ಬ್ರೇಕಿಂಗ್ ನ್ಯೂಸ್
10-04-21 06:48 pm Source: Gizbot Bureau ಡಿಜಿಟಲ್ ಟೆಕ್
ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಸದ್ಯ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಟೆಲಿಕಾಂ ಇತರೆ ಖಾಸಗಿ ಟೆಲಿಕಾಂಗಳಿಗೆ ನೇರ ಪೈಪೋಟಿ ನೀಡುವಂತಹ ಯೋಜನೆಗಳನ್ನು ಪರಿಚಯಿಸುತ್ತ ಸಾಗಿದೆ. ಅವುಗಳಲ್ಲಿ ಬಹುತೇಕ ಬಿಎಸ್ಎನ್ಎಲ್ ಟೆಲಿಕಾಂನ ಪ್ರೀಪೇಯ್ಡ್ ಯೋಜನೆಗಳು ಅಧಿಕ ವ್ಯಾಲಿಡಿಟಿ ಹಾಗೂ ದೈನಂದಿನ ಡೇಟಾ ಪ್ರಯೋಜನಗಳ ಸೌಲಭ್ಯಗಳನ್ನು ಪಡೆದಿವೆ. ಮತ್ತೆ ಅದೇ ದಾರಿಯಲ್ಲಿ ಮುನ್ನಡೆದಿರುವ ಬಿಎಸ್ಎನ್ಎಲ್ ಈಗ ಮತ್ತೊಂದು ಅಗ್ಗದ ದರದ ಪ್ರೀಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ. ಬಿಎಸ್ಎನ್ಎಲ್ನ ಈ ನಡೆ ಖಾಸಗಿ ಟೆಲಿಕಾಂಗಳನ್ನು ದಂಗಾಗಿಸಿದೆ.
ಹೌದು, ಬಿಎಸ್ಎನ್ಎಲ್ ಟೆಲಿಕಾಂ ಈಗಾಗಲೇ ಹಲವು ಕಡಿಮೆ ಬೆಲೆಯ ಪ್ರೀಪೇಯ್ಡ್ ಯೋಜನೆಗಳನ್ನು ಗ್ರಾಹಕರಿಗೆ ನೀಡಿದೆ. ಈಗ ಮತ್ತೆ ಹೊಸದಾಗಿ ಜಸ್ಟ್ 197ರೂ.ಗಳ ಪ್ರೀಪೇಯ್ಡ್ ಪ್ಲ್ಯಾನ್ ಪರಿಚಯಿಸಿ ತನ್ನ ಚಂದಾದಾರರ ಗಮನ ಸೆಳೆದಿದೆ. ಬಿಎಸ್ಎನ್ಎಲ್ನ ಈ ಪ್ಲ್ಯಾನ್ ಆಕರ್ಷಕ ವ್ಯಾಲಿಡಿಟಿ ಅವಧಿ ಸೇರಿದಂತೆ ಪ್ರತಿದಿನ ಡೇಟಾ ಹಾಗೂ ವಾಯಿಸ್ ಕರೆಗಳ ಪ್ರಯೋಜನಗಳನ್ನು ಹೊಂದಿದೆ. ಅಗ್ಗದ ಬೆಲೆಯಲ್ಲಿ ಆಕರ್ಷಕ ಪ್ರಯೋಜನಗಳನ್ನು ಒಳಗೊಂಡಿರುವ ಈ ನೂತನ ಯೋಜನೆಯ ಇತರೆ ಪ್ರಯೋಜನೆಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.
ಬಿಎಸ್ಎನ್ಎಲ್ 197ರೂ. ಪ್ರೀಪೇಯ್ಡ್
ಪ್ಲ್ಯಾನ್ ಬಿಎಸ್ಎನ್ಎಲ್ 197ರೂ. ಬೆಲೆಯ ಹೊಸ ಯೋಜನೆಯು ಒಟ್ಟು 197 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ ಎಂದು ಕಂಪನಿಯು ತಿಳಿಸಿದೆ. ಆದರೆ ಮೊದಲ 18 ದಿನಗಳು ಬಳಕೆದಾರರಿಗೆ ಡೈಲಿ 2GB ಡೇಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆ ಹಾಗೂ 100 ಉಚಿತ ಎಸ್ಎಮ್ಎಸ್ ಪ್ರಯೋಜನಗಳು ಲಭ್ಯವಾಗಲಿವೆ. ಆರಂಭಿಕ 18 ದಿನಗಳ ಉಚಿತ ಸೌಲಭ್ಯಗಳ ಮುಗಿದ ಬಳಿಕ ಟಾಪ್ಅಪ್ ರೀಚಾರ್ಜ್ ಮಾಡಿಸಬಹುದಾಗಿದೆ.
ಓಟಿಟಿ ಸೇವೆ ಲಭ್ಯ
ಹಾಗೆಯೇ ಬಳಕೆದಾರರು ಲೈವ್-ಸ್ಟ್ರೀಮಿಂಗ್ ಅಪ್ಲಿಕೇಶನ್ Zing ಸೇವೆ ಸಹ ಪಡೆಯಬಹುದಾಗಿದೆ. ಇನ್ನು Zing ಆಪ್ ಅನ್ನು ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ನಿಂದ ಡೌನ್ಲೋಡ್ ಮಾಡಬಹುದಾಗಿದೆ. ಆದರೆ ಒಟಿಟಿ ಪ್ರಯೋಜನವು 18 ದಿನಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ ಎಂಬುದನ್ನು ಬಳಕೆದಾರರು ಗಮನಿಸಿಬೇಕು. ಬಿಎಸ್ಎನ್ಎಲ್ನ ಇತರೆ ಆಕರ್ಷಕ ಪ್ರೀಪೇಯ್ಡ್ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ.
ಬಿಎಸ್ಎನ್ಎಲ್ 2,399ರೂ. ಪ್ರೀಪೇಯ್ಡ್ ಪ್ಲ್ಯಾನ್
ಬಿಎಸ್ಎನ್ಎಲ್ ಟೆಲಿಕಾಂನ ಈ ಪ್ಲ್ಯಾನ್ ಒಟ್ಟು 600 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 250 FUP ನಿಮಿಷಗಳ ಮಿತಿಯಲ್ಲಿ ಉಚಿತ ವಾಯಿಸ್ ಕರೆಗಳ ಪ್ರಯೋಜನವನ್ನು ಒದಗಿಸಲಿದೆ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್ಗಳ ಸೌಲಭ್ಯ ದೊರೆಯಲಿದ್ದು, 60 ದಿನಗಳಿಗೆ ಬಿಎಸ್ಎನ್ಎಲ್ ಟ್ಯೂನ್ ಸೌಲಭ್ಯವು ಸಿಗಲಿದೆ. ಆದರೆ ಯಾವುದೇ ಡೇಟಾ ಪ್ರಯೋಜನ ಲಭ್ಯ ಇರುವುದಿಲ್ಲ. ಡೇಟಾ ಅಗತ್ಯ ಇರದ ಹಾಗೂ ವಾಯಿಸ್ ಕರೆ ಮತ್ತು ಹೆಚ್ಚಿನ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಈ ಪ್ಲ್ಯಾನ್ ಉತ್ತಮ ಆಯ್ಕೆ ಆಗಿದೆ.
ಬಿಎಸ್ಎನ್ಎಲ್ 693ರೂ. ಪ್ರೀಪೇಯ್ಡ್ ಪ್ಲ್ಯಾನ್
ಬಿಎಸ್ಎನ್ಎಲ್ ಟೆಲಿಕಾಂನ 693ರೂ. ಡೇಟಾ ಎಸ್ಟಿವಿ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 300GB ಡೇಟಾ ಸೌಲಭ್ಯ ಲಭ್ಯವಾಗಲಿದೆ. ಇದು ಡೇಟಾ ಪ್ರೀಪೇಯ್ಡ್ ಯೋಜನೆ ಆಗಿರುವುದರಿಂದ ಯಾವುದೇ ವಾಯಿಸ್ ಕರೆ ಹಾಗೂ ಎಸ್ಎಮ್ಎಸ್ ಸೌಲಭ್ಯಗಳು ದೊರೆಯುವುದಿಲ್ಲ.
ಬಿಎಸ್ಎನ್ಎಲ್ 599ರೂ. ಪ್ರೀಪೇಯ್ಡ್
ಪ್ಲ್ಯಾನ್ ಬಿಎಸ್ಎನ್ಎಲ್ ಈ ಯೋಜನೆಯಲ್ಲಿ ಪ್ರತಿದಿನ 5GB ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್ ಹಾಗೂ ಪ್ರತಿದಿನ 250 ನಿಮಿಷಗಳ ಕರೆಯ ಸೌಲಭ್ಯಗಳು ಲಭ್ಯವಾಗುತ್ತವೆ. ಇನ್ನು ಈ ಯೋಜನೆಯು ಒಟ್ಟು 90 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಒಟ್ಟು ಪೂರ್ಣ ಅವಧಿಯ ವ್ಯಾಲಿಡಿಟಿಯಲ್ಲಿ ಒಟ್ಟು 450GB ಡೇಟಾ ಪ್ರಯೋಜನ ದೊರೆಯುತ್ತದೆ.
This News Article Is A Copy Of GIZBOT BUREAU
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 01:47 pm
Mangalore Correspondent
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm