ಬ್ರೇಕಿಂಗ್ ನ್ಯೂಸ್
23-02-21 04:20 pm Source: GIZBOT Manthesh ಡಿಜಿಟಲ್ ಟೆಕ್
ಪ್ರತಿಷ್ಠಿತ ಮೊಬೈಲ್ ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಒನ್ಪ್ಲಸ್ ಸಂಸ್ಥೆಯು ಈಗಾಗಲೇ ಭಿನ್ನ ಶ್ರೇಣಿಯ ಫೋನ್ಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ಸಂಸ್ಥೆಯ ಒನ್ಪ್ಲಸ್ 6, ಒನ್ಪ್ಲಸ್ 7, ಒನ್ಪ್ಲಸ್ 8 ಸ್ಮಾರ್ಟ್ಫೋನ್ ಸರಣಿಗಳು ಆಕರ್ಷಕ ಫೀಚರ್ಸ್ಗಳಿಂದ ಹೆಚ್ಚು ಜನಪ್ರಿಯತೆ ಪಡೆದಿವೆ. ಆದರೆ ಒನ್ಪ್ಲಸ್ ಕಂಪನಿಯು ಹೊಸದಾಗಿ ಒನ್ಪ್ಲಸ್ 9 ಸ್ಮಾರ್ಟ್ಫೋನ್ ಸರಣಿ ಲಾಂಚ್ ಮಾಡುವ ತಯಾರಿಯಲ್ಲಿದ್ದು, ಅದರ ಫೀಚರ್ಸ್ಗಳು ಆನ್ಲೈನ್ನಲ್ಲಿ ಸೋರಿಕೆಯಾಗಿವೆ.
ಹೌದು, ಒನ್ಪ್ಲಸ್ ಕಂಪನಿಯು ತನ್ನ ಬಹುನಿರೀಕ್ಷಿತ ಒನ್ಪ್ಲಸ್ 9 ಸ್ಮಾರ್ಟ್ಫೋನ್ ಸರಣಿಯನ್ನು ಲಾಂಚ್ ಮಾಡಲು ಸಿದ್ಧತೆ ನಡೆಸಿದ್ದು, ಬರುವ ಮಾರ್ಚ್ 2021ರ ವೇಳೆಗೆ ಈ ನೂತನ ಸ್ಮಾರ್ಟ್ಫೋನ್ ಸರಣಿಯು ಅನಾವರಣ ಮಾಡುವ ಸಾಧ್ಯತೆಗಳು ಇವೆ. ಈ ಸರಣಿಯು ಒನ್ಪ್ಲಸ್ 9e ಹಾಗೂ ಒನ್ಪ್ಲಸ್ 9 ಪ್ರೊ ಮಾಡೆಲ್ ಒಳಗೊಂಡಿರಲಿದೆ. ಆದರೆ ಇದೀಗ ಆನ್ಲೈನ್ನಲ್ಲಿ ಲೀಕ್ ಆಗಿರುವ ಒನ್ಪ್ಲಸ್ 9 ಸರಣಿಯ ಫೀಚರ್ಸ್ಗಳು ಗ್ರಾಹಕರಲ್ಲಿ ಕುತೂಹಲ ಮೂಡಿಸಿವೆ.
ಮೂರು ಸ್ಮಾರ್ಟ್ಫೋನ್ ಮಾಡೆಲ್
ಒನ್ಪ್ಲಸ್ 9 ಸರಣಿಯು ಮೂರು ಮಾಡೆಲ್ಗಳನ್ನು ಒಳಗೊಂಡಿರಲಿದ್ದು, ಅವುಗಳವು ಕ್ರಮವಾಗಿ ಒನ್ಪ್ಲಸ್ 9, ಒನ್ಪ್ಲಸ್ 9E ಹಾಗೂ ಒನ್ಪ್ಲಸ್ 9 ಪ್ರೊ ಮಾಡೆಲ್ ಎಂದು ಹೇಳಲಾಗುತ್ತಿದೆ. ಇವುಗಳ ಒನ್ಪ್ಲಸ್ 9 ಪ್ರೊ ಮಾಡೆಲ್ ಹೈ ಎಂಡ್ ಫೀಚರ್ಸ್ ಹೊಂದಿರಲಿದೆ. ಒನ್ಪ್ಲಸ್ 9 ಮೀಡ್ರೇಂಜ್ ಫೀಚರ್ಸ್ ಹೊಂದಿರಲಿದ್ದು, ಹಾಗೆಯೇ ಒನ್ಪ್ಲಸ್ 9E ಬಜೆಟ್ ದರದ ಪ್ರೈಸ್ಟ್ಯಾಗ್ನಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ.
ಒನ್ಪ್ಲಸ್ 9 ಪ್ರೊ ಕೀ ಫೀಚರ್ಸ್
ಒನ್ಪ್ಲಸ್ 9 ಪ್ರೊ 1,440x3,216 ಪಿಕ್ಸೆಲ್ಗಳ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದೊಂದಿಗೆ AMOLED ಪ್ರದರ್ಶನವನ್ನು ಹೊಂದಿರುತ್ತದೆ. ಹಾಗೆಯೇ ಈ ಫೋನ್ ಸ್ನಾಪ್ಡ್ರಾಗನ್ 888 SoC ನಿಂದ ನಿಯಂತ್ರಿಸಲ್ಪಡುತ್ತದೆ. ಜೊತೆಗೆ 8GB RAM ಮತ್ತು 128GB ಸ್ಟೋರೇಜ್ ಆಯ್ಕೆ ಇರಲಿದೆ.
ಒನ್ಪ್ಲಸ್ 9 ಪ್ರೊ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್ಅಪ್ ಅನ್ನು ಹೊಂದಿರಲಿದೆ. 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಎಫ್ / 1.8 ಅಪರ್ಚರ್, 64 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಎಫ್ / 2.2 ಅಪರ್ಚರ್ ಮತ್ತು 3.3 ಎಕ್ಸ್ ಜೂಮ್ ಟೆಲಿಫೋಟೋ ಲೆನ್ಸ್ ಹೊಂದುವ ನಿರೀಕ್ಷೆಯಿದೆ. ಕಂಪನಿಯು ಹ್ಯಾಸೆಲ್ಬ್ಲಾಡ್ನಿಂದ ಕ್ಯಾಮೆರಾಗಳನ್ನು ಪಡೆದುಕೊಂಡಿದೆ ಎಂದು ವರದಿಯಾಗಿದೆ. ಇದು 120fps ನಲ್ಲಿ 4K ವಿಡಿಯೋ ಚಿತ್ರೀಕರಣ ಮಾಡುವ ನಿರೀಕ್ಷೆಯಿದೆ. 4,500mAh ಬ್ಯಾಟರಿಯನ್ನು ಹೊಂದಿರಲಿದ್ದು, ವೈರ್ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ.
ಒನ್ಪ್ಲಸ್ 9e ಕೀ ಫೀಚರ್ಸ್
ಒನ್ಪ್ಲಸ್ 9 ಸರಣಿಯಲ್ಲಿ ಒನ್ಪ್ಲಸ್ 9e ಫೋನ್ ಬಜೆಟ್ ಮಾದರಿಯ ಫೋನ್ ಆಗಿರಲಿದ್ದು, ಇದನ್ನು ಒನ್ಪ್ಲಸ್ 9 ಲೈಟ್ ಅಥವಾ ಒನ್ಪ್ಲಸ್ 9e ಎಂದು ಕರೆಯಬಹುದು ಎಂದು ವರದಿ ಹೇಳಿದೆ. 8GB RAM ಮತ್ತು 128 GB ಸ್ಟೋರೇಜ್ನೊಂದಿಗೆ ಜೋಡಿಯಾಗಿರುವ ಈ ಫೋನ್ ಸ್ನ್ಯಾಪ್ಡ್ರಾಗನ್ 690 ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಈ ಫೋನ್ 6.5-ಇಂಚಿನ ಡಿಸ್ಪ್ಲೇಯನ್ನು ಹೊಂದಿರಲಿದ್ದು, 1,800x2,400 ಪಿಕ್ಸೆಲ್ಗಳ ರೆಸಲ್ಯೂಶನ್ ಹೊಂದಿರುತ್ತದೆ ಎನ್ನಲಾಗಿದೆ.
ಒನ್ಪ್ಲಸ್ 9e ಫೋನ್ ಮುಖ್ಯ ಕ್ಯಾಮೆರಾವು 64 ಮೆಗಾಪಿಕ್ಸೆಲ್ ಮುಖ್ಯ ಸಂವೇದಕವನ್ನು ಹೊಂದಿರುವ ಎಫ್ / 1.7 ಅಪರ್ಚರ್ ಮತ್ತು 8 ಮೆಗಾಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಹೊಂದಿರುವ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಬಹುದು. ಬ್ಯಾಟರಿ 5,000mAh ಇರಲಿದೆ ಎನ್ನಲಾಗಿದೆ.
This News Article is a Copy of GIZBOT
15-03-25 12:33 pm
HK News Desk
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 12:35 pm
Mangalore Correspondent
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm