ಬ್ರೇಕಿಂಗ್ ನ್ಯೂಸ್
01-02-23 08:02 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ ವೇರಿಯಬಲ್ ಟೆಕ್ ಬ್ರ್ಯಾಂಡ್ Noise ದೇಶದ ಮಾರುಕಟ್ಟೆಗೆ ತನ್ನ ವಿನೂತನ Noise Buds VS102 Pro ವೈರ್ಲೆಸ್ ಇಯರ್ಬಡ್ಗಳನ್ನು ಪರಿಚಯಿಸಿದೆ. ಕಡಿಮೆ ಬಜೆಟ್ ಬೆಲೆಯಲ್ಲಿ ವೈರ್ಲೆಸ್ ಇಯರ್ಬಡ್ ಸಾಧನ ಒಂದನ್ನು ಹುಡುಕುತ್ತಿರುವ ದೇಶದ ಗ್ರಾಹಕರಿಗಾಗಿ ಸಕ್ರಿಯ ಶಬ್ದ ರದ್ದತಿ (ANC) ವೈಶಿಷ್ಟ್ಯ ಹೊಂದಿರುವ ಈ ಹೊಸ ವೈರ್ಲೆಸ್ ಇಯರ್ಬಡ್ಗಳನ್ನು ಕೇವಲ 1,799 ರೂ. ಬೆಲೆಯಲ್ಲಿ ಪರಿಚಯಿಸಲಾಗಿದ್ದು, ಇದು ಇನ್-ಇಯರ್ ಫಾರ್ಮ್ ಫ್ಯಾಕ್ಟರ್, ಬ್ಲೂಟೂತ್ ಆವೃತ್ತಿ 5.3 ಕನೆಕ್ಟಿವಿಟಿ ಬೆಂಬಲ, ಕ್ವಾಡ್ ಮೈಕ್ ಸೆಟಪ್, ಎಎನ್ಸಿ ಮತ್ತು ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಬಂದಿದೆ. ಹಾಗಾದರೆ, ನೂತನ Noise Buds VS102 Pro ವೈರ್ಲೆಸ್ ಇಯರ್ಬಡ್ ಸಾಧನ ಹೇಗಿದೆ ಎಂಬುದನ್ನು ನೋಡೋಣ ಬನ್ನಿ.
Noise Buds VS102 Pro ಇಯರ್ಬಡ್ ವೈಶಿಷ್ಟ್ಯಗಳು
ನೂತನ Noise Buds VS102 Pro ಇಯರ್ಬಡ್ಗಳು 25dB ವರೆಗೆ ಸಕ್ರಿಯ ಶಬ್ದ ರದ್ದತಿ (ANC) ಮತ್ತು ಪರಿಸರದ ಶಬ್ದ ರದ್ದತಿ (ENC) ವೈಶಿಷ್ಟ್ಯಗಳ ಜೊತೆಗೆ ಕ್ವಾಡ್ ಮೈಕ್ಸ್ ಒಳಗೊಂಡಿರುವ ಇನ್-ಇಯರ್ ಫಾರ್ಮ್ ಫ್ಯಾಕ್ಟರ್ ಮತ್ತು ಆನ್-ಇಯರ್ ಟಚ್ ಕಂಟ್ರೋಲ್ಗಳೊಂದಿಗೆ ಬಿಡುಗಡೆಯಾಗಿದೆ. ಇದು ಬಳಕೆದಾರರಿಗೆ ಶಬ್ದ ಪಾರದರ್ಶಕತೆ, ಗೇಮಿಂಗ್ ಮೋಡ್, ವಾಲ್ಯೂಮ್ ಸರಿಹೊಂದಿಸಲು ಮತ್ತು ಸಂಗೀತ, ಕರೆಯನ್ನು ನಿಯಂತ್ರಿಸಲು ಮತ್ತು ಸಿರಿ ಮತ್ತು ಗೂಗಲ್ ಅಸಿಸ್ಟೆಂಟ್ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಜೊತೆಗೆ ಹ್ಯಾಂಡ್ಸ್-ಫ್ರೀ ಕಾಲ್ ವೈಶಿಷ್ಟ್ಯವನ್ನು ಸಹ ಹೊಂದಿರುವ ಈ ಇಯರ್ಬಡ್ಗಳು Android ಮತ್ತು iOS ಎರಡೂ ಸ್ಮಾರ್ಟ್ಫೋನ್ಗಳಿಗೆ ಹೊಂದಿಕೆಯಾಗುತ್ತವೆ ಎಂದು ಕಂಪೆನಿ ತಿಳಿಸಿದೆ.
Noise Buds VS102 Pro ಇಯರ್ಬಡ್ಗಳಲ್ಲಿ 11mm ಸ್ಪೀಕರ್ ಡ್ರೈವರ್ಗಳನ್ನು ಅಳವಡಿಸಲಾಗಿದೆ. ಇವು 10 ಮೀಟರ್ ವೈರ್ಲೆಸ್ ಶ್ರೇಣಿ ಹೊಂದಿದ್ದು, ಬ್ಲೂಟೂತ್ 5.3 ಬೆಂಬಲಿಸುತ್ತವೆ. ಬೆವರು ಮತ್ತು ನೀರಿನ ಪ್ರತಿರೋಧಕ್ಕಾಗಿ IPX5 ರೇಟಿಂಗ್ ಹೊಂದಿರುವ ಈ ಇಯರ್ಬಡ್ಗಳು ನೀರಿನಿಂದ ಸಾಕಷ್ಟು ಸುರಕ್ಷಿತವಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಬ್ಯಾಟರಿ ವಿಭಾಗದಲ್ಲಿ Noise Buds VS102 Pro ಇಯರ್ಬಡ್ ಸಾಧನವು ಸಾಕಷ್ಟು ಗಮನಸೆಳೆದಿದ್ದು, ಒಂದೇ ಚಾರ್ಜ್ನಲ್ಲಿ ಆರು ಗಂಟೆಗಳವರೆಗೆ ಪ್ಲೇಟೈಮ್ ಮತ್ತು ಚಾರ್ಜಿಂಗ್ ಕೇಸ್ನೊಂದಿಗೆ 34 ಗಂಟೆಗಳವರೆಗೆ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ ಹಾಗೂ ಇದರಲ್ಲಿನ Instacharge ವೈಶಿಷ್ಟ್ಯವು 10 ನಿಮಿಷಗಳ ಚಾರ್ಜ್ಗೆ 150 ನಿಮಿಷಗಳ ಪ್ಲೇಟೈಮ್ ಒದಗಿಸಲಿದೆ.!
Noise Buds VS102 Pro ಇಯರ್ಬಡ್ ಬೆಲೆ ಮತ್ತು ಲಭ್ಯತೆ
ಮೊದಲೇ ಹೇಳಿದಂತೆ, ದೇಶದಲ್ಲಿ Noise Buds VS102 Pro ಇಯರ್ಬಡ್ಗಳನ್ನು ಕೇವಲ 1,799 ರೂ. ಬೆಲೆಯಲ್ಲಿ ಪರಿಚಯಿಸಲಾಗಿದೆ. ಪ್ರಸ್ತುತ GoNoise ಮತ್ತು ಫ್ಲಿಪ್ಕಾರ್ಟ್ ಆನ್ಲೈನ್ ಸ್ಟೋರ್ಗಳಲ್ಲಿ ಖರೀದಿಗೆ ಲಭ್ಯವಿರುವ ಈ ವೈರ್ಲೆಸ್ ಇಯರ್ಬಡ್ ಸಾಧನವನ್ನು ಜೆಟ್ ಬ್ಲಾಕ್, ಕಾಮ್ ಬೀಜ್, ಅರೋರಾ ಗ್ರೀನ್ ಮತ್ತು ಗ್ಲೇಸಿಯರ್ ಬ್ಲೂ ನಾಲ್ಕು ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು. ನಾವು ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಈ Noise Buds VS102 Pro ಇಯರ್ಬಡ್ಗಳು ತಲಾ ಕೇವಲ ನಾಲ್ಕು ಗ್ರಾಂ ತೂಗುತ್ತವೆ ಮತ್ತು ಚಾರ್ಜಿಂಗ್ ಕೇಸ್ ಸುಮಾರು 34 ಗ್ರಾಂ ತೂಕ ಹೊಂದಿದೆ.
Noise Buds Vs102 Pro Wireless Earbuds Launched In India.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 08:32 pm
Mangalore Correspondent
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm