ಬ್ರೇಕಿಂಗ್ ನ್ಯೂಸ್
04-02-23 07:21 pm Source: Vijayakarnataka ಡಿಜಿಟಲ್ ಟೆಕ್
ಇದೇ ಫೆಬ್ರವರಿ 7 ರಂದು ಭಾರತದಲ್ಲಿ OnePlus 11 ಸ್ಮಾರ್ಟ್ಫೋನ್ ಬಿಡುಗಡೆ ಮಾಡಲು ಸಜ್ಜಾಗಿರುವ ಜನಪ್ರಿಯ ಸ್ಮಾರ್ಟ್ಫೋನ್ ಬ್ರ್ಯಾಂಡ್ OnePlus ತನ್ನ ಪ್ರತಿಸ್ಪರ್ಧಿ ಕಂಪೆನಿ Samsung ಬಿಡುಗಡೆಗೊಳಿಸಿರುವ Galaxy S23 Ultra ಸ್ಮಾರ್ಟ್ಫೋನ್ ಕುರಿತು ಅಪಹಾಸ್ಯ ಮಾಡಿದೆ. ಭಾರತದಲ್ಲಿ 1,24,999 ರೂ. ಆರಂಭಿಕ ( ಕಳೆದ ವರ್ಷ ಬಿಡುಗಡೆಯಾಗಿದ್ದ Galaxy S22 Ultra ಆರಂಭಿಕ ಬೆಲೆಗಿಂತ 15,000 ರೂ. ಹೆಚ್ಚು) ಮತ್ತು US ನಲ್ಲಿ $1,199 (ರೂ. 98,000 ಕ್ಕಿಂತ ಹೆಚ್ಚು) ಆರಂಭಿಕ ಬೆಲೆಯಲ್ಲಿ Galaxy S23 Ultra ಸ್ಮಾರ್ಟ್ಫೋನ್ ಬಿಡುಗಡೆಗೊಳಿಸಲಾಗಿದ್ದು, ಈ ಬೆಲೆಯಲ್ಲಿ Galaxy S23 Ultra ಸ್ಮಾರ್ಟ್ಫೋನ್ ಪರಿಚಯಿಸಿರುವ ಕುರಿತು Samsung ಕಂಪೆನಿಯನ್ನು OnePlus ಕಂಪೆನಿ ಹಲವು ರೀತಿಯಲ್ಲಿ ಟ್ರೋಲ್ ಮಾಡಿದೆ.!
ಭಾರತ ಸೇರಿದಂತೆ ವಿಶ್ವದಾದ್ಯಂತ Galaxy S23 Ultra ಸ್ಮಾರ್ಟ್ಫೋನ್ ಬಿಡುಗಡೆಯಾದ ನಂತರ ಈ ಕುರಿತಂತೆ ಟ್ವೀಟ್ ಒಂದನ್ನು ಮಾಡಿರುವ OnePlus ಕಂಪೆನಿ, Samsung Galaxy S23 Ultra ಸ್ಮಾರ್ಟ್ಫೋನ್ ಬಾಕ್ಸ್ನಲ್ಲಿ ಚಾರ್ಜರ್ ಸೇರಿಸಿಲ್ಲ ಮತ್ತು Galaxy S23 Ultra ಮತ್ತು Galaxy S22 Ultra ಸ್ಮಾರ್ಟ್ಫೋನ್ಗಳಲ್ಲಿ ಅದೇ ವಿನ್ಯಾಸವನನ್ನು ತರಲಾಗಿದೆ ಎಂದು ಹೇಳಿದೆ. ಹಾಗೂ ಈ ಸ್ಮಾರ್ಟ್ಫೋನ್ಗಳು ಚಲನಚಿತ್ರಗಳನ್ನು ನೋಡುವುದಕ್ಕೆ ಮಾತ್ರ ಒಳ್ಳೆಯದು ಎಂದು ಅಪಹಾಸ್ಯ ಮಾಡಿದೆ. ಇಷ್ಟೇ ಅಲ್ಲದೇ, US ನಲ್ಲಿ ಮುಂಬರುವ OnePlus 11 5G ಸ್ಮಾರ್ಟ್ಫೋನ್ಗಾಗಿ Samsung Galaxy ಸ್ಮಾರ್ಟ್ಫೋನ್ ವಿನಿಮಯ ಮಾಡಿಕೊಳ್ಳುವ ಗ್ರಾಹಕರಿಗೆ $200 ಹೆಚ್ಚುವರಿ ಟ್ರೇಡ್-ಇನ್ ಕ್ರೆಡಿಟ್ ಒದಗಿಸುವುದಾಗಿ OnePlus ತಿಳಿಸಿದೆ.!
Samsung ಸ್ಮಾರ್ಟ್ಫೋನ್ಗಳನ್ನು Galaxy ಎಂದು ಏಕೆ ಕರೆಯುತ್ತಾರೆ ಗೊತ್ತಾ? ಎಂದು ಪ್ರಶ್ನಿಸಿರುವ OnePlus ಕಂಪೆನಿ ಇದಕ್ಕೆ ಸ್ಪಷ್ಟ ವಿವರಣೆ ಇದೆ ಎಂದು ಸಹ ಹೇಳಿದೆ. "ಅವರು ಅದನ್ನು Galaxy ಎಂದು ಕರೆಯಲು ಅವುಗಳು ಖಗೋಳದಷ್ಟು ಬೆಲೆಗಳನ್ನು ಹೊಂದಿರುವುದೇ ಕಾರಣ'' ಎಂದು ಹೇಳುವ ಮೂಲಕ ಹೆಚ್ಚು ಗ್ರಾಹಕರನ್ನು ಸೆಳೆಯಲು OnePlus ಮುಂದಾಗಿದೆ. ಆದರೆ, ಇದ್ಯಾವ ವಿಷಯಗಳಿಗೂ Samsung ಕಂಪೆನಿ ಪ್ರತಿಕ್ರಿಸಿಲ್ಲ. ಇನ್ನು ಇಲ್ಲಿ ವಿಪರ್ಯಾಸವೆಂದರೆ, ಈ ಹಿಂದೆ, Samsung ತನ್ನ ಹತ್ತಿರದ ಪ್ರತಿಸ್ಪರ್ಧಿ ಆಪಲ್ ಸ್ಮಾರ್ಟ್ಫೋನ್ಗಳನ್ನು ಅಪಹಾಸ್ಯದ ಕುರಿತು ಜಾಹೀರಾತುಗಳನ್ನು ಬಿಡುಗಡೆ ಮಾಡುತ್ತಿತ್ತು. ಇದೀಗ OnePlus ಕಂಪೆನಿ Samsung ಕಂಪೆನಿಯನ್ನು ಅಪಹಾಸ್ಯ ಮಾಡುವ ಮೂಲಕ ತನ್ನ ಬ್ರ್ಯಾಂಡ್ ಉತ್ತೇಜಿಸಲು ನೋಡುತ್ತಿದೆ.
ಫೆಬ್ರವರಿ 7 ರಂದು OnePlus ಈವೆಂಟ್!
ಇದೇ ಫೆಬ್ರವರಿ 7 ರಂದು ನವದೆಹಲಿಯಲ್ಲಿ ಸಂಜೆ 7:30 PM ISTಕ್ಕೆ ಆಯೋಜನೆಯಾಗಿರುವ OnePlus ಆಫ್ಲೈನ್ ಈವೆಂಟ್ನಲ್ಲಿ OnePlus ಕಂಪೆನಿ ಇತ್ತೀಚಿನ OnePlus 11 ಮತ್ತು OnePlus 11R ಸ್ಮಾರ್ಟ್ಫೋನ್ಗಳ ಜೊತೆಗೆ OnePlus Buds Pro 2 ಇಯರ್ಬಡ್ಸ್, OnePlus TV 65 Q2 Pro ಸ್ಮಾರ್ಟ್ಟಿವಿ ಮತ್ತು OnePlus ಪ್ಯಾಡ್ ಟ್ಯಾಬ್ಲೆಟ್ ಸಾಧನಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ದೇಶದಲ್ಲಿ ಈಗಾಗಲೇ ಲಭ್ಯವಿರುವ OnePlus Q ಸರಣಿ ಸ್ಮಾರ್ಟ್ಟಿವಿಗಳಿಗೆ ಫೆಬ್ರವರಿ 7 ರಂದು 65-ಇಂಚಿನ ಹೊಸ OnePlus TV 65 Q2 Pro ಸ್ಮಾರ್ಟ್ಟಿವಿ ಸೇರ್ಪಡೆಯಾಗಲಿದೆ. ದೇಶದಲ್ಲಿ OnePlus Q1 ಸರಣಿ ಸ್ಮಾರ್ಟ್ಟಿವಿಗಳು ವಿವಿಧ ಗ್ರಾತ್ರಗಳಲ್ಲಿ ಈಗಾಗಲೇ ಲಭ್ಯವಿದ್ದು, ಇವುಗಳಲ್ಲಿ 55 ಇಂಚಿನ OnePlus Q1 ಸ್ಮಾರ್ಟ್ಟಿವಿ ದೊಡ್ಡ ಗಾತ್ರದ ಸ್ಮಾರ್ಟ್ಟಿವಿಯಾಗಿತ್ತು.
Oneplus Mocks Samsung Galaxy S23 Ultra Price, Announces Special Discount.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm