ಬ್ರೇಕಿಂಗ್ ನ್ಯೂಸ್
30-01-23 07:10 pm Source: Vijayakarnataka ಡಿಜಿಟಲ್ ಟೆಕ್
ಫೆಬ್ರವರಿ 7 ರಂದು ನವದೆಹಲಿಯಲ್ಲಿ ಸಂಜೆ 7:30 PM ISTಕ್ಕೆ ಆಯೋಜನೆಯಾಗಿರುವ OnePlus ಆಫ್ಲೈನ್ ಈವೆಂಟ್ನಲ್ಲಿ ಬಹುನಿರೀಕ್ಷಿತ OnePlus 11 ಮತ್ತು OnePlus 11R ಸ್ಮಾರ್ಟ್ಫೋನ್ಗಳು ಹಾಗೂ OnePlus Buds Pro 2 ಇಯರ್ಬಡ್ಸ್ ಜೊತೆಗೆ 65 ಇಂಚಿನ ಹೊಸ OnePlus TV 65 Q2 Pro ಸ್ಮಾರ್ಟ್ಟಿವಿ ಬಿಡುಗಡೆಯಾಗವುದು ಖಚಿತವಾಗಿತ್ತು. ಇದೀಗ ಇದೇ ಕಾರ್ಯಕ್ರಮದಲ್ಲಿ OnePlus ಕಂಪೆನಿಯ ಮೊಟ್ಟ ಮೊದಲ ಆಂಡ್ರಾಯ್ಡ್ ಟ್ಯಾಬ್ಲೆಟ್ 'OnePlus Pad' ಕೂಡ ಬಿಡುಗಡೆಯಾಗುತ್ತಿದೆ. ಹೌದು, OnePlus ಕ್ಲೌಡ್ 11 ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸಿರುವ ಕಂಪೆನಿ ಇದೇ ಕಾರ್ಯಕ್ರಮದಲ್ಲಿ 'OnePlus Pad' ಟ್ಯಾಬ್ ಬಿಡುಗಡೆಯಾಗುವುದನ್ನು ಟೀಸರ್ ಒಂದನ್ನು ಬಿಡುಗಡೆ ಮಾಡುವ ಮೂಲಕ ಖಚಿತಪಡಿಸಿದೆ. ಹಾಗಾದರೆ, ನೂತನ 'OnePlus Pad' ಟ್ಯಾಬ್ಲೆಟ್ ಹೇಗಿದೆ?, ಈ ವರೆಗೊ ನಾವು ತಿಳಿದಿರುವ ವಿಷಯಗಳು ಯಾವುವು ಎಂಬುದನ್ನು ನೋಡೋಣ ಬನ್ನಿ
OnePlus ಕಂಪೆನಿ ಬಿಡುಗಡೆಗೊಳಿಸಿರುವ OnePlus Pad ಟ್ಯಾಬ್ನ ಅಧಿಕೃತ ಪೋಸ್ಟರ್ ಚಿತ್ರದಲ್ಲಿ ಕಾಣಿಸುವಂತೆ, ಹಿಂಭಾಗದ ಫಲಕದ ಮಧ್ಯಭಾಗದಲ್ಲಿ ಒಂದೇ ಕ್ಯಾಮೆರಾ ಮತ್ತು ಕಂಪೆನಿಯ ಲೋಗೊ ಇರುವಂತಹ ಪ್ರೀಮಿಯಂ ಮಿರರ್ ಸ್ಕ್ರೀನ್ನಂತಹ ವಿನ್ಯಾಸ ಹಾಗೂ ಆಲಿವ್ ಗ್ರೀನ್ ಬಣ್ಣದಲ್ಲಿ OnePlus Pad ಟ್ಯಾಬ್ ಬಿಡುಗಡೆಯಾಗುವ ಸೂಚನೆ ದೊರೆತಿದೆ. ಬಹುತೇಕ ಟ್ಯಾಬ್ಲೆಟ್ಗಳಲ್ಲಿ ಮೇಲಿನ ಎಡ ಹಿಂಭಾಗದ ಪ್ಯಾನೆಲ್ನಲ್ಲಿ ಕ್ಯಾಮೆರಾ ಹೊಂದಿರುವುದನ್ನು ನೋಡುವುದು ಸಾಮಾನ್ಯ. ಆದರೆ, ಈ OnePlus Pad ಟ್ಯಾಬ್ ಮೇಲಿನ ಮಧ್ಯ ಭಾಗದಲ್ಲಿ ಕ್ಯಾಮೆರಾ ಹೊಂದುವ ಮೂಲಕ ವಿಶೇಷ ವಿನ್ಯಾಸದಲ್ಲಿ ಬರುವುದನ್ನು ಖಚಿತಪಡಿಸಿದೆ. ಇನ್ನು ಈ OnePlus Pad ಮುಂಭಾಗದ ಫಲಕವು ಕಿರಿದಾದ ಬೆಜೆಲ್ ಹೊಂದಿರುವಂತೆ ಕಾಣಿಸುತ್ತಿದೆ, ಇದು ಆಕಸ್ಮಿಕ ಸ್ಪರ್ಶವನ್ನು ತಡೆಯುವ ಸಾಧ್ಯತೆಯಿದೆ. ಹಾಗೂ ಮೇಲ್ಭಾಗ ಮತ್ತು ಕೆಳಗಿನ ಅಂಚುಗಳಲ್ಲಿ ಸ್ಪೀಕರ್ ಗ್ರಿಲ್ಗಳನ್ನು ಸಹ ನಾವು ನೋಡಬಹುದು.
OnePlus ಕಂಪೆನಿ OnePlus Pad ಟ್ಯಾಬ್ಲೆಟ್ ಸಾಧನದ ಅಧಿಕೃತ ಪೋಸ್ಟರ್ ಬಿಡುಗಡೆಮಾಡಿದೆಯಾದರೂ, ಈ ಟ್ಯಾಬ್ ಹೊಂದಿರಲಿರುವ ಫೀಚರ್ಸ್ ಕುರಿತಂತೆ ಯಾವದೇ ಮಾಹಿತಿ ಒದಗಿಸಿಲ್ಲ. ಆದರೆ, ವದಂತಿಗಳಂತೆ, ಇತ್ತೀಚಿನ ವರದಿಯೊಂದು OnePlus Pad ಟ್ಯಾಬ್ 11-ಇಂಚಿನ ಡಿಸ್ಪ್ಲೇ ಹೊಂದಿರಬಹುದು ಎಂದು ಹೇಳಿದೆ. OnePlus ಕಂಪೆನಿ ಈ ಡಿಸ್ಪ್ಲೇಯಲ್ಲಿ ಹೆಚ್ಚಿನ ರಿಫ್ರೆಶ್ ರೇಟ್ ಮತ್ತು L1 ವೈಡ್ವೈನ್ ಪ್ರಮಾಣೀಕರಣದೊಂದಿಗೆ ಪೂರ್ಣ-HD ಪ್ಲಸ್ ಸಾಮರ್ಥ್ಯದ ರೆಸಲ್ಯೂಶನ್ ನೀಡಬಹುದು ಎಂದು ಹೇಳಿತ್ತು. ಜೊತೆಗೆ ಇತ್ತೀಚಿನ ಪ್ರೊಸೆಸರ್ ಪರಿಚಯಿಸುವ ಬಗ್ಗೆ ತಿಳಿಸಿತ್ತು. ಆದರೆ, ಈ ಬಗ್ಗೆ ಕಂಪೆನಿಯಿಂದ ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ. ಇನ್ನು OnePlus ಕ್ಲೌಡ್ 11 ಆಫ್ಲೈನ್ ಈವೆಂಟ್ನಲ್ಲಿ OnePlus TV 65 Q2 Pro ಸ್ಮಾರ್ಟ್ಟಿವಿ ಕೂಡ ಬಿಡುಗಡೆಯಾಗಲಿರುವ ಬಗ್ಗೆ OnePlus ಕಂಪೆನಿ ಮೊನ್ನೆಮೊನ್ನೆಯಷ್ಟೇ ಖಚಿತಪಡಿಸಿದೆ. ಈ ಬಗ್ಗೆ ಸ್ವಲ್ಪ ಮಾಹಿತಿ ತಿಳಿಯೋಣ ಬನ್ನಿ.
ದೇಶದಲ್ಲಿ ಈಗಾಗಲೇ ಲಭ್ಯವಿರುವ OnePlus Q ಸರಣಿ ಸ್ಮಾರ್ಟ್ಟಿವಿಗಳಿಗೆ ಫೆಬ್ರವರಿ 7 ರಂದು 65-ಇಂಚಿನ ಹೊಸ OnePlus TV 65 Q2 Pro ಸ್ಮಾರ್ಟ್ಟಿವಿ ಸೇರ್ಪಡೆಯಾಗಲಿದೆ. ದೇಶದಲ್ಲಿ OnePlus Q1 ಸರಣಿ ಸ್ಮಾರ್ಟ್ಟಿವಿಗಳು ವಿವಿಧ ಗ್ರಾತ್ರಗಳಲ್ಲಿ ಈಗಾಗಲೇ ಲಭ್ಯವಿದ್ದು, ಇವುಗಳಲ್ಲಿ 55 ಇಂಚಿನ OnePlus Q1 ಸ್ಮಾರ್ಟ್ಟಿವಿ ದೊಡ್ಡ ಗ್ರಾತ್ರದ ಸ್ಮಾರ್ಟ್ಟಿವಿಯಾಗಿತ್ತು. ಈ OnePlus Q1 ಸರಣಿ ಸ್ಮಾರ್ಟ್ಟಿವಿಗಳು HDR ಬೆಂಬಲವಿರುವ 4K QLED ಡಿಸ್ಪ್ಲೇ, 3GB RAM ಮತ್ತು 16GB ಮೆಮೊರಿ ಸಾಮರ್ಥ್ಯ, Dolby Atmos ಸಪೋರ್ಟ್ ಮತ್ತು 50W ಸೌಂಡ್ ಔಟ್ಪುಟ್ ಬೆಂಬಲ ಸೇರಿದಂತೆ ಅಂತರ್ನಿರ್ಮಿತ Chromecast, ಧ್ವನಿ ಸಹಾಯಕ ಬೆಂಬಲ, ಚಿತ್ರ ವರ್ಧನೆ ತಂತ್ರಜ್ಞಾನಗಳನ್ನು ಹೊಂದಿದ್ದು, ಗ್ರಾಹಕರ ಮನಸೂರೆಗೊಳಿಸಿದ್ದವು. ಇದೀಗ 65 ಇಂಚಿನ ಷ್ಟು ದೊಡ್ಡದಾದ ಹೊಸ OnePlus TV 65 Q2 Pro ಸ್ಮಾರ್ಟ್ಟಿವಿ ಟಿವಿ ಮತ್ತೆ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಲು ಬರುತ್ತಿದೆ.
Oneplus Pad Design Officially Teased For The First Time.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 04:11 pm
Mangalore Correspondent
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm