ಬ್ರೇಕಿಂಗ್ ನ್ಯೂಸ್
31-12-22 07:05 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ ವೇರಿಯಬಲ್ ಟೆಕ್ ಬ್ರ್ಯಾಂಡ್ಗಳಲ್ಲಿ ಒಂದಾದ Pebble ದೇಶದ ಮಾರುಕಟ್ಟೆಗೆ ಇಂದು ತನ್ನ ಬಹುನಿರೀಕ್ಷಿತ "Pebble Cosmos Engage" ಸ್ಮಾರ್ಟ್ವಾಚ್ ಸಾಧನವನ್ನು ಪರಿಚಯಿಸಿದೆ. ಕಳೆದ ಹಲವು ದಿನಗಳಿಂದ ವದಂತಿಗಳಿಂದಲೇ ಸುದ್ದಿಯಾಗಿದ್ದ ಈ ಹೊಸ 'Pebble Cosmos Engage' ಸ್ಮಾರ್ಟ್ವಾಚ್ ಸಾಧನವು ನಿರೀಕ್ಷೆಯಂತೆಯೇ ಹಲವಾರು ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊತ್ತು ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ನೋಡಲು 'ಆಪಲ್ ವಾಚ್ ಅಲ್ಟ್ರಾ' ಸ್ಮಾರ್ಟ್ವಾಚ್ ಸಾಧನದ ರೀತಿಯಲ್ಲಿಯೇ ಮಾರುಕಟ್ಟೆಗೆ ಕಾಲಿಟ್ಟಿದೆ. ಹಾಗಾದರೆ, ಹೊಸ Pebble Cosmos Engage ಸ್ಮಾರ್ಟ್ವಾಚ್ ಸಾಧನ ಹೇಗಿದೆ? ಮತ್ತು ಬೆಲೆ ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.
Pebble Cosmos Engage ಸ್ಮಾರ್ಟ್ವಾಚ್ ವೈಶಿಷ್ಟ್ಯಗಳು
ನೋಡಲು 'ಆಪಲ್ ವಾಚ್ ಅಲ್ಟ್ರಾ' ಸ್ಮಾರ್ಟ್ವಾಚ್ನಂತೆಯೇ ವಿನ್ಯಾಸವನ್ನು ಹೊಂದಿರುವ ಈ ಹೊಸ Pebble Cosmos Engage ಸ್ಮಾರ್ಟ್ವಾಚ್ ಸಾಧನವನ್ನು ಮೆಟಲ್ ಶಾಕ್ ಫ್ರೂಫ್ ಕಾಸ್ಮೊಸ್ ಎಂಗೇಜ್ ಝಿಂಕ್ ಮಿಶ್ರಲೋಹದಿಂದ ತಯಾರಿಸಲಾಗಿದೆ ಎಂದು Pebble ಕಂಪೆನಿ ತಿಳಿಸಿದೆ. ಇದರಿಂದ ಈ ಸ್ಮಾರ್ಟ್ವಾಚ್ ಬಿ ಆಘಾತಕ್ಕೆ ಒಳಗಾದರೂ ಸಹ ಗಟ್ಟಿಯಾಗಿರಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಈ ಸ್ಮಾರ್ಟ್ವಾಚ್ನಲ್ಲಿ 1.95-ಇಂಚಿನ IPS ಡಿಸ್ಪ್ಲೇಯನ್ನು ಅಳವಡಿಸಲಾಗಿದ್ದು, ಈ ಡಿಸ್ಪ್ಲೇಯು 320x385 ಪಿಕ್ಸೆಲ್ಗಳ ಸ್ಕ್ರೀನ್ ರೆಸಲ್ಯೂಶನ್ ಮತ್ತು 600 ನಿಟ್ಸ್ ಗರಿಷ್ಟ ಬ್ರೈಟ್ನೆಸ್ ಸಾಮರ್ಥ್ಯದಲ್ಲಿದೆ. ಇಷ್ಟೇ ಅಲ್ಲದೇ, ಈ ಸ್ಮಾರ್ಟ್ವಾಚ್ ವಾಟರ್ ಮತ್ತು ಡಸ್ಟ್ ರೆಸಿಸ್ಟೆನ್ಸಿಗಾಗಿ IP67 ರೇಟಿಂಗ್ ಹೊಂದಿದೆ.
ಕಾರ್ಯನಿರ್ವಹಣೆಯಲ್ಲಿ, ಈ Pebble Cosmos Engage ಸ್ಮಾರ್ಟ್ವಾಚ್ ಸಾಧನವು AI ವಾಯ್ಸ್ ಅಸಿಸ್ಟೆಂಟ್, ಬ್ಲೂಟೂತ್ ಕಾಲ್, ವಯರ್ಲೆಸ್ ಚಾರ್ಜಿಂಗ್, ಸ್ಲೀಪ್ ಟ್ರ್ಯಾಕಿಂಗ್ ಮತ್ತು ಆಲ್ ಇನ್ ಒನ್ ಹೆಲ್ತ್ ಸೂಟ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಬ್ಲಡ್ ಆಕ್ಸಿಜನ್ ಲೆವೆಲ್, ರಕ್ತದೊತ್ತಡ ಮತ್ತು ಹೃದಯ ಬಡಿತವನ್ನು ಅಳೆಯುವ ಸೆನ್ಸಾರ್ಗಳನ್ನು ಹೊಂದಿರುವ ಈ ಸಾಧನವು ಬಳಕೆದಾರರ ಆರೋಗ್ಯದ ಬಗ್ಗೆ ಉತ್ಕೃಷ್ಟ ಮಟ್ಟದಲ್ಲಿ ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನುಳಿದಂತೆ, ಬ್ಲೂಟೂತ್ 5.0, ಮಲ್ಟಿ ಸ್ಪೋರ್ಟ್ಸ್ ಮೋಡ್, ಆಕ್ಟಿವಿಟಿ ಮತ್ತು ಹೆಲ್ತ್ ಟ್ರ್ಯಾಕಿಂಗ್ ವೈಶಿಷ್ಟ್ಯಗಳನ್ನು ಹೊಂದಿರುವ ಈ ಸಾಧನವು ಐದು ದಿನಗಳ ಬ್ಯಾಟರಿ ಅವಧಿ ಹೊಂದಿದೆ ಎಂದು ಹೇಳಲಾಗಿದೆ.
Pebble Cosmos Engage ಸ್ಮಾರ್ಟ್ವಾಚ್ ಬೆಲೆ ಎಷ್ಟು?
ನೋಡಲು 'ಆಪಲ್ ವಾಚ್ ಅಲ್ಟ್ರಾ' ಸ್ಮಾರ್ಟ್ವಾಚ್ನಂತೆಯೇ ವಿನ್ಯಾಸವನ್ನು ಹೊಂದಿದ್ದರೂ ಸಹ ಈ ಸ್ಮಾರ್ಟ್ವಾಚ್ ದೇಶದಲ್ಲಿ ಬಜೆಟ್ ಬೆಲೆಯಲ್ಲಿ ಬಿಡುಗಡೆಯಾಗಿದೆ. ದೇಶದಲ್ಲಿ Pebble Cosmos Engage ಸ್ಮಾರ್ಟ್ವಾಚ್ ಸಾಧನವನ್ನು ಸೀಮಿತ ಕೊಡುಗೆಯಾಗಿ ಕೇವಲ 3,999 ರೂ.ಬೆಲೆಯಲ್ಲಿ (MRP 7,499 ರೂ.) ಮಾರಾಟಕ್ಕೆ ತರಲಾಗಿದೆ ಎಂದು Pebble ಕಂಪೆನಿ ಹೇಳಿಕೊಂಡಿದೆ. ಇದಲ್ಲದೆ ಈ Pebble Cosmos Engag ಸ್ಮಾರ್ಟ್ವಾಚ್ ಮೇಲೆ ಒಂದು ವರ್ಷದ ಬದಲಿ ಗ್ಯಾರಂಟಿಯನ್ನು ಸಹ ನೀಡುವುದಾಗಿ ಕಂಪೆನಿ ತಿಳಿಸಿದೆ. ಗ್ರಾಹಕರು ಕಂಪೆನಿಯ ಅಧಿಕೃತ ವೆಬ್ಸೈಟ್ ಮೂಲಕ ಸಾಲ್ಮಂಡರ್ ಆರೆಂಜ್, ಸ್ಟಾರ್ಲೈಟ್, ಮಿಡ್ನೈಟ್ ಬ್ಲ್ಯಾಕ್ ಮತ್ತು ಸೆಲೆಸ್ಟಿಯಲ್ ಬ್ಲೂ ನಾಲ್ಕು ಬಣ್ಣಗಳಲ್ಲಿ ಈ ಸಾಧನವನ್ನು ಖರೀದಿಸಬಹುದು.
Pebble Cosmos Engage Smartwatch Launched In India Full Details.
29-04-25 10:45 pm
Bangalore Correspondent
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
Praveen Nettaru, Mohsin Shukur, Karwar Police...
29-04-25 01:04 pm
29-04-25 03:45 pm
HK News Desk
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
29-04-25 11:00 pm
Mangalore Correspondent
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
Highland Hospital Mangalore, FIR, Anti Nation...
29-04-25 11:38 am
29-04-25 09:59 pm
Mangalore Correspondent
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm