ಬ್ರೇಕಿಂಗ್ ನ್ಯೂಸ್
18-01-23 07:42 pm Source: Vijayakarnataka ಡಿಜಿಟಲ್ ಟೆಕ್
ಡಿಜಿಟಲ್ ಸ್ಮಾರ್ಟ್ವಾಚ್ಗಳ ಆಗಮನಕ್ಕೂ ಮೊದಲೇ ಸ್ಟೈಲಿಶ್ ವಾಚ್ಗಳ ತಯಾರಿಕೆಯ ಜನಪ್ರಿಯ ಬ್ರ್ಯಾಂಡ್ Fastrack ಇದೀಗ ಕೇವಲ 1,495 ರೂ. ಬೆಲೆಯಲ್ಲಿ ಸ್ಮಾರ್ಟ್ವಾಚ್ ಒಂದನ್ನು ಪರಿಚಯಿಸುವ ಮೂಲಕ ಭರ್ಜರಿ ಸದ್ದು ಮಾಡಿದೆ. ದೇಶದಲ್ಲಿ ಈಗಾಗಲೇ ಹಲವು ಸ್ಮಾರ್ಟ್ವಾಚ್ಗಳನ್ನು ಪರಿಚಯಿಸಿರುವ Fastrack ಕಂಪೆನಿ ಇಂದು ಹೊಸದಾಗಿ Reflex Beat+ ಎಂಬ ಹೆಸರಿನ ಸ್ಮಾರ್ಟ್ಫೋಚ್ ಬಿಡುಗಡೆಗೊಳಿಸಿದ್ದು, ಇದು ಬಜೆಟ್ ಬೆಲೆಯಲ್ಲಿ ಇತರೆ ಎಲ್ಲಾ ಫಿಟ್ನೆಸ್ ವಾಚ್ಗಳಿಗಿಂತ ಭಿನ್ನವಾಗಿ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಹಾಗಾದರೆ, ದೇಶದಲ್ಲಿ Fastrack ಕಂಪೆನಿ ಬಿಡುಗಡೆ ಮಾಡಿರುವ ಹೊಸ Fastrack Reflex Beat+ ಸ್ಮಾರ್ಟ್ವಾಚ್ ಹೇಗಿದೆ ಎಂಬ ಸಂಪೂರ್ಣ ವಿವರಗಳನ್ನು ನೋಡೋಣ ಬನ್ನಿ.
Fastrack Reflex Beat+ ಸ್ಮಾರ್ಟ್ವಾಚ್ ಹೇಗಿದೆ?
ನೂತನ Fastrack Reflex Beat+ ಸ್ಮಾರ್ಟ್ವಾಚ್ ಸ್ವೇರ್ ಡಯಲ್ ವಿನ್ಯಾಸದಲ್ಲಿ ಮತ್ತು ಸಿಲಿಕಾನ್ ಸ್ಟ್ರಿಪ್ನೊಂದಿಗೆ ಪ್ರೀಮಿಯಂ ಸಾಧನವಾಗಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್ವಾಚ್ನಲ್ಲಿ 60hz ರಿಫ್ರೆಶ್ ರೇಟ್ ಹಾಗೂ 500 nits ಬ್ರೈಟ್ನೆಸ್ ಸಾಮರ್ಥ್ಯ ಹೊಂದಿರುವ 1.69 ಇಂಚಿನ UltraVu ಡಿಸ್ಪ್ಲೇ ಇದೆ, ಇದು ಯುಟಿಲಿಟಿ ಫೀಚರ್ಗಳ ಜೊತೆಗೆ 60 ಮಲ್ಟಿ-ಸ್ಪೋರ್ಟ್ಸ್ ಮೋಡ್ಗಳನ್ನು ಹೊಂದಿದೆ ಎಂದು ಕಂಪೆನಿ ತಿಳಿಸಿದೆ. ಇದರೊಂದಿಗೆ IP68 ರೇಟಿಂಗ್ ಧೂಳು ಮತ್ತು ನೀರು-ನಿರೋಧಕ ಶಕ್ತಿ ಹೊಂದಿರುವ ಈ ಸ್ಮಾರ್ಟ್ವಾಚ್ನಲ್ಲಿ ಹೃದಯ ಬಡಿತ ಮಾನಿಟರ್, ವುಮೆನ್ ಹೆಲ್ತ್ ಮಾನಿಟರ್, ಸ್ಲೀಪ್ ಟ್ರ್ಯಾಕರ್ ಮತ್ತು SpO2 ಮಾನಿಟರ್ನಂತಹ ಎಲ್ಲಾ ಪ್ರಮುಖ ಹೆಲ್ತ್ ಫೀಚರ್ಗಳನ್ನು ಅಳವಡಿಸಲಾಗಿದೆ.

ಈ Fastrack Reflex Beat+ ಸ್ಮಾರ್ಟ್ವಾಚ್ನಲ್ಲಿ ಕ್ಯಾಮೆರಾ ಕಂಟ್ರೋಲ್ ಮತ್ತು ಮ್ಯೂಸಿಕ್ ಕಂಟ್ರೋಲ್ ಮತ್ತು ನೋಟಿಫಿಕೇಶನ್ಗಳನ್ನು ನೀಡುವ ವೈಶಿಷ್ಟ್ಯಗಳಿವೆ. ಇಷ್ಟೇ ಅಲ್ಲದೇ, ಪ್ರಯಾಣದಲ್ಲಿರುವಾಗ ಕರೆಗಳನ್ನು ತಿರಸ್ಕರಿಸಲು ಮತ್ತು ಹವಾಮಾನ ಸಂದೇಶ ಗಳನ್ನು ಸಹ ಪಡೆಯಬಹುದು ಎಂದು ಕಂಪೆನಿ ತಿಳಿಸಿದೆ. Fastrack ಒಡೆತನದ ಟೈಟಾನ್ ಕಂಪೆನಿ ಲಿಮಿಟೆಡ್ನ ವೇರಬಲ್ಸ್ ಡಿಜಿಟಲ್ ಹೆಲ್ತ್ ಇನ್ನೋವೇಟರ್ ಸಿಒಒ ರವಿ ಕುಪ್ಪುರಾಜ್ ಅವರು, ಇದೀಗ ಸ್ಮಾರ್ಟ್ವಾಚ್ಗಳು ಈಗ ದೇಶದಾದ್ಯಂತ ಗ್ರಾಹಕರಿಗೆ ಕ್ರಿಯಾತ್ಮಕ ಮತ್ತು ಫ್ಯಾಷನ್ಗೆ ಅಗತ್ಯವಾದ ಸಾಧನಗಳಾಗಿವೆ. ಈ Fastrack Reflex Beat+ ಸ್ಮಾರ್ಟ್ವಾಚ್ ಎಲ್ಲಾ ರೀತಿಯ ಕ್ರೀಡೆಗಳು ಮತ್ತು ಸಾಹಸಗಳಿಗೆ ಧರಿಸಬಹುದಾದ ಸಾಧನ ಎಂದು ಹೇಳಿದ್ದಾರೆ.

Fastrack Reflex Beat+ ಸ್ಮಾರ್ಟ್ವಾಚ್ ಬೆಲೆ ಮತ್ತು ಲಭ್ಯತೆ.
ಮೊದಲೇ ಹೇಳಿದಂತೆ, ದೇಶದಲ್ಲಿ ನೂತನ Fastrack Reflex Beat+ ಸ್ಮಾರ್ಟ್ವಾಚ್ ಕೇವಲ 1,495 ರೂ. ಬೆಲೆಯಲ್ಲಿ ಬಿಡುಗಡೆಯಾಗಿದೆ. ಪ್ರಸ್ತುತ ಅಮೆಜಾನ್ ಸಂಸ್ಥೆ ಆಯೋಜಿಸಿರುವ ಗ್ರೇಟ್ ರಿಪಬ್ಲಿಕ್ ಡೇ ಸೇಲ್ನಲ್ಲಿ Fastrack Reflex Beat+ ಸ್ಮಾರ್ಟ್ವಾಚ್ ಖರೀದಿಸಲು ಅವಕಾಶವಿದ್ದು, ಗ್ರಾಹಕರು ಬೀಜ್ ಲ್ಯಾಟೆ, ವೈನ್ ರೆಡ್, ಬ್ಲಾಕ್, ಆಲಿವ್ ಗ್ರೀನ್ ಮತ್ತು ಡೀಪ್ ಟೀಲ್ ಸೇರಿದಂತೆ ಐದು ವಿಭಿನ್ನ ಬಣ್ಣದ ಆಯ್ಕೆಗಳಲ್ಲಿ ಈ ಸಾಧನವನ್ನು ಖರೀದಿಸಬಹುದು ಎಂದು ಕುಪ್ಪುರಾಜ್ ಅವರು ತಿಳಿಸಿದ್ದಾರೆ.
Fastrack Reflex Beat Smartwatch Launched In India.
26-10-25 07:33 pm
Bangalore Correspondent
ಪ್ರೀತಿ ನೆಪದಲ್ಲಿ ಹಿಂದು ಯುವತಿಗೆ ಮೋಸ ; ಮದುವೆಯಾಗಲ...
25-10-25 09:33 pm
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
"ಎ" ಖಾತೆ ಪರಿವರ್ತಿಸುವ ಸರ್ಕಾರದ ಬೋಗಸ್ ಸ್ಕೀಂ ;...
25-10-25 09:00 pm
ಸಿಎಂ ಬದಲಾವಣೆ ಹೇಳಿಕೆಯ ಬಗ್ಗೆ ಯತೀಂದ್ರನನ್ನು ಕೇಳ್ದ...
24-10-25 09:35 pm
26-10-25 11:01 pm
HK News Desk
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
27-10-25 07:24 pm
Mangalore Correspondent
ಹೈಕಮಾಂಡ್ ತೀರ್ಮಾನ ಮಾಡಿದ್ರೆ ಐದು ವರ್ಷ ಸಿಎಂ ಆಗಿರು...
27-10-25 05:56 pm
ಮನವಿ ಕೊಡಲು ಬಂದವರನ್ನು ತಡೆದ ಪೊಲೀಸರು, ಬೆಳ್ತಂಗಡಿ...
27-10-25 04:36 pm
11 ದಿನಗಳಿಂದ ಅರಬ್ಬೀ ಸಮುದ್ರದಲ್ಲಿ ಸಿಕ್ಕಿಬಿದ್ದಿದ್...
26-10-25 04:42 pm
ಮುಸ್ಲಿಂ ಮಹಿಳೆಯರಿಗೆ ಅವಮಾನ ಆರೋಪ ; ಆರೆಸ್ಸೆಸ್ ಮುಖ...
26-10-25 02:12 pm
27-10-25 05:29 pm
HK News Desk
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm
ಶಬರಿಮಲೆಯಲ್ಲಿ ಕದ್ದ ಚಿನ್ನ ಬಳ್ಳಾರಿ ಜುವೆಲ್ಲರಿಗೆ ಮ...
25-10-25 10:00 pm
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm