ಬ್ರೇಕಿಂಗ್ ನ್ಯೂಸ್
09-02-23 08:16 pm Source: Vijayakarnataka ಡಿಜಿಟಲ್ ಟೆಕ್
ಕಡಿಮೆ ಬಜೆಟ್ ಬೆಲೆಯಲ್ಲಿ ಉತ್ತಮ ಸ್ಮಾರ್ಟ್ಫೋನ್ ಒಂದನ್ನು ಖರೀದಿಸಲು ಇಚ್ಚಿಸುವ ಭಾರತೀಯ ಗ್ರಾಹಕರಿಗಾಗಿ ಜನಪ್ರಿಯ ಮೊಬೈಲ್ ಬ್ರ್ಯಾಂಡ್ Motorola ತನ್ನ ನೂತನ "Moto e13" ಸ್ಮಾರ್ಟ್ಫೋನನ್ನು ಬಿಡುಗಡೆಗೊಳಿಸಿದೆ. ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ ಜಾಗತಿಕವಾಗಿ ಬಿಡುಗಡೆಯಾಗಿದ್ದ ಈ Moto e13 ಸ್ಮಾರ್ಟ್ಫೋನ್ ಇದೀಗ ದೇಶದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, 6.5 ಇಂಚಿನ HD+ IPS LCD ಡಿಸ್ಪ್ಲೇ ಮತ್ತು ಯುನಿಸಾಕ್ T606 (Unisoc T606) ಪ್ರೊಸೆಸರ್ ನಂತಹ ಎಂಟ್ರಿ ಲೆವೆಲ್ ವೈಶಿಷ್ಟ್ಯಗಳ ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಹೊತ್ತು ಬಂದಿದೆ. ಹಾಗಾದರೆ, ದೇಶದಲ್ಲಿ ಬಿಡುಗಡೆಯಾಗಿರುವ ಹೊಸ Moto e13 ಸ್ಮಾರ್ಟ್ಫೋನ್ ಹೇಗಿದೆ ಮತ್ತು ಬೆಲೆಗಳು ಎಷ್ಟು ಎಂಬ ಸಂಪೂರ್ಣ ವಿವರಗಳನ್ನು ತಿಳಿಯೋಣ ಬನ್ನಿ.
Moto e13 ಸ್ಮಾರ್ಟ್ಫೋನಿನ ವೈಶಿಷ್ಟ್ಯಗಳು
ನೂತನ Moto e13 ಸ್ಮಾರ್ಟ್ಫೋನ್ 20: 9 ಆಕಾರ ಅನುಪಾತವಿರುವ 6.5 ಇಂಚಿನ HD+ IPS LC ಡಿಸ್ಪ್ಲೇಯನ್ನು ಹೊಂದಿದೆ. ವಾಟರ್ಡ್ರಾಪ್ ನಾಚ್ ವಿನ್ಯಾಸದಲ್ಲಿ ಇರುವ ಈ ಡಿಸ್ಪ್ಲೇಯು 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಮತ್ತು 60Hz ರಿಫ್ರೆಶ್ ರೇಟ್ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪೆನಿ ತಿಳಿಸಿದೆ. ಹುಡ್ ಅಡಿಯಲ್ಲಿ, Moto e13 ಸ್ಮಾರ್ಟ್ಫೋನ್ 2GB RAM+64GB ಮತ್ತು 4GB RAM+64GB ಎರಡು ಸ್ಟೋರೇಜ್ ಮಾದರಿಗಳಲ್ಲಿ ಜೋಡಿಸಲಾಗಿರುವ ಯುನಿಸಾಕ್ T606 (Unisoc T606) ಪ್ರೊಸೆಸರ್ ಹೊಂದಿದ್ದು, ಇದು ಇತ್ತೀಚಿನ ಆಂಡ್ರಾಯ್ಡ್ 13 (ಗೋ ಆವೃತ್ತಿ) ನಲ್ಲಿ ಕಾರ್ಯನಿರ್ವಹಿಸಲಿದೆ. ಹೆಚ್ಚುವರಿಯಾಗಿ, ಮೈಕ್ರೊ ಎಸ್ಡಿ ಕಾರ್ಡ್ ಮೂಲಕ ಸ್ಮಾರ್ಟ್ಫೋನಿನ ಮೆಮೊರಿಯನ್ನು 1TB ವರೆಗೆ ವಿಸ್ತರಿಸಬಹುದಾದ ಸಾಮರ್ಥ್ಯವನ್ನು ಹೊಂದಿದೆ.
ಕ್ಯಾಮೆರಾ ವಿಭಾಗದಲ್ಲಿ, Moto e13 ಸ್ಮಾರ್ಟ್ಫೋನ್ ಎಲ್ಇಡಿ ಫ್ಲ್ಯಾಶ್ನೊಂದಿಗೆ 13 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಏಕೈಕ ಸಿಂಗಲ್ ರಿಯರ್ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ, ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾ ಅಳವಡಿಸಲಾಗಿದೆ. ಬ್ಯಾಟರಿ ವಿಬಾಗದಲ್ಲಿ, 000mAh ಸಾಮರ್ಥ್ಯದ ಬ್ಯಾಟರಿ ಹೊಂದಿರುವ ಈ Moto e13 ಸ್ಮಾರ್ಟ್ಫೋನ್ 10W ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಇನ್ನುಳಿದಂತೆ, ಡ್ಯುಯಲ್-ಸಿಮ್ 4 ಜಿ, ವೈ-ಫೈ, ಬ್ಲೂಟೂತ್, ಜಿಪಿಎಸ್, ಯುಎಸ್ಬಿ-ಸಿ ಪೋರ್ಟ್ ಮತ್ತು , 3.5 ಎಂಎಂ ಆಡಿಯೊ ಜ್ಯಾಕ್ ಮತ್ತು ಐಪಿ52 ಸ್ಪ್ಲಾಶ್-ರೆಸಿಸ್ಟೆಂಟ್ ಕೋಟಿಂಗ್ ನಂತಹ ವೈಶಿಷ್ಟ್ಯಗಳನ್ನು ಹೊಂದಿರುವ ಈ ಸ್ಮಾರ್ಟ್ಫೋನ್ ಡಾಲ್ಬಿ ಅಟ್ಮಾಸ್ ಬೆಂಬಲವನ್ನು ಹೊಂದಿರುವುದು ಆಶ್ಚರ್ಯ ಮೂಡಿಸುತ್ತಿದೆ.
Moto e13 ಸ್ಮಾರ್ಟ್ಫೋನಿನ ಬೆಲೆ ಮತ್ತು ಲಭ್ಯತೆ.
ಮೊದಲೇ ಹೇಳಿದಂತೆ, ಈ ಹೊಸ Moto e13 ಸ್ಮಾರ್ಟ್ಫೋನ್ ಎಂಟ್ರಿ ಲೆವೆಲ್ ಸಾಧನವಾಗಿದೆ. Moto e13 ಸ್ಮಾರ್ಟ್ಫೋನಿನ 2GB RAM + 64GB ಮಾದರಿಯು 6,999 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಿದ್ದರೆ, ಇದರ 4GB RAM + 64GB ಮಾದರಿಯು 7,999 ರೂ. ಬೆಲೆಯಲ್ಲಿ ಮಾರುಕಟ್ಟೆಗೆ ಬಂದಿದೆ. ಕಾಸ್ಮೋಸ್ ಬ್ಲ್ಯಾಕ್, ಕ್ರೀಮ್ ವೈಟ್ ಹಾಗೂ ಅರೋರಾ ಗ್ರೀನ್ ಮೂರು ಬಣ್ಣ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿರಲಿರುವ ಈ ಸ್ಮಾರ್ಟ್ಫೋನ್ ಇದೇ ಫೆಬ್ರವರಿ 15 ರಿಂದ ಮಾರಾಟಕ್ಕೆ ಬರುತ್ತಿದೆ.
Moto E13 Affordable Smartphone Launched In India For Rs 6,999.
15-03-25 12:33 pm
HK News Desk
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 12:35 pm
Mangalore Correspondent
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm