ಬ್ರೇಕಿಂಗ್ ನ್ಯೂಸ್
24-12-22 07:44 pm Source: Vijayakarnataka ಡಿಜಿಟಲ್ ಟೆಕ್
ಭಾರತದ ಜನಪ್ರಿಯ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ Boult ತನ್ನ ಸ್ಮಾರ್ಟ್ವಾಚ್ಗಳ ಸಾಲಿಗೆ ಮತ್ತೊಂದು ಬಜೆಟ್ ಬೆಲೆಯ ಸ್ಮಾರ್ಟ್ವಾಚ್ ಒಂದನ್ನು ಪರಿಚಯಿಸಿದೆ. ಇತ್ತೀಚಿಗಷ್ಟೇ ಡ್ರಿಫ್ಟ್, ಕಾಸ್ಮಿಕ್ ಮತ್ತು ರಿಡ್ಜ್ ಸೇರಿದಂತೆ ಮೂರು ವಿಶೇಷ ಸ್ಮಾರ್ಟ್ವಾಚ್ಗಳನ್ನು ಬಿಡುಗಡೆಗೊಳಿಸಿದ್ದ Boult ಕಂಪೆನಿ ಇಂದು ದೇಶದಲ್ಲಿ Boult Rover ಎಂಬ ವಿಶೇಷ ಸ್ಮಾರ್ಟ್ವಾಚ್ ಸಾಧನವನ್ನು ಪರಿಚಯಿಸಿದ್ದು, ಈ ಸಾಧನವು 1.3 ಇಂಚಿನ ಅಮೋಲೆಡ್ ಡಿಸ್ಪ್ಲೇ, ಬ್ಲೂಟೂತ್ ಕಾಲಿಂಗ್ ಫೀಚರ್, 100 ಸ್ಪೋರ್ಟ್ಸ್ ಮೋಡ್ಗಳು ಮತ್ತು 10 ದಿನಗಳ ಬ್ಯಾಟರಿ ಬ್ಯಾಕ್ಅಪ್ ಸೇರಿದಂತೆ ಹಲವಾರು ಪ್ರಮುಖ ವೈಶಿಷ್ಟ್ಯಗಳನ್ನು ಹೊತ್ತು ಬಂದಿದೆ. ಹಾಗಾದರೆ, Boult ಕಂಪೆನಿ ಪರಿಚಯಿಸಿರುವ ಹೊಸ Boult Rover ಸ್ಮಾರ್ಟ್ವಾಚ್ ಹೇಗಿದೆ ಮತ್ತು ಬೆಲೆ ಎಷ್ಟು ಎಂಬುದನ್ನು ತಿಳಿಯೋಣ ಬನ್ನಿ.
Boult Rover ಸ್ಮಾರ್ಟ್ವಾಚ್ ವೈಶಿಷ್ಟ್ಯಗಳು
ದೇಶದಲ್ಲಿಂದು ಬಿಡುಗಡೆಯಾಗಿರುವ ಹೊಸ Boult Rover ಸ್ಮಾರ್ಟ್ವಾಚ್ ಬಾಡಿಯನ್ನು ಸತು ಮಿಶ್ರಲೋಹದಿಂದ ತಯಾರಿಸಲಾಗಿದ್ದು, ರೌಂಡ್ ಫೇಸ್ ಮಾದರಿಯಲ್ಲಿ ಪ್ರೀಮಿಯಂ ಲುಕ್ ಹೊಂದಿದೆ. ಈ ಸ್ಮಾರ್ಟ್ವಾಚ್ನ ಎರಡೂ ಬದಿಗಳಲ್ಲಿ ಎರಡು ಭೌತಿಕ ಬಟನ್ ಗಳನ್ನು ನೀಡಲಾಗಿರುವ ವಿನ್ಯಾಸವನ್ನು ನಾವು ನೋಡಬಹುದು. ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಹೊಂದಿರುವ ಈ Boult Rover ಸ್ಮಾರ್ಟ್ವಾಚ್ 1.3 ಇಂಚಿನಷ್ಟು ಚಿಕ್ಕದಾದ ಹಾಗೂ ಶಕ್ತಿಯುತವಾದ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇಯು 600nits ಬ್ರೈಟ್ನೆಸ್ ನೀಡಲಿದೆ ಎಂದು ಕಂಪೆನಿ ತಿಳಿಸಿದೆ. ಹಾಗೆಯೇ ಈ ವಾಚ್ನಲ್ಲಿ ನೋಟಿಫಿಕೇಶನ್ ಪಡೆಯಬಹುದು ಮತ್ತು ವಾಯ್ಸ್ ಕಂಟ್ರೋಲ್ ಮೂಲಕ ಕೆಲ ವೈಶಿಷ್ಟ್ಯಗಳನ್ನು ನಿಯಂತ್ರಿಸಬಹುದು ಎಂದು ಕಂಪೆನಿ ಹೇಳಿಕೊಂಡಿದೆ.
ಈ ಹೊಸ Boult Rover ಸ್ಮಾರ್ಟ್ವಾಚ್ ಕಾರ್ಯನಿರ್ವಹಣೆಯಲ್ಲಿ, 150 ಕ್ಲೌಡ್ ವಾಚ್ ಫೇಸ್ ಆಯ್ಕೆಗಳು ಮತ್ತು ಓಟ, ಈಜು, ನಡಿಗೆ, ಯೋಗ, ರೋಪ್ ಸ್ಕಿಪ್ಪಿಂಗ್ ಮತ್ತು ಹೆಚ್ಚಿನ ದೈಹಿಕ ಚಟುವಟಿಕೆಗಳ ನಿರ್ವಹಣೆಗಾಗಿ 100 ಸ್ಪೋರ್ಟ್ಸ್ ಮೋಡ್ ಆಯ್ಕೆಗಳಿವೆ. ಈ ಸ್ಮಾರ್ಟ್ವಾಚ್ ಬ್ಲೂಟೂತ್ ಕಾಲಿಂಗ್ ಫೀಚರ್ ಸಹ ಬೆಂಬಲಿಸಲಿದ್ದು, ಸ್ಥಿರವಾದ ಕರೆಯನ್ನು ಖಚಿತಪಡಿಸಿಕೊಳ್ಳಲು ಸಿಂಗಲ್ ಚಿಪ್ ಬೆಂಬಲಿಸಲಿದೆ ಎಂದು ಕಂಪೆನಿ ತಿಳಿಸಿದೆ. ಇನ್ನುಳಿದಂತೆ ಹೃದಯ ಬಡಿತದ ಸೆನ್ಸರ್, SpO2 ಸೆನ್ಸರ್, ನಿದ್ರೆ ಟ್ರ್ಯಾಕರ್ ಸೇರಿದಂತೆ ಇನ್ನೂ ಹತ್ತು ಹಲವಾರು ಆರೋಗ್ಯ ಸಂಬಂಧಿ ಮಾಹಿತಿಯನ್ನು ಈ ಸ್ಮಾರ್ಟ್ವಾಚ್ ಟ್ರ್ಯಾಕ್ ಮಾಡುತ್ತದೆ. ಹಾಗೆಯೇ, 10 ದಿನಗಳ ಬ್ಯಾಟರಿ ಬ್ಯಾಕ್ಅಪ್ ನೀಡಲಿರುವ ಈ ಸ್ಮಾರ್ಟ್ವಾಚ್ 2.5 ಗಂಟೆ ಸಮಯದಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ ಎಂದು ಕಂಪೆನಿ ತಿಳಿಸಿದೆ.
Boult Rover ಸ್ಮಾರ್ಟ್ವಾಚ್ ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Boult Rover ಸ್ಮಾರ್ಟ್ವಾಚ್ ಸಾಧನವನ್ನು 2,999 ರೂ. ಗಳ ಅತ್ಯುತ್ತಮ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸ್ಮಾರ್ಟ್ವಾಚ್ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಕ್ಲಾಸಿಕ್ ಸ್ವಿಚ್ ಆವೃತ್ತಿಯು ಚರ್ಮದ ಕಂದು ಪಟ್ಟಿಯ ಸ್ಮಾರ್ಟ್ವಾಚ್ ಹಾಗೂ ಫ್ಲಿಪ್ ಆವೃತ್ತಿಯಲ್ಲಿ ಕಪ್ಪು, ನೀಲಿ ಮತ್ತು ಹಸಿರು ಪಟ್ಟಿಯ ಬಣ್ಣಗಳಲ್ಲಿ Boult Rover ಸ್ಮಾರ್ಟ್ವಾಚ್ ಸಾಧನವನ್ನು ಖರೀದಿಸಬಹುದು. ವಿಶೇಷವೆಂದರೆ, ಈ ಎರಡೂ ಪಟ್ಟಿಗಳನ್ನು ಉಚಿತವಾಗಿ ನೀಡುವುದಾಗಿ Boult ಕಂಪೆನಿ ತಿಳಿಸಿದೆ. ನೀವು ಈ Boult Rover ಸ್ಮಾರ್ಟ್ವಾಚ್ ಸಾಧನವನ್ನು ಖರೀದಿಸಲು ಕಂಪೆನಿಯ ಅಧಿಕೃತ ವೆಬ್ಸೈಟ್ ಹಾಗೂ ಜನಪ್ರಿಯ ಇ-ಕಾಮರ್ಸ್ ತಾಣ ಫ್ಲಿಪ್ಕಾರ್ಟ್ ತಾಣಗಳಿಗೆ ಭೇಟಿ ನೀಡಬಹುದು.
Boult Rover Smartwatch With 1,3 Inch Amoled Display Launched In India.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 04:11 pm
Mangalore Correspondent
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm