ಬ್ರೇಕಿಂಗ್ ನ್ಯೂಸ್
12-04-21 05:43 pm Source: Gizbot Bureau ಡಿಜಿಟಲ್ ಟೆಕ್
ನಿಮಗಾಗಿ ಅಥವಾ ನಿಮ್ಮ ಕುಟುಂಬ ಸದಸ್ಯರಲ್ಲಿ ಯಾರಿಗಾದರೂ ಆಧಾರ್ಗೆ ಮಾಡಿಸಲು ಬಯಸಿದರೆ ಸನಿಹದ ಆಧಾರ್ ಸೇವಾ ಕೇಂದ್ರವನ್ನು ಸಂಪರ್ಕಿಸಬೇಕಿದೆ. ಹೊಸ ಮೊಬೈಲ್ ಸಂಖ್ಯೆ ಅಥವಾ ವಿಳಾಸದೊಂದಿಗೆ ನಿಮ್ಮ ಅಸ್ತಿತ್ವದಲ್ಲಿರುವ ಆಧಾರ್ ಅನ್ನು ನವೀಕರಿಸಲು ನಿಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರವನ್ನು ಸಹ ನೀವು ಭೇಟಿ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಬಳಕೆದಾರರಿಗೆ ಅವರ ಹತ್ತಿರದ ಆಧಾರ್ ಸೇವಾ ಕೇಂದ್ರ ಆಧಾರ್ ದಾಖಲಾತಿ ಕೇಂದ್ರವನ್ನು ಆನ್ಲೈನ್ನಲ್ಲಿ ಹುಡುಕಲು ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಸುಲಭ ಮಾರ್ಗಗಳನ್ನು ಒದಗಿಸಿದೆ.
ಹೌದು, ಗ್ರಾಹಕರು ಅವರ ಹತ್ತಿರದ ಆಧಾರ್ ಸೇವಾ ಕೇಂದ್ರವನ್ನು ನಿಮ್ಮ ಮೊಬೈಲ್ ಡಿವೈಸ್ನಿಮದ ನೇರವಾಗಿ ನೀವು ಗುರುತಿಸಿಬಹುದು. ನಾಗರಿಕರು ತಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರವನ್ನು ಪತ್ತೆ ಮಾಡುವುದು ಯುಐಡಿಎಐ ಸುಲಭಗೊಳಿಸಿದೆ. ಈಗಾಗಲೇ ದೇಶಾದ್ಯಂತ ಬ್ಯಾಂಕುಗಳು, ಅಂಚೆ ಕಚೇರಿಗಳು, ರಾಜ್ಯ ಸರ್ಕಾರಗಳು ಮತ್ತು ಸರ್ಕಾರಿ ಇಲಾಖೆಗಳು ನಡೆಸುತ್ತಿರುವ ಸಾವಿರಾರು ಆಧಾರ್ ಕೇಂದ್ರಗಳಿವೆ. ನಾಗರಿಕರು ತಮ್ಮ ವಿವರಗಳನ್ನು ದಾಖಲಿಸಲು ಮತ್ತು ನವೀಕರಿಸಲು ಸಹಾಯ ಮಾಡಲು ಹೊಸ ಆಧಾರ್ ಸೇವಾ ಕೇಂದ್ರಗಳನ್ನು ಪ್ರಾರಂಭಿಸುವುದರೊಂದಿಗೆ ಈ ಸಂಖ್ಯೆ ಹೆಚ್ಚುತ್ತಿದೆ.
ಹತ್ತಿರದ ಆಧಾರ್ ಸೇವಾ ಕೇಂದ್ರವನ್ನು ಆನ್ಲೈನ್ನಲ್ಲಿ ಹೇಗೆ ಪಡೆಯುವುದು
ನಿಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರವನ್ನು ಆನ್ಲೈನ್ನಲ್ಲಿ ಹುಡುಕುವ ಪ್ರಕ್ರಿಯೆಯೊಂದಿಗೆ ಪ್ರಾರಂಭಿಸುವ ಮೊದಲು, ಆಧಾರ್ ಸೇವಾ ಕೇಂದ್ರಗಳು ವಾರದಲ್ಲಿ ಏಳು ದಿನಗಳು ಬೆಳಿಗ್ಗೆ 9:30 ರಿಂದ ಸಂಜೆ 5:30 ರವರೆಗೆ ತೆರೆದಿರುತ್ತವೆ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಎಲ್ಲಾ ಆಧಾರ್ ಸೇವಾ ಕೇಂದ್ರಗಳು ಗಾಲಿಕುರ್ಚಿ ಸ್ನೇಹಿಯಾಗಿದ್ದು, ವೃದ್ಧರಿಗೆ ಮತ್ತು ವಿಶೇಷ ಸಾಮರ್ಥ್ಯದವರಿಗೆ ಸೇವೆ ಸಲ್ಲಿಸಲು ವಿಶೇಷ ನಿಬಂಧನೆಗಳನ್ನು ಹೊಂದಿವೆ ಎಂದು ಯುಐಡಿಎಐ ವೆಬ್ಸೈಟ್ ತಿಳಿಸಿದೆ.
ಈ ಹಂತಗಳನ್ನು ಅನುಸರಿಸಿ:
* UIDAI ವೆಬ್ಸೈಟ್ಗೆ ಭೇಟಿ ನೀಡಿ (https://uidai.gov.in/).
* My Aadhaar-ನನ್ನ ಆಧಾರ್ ವಿಭಾಗಕ್ಕೆ ಹೋಗಿ ನಂತರ ಗೆಟ್ ಆಧಾರ್ ಆಯ್ಕೆಯನ್ನು ಕ್ಲಿಕ್ ಮಾಡಿ.
* ಈಗ, Locate an Enrolment Center ಲಿಂಕ್ ಕ್ಲಿಕ್ ಮಾಡಿ.
* ನಿಮ್ಮ ರಾಜ್ಯ, ಅಂಚೆ (ಪಿನ್) ಕೋಡ್, ಅಥವಾ ಪ್ರದೇಶ, ನಗರ ಅಥವಾ ಜಿಲ್ಲೆಯ ಹೆಸರನ್ನು ನಮೂದಿಸುವ ಮೂಲಕ ನಿಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರ ಅಥವಾ ಆಧಾರ್ ದಾಖಲಾತಿ
* ಕೇಂದ್ರವನ್ನು ಕಂಡುಹಿಡಿಯುವ ಆಯ್ಕೆಗಳನ್ನು ನೀವು ಈಗ ಪಡೆಯುತ್ತೀರಿ.
* ಫಾರ್ಮ್ನಲ್ಲಿ ವಿವರಗಳನ್ನು ನಮೂದಿಸಿದ ನಂತರ, ಸ್ವಯಂ-ರಚಿಸಿದ ಕ್ಯಾಪ್ಚಾವನ್ನು ಟೈಪ್ ಮಾಡಿ.
* ಈಗ, Locate a Centre ಬಟನ್ ಕ್ಲಿಕ್ ಮಾಡಿ.
UIDAI ಯ ವೆಬ್ಸೈಟ್ - uidai.gov.in ಮೂಲಕ ಅಥವಾ ಮೊಬೈಲ್ ಅಪ್ಲಿಕೇಶನ್ mAadhaar ಮೂಲಕ ಮಾಡಬಹುದು. ಯುಐಡಿಎಐ ಆಧಾರ್ ಬಯೋಮೆಟ್ರಿಕ್ ಐಡಿ ಪ್ರೋಗ್ರಾಂ ಅನ್ನು ನಿರ್ವಹಿಸುತ್ತದೆ ಮತ್ತು ಆನ್ಲೈನ್ನಲ್ಲಿ ಸಂಬಂಧಿತ ಸೇವೆಗಳನ್ನು ಒದಗಿಸುತ್ತದೆ.
mAadhaar ಆಪ್ ಪ್ರಯೋಜನಗಳು
* mAadhaarನಲ್ಲಿ ಸಮೀಷದ ಆಧಾರ ಕೇಂದ್ರಗಳನ್ನು ಹುಡುಕಬಹುದು. ತಿದ್ದುಪಡಿ, ವಿಳಾಸ ಬದಲಾವಣೆಯ ಸ್ಟೇಟಸ್ ಮಾಹಿತಿಯನ್ನು ಈ ಆಪ್ನಲ್ಲಿಯೇ ತಿಳಿದುಕೊಳ್ಳಬಹುದಾಗಿದೆ.
* ಈ ಆಪ್ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ ದೃಢಿಕರಣ ಮಾಡಿಕೊಳ್ಳುವ ಆಯ್ಕೆ ಹೊಂದಿದೆ.
* ಕಳೆದುಹೋದ ಆಧಾರ ಎನ್ರೋಲ್ಮೆಂಟ್ ಐಡಿಯ ನಂಬರ್ ಅನ್ನ ಈ ಆಪ್ ನಲ್ಲಿ ಹಿಂಪಡೆಯಬಹುದಾಗಿದೆ.
* ಈ ಆಪ್ ಮೂಲಕ ಆನ್ಲೈನ್ ವಿಳಾಸ ಬದಲಾವಣೆ ಕೋರಿಕೆ ಸಲ್ಲಿಸಬಹುದಾಗಿದೆ.
This News Article IS A Copy Of GIZBOT BUREAU
02-05-25 08:44 pm
Bangalore Correspondent
Suhas Shetty Murder case, Minister Parameshwa...
02-05-25 01:40 pm
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
Jan Dhan Scheme: ಜನಧನ್ ಖಾತೆ ಬಗ್ಗೆ ಜನರ ನಿರಾಸಕ್...
01-05-25 01:48 pm
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 06:44 pm
Mangaluru HK Staff
Brijesh Chowta, NIA, Suhas Shetty Murder: ಸುಹ...
02-05-25 06:31 pm
Mangalore Suhas Shetty Murder, ADGP Hitendra:...
02-05-25 03:10 pm
Udupi crime, Attempt, Suhas Shetty Murder: ಉಡ...
02-05-25 12:44 pm
Suhas Shetty Murder, Liquor Ban: ಸುಹಾಸ್ ಶೆಟ್ಟ...
02-05-25 12:23 pm
02-05-25 12:00 pm
Mangalore Correspondent
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm