ಬ್ರೇಕಿಂಗ್ ನ್ಯೂಸ್
10-01-23 06:47 pm Source: Vijayakarnataka ಡಿಜಿಟಲ್ ಟೆಕ್
ಆಡಿಯೋ ಉತ್ಪನ್ನಗಳ ಜನಪ್ರಿಯ ಟೆಕ್ ಬ್ರ್ಯಾಂಡ್ Noise ಕಂಪೆನಿ ದೇಶದ ಮಾರುಕಟ್ಟೆಗೆ ತನ್ನ ಬಹುನಿರೀಕ್ಷಿತ 'NoiseFit Twist' ಸ್ಮಾರ್ಟ್ವಾಚ್ ಸಾಧನವನ್ನು ಇತ್ತೀಚಿಗಷ್ಟೇ ಪರಿಚಯಸಿದೆ. ಕೇವಲ 1,999 ರೂ. ಬೆಲೆಯಲ್ಲಿ ಬಿಡುಗಡೆಯಾಗಿರುವ ಈ NoiseFit Twist ಸ್ಮಾರ್ಟ್ವಾಚ್ ಸಾಧನವು ದೇಶದಲ್ಲಿ ಇದೇ ಜನವರಿ 12 ರಿಂದ ಮಾರಾಟಕ್ಕೆ ಬರುತ್ತಿದ್ದು, ಕಡಿಮೆ ಬೆಲೆ ಮತ್ತು ಉತ್ತಮ ವೈಶಿಷ್ಟ್ಯಗಳಿಂದ ದೇಶದಾದ್ಯಂತ ಸ್ಮಾರ್ಟ್ವಾಚ್ ಪ್ರಿಯರ ಗಮನಸೆಳೆಯುತ್ತಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ಬಹುನಿರೀಕ್ಷಿತ ಹೊಸ 'NoiseFit Twist' ಸ್ಮಾರ್ಟ್ವಾಚ್ ಸಾಧನ ಹೇಗಿದೆ ಮತ್ತು ಏನೆಲ್ಲಾ ಪ್ರಮುಖ ವೈಶಿಷ್ಟ್ಯಗಳನ್ನು ತಿಳಿಯೋಣ ಬನ್ನಿ.
NoiseFit Twist ಸ್ಮಾರ್ಟ್ವಾಚ್ ವೈಶಿಷ್ಟ್ಯಗಳು.
Noise ಕಂಪೆನಿಯ ಹೊಸ NoiseFit Twist ಸ್ಮಾರ್ಟ್ವಾಚ್ ಸಾಧನವು ವೃತ್ತಾಕಾರದ ಡಯಲ್ ವಿನ್ಯಾಸವನ್ನು ಹೊಂದಿರುವ ಮೆಟಾಲಿಕ್ ಯುನಿಬಾಡಿ ಹಾಗೂ IP68-ರೇಟೆಡ್ ಡಸ್ಟ್ ಮತ್ತು ವಾಟರ್ ಪ್ರೂಫ್ ವೈಶಿಷ್ಟ್ಯಗಳಲ್ಲಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್ವಾಚ್ನಲ್ಲಿ 1.38 ಇಂಚಿನ TFT LCD ಡಿಸ್ಪ್ಲೇ ಅಳವಡಿಸಲಾಗಿದ್ದು, ಇದು 550 ನಿಟ್ಸ್ ಗರಿಷ್ಟ ಬ್ರೈಟ್ನೆಸ್ ಮತ್ತು 100 ಕ್ಕೂ ಹೆಚ್ಚು ಕಸ್ಟಮೈಸ್ಡ್ ವಾಚ್ ಫೇಸ್ಗಳೊಂದಿಗೆ ಬಂದಿದೆ. ಈ ಸ್ಮಾರ್ಟ್ಚಾಚ್ನಲ್ಲಿ ಇನ್ಬಿಲ್ಟ್ ಸ್ಪೀಕರ್ ಮತ್ತು ಮೈಕ್ರೊಫೋನ್ ಜೊತೆಗೆ 24 × 7 ಹೃದಯ ಬಡಿತದ ಮೇಲ್ವಿಚಾರಣೆ, SpO2 ಸೆನ್ಸಿಂಗ್, ಸ್ಲೀಪ್ ಟ್ರ್ಯಾಕಿಂಗ್, ಒತ್ತಡ ನಿರ್ವಹಣೆ, ಸ್ತ್ರೀ ಸೈಕಲ್ ಟ್ರ್ಯಾಕರ್ ಮತ್ತು 100 ವರ್ಕೌಟ್ ವಿಧಾನಗಳ ಬೆಂಬಲದಂತಹ ಪ್ರಮುಖ ವೈಶಿಷ್ಟ್ಯಗಳಿವೆ.
ಈ NoiseFit Twist ಸ್ಮಾರ್ಟ್ವಾಚ್ ಸಾಧನವು ಸಿಂಕ್ ತಂತ್ರಜ್ಞಾನದೊಂದಿಗೆ ಬ್ಲೂಟೂತ್ ಕಾಲಿಂಗ್ ಬೆಂಬಲವನ್ನು ಹೊಂದಿದೆ. ಇದರಿಂದ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ಸಾಧ್ಯವಿದೆ ಹಾಗೂ ಕಾಲ್ ಹಿಸ್ಟರಿ ಮತ್ತು ಡಯಲ್ ಪ್ಯಾಡ್ಗೆ ಪ್ರವೇಶ ನೀಡುತ್ತದೆ. ಈ ಸ್ಮಾರ್ಟ್ವಾಚ್ ಮೂಲಕವೇ ಸಂಗೀತ ನಿಯಂತ್ರಣ, ತ್ವರಿತ ಪ್ರತ್ಯುತ್ತರ ಇನ್ಬಿಲ್ಟ್ ಕ್ಯಾಲ್ಕುಲೇಟರ್, ನೋಟಿಫಿಕೇಶನ್ ಡಿಸ್ಪ್ಲೇ , ವೆದರ್ ಮತ್ತು ಸ್ಟಾಕ್ ಅಪ್ಡೇಟ್, ಫೋಟೋಸ್ ಮತ್ತು ವೀಡಿಯೊಗಳಿಗಾಗಿ ಕ್ಯಾಮರಾಗೆ ಪ್ರವೇಶ ನೀಡುವ ಕಂಟ್ರೋಲ್ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಡಿಎನ್ಡಿ, ಸ್ಪೀಡ್ ಕನೆಕ್ಟಿವಿಟಿ ಮತ್ತು ತಡೆರಹಿತ ಕರೆ ಸಂಪರ್ಕ ನೀಡುವ ಈ ಸ್ಮಾರ್ಟ್ವಾಚ್ ಏಳು ದಿನಗಳ ಬ್ಯಾಟರಿ ಬ್ಯಾಕಪ್ ಒದಗಿಸಲಿದೆ ಎಂದು ಕಂಪೆನಿ ಹೇಳಿಕೊಂಡಿದೆ
NoiseFit Twist ಸ್ಮಾರ್ಟ್ವಾಚ್ ಬೆಲೆ ಮತ್ತು ಲಭ್ಯತೆ.
ಮೊದಲೇ ಹೇಳಿದಂತೆ, ಭಾರತದಲ್ಲಿ ಈ NoiseFit Twist ಸ್ಮಾರ್ಟ್ವಾಚ್ ಕೇವಲ 1,999 ರೂ.ಬೆಲೆಗೆ ಬಿಡುಗಡೆಯಾಗಿದ್ದು, ಇದೇ ಜನವರಿ 12 ರಿಂದ Noise ಕಂಪೆನಿಯ gonoise.com ಮತ್ತು ಜನಪ್ರಿಯ ಇ-ಕಾಮರ್ಸ್ ಜಾಲತಾಣ ಅಮೆಜಾನ್ ಮೂಲಕ ಮೊದಲ ಬಾರಿಗೆ ಮಾರಾಟಕ್ಕೆ ಬರುತ್ತಿದೆ. ಗ್ರಾಹಕರು ಟ್ವಿಸ್ಟ್ ಜೆಟ್ ಬ್ಲಾಕ್, ಸಿಲ್ವರ್ ಗ್ರೇ, ರೋಸ್ ಪಿಂಕ್, ಸ್ಪೇಸ್ ಬ್ಲೂ ಮತ್ತು ಗೋಲ್ಡ್ ವೈನ್ ಬಣ್ಣಗಳಲ್ಲಿ ಈ ಸ್ಮಾರ್ಟ್ವಾಚ್ ಸಾಧನವನ್ನು ಖರೀದಿಸಬಹುದು.
Noisefit Twist Smartwatch Launched At An Introductory Price Of Rs 1999.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 04:11 pm
Mangalore Correspondent
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm