಗಿದೆ.
ಹೌದು, ಟಾಟಾಸ್ಕೈ ಚಂದಾದಾರರಿಗೆ ಅಧಿಕೃತ ವೆಬ್ಸೈಟ್ನಿಂದ ನೇರವಾಗಿ ತಮ್ಮ ವಿಭಿನ್ನ ಬೇಡಿಕೆಗಳನ್ನು ಪೂರೈಸಲು ಉತ್ತಮ ಬೆಂಬಲ ವ್ಯವಸ್ಥೆ ಮತ್ತು ಸ್ವ-ಸಹಾಯ ವ್ಯವಸ್ಥೆಯನ್ನು ಹೊಂದಿದೆ. ಬೆಂಬಲ ವ್ಯವಸ್ಥೆಯನ್ನು ಬಳಸಿಕೊಂಡು ಚಂದಾದಾರರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಸುಲಭವಾಗಿ ಬದಲಾಯಿಸಬಹುದು.ಹಾಗಾದರೇ ಟಾಟಾ ಸ್ಕೈನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಹೇಗೆ ಬದಲಾಯಿಸುವುದು ಎಂಬುದನ್ನು ತಿಳಿಯಲು ಮುಂದೆ ಓದಿರಿ.
ಟಾಟಾಸ್ಕೈ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಆನ್ಲೈನ್ನಲ್ಲಿ ಚೇಂಜ್ ಮಾಡಲು ಹೀಗೆ ಮಾಡಿ:
ನಿಮ್ಮ ನೋಂದಾಯಿತ ಸಂಖ್ಯೆಯನ್ನು ಆನ್ಲೈನ್ನಲ್ಲಿ ಬದಲಾಯಿಸಲು ನೀವು ಬಯಸಿದರೆ, ನೀವು ಟಾಟಾ ಸ್ಕೈ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು. ನೀವು ಈಗಾಗಲೇ ನೋಂದಾಯಿತ ಬಳಕೆದಾರರಾಗಿದ್ದರೆ. ವೆಬ್ಸೈಟ್ಗೆ ಲಾಗ್ ಇನ್ ಮಾಡಿ ಮತ್ತು ‘My Account' ಗೆ ಹೋಗಿ ಮತ್ತು ಪ್ರೊಫೈಲ್ ವಿಭಾಗವನ್ನು ಕ್ಲಿಕ್ ಮಾಡಿ.
ಪ್ರೊಫೈಲ್ ವಿಭಾಗದ ಅಡಿಯಲ್ಲಿ, ನೀವು ನೋಂದಾಯಿತ ಸಂಖ್ಯೆ ಮತ್ತು ಪರ್ಯಾಯ ಸಂಖ್ಯೆಯನ್ನು ನೋಡುತ್ತೀರಿ (ಒದಗಿಸಿದರೆ ಮಾತ್ರ). ‘edit profile' ಬಟನ್ ಕ್ಲಿಕ್ ಮಾಡಿ. ನಂತರ ನೀವು ನೋಂದಾಯಿಸಿದ ಮೊಬೈಲ್ ಸಂಖ್ಯೆಯಾಗಿ ಬಳಸಲು ಬಯಸುವ ಹೊಸ ಮೊಬೈಲ್ ಸಂಖ್ಯೆಯನ್ನು ಟೈಪ್ ಮಾಡಿ. ಹೊಸ ಬದಲಾವಣೆಗಳನ್ನು ಉಳಿಸಲು ಸೇವ್ ಬಟನ್ ಕ್ಲಿಕ್ ಮಾಡಿ. ಒಮ್ಮೆ ನೀವು ನೋಂದಾಯಿತ ಸಂಖ್ಯೆಯನ್ನು ಬದಲಾಯಿಸಿದ ನಂತರ, ನಿಮ್ಮ ಎಲ್ಲಾ ವ್ಯವಹಾರ-ಸಂಬಂಧಿತ ಮತ್ತು ಇತರ ಸಂದೇಶಗಳನ್ನು ಹೊಸ ಸಂಖ್ಯೆಗೆ ಕಳುಹಿಸಲಾಗುತ್ತದೆ.
ನೋಂದಾಯಿತ ಸಂಖ್ಯೆಯನ್ನು ಆಫ್ಲೈನ್ನಲ್ಲಿ ಬದಲಾಯಿಸುವ ಕ್ರಮಗಳು:
ಒಂದು ವೇಳೆ ನೀವು ಮೈ ಟಾಟಾಸ್ಕೈ ಆನ್ಲೈನ್ ಖಾತೆಯನ್ನು ಹೊಂದಿಲ್ಲದಿದ್ದರೆ, ನೀವು ಟಾಟಾ ಸ್ಕೈ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಮತ್ತು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಅನುಕೂಲಕರವಾಗಿ ಬದಲಾಯಿಸಬಹುದು. ನೀವು ವಾಸಿಸುವ ಪ್ರದೇಶವನ್ನು ಅವಲಂಬಿಸಿ ಸಹಾಯವಾಣಿ ಸಂಖ್ಯೆ ಬದಲಾಗುತ್ತದೆ. ಒಮ್ಮೆ ನೀವು ಕಸ್ಟಮರ್ ಕೇರ್ ಕಾರ್ಯನಿರ್ವಾಹಕರಿಗೆ ಸಂಪರ್ಕ ಮಾಡಿದ ನಂತರ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಲು ನೀವು ಕೇಳಬಹುದು. ನಿಮ್ಮ ಅವಶ್ಯಕತೆಯನ್ನು ಮೌಲ್ಯೀಕರಿಸಲು, ನಿಮ್ಮ ಹೆಸರು, ವಿಳಾಸ, ಹಳೆಯ ಸಂಖ್ಯೆ ಮತ್ತು ಇತರ ನಿರ್ಣಾಯಕ ಮಾಹಿತಿಯಂತಹ ಪ್ರಮುಖ ವಿವರಗಳನ್ನು ನೀವು ಹಂಚಿಕೊಳ್ಳಬೇಕಾಗುತ್ತದೆ.
This News Article Is A Copy Of GIZBOT BUREAU
27-06-25 09:56 pm
Bangalore Correspondent
ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದಿ, ಜಾತ್ಯತೀತ' ಪದ ತ...
27-06-25 05:38 pm
Five Tigers Die Male Mahadeshwara Forest: ಮಲೆ...
27-06-25 02:46 pm
ಹಾಸನದಲ್ಲಿ ಮುಂದುವರೆದ ಹೃದಯಾಘಾತ ಪ್ರಕರಣಗಳು ; 22ರ...
26-06-25 10:37 pm
Heart Attack, Hassan District: ಹಾಸನ ಜಿಲ್ಲೆಯಲ್...
26-06-25 02:15 pm
27-06-25 01:44 pm
HK News Desk
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
PFI Hit List 977, Kerala, NIA: ಕೇರಳದಲ್ಲಿ ಹಿಂದ...
25-06-25 10:05 pm
Vijayan Chennai, Donation, Property: ದಾಂಪತ್ಯ...
25-06-25 07:40 pm
27-06-25 04:56 pm
Mangalore Correspondent
Mangalore Jail Fight: ಮಂಗಳೂರು ಜೈಲಿನಲ್ಲಿ ಮತ್ತೆ...
26-06-25 10:08 pm
St. Anthony’s Church Puttur, News, Cemetery:...
26-06-25 12:02 pm
Canara Bank, Suicide, Mangalore: ತಾನು ಕೆಲಸ ಮಾ...
26-06-25 11:52 am
Lokayukta Raids Mangalore City Corporation, M...
25-06-25 10:46 pm
27-06-25 07:50 pm
HK News Desk
ಬೇಲಿಯೇ ಎದ್ದು ಹೊಲ ಮೇಯ್ದ ಕತೆ ; ಬ್ಯಾಂಕ್ ಮ್ಯಾನೇಜರ...
27-06-25 07:27 pm
Mangalore Police, Stock Market Fraud, Arrest:...
26-06-25 10:49 pm
Varkady, Manjeshwar Crime, Son Kills Mother:...
26-06-25 05:32 pm
Mangalore Youth, IIT Bombay Campus, Crime Bra...
26-06-25 02:54 pm