ಬ್ರೇಕಿಂಗ್ ನ್ಯೂಸ್
11-01-23 08:47 pm Source: Vijayakarnataka ಡಿಜಿಟಲ್ ಟೆಕ್
ಭಾರತದ ಜನಪ್ರಿಯ ಗ್ಯಾಜೆಟ್ ಬ್ರ್ಯಾಂಡ್ಗಳಲ್ಲಿ ಒಂದಾದ Philips Audio ಕಂಪೆನಿ ದೇಶದ ಮಾರುಕಟ್ಟೆಯಲ್ಲಿಂದು ತನ್ನ ವಿನೂತನ 'Philips TAH8506BK' ಎಂಬ ವೈರ್ಲೆಸ್ ಹೆಡ್ಫೋನ್ ಸಾಧನವನ್ನು ಪರಿಚಯಿಸಿದೆ. ಮಡಚಬಹುದಾದ ಮತ್ತು ಹೊಂದಾಣಿಕೆ ಮಾಡಬಹುದಾದ ಇಯರ್ ಕಪ್ಗಳೊಂದಿಗೆ ಈ ಹೊಸ ವೈರ್ಲೆಸ್ ಹೆಡ್ಫೋನ್ ಸಾಧನವು ಬಿಡುಗಡೆಯಾಗಿದ್ದು, 40mm ಆಡಿಯೋ ಡ್ರೈವರ್ಗಳು, ANC ಪ್ರೊ, ಹೈ-ರೆಸ್ ಆಡಿಯೊ ಮತ್ತು ಫಾಸ್ಟ್ ಚಾರ್ಜಿಂಗ್ ಬೆಂಬಲ ಸೇರಿದಂತೆ ಹಲವಾರು ಪ್ರಮುಖ ಆಡಿಯೋ ವೈಶಿಷ್ಟ್ಯಗಳನ್ನು ಹೊತ್ತು ಬಂದಿದೆ. ಹಾಗಾದರೆ, ನೂತನ Philips TAH8506BK ವೈರ್ಲೆಸ್ ಹೆಡ್ಫೋನ್ ಸಾಧನ ಹೇಗಿದೆ ಮತ್ತು ಬೆಲೆ ಎಷ್ಟು ಎಂಬ ಸಂಪೂರ್ಣ ವಿವರಗಳನ್ನು ಪರಿಶೀಲಿಸೋಣ ಬನ್ನಿ.
Philips TAH8506BK ವೈರ್ಲೆಸ್ ಹೆಡ್ಫೋನ್ ವೈಶಿಷ್ಟ್ಯಗಳು.
ನೂತನ Philips TAH8506BK ವೈರ್ಲೆಸ್ ಹೆಡ್ಫೋನ್ ಸಾಧನವು ಮಡಚಬಹುದಾದ ಮತ್ತು ಹೊಂದಾಣಿಕೆ ಮಾಡಬಹುದಾದ ಇಯರ್ ಕಪ್ಗಳನ್ನು ಹೊಂದಿರುವ ಪ್ರೀಮಿಯಂ ವಿನ್ಯಾಸವನ್ನು ಹೊಂದಿದೆ. ವಾಲ್ಯೂಮ್ ಕಂಟ್ರೋಲ್ ಮತ್ತು ಫೋನ್ ಕಾಲ್ ಮಾಡಲು ಸೇರಿದಂತೆ ಹಲವಾರು ಕಾರ್ಯಗಳನ್ನು ನಿರ್ವಹಿಸಲು ಸ್ವೈಪ್ ಟಚ್ ಕಂಟ್ರೋಲ್ಗಳನ್ನು ಈ ಇಯರ್ ಕಪ್ಗಳು ಹೊಂದಿವೆ. ಈ Philips TAH8506BK ಹೆಡ್ಫೋನ್ ಸಾಧನದಲ್ಲಿ 40mm ಆಡಿಯೋ ಡ್ರೈವರ್ಗಳನ್ನು ಅಳವಡಿಸಲಾಗಿದ್ದು, ಇವು ಹೈ-ರೆಸ್ ಆಡಿಯೊಗೆ ಬೆಂಬಲ ನೀಡಲಿವೆ. ಇಷ್ಟೇ ಅಲ್ಲದೇ, ಬಾಸ್, ವಾಯ್ಸ್, ಪವರ್ ಮತ್ತು ಟ್ರಾವೆಲ್ ಆಡಿಯೋಗೆ ಬೆಂಬಲವನ್ನು ಹೊಂದಿರುವ ಈ ಹೆಡ್ಫೋನ್ನಲ್ಲಿ 4 EQ ಸ್ಟೆಪ್ಸ್ಗಳನ್ನು ಪ್ರಿಸೆಟ್ ಮಾಡಲಾಗಿದೆ ಎಂದು ಕಂಪೆನಿ ತಿಳಿಸಿದೆ.
ಈ ಹೊಸ Philips TAH8506BK ವೈರ್ಲೆಸ್ ಹೆಡ್ಫೋನ್ ಸಾಧನವು ಅಡಾಪ್ಟಿವ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ ಪ್ರೊ (ANC) ಫೀಚರ್ ಹೊಂದಿರುವುದು ಇದರ ಪ್ರಮುಖ ವಿಶೇಷತೆಗಳಲ್ಲಿ ಒಂದಾಗಿದ್ದು, ಹೊಂದಾಣಿಕೆ ಮಾಡಬಹುದಾದ ಆಂಬಿಯೆಂಟ್ ಮೋಡ್ ಬಳಕೆದಾರರಿಗೆ ಅವರ ಆದ್ಯತೆಗೆ ಅನುಗುಣವಾಗಿ ಹಿನ್ನೆಲೆ ಧ್ವನಿಯನ್ನು ಅನುಮತಿಸುತ್ತದೆ. ಇದರ ಬ್ಲೂಟೂತ್ ಮಲ್ಟಿಪಾಯಿಂಟ್ ಕನೆಕ್ಟಿವಿಟಿ ಫೀಚರ್ ಏಕಕಾಲದಲ್ಲಿ ಎರಡು ಡಿವೈಸ್ಗಳಿಗೆ ಅನುವು ಮಾಡಿಕೊಡುತ್ತದೆ. ಬ್ಯಾಟರಿ ವಿಭಾಗದಲ್ಲಿ, 15 ನಿಮಿಷಗಳಲ್ಲಿ 8 ಗಂಟೆಗಳವರೆಗೆ ಪ್ಲೇ ಟೈಮ್ ನೀಡುವ ಈ ಸಾಧನವು ಒಂದೇ ಚಾರ್ಜ್ನಲ್ಲಿ 60 ಗಂಟೆಗಳವರೆಗೆ ಪ್ಲೇಬ್ಯಾಕ್ ಸಾಮರ್ಥ್ಯವನ್ನು ಹೊಂದಿದೆ. ಮತ್ತು ಈ ಸಾಧನವನ್ನು ANC ಇಲ್ಲದೆ ಆಕ್ಟಿವ್ ಮಾಡಿದರೆ 45 ಗಂಟೆಗಳವರೆಗಿನ ಬ್ಯಾಟರಿ ಬಾಳಿಕೆ ನೀಡಲಿದೆ
Philips TAH8506BK ವೈರ್ಲೆಸ್ ಹೆಡ್ಫೋನ್ ಬೆಲೆ.
ಭಾರತದಲ್ಲಿ ಹೊಸ Philips TAH8506BK ವೈರ್ಲೆಸ್ ಹೆಡ್ಫೋನ್ ಸಾಧನವನ್ನು 10,999 ರೂ. ಬೆಲೆಯಲ್ಲಿ ಪರಿಚಯಿಸಲಾಗಿದೆ. ದೇಶದಲ್ಲಿ ಪ್ರಮುಖ ಆನ್ಲೈನ್ ಮತ್ತು ಆಫ್ಲೈನ್ ಸ್ಟೋರ್ಗಳ ಮೂಲಕಇಂ ದಿನಿಂದಲೇ Philips TAH8506BK ವೈರ್ಲೆಸ್ ಹೆಡ್ಫೋನ್ ಸಾಧನವನ್ನು ಖರೀದಿಸಲು ಸಾಧ್ಯವಿದೆ ಎಂದು ಕಂಪೆನಿ ತಿಳಿಸಿದೆ. ಈಗಾಗಲೇ ದೇಶದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ Philips TAH6506BK, TAA4216BK, TAH4205XTBK ವೈರ್ಲೆಸ್ ಮತ್ತು TAUH201BK ವೈರ್ಲೆಸ್ ಹೆಡ್ಫೋನ್ಗಳ ಜೊತೆಗೆ Philips TAH8506BK ವೈರ್ಲೆಸ್ ಹೆಡ್ಫೋನ್ ಕೂಡ ಸೇರಿಕೊಂಡಿದೆ. ಈ ಮೇಲಿನ ಎಲ್ಲಾ ಸಾಧನಗಳು ಕ್ರಮವಾಗಿ 11,999 ರೂ, 8,999 ರೂ, 4,999 ರೂ, ಮತ್ತು 1,990 ರೂ. ಗಳ ಬೆಲೆಯಲ್ಲಿ ಖರೀದಿಗೆ ಲಭ್ಯವಿವೆ.
Philips Tah8506bk Headphone With Anc Support Launched In India.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 01:47 pm
Mangalore Correspondent
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm