ಬ್ರೇಕಿಂಗ್ ನ್ಯೂಸ್
25-01-23 08:34 pm Source: Vijayakarnataka ಡಿಜಿಟಲ್ ಟೆಕ್
ಭಾರತದ ಮೊಬೈಲ್ ಮಾರುಕಟ್ಟೆಗೂ ಮತ್ತು ಜನಪ್ರಿಯ ದೈತ್ಯ ಪಾನೀಯ ಸಂಸ್ಥೆ ಕೋಕಾ-ಕೋಲಾ (Coca-Cola) ಕಂಪೆನಿಗೂ ಎಲ್ಲಿಂದ ಎಲ್ಲಿಗೆ ಸಂಬಂಧ. ಆದರೆ, ಇದೀಗ ಕೋಕಾ-ಕೋಲಾ ಕಂಪೆನಿ ದೇಶದಲ್ಲಿ ತನ್ನ ಹೊಸದೊಂದು ಸ್ಮಾರ್ಟ್ಫೋನ್ ಪರಿಚಯಿಸಲು ಮುಂದಾಗುವ ಮೂಲಕ ಭಾರೀ ಆಶ್ಚರ್ಯ ಮೂಡಿಸಿದೆ.! ಹೌದು, ಶೀಘ್ರದಲ್ಲೇ ಕೋಕಾ-ಕೋಲಾ ಕಂಪೆನಿಯ ಬ್ರ್ಯಾಂಡ್ ಅಡಿಯಲ್ಲಿ 'Cola phone' ಎಂಬ ಸ್ಮಾರ್ಟ್ಫೋನ್ ಒಂದು ದೇಶದ ಮಾರುಕಟ್ಟೆಗೆ ಬಿಡುಗಡೆಯಾಗುವ ಸೂಚನೆ ದೊರೆತಿದ್ದು, ಪ್ರಸಿದ್ಧ ಸ್ಮಾರ್ಟ್ಫೋನ್ ಬ್ರ್ಯಾಂಡ್ ಒಂದರ ಸಹಯೋಗದಲ್ಲಿ ಕೋಕಾ-ಕೋಲಾ ಕಂಪೆನಿಯ ಬ್ರ್ಯಾಂಡ್ ಅಡಿಯಲ್ಲಿ ಈ 'Cola phone' ಸ್ಮಾರ್ಟ್ಫೋನ್ ದೇಶದಲ್ಲಿ ಬಿಡುಗಡೆಯಾಗಲಿದೆ ಎಂದು ಪ್ರಮುಖ ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ. ಇತ್ತ ಜನಪ್ರಿಯ ಟಿಪ್ಸ್ಟಾರ್ ಮುಕುಲ್ ಶರ್ಮಾ ಅವರು ತಮ್ಮ ಟ್ವೀಟ್ ಒಂದರಲ್ಲಿ ಈ ಹೊಸ Cola phone ಸ್ಮಾರ್ಟ್ಫೋನ್ ಚಿತ್ರಗಳನ್ನು ಪ್ರಕಟಿಸಿರುವುದರಿಂದ ಈ ಸುದ್ದಿಗೆ ಮತ್ತಷ್ಟು ಬೆರಗು ಬಂದಿದೆ.
ಭಾರತದ ಮೊಬೈಲ್ ಮಾರುಕಟ್ಟೆಗೂ ಮತ್ತು ಜನಪ್ರಿಯ ದೈತ್ಯ ಪಾನೀಯ ಸಂಸ್ಥೆ ಕೋಕಾ-ಕೋಲಾ (Coca-Cola) ಕಂಪೆನಿಗೂ ಎಲ್ಲಿಂದ ಎಲ್ಲಿಗೆ ಸಂಬಂಧ. ಆದರೆ, ಇದೀಗ ಕೋಕಾ-ಕೋಲಾ ಕಂಪೆನಿ ದೇಶದಲ್ಲಿ ತನ್ನ ಹೊಸದೊಂದು ಸ್ಮಾರ್ಟ್ಫೋನ್ ಪರಿಚಯಿಸಲು ಮುಂದಾಗುವ ಮೂಲಕ ಭಾರೀ ಆಶ್ಚರ್ಯ ಮೂಡಿಸಿದೆ.! ಹೌದು, ಶೀಘ್ರದಲ್ಲೇ ಕೋಕಾ-ಕೋಲಾ ಕಂಪೆನಿಯ ಬ್ರ್ಯಾಂಡ್ ಅಡಿಯಲ್ಲಿ 'Cola phone' ಎಂಬ ಸ್ಮಾರ್ಟ್ಫೋನ್ ಒಂದು ದೇಶದ ಮಾರುಕಟ್ಟೆಗೆ ಬಿಡುಗಡೆಯಾಗುವ ಸೂಚನೆ ದೊರೆತಿದ್ದು, ಪ್ರಸಿದ್ಧ ಸ್ಮಾರ್ಟ್ಫೋನ್ ಬ್ರ್ಯಾಂಡ್ ಒಂದರ ಸಹಯೋಗದಲ್ಲಿ ಕೋಕಾ-ಕೋಲಾ ಕಂಪೆನಿಯ ಬ್ರ್ಯಾಂಡ್ ಅಡಿಯಲ್ಲಿ ಈ 'Cola phone' ಸ್ಮಾರ್ಟ್ಫೋನ್ ದೇಶದಲ್ಲಿ ಬಿಡುಗಡೆಯಾಗಲಿದೆ ಎಂದು ಪ್ರಮುಖ ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ. ಇತ್ತ ಜನಪ್ರಿಯ ಟಿಪ್ಸ್ಟಾರ್ ಮುಕುಲ್ ಶರ್ಮಾ ಅವರು ತಮ್ಮ ಟ್ವೀಟ್ ಒಂದರಲ್ಲಿ ಈ ಹೊಸ Cola phone ಸ್ಮಾರ್ಟ್ಫೋನ್ ಚಿತ್ರಗಳನ್ನು ಪ್ರಕಟಿಸಿರುವುದರಿಂದ ಈ ಸುದ್ದಿಗೆ ಮತ್ತಷ್ಟು ಬೆರಗು ಬಂದಿದೆ.
ಕೋಕಾ-ಕೋಲಾ ಬ್ರ್ಯಾಂಡ್ ಅಡಿಯಲ್ಲಿ ಬಿಡುಗಡೆಯಾಗಲಿರುವ ಸ್ಮಾರ್ಟ್ಫೋನ್ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸಿಲ್ಲವಾದರೂ, ಇದು ಇತ್ತೀಚಿಗಷ್ಟೇ ದೆಶದಲ್ಲಿ ಬಿಡುಗಡೆಯಾಗಿರುವ Realme 10 4G ಸ್ಮಾರ್ಟ್ಫೋನ್ ಆಗಿರಬಹುದು ಎಂಬ ಹಲವು ಊಹಾಪೋಹಗಳು ಹರಿದಾಡಿವೆ. ದೇಶದಲ್ಲಿ ಇದೇ ಜನವರಿ 9 ರಂದು Realme 10 4G ಸ್ಮಾರ್ಟ್ಫೋನ್ ಬಜೆಟ್ ಬೆಲೆಯಲ್ಲಿ ಬಿಡುಗಡೆಯಾಗಿದ್ದು, ಆಕ್ಟಾ-ಕೋರ್ MediaTek Helio G99 SoC ಪ್ರೊಸೆಸರ್, 8GB LPDDR4x RAM, 33W SuperVOOC ಫಾಸ್ಟ್ ಚಾರ್ಜಿಂಗ್, 5,000mAh ಬ್ಯಾಟರಿ ಮತ್ತು 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಸೇರಿದಂತೆ ಹಲವಾರು ಪ್ರಮುಖ ವೈಶಿಷ್ಟ್ಯಗಳನ್ನು ಹೊತ್ತು ಈ Realme 10 ಸ್ಮಾರ್ಟ್ಫೋನ್ ಎಂಟ್ರಿ ನೀಡಿದೆ. ಹಾಗಾದರೆ, Cola phone' ಬ್ರ್ಯಾಂಡ್ ಅಡಿಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾದ ನೂತನ Realme 10 4G ಸ್ಮಾರ್ಟ್ಫೋನ್ ಹೇಗಿದೆ ಮತ್ತು ಇದರ ಬೆಲೆಗಳು ಎಷ್ಟು ಎಂಬ ಸಂಪೂರ್ಣ ವಿವರಗಳನ್ನು ತಿಳಿಯೋಣ ಬನ್ನಿ.
Realme 10 ಸ್ಮಾರ್ಟ್ಫೋನಿನ ವೈಶಿಷ್ಟ್ಯಗಳು
ನೂತನ Realme 10 ಸ್ಮಾರ್ಟ್ಫೋನ್ 6.4-ಇಂಚಿನ ಫುಲ್-HD+ ಸೂಪರ್ AMOLED ಡಿಸ್ಪ್ಲೇಯೊಂದಿಗೆ ಬಿಡುಗಡೆಯಾಗಿದೆ. ಈ ಡಿಸ್ಪ್ಲೇಯು, 90Hz ರಿಫ್ರೆಶ್ ರೇಟ್, 360Hz ಟಚ್ ಸ್ಲಾಪಿಂಗ್ ರೇಟ್ ಮತ್ತು 1,000 nits ಗರಿಷ್ಠ ಬ್ರೈಟ್ನೆಸ್ ವೈಶಿಷ್ಟ್ಯಗಳೊಂದಿಗೆ ಪ್ರದರ್ಶನವು ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಸಹ ಹೊಂದಿದೆ. ಹುಡ್ ಅಡಿಯಲ್ಲಿ, ಇದು GB LPDDR4x RAM ಮತ್ತು 128GB UFS 2.2 ಮೆಮೊರಿಯೊಂದಿಗೆ ಜೋಡಿಸಲಾಗಿರುವ MediaTek Helio G99 SoC ಪ್ರೊಸೆಸರ್ ಹೊಂದಿದೆ. ಅಲ್ಲದೇ, ಮೈಕ್ರೋ SD ಕಾರ್ಡ್ ಮೂಲಕ ಫೋನಿನ ಮೆಮೊರಿಯನ್ನು 1TB ವರೆಗೆ ವಿಸ್ತರಿಸಿಕೊಳ್ಳಬಹುದಾದ ಆಯ್ಕೆ ಇದೆ. ಇನ್ನು ಈ ಸ್ಮಾರ್ಟ್ಫೋನ್ ಅಲ್ಟ್ರಾ ಬೂಮ್ ಸ್ಪೀಕರ್ಗಳನ್ನು ಹೊಂದಿದ್ದು, 200 ಪ್ರತಿಶತ ವಾಲ್ಯೂಮ್ನಲ್ಲಿ ಆಡಿಯೊವನ್ನು ಪ್ಲೇ ಮಾಡಬಹುದು ಎಂದು ಕಂಪೆನಿ ತಿಳಿಸಿದೆ.
ಕ್ಯಾಮೆರಾ ವಿಭಾಗದಲ್ಲಿ, ನೂತನ Realme 10 ಸ್ಮಾರ್ಟ್ಫೋನ್ 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಮೊನೊಕ್ರೋಮ್ ಸಂವೇದಕವನ್ನು ಒಳಗೊಂಡಂತೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಪ್ರೋಲೈಟ್ ಇಮೇಜಿಂಗ್ ಮತ್ತು ರಾತ್ರಿ ಛಾಯಾಗ್ರಹಣಕ್ಕಾಗಿ ಫ್ಲ್ಯಾಶ್ ನೈಟ್ ವ್ಯೂ ಅಲ್ಗಾರಿದಮ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.ಸೆಲ್ಫಿಗಳಿಗಾಗಿ, ಎಡ ಭಾಗದಲ್ಲಿ 16-ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಬ್ಯಾಟರಿ ವಿಭಾಗದಲ್ಲಿ, Realme 10 ಸ್ಮಾರ್ಟ್ಫೋನ್ 33W SuperVOOC ಫಾಸ್ಟ್ ಚಾರ್ಜಿಂಗ್ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿ ಹೊಂದಿದ್ದು, ಇದು 28 ನಿಮಿಷಗಳ ಚಾರ್ಜ್ನೊಂದಿಗೆ 50 ಪ್ರತಿಶತದಷ್ಟು ಬ್ಯಾಕಪ್ ಒದಗಿಸುತ್ತದೆ ಎಂದು ಹೇಳಲಾಗುತ್ತದೆ. ಒಟ್ಟಾರೆಯಾಗಿ 390,000 ಪಾಯಿಂಟ್ಗಳ AnTuTu ಕಾರ್ಯಕ್ಷಮತೆಯ ಸ್ಕೋರ್ ಇದೆ.
ದೇಶದಲ್ಲಿ ಬಿಡುಗಡೆಯಾಗಿರುವ Realme 10 4G ಸ್ಮಾರ್ಟ್ಫೋನನ್ನು 12,999 ರೂ.ಗಳ ಆರಂಭಿಕ ಬೆಲೆಯಲ್ಲಿ ಪರಿಚಯಿಸಲಾಗಿದೆ. Realme 10 4G ಸ್ಮಾರ್ಟ್ಫೋನಿನ ಮೂಲ 4GB RAM + 64GB ಸ್ಟೋರೇಜ್ ಮಾದರಿಯ ಬೆಲೆ 13,999 ರೂ. ಆದರೆ, ಇದನ್ನು ಬಿಡುಗಡೆಯ ಸಮಯದಲ್ಲಿ 1,000 ರೂ.ಗಳ ರಿಯಾಯಿತಿಯೊಂದಿಗೆ 12,999 ರೂ.ಗೆ ಮಾರಾಟ ಮಾಡಲಾಗುವುದು ಹಾಗೂ 8GB RAM + 128GB ಸ್ಟೋರೇಜ್ ಮಾದರಿ ಸಾಧನದ ಬೆಲೆ 16,999 ರೂ.ಗಳು ಎಂದು Realme ತಿಳಿಸಿದೆ. ಇನ್ನು ಕ್ಲಾಷ್ ವೈಟ್ ಮತ್ತು ರಶ್ ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುವ ಎರಡೂ ಮಾದರಿ ಸ್ಮಾರ್ಟ್ಫೋನ್ಗಳು ದೇಶದಲ್ಲಿ ಕಳೆದ ಜನವರಿ 15 ರಿಂದ ಮಧ್ಯಾಹ್ನ 12 ಗಂಟೆಗೆ Realme ಇಂಡಿಯಾ ಮತ್ತು Flipkart ವೆಬ್ಸೈಟ್ಗಳಲ್ಲಿ ಎಸ್ಕ್ಲೂಸಿವ್ ಆಗಿ ಮಾರಾಟಕ್ಕೆ ಬಂದಿದ್ದವು.
Coca-Cola Phone India Launch Speculated By This March Design And Brand Leaked.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 08:32 pm
Mangalore Correspondent
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm