ಬ್ರೇಕಿಂಗ್ ನ್ಯೂಸ್
30-12-22 07:02 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ ಸ್ಮಾರ್ಟ್ಫೋನ್ ಬ್ರ್ಯಾಂಡ್ Redmi ಇತ್ತೀಚೆಗಷ್ಟೇ ಚೀನಾದಲ್ಲಿ ಪರಿಚಯಿಸಿರುವ Redmi K60 ಸರಣಿ ಸ್ಮಾರ್ಟ್ಫೋನ್ಗಳು ಭಾರತದಲ್ಲಿ Poco F5 ಸರಣಿ ಸ್ಮಾರ್ಟ್ಫೋನ್ಗಳಾಗಿ ಬಿಡುಗಡೆಯಾಗಲಿವೆ ಎಂಬ ಭರ್ಜರಿ ಸಿಹಿಸುದ್ದಿ ದೊರೆತಿದೆ. ಚೀನಾದಲ್ಲಿ Redmi K60 ಸರಣಿಯಲ್ಲಿ Redmi K60, Redmi K60e ಮತ್ತು Redmi K60 Pro ಎಂಬ ಮೂರು ಸ್ಮಾರ್ಟ್ಫೋನ್ಗಳನ್ನು ಇತ್ತೀಚಿಗಷ್ಟೇ ಪರಿಚಯಿಸಲಾಗಿದ್ದು, ಇದರಲ್ಲಿ Redmi K60 Pro ಸ್ಮಾರ್ಟ್ಫೋನ್ Poco F5 Pro ಹೆಸರಿನಲ್ಲಿ ರೀಬ್ರಾಂಡೆಡ್ ಆಗಿ ಬಿಡುಗಡೆಯಾಗಬಹುದು ಎಂದು ಜನಪ್ರಿಯ ಟಿಪ್ಸ್ಟಾರ್ Kacper Skrzypek ಅವರು ಹೇಳಿದ್ದಾರೆ. ಇದರಿಂದ ದೇಶದಲ್ಲಿ ಮತ್ತೊಂದು ಬಜೆಟ್ ಬೆಲೆಯ ಪ್ರೀಮಿಯಂ ಸ್ಮಾರ್ಟ್ಫೋನ್ ಒಂದು ಶೀಘ್ರದಲ್ಲೇ ಬಿಡುಗಡೆಯಾಗುವ ಸೂಚನೆ ದೊರೆತಿದೆ. ಇದೇ ವಾರವಷ್ಟೇ ಬಿಡುಗಡೆಯಾಗಿರುವ ಹೊಸ Redmi K60 ಸರಣಿಯ ಈ ಮೇಲಿನ ಮೂರು ಸ್ಮಾರ್ಟ್ಫೋನ್ಗಳು ಚೀನಾ ಮಾರುಕಟ್ಟೆಯಲ್ಲಿ ಅಬ್ಬರಿಸುತ್ತಿರುವುದರಿಂದ ಈ ಸುದ್ದಿ ಇದೀಗ ವೈರಲ್ ಆಗಿದೆ.
2023ರ ಹೊಸ ವರ್ಷಕ್ಕೂ ಆರಂಭಕ್ಕೂ ಮುನ್ನವೇ ಚೀನಾದಲ್ಲಿ ಜನಪ್ರಿಯ ಸ್ಮಾರ್ಟ್ಫೋನ್ ಬ್ರ್ಯಾಂಡ್ ಶಿಯೋಮಿಯ ಬಹುನಿರೀಕ್ಷಿತ 'Redmi K60' ಸರಣಿ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಈಗಾಗಲೇ ವಿಶ್ವದ ಪ್ರೀಮಿಯಂ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ 'Redmi K' ಸರಣಿ ಸ್ಮಾರ್ಟ್ಫೋನ್ಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದು, ಅತ್ಯಂತ ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ವೈಶಿಷ್ಟ್ಯಗಳ ಮೂಲಕ ಗ್ರಾಹಕರ ಸೆಳೆಯುತ್ತಿವೆ. ಇದೀಗ Redmi K60 ಸರಣಿಯಲ್ಲಿ ಹೊಸದಾಗಿ Redmi K60, Redmi K60 Pro ಮತ್ತು Redmi K60E ಎಂಬ ಮೂರು ಸ್ಮಾರ್ಟ್ಫೋನ್ಗಳನ್ನು ಬಿಡುಗಡೆಗೊಳಿಸಿದ್ದು, ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಹೊಸ ವರ್ಷಕ್ಕೂ ಮುನ್ನವೇ ಭಾರಿ ಸಂಚಲನ ಸೃಷ್ಟಿಸಿವೆ. ಹಾಗಾದರೆ, ಹೊಸ Redmi K60 ಸರಣಿ ಸ್ಮಾರ್ಟ್ಫೋನ್ಗಳು ಹೇಗಿವೆ ಮತ್ತು ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
Redmi K60 Pro ಸ್ಮಾರ್ಟ್ಫೋನಿನ ವೈಶಿಷ್ಟ್ಯಗಳು
ನೂತನ Redmi K60 Pro ಸ್ಮಾರ್ಟ್ಫೋನ್ 1,440x3,200 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.67 ಇಂಚಿನ 2K ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ರೇಟ್ ಮತ್ತು 480Hz ಟಚ್ ಸ್ಯಾಂಪ್ಲಿಂಗ್ ರೇಟ್, HDR10+ ಬೆಂಬಲ ಮತ್ತು 1,400 ನಿಟ್ಸ್ ಗರಿಷ್ಠ ಬ್ರೈಟ್ನೆಸ್ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಹುಡ್ ಅಡಿಯಲ್ಲಿ, ಕ್ವಾಲ್ಕಾಮ್ AI ಎಂಜಿನ್ನೊಂದಿಗೆ ಜೋಡಿಸಲಾದ ಸ್ನಾಪ್ಡ್ರಾಗನ್ 8 Gen 2 SoC ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸಲಿರುವ Redmi K60 Pro ಸ್ಮಾರ್ಟ್ಫೋನ್ ಬರೋಬ್ಬರಿ 16GB RAM ಮತ್ತು 512GB ಇನ್ಬಿಲ್ಟ್ ಸ್ಟೋರೇಜ್ ಹೊಂದಿದೆ. ಹಾಗೂ ಆಂಡ್ರಾಯ್ಡ್ 13 ಆಧಾರಿತ MIUI 14 ನಲ್ಲಿ ರನ್ ಆಗಲಿದೆ.
ಕ್ಯಾಮೆರಾ ವಿಭಾಗದಲ್ಲಿ, Redmi K60 Pro ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಇದು 50 ಮೆಗಾಪಿಕ್ಸೆಲ್ ಸೋನಿ IMX800 ಸೆನ್ಸಾರ್ ಲೆನ್ಸ್ ಜೊತೆಗೆ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ಗಳನ್ನು ಹೊಂದಿದೆ. ಸೆಲ್ಫಿಗಳಿಗಾಗಿ, 16 ಮೆಗಾಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ. ಇನ್ನುಳಿದಂತೆ, 120W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 30W ವೈರ್ಲೆಸ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸುವ 5,000mAh ಸಾಮರ್ಥ್ಯದ ಬ್ಯಾಟರಿ, Wi-Fi 6, NFC ಮತ್ತು ಬ್ಲೂಟೂತ್ v5.3 ವಾಯರ್ಲೆಸ್, ಅಂಡರ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸಂವೇದಕ ಮತ್ತು ಡ್ಯುಯಲ್-ಸಿಮ್ 5G ವೈಶಿಷ್ಟ್ಯಗಳನ್ನು ಒಳಗೊಂಡಿದೆ.
Redmi K60 ಸ್ಮಾರ್ಟ್ಫೋನಿನ ವೈಶಿಷ್ಟ್ಯಗಳು
'Redmi K60' ಸರಣಿಯಲ್ಲಿ ಮೂಲ ಮಾದರಿಯ Redmi K60 ಸ್ಮಾರ್ಟ್ಫೋನ್ ಕೂಡ Redmi K60 Pro ನಂತೆಯೇ ಹಲವಾರು ಒಂದೇ ರೀತಿಯ ವೈಶಿಷ್ಟ್ಯಗಳನ್ನು ಹೊಂದಿದೆ. ಆದರೆ, ಈ ಸ್ಮಾರ್ಟ್ಫೋನ್ Snapdragon 8+ Gen 1 SoC ಪ್ರೊಸೆಸರ್ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದಲ್ಲದೇ, ಈ ಫೋನ್ 64-ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹಾಗೂ 67W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 30W ವೈರ್ಲೆಸ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗಿನ 5,500mAh ಬ್ಯಾಟರಿ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ರೆಡ್ಮಿ K60E ಸ್ಮಾರ್ಟ್ಫೋನಿನ ವೈಶಿಷ್ಟ್ಯಗಳು
Redmi K60E ಸ್ಮಾರ್ಟ್ಫೋನ್ ಕೂಡ Redmi K60E ಮತ್ತು Redmi K60 Pro ಸ್ಮಾರ್ಟ್ಫೋನ್ಗಳಂತೆಯೇ ಒಂದೇ ರೀತಿಯ ವೈಶಿಷ್ಟ್ಯಗಳನ್ನು ಹೊಂದಿದೆ. ಆದರೆ, ಈ ಸ್ಮಾರ್ಟ್ಫೋನ್ MediaTek ಡೈಮೆನ್ಸಿಟಿ 8200 ಪ್ರೊಸೆಸರ್ನಿಂದ ಚಾಲಿತವಾಗಿದೆ. ಕ್ಯಾಮೆರಾ ವಿಭಾಗದಲ್ಲಿ, ಈ ಹೊಸ Redmi K60E ಸ್ಮಾರ್ಟ್ಫೋನ್ OIS ಬೆಂಬಲದೊಂದಿಗೆ 48-ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು 67W ವೇಗದ ಚಾರ್ಜಿಂಗ್ಗೆ ಬೆಂಬಲದೊಂದಿಗೆ 5,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.
'Redmi K60' ಸರಣಿ ಸ್ಮಾರ್ಟ್ಫೋನ್ಗಳ ಬೆಲೆಗಳು
ಪ್ರಸ್ತುತ ಚೀನಾ ಮಾರುಕಟ್ಟೆಯಲ್ಲಿ ಮಾತ್ರ ಬಿಡುಗಡೆಯಾಗಿರುವ 'Redmi K60' ಸರಣಿಯಲ್ಲಿ Redmi K60 Pro ಟಾಪ್-ಆಫ್-ಲೈನ್ ಹ್ಯಾಂಡ್ಸೆಟ್ ಆಗಿದ್ದು, ಇದರ ಮೂಲಕ 8GB RAM + 128GB ಸ್ಟೋರೇಜ್ ಮಾದರಿ ಫೋನ್ CNY 3,299 (ಸುಮಾರು ರೂ. 40,000) ಬೆಲೆಯಿಂದ ಪ್ರಾರಂಭವಾಗುತ್ತದೆ. 16GB RAM + 512GB ಮೆಮೊರಿಯ ಇದರ ಅತ್ಯಂತ ದುಬಾರಿ ಮಾದರಿಯ ಬೆಲೆ CNY 4,599 (ಸುಮಾರು ರೂ. 55,000) ಗಳಾಗಿವೆ. ಇದೇ ರೀತಿ, Redmi K60 8GB RAM + 128GB ಸ್ಟೋರೇಜ್ ಮಾದರಿಗೆ CNY 2,499 (ಸುಮಾರು ರೂ. 30,000) ಹಾಗೂ 16GB RAM + 512GB ಸ್ಟೋರೇಜ್ ಮಾದರಿಗೆ CNY 3,599 (ಸುಮಾರು ರೂ. 43,000) ಬೆಲೆ ಇದ್ದರೆ, Redmi K60E 8GB RAM + 128GB ಸ್ಟೋರೇಜ್ ಮಾದರಿಯು CNY 2,199 (ಸುಮಾರು ರೂ. 26,000) ಬೆಲೆಯಲ್ಲಿ ಮತ್ತು 12GB RAM + 512GBಮಾದರಿಯು CNY 2,799 (ಸುಮಾರು ರೂ. 33,000) ಬೆಲೆಯಲ್ಲಿ ಬಿಡುಗಡೆಗೊಂಡಿದೆ.
Redmi K60 Might Launch Outside China As Poco F5 Pro.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 08:32 pm
Mangalore Correspondent
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm