ಬ್ರೇಕಿಂಗ್ ನ್ಯೂಸ್
16-01-23 09:35 pm Source: Vijayakarnataka ಡಿಜಿಟಲ್ ಟೆಕ್
ಭಾರತದ 5G ಸ್ಮಾರ್ಟ್ಫೋನ್ ಮಾರುಕಟ್ಟೆಯು ದಂಗಾಗುವಷ್ಟು ಕಡಿಮೆ ಬೆಲೆಗಳಲ್ಲಿ Samsung ಕಂಪೆನಿಯ ವಿನೂತನ Galaxy A14 5G ಮತ್ತು Galaxy A23 5G ಸ್ಮಾರ್ಟ್ಫೋನ್ಗಳು ದೇಶದಲ್ಲಿಂದು ಬಿಡುಗಡೆಯಾಗಿವೆ. ಕಳೆದ ಹಲವು ವಾರಗಳಿಂದಲೂ ಭಾರೀ ಕುತೂಹಲ ಮೂಡಿಸಿದ್ದ Galaxy A14 5G ಮತ್ತು Galaxy A23 5G ಎರಡು ಸ್ಮಾರ್ಟ್ಫೋನ್ಗಳು ನಿರೀಕ್ಷೆಯಂತೆಯೇ Exynos 1330 ಆಕ್ಟಾ-ಕೋರ್ ಮತ್ತು Qualcomm Snapdragon 695 ಪ್ರೊಸೆಸರ್ಗಳಿಂದ ಚಾಲಿತವಾಗಿದ್ದು, Galaxy A14 5G ಸಾಧನವು 16,499 ರೂ.ಗಳ ಆರಂಭಿಕ ಬೆಲೆಯಲ್ಲಿ ಮತ್ತು Galaxy A23 5G ಸಾಧನವು 22,999 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಿವೆ. ಹಾಗಾದರೆ,ನೂತನ Galaxy A14 5G ಮತ್ತು Galaxy A23 5G ಸ್ಮಾರ್ಟ್ಫೋನ್ಗಳು ಹೇಗಿವೆ ಎಂಬುದನ್ನು ನೋಡೋಣ ಬನ್ನಿ.
Samsung Galaxy A23 5G ಸ್ಮಾರ್ಟ್ಫೋನಿನ ವೈಶಿಷ್ಟ್ಯಗಳು.
ನೂತನ Samsung Galaxy A23 5G ಸಾಧನವು 120Hz ರಿಫ್ರೆಶ್ ರೇಟ್ ಬೆಂಬಲಿಸುವ 5.8-ಇಂಚಿನ ಫುಲ್-HD+ (720x1,560 ಪಿಕ್ಸೆಲ್ಗಳು) TFT ಡಿಸ್ಪ್ಲೇಯೊಂದಿಗೆ ಬಂದಿದೆ. ಹುಡ್ ಅಡಿಯಲ್ಲಿ, 8GB RAM ಮತ್ತು 128GB ಆಂತರಿಕ ಮೆಮೊರಿಯೊಂದಿಗೆ ಜೋಡಿಸಲಾದ ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 695 ಪ್ರೊಸೆಸರ್ನೊಂದಿಗೆ ಚಾಲಿತವಾಗಿರುವ ಈ ಸಾಧನದ ಮೆಮೊರಿಯನ್ನು ಮೈಕ್ರೊ SD ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹುದಾದ ಆಯ್ಕೆ ನೀಡಲಾಗಿದೆ. ಬ್ಯಾಟರಿ ವಿಭಾಗದಲ್ಲಿ, ಈ ಸಾಧನವು ಅಡಾಪ್ಟಿವ್ ಪವರ್-ಸೇವಿಂಗ್ ಮೋಡ್ ಜೊತೆಗೆ 25W ವೇಗದ ಚಾರ್ಜಿಂಗ್ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.
ಫೋಟೋಗಳು ಮತ್ತು ವೀಡಿಯೊಗಳಿಗಾಗಿ, Samsung Galaxy A23 5G ಸ್ಮಾರ್ಟ್ಫೋನ್ ಸಾಧನವು 5-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ, 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಜೊತೆಗೆ 50-ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ವಾಡ್ಡ್ ಕ್ಯಾಮೆರಾ ಸೆಟಪ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಮುಂಭಾಗದಲ್ಲಿ 13MP-ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾ ನೀಡಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G, ಬ್ಲೂಟೂತ್ 5.1, NFC, 3.5mm ಆಡಿಯೋ ಜ್ಯಾಕ್ ಮತ್ತು USB ಟೈಪ್-C ಪೋರ್ಟ್ ನಂತಹ ವೈಶಿಷ್ಟ್ಯಗಳನ್ನು ಹೊಂದಿರುವ ಈ ಸಾಧನವು ಪ್ರೀಮಿಯಂ ಲುಕ್ನಲ್ಲಿ ಎಂಟ್ರಿ ನೀಡಿದೆ.
Samsung Galaxy A14 5G ಸ್ಮಾರ್ಟ್ಫೋನಿನ ವೈಶಿಷ್ಟ್ಯಗಳು.
ಮತ್ತೊಂದೆಡೆ, Samsung Galaxy A14 5G ಸಾಧನವು 90Hz ರಿಫ್ರೆಶ್ ರೇಟ್ ಸಾಮರ್ಥ್ಯವಿರುವ 6.6-ಇಂಚಿನಷ್ಟು ದೊಡ್ಡದಾದ (1,080x2,408 ಪಿಕ್ಸೆಲ್ಗಳು) ಫುಲ್-HD+ PLS LCD ಡಿಸ್ಪ್ಲೇಯನ್ನು ಹೊಂದಿದೆ. ಹುಡ್ ಅಡಿಯಲ್ಲಿ, 8GB RAM ಮತ್ತು 64GB ಆಂತರಿಕ ಮೆಮೊರಿಯೊಂದಿಗೆ ಜೋಡಿಸಲಾದ ಆಕ್ಟಾ-ಕೋರ್ Exynos 1330 ಪ್ರೊಸೆಸರ್ನೊಂದಿಗೆ ಚಾಲಿತವಾಗಿರುವ ಈ ಸಾಧನದ ಮೆಮೊರಿಯನ್ನು ಸಹ ಮೈಕ್ರೊ SD ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹುದಾದ ಆಯ್ಕೆ ಇದೆ. ಬ್ಯಾಟರಿ ವಿಭಾಗದಲ್ಲಿ, ಇದು ಕೂಡ ವೇಗದ ಚಾರ್ಜಿಂಗ್ಗೆ ಬೆಂಬಲದೊಂದಿಗೆ (ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದ ಬಗ್ಗೆ ಮಾಹಿತಿ ಇಲ್ಲ) 5,000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.
ಫೋಟೋಗಳು ಮತ್ತು ವೀಡಿಯೊಗಳಿಗಾಗಿ, Galaxy A14 5G ಸಾಧನವು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಜೊತೆಗೆ 50-ಮೆಗಾಪಿಕ್ಸೆಲ್ ಸಾಮರ್ಥ್ಯದ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿಯೂ ಸಹ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಮುಂಭಾಗದಲ್ಲಿ 13-ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾ ನೀಡಲಾಗಿದೆ. ಇನ್ನುಳಿದಂತೆ, ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G, ಬ್ಲೂಟೂತ್ 5.2, NFC, 3.5mm ಆಡಿಯೋ ಜ್ಯಾಕ್ ಮತ್ತು USB ಟೈಪ್-C ಪೋರ್ಟ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನು ಈ ಎರಡೂ ಸಾಧನಗಳು ಬಳಕೆಯಾಗದ ಸಂಗ್ರಹಣೆಯನ್ನು ಬಳಸಿಕೊಂಡು 16GB ವರೆಗೆ RAM ವಿಸ್ತರಿಸಬಹುದಾದ ವೈಶಿಷ್ಟ್ಯವನ್ನು ಹೊಂದಿವೆ.
Galaxy A23 5G ಮತ್ತು Galaxy A14 5G ಪೋನ್ಗಳ ಬೆಲೆ ಮತ್ತು ಲಭ್ಯತೆ
ಮೊದಲೇ ಹೇಳಿದಂತೆ, ಭಾರತದಲ್ಲಿ Galaxy A14 5G ಸಾಧನವು 16,499 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಿದೆ. ದೇಶದಲ್ಲಿ ಮೂರು ಮಾದರಿಗಳಲ್ಲಿ ಬಂದಿರುವ ಈ ಸಾಧನದ 4GB RAM + 64GB ಮಾದರಿಯು 16,499 ರೂ, 6GB RAM + 128GB ಮಾದರಿಯು 18,999 ರೂ. ಹಾಗೂ 8GB RAM + 128GB ಮಾದರಿಯು 20,999 ರೂ. ಬೆಲೆಗಳಲ್ಲಿ ಮತ್ತು ಗಾಢ ಕೆಂಪು, ತಿಳಿ ಹಸಿರು ಮತ್ತು ಕಪ್ಪು ಮೂರು ಬಣ್ಣಗಳಲ್ಲಿ ಬಿಡುಗಡೆಯಾಗಿದೆ. ಇತ್ತ Galaxy A23 5G ಸಾಧನವು 6GB RAM + 128GB ಮತ್ತು 8GB RAM + 128GB ಎರಡು ಮಾದರಿಗಳಲ್ಲಿ ಬಿಡುಗಡೆಯಾಗಿದ್ದು, ಇವುಗಳು ಕ್ರಮವಾಗಿ 22,999 ರೂ. ಮತ್ತು 24,999 ರೂ. ಬೆಲೆಗಳು ಮತ್ತು ಬೆಳ್ಳಿ, ಕಿತ್ತಳೆ ಮತ್ತು ತಿಳಿ ನೀಲಿ ಬಣ್ಣಗಳಲ್ಲಿ ಬಂದಿದೆ. ಈ ಎರಡೂ ಸ್ಮಾರ್ಟ್ಫೋನ್ಗಳು ಇಂದಿನಿಂದಲೇ (ಜನವರಿ 18) Samsung ಕಂಪೆನಿಯ ಅಧಿಕೃತ ವೆಬ್ಸೈಟ್ ಮೂಲಕ ಖರೀದಿಗೆ ಲಭ್ಯವಾಗಿದ್ದು, ಫೋನ್ಗಳ ಖರೀದಿಯ ಮೇಲೆ SBI, IDFC ಮತ್ತು ZestMoney ಗ್ರಾಹಕರಿಗೆ 2,000 ವರೆಗೆ ಕ್ಯಾಶ್ಬ್ಯಾಕ್ ಒದಗಿಸಲಾಗುವುದು ಎಂದು ಕಂಪೆನಿ ತಿಳಿಸಿದೆ.
Samsung Galaxy A23 5g, Galaxy A14 5g India Price, Specifications Details.
17-03-25 11:54 am
Bangalore Correspondent
Yatnal, Pramod Muthalik: ' ಬಾಂಬ್ ಹಾಕಿ ಹೊಟ್ಟೆ...
16-03-25 10:32 pm
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
17-03-25 10:57 pm
HK News Desk
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
17-03-25 11:02 pm
Udupi Correspondent
Mangalore Accident, Kallapu: ನಿಯಂತ್ರಣ ತಪ್ಪಿ ಆ...
17-03-25 08:01 pm
Mangalore, Chakravarthy Sulibele, FIR: ಅನ್ಯಧರ...
17-03-25 04:27 pm
Mangalore Accident, Harekala, Death: ಹರೇಕಳದಲ್...
17-03-25 11:29 am
UT Khader, Mangalore, Tulu Academy: ತುಳು ಕಲಿತ...
16-03-25 10:55 pm
17-03-25 07:51 pm
Mangalore Correspondent
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm