ಬ್ರೇಕಿಂಗ್ ನ್ಯೂಸ್
20-12-22 07:13 pm Source: Vijayakarnataka ಡಿಜಿಟಲ್ ಟೆಕ್
ಭಾರತದಲ್ಲಿ ಇದೇ ಜನವರಿ 5 ರಂದು ಬಿಡುಗಡೆಯಾಗಲಿದೆ ಎನ್ನಲಾಗಿರುವ ಬಹುನಿರೀಕ್ಷಿತ Redmi Note 12 Pro+ 5G ಸ್ಮಾರ್ಟ್ಫೋನಿನ ಬೆಲೆ ಹಾಗೂ RAM ಮತ್ತು ಸ್ಟೋರೇಜ್ ವಿವರಗಳು ಇದೀಗ ಆನ್ಲೈನಿನಲ್ಲಿ ಸೋರಿಕೆಯಾಗಿವೆ. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಚೀನಾದಲ್ಲಿ ಬಿಡುಗಡೆಯಾಗಿದ್ದ Redmi Note 12 ಸರಣಿಯಲ್ಲಿ ಪ್ರೀಮಿಯಂ ಮಾದರಿಯಲ್ಲಿ Redmi Note 12 Pro+ 5G ಸ್ಮಾರ್ಟ್ಫೋನ್ ಬಿಡುಗಡೆಯಾಗಿತ್ತು. ಈ ಪ್ರೀಮಿಯಂ ಸ್ಮಾರ್ಟ್ಫೋನ್ ಇದೇ ಜನವರಿ 5 ರಂದು ದೇಶದಲ್ಲಿ ಬಿಡುಗಡೆಯಾಗಲಿದೆ ಎಂಬ ಅಧಿಕೃತ ಸೂಚನೆ ಇತ್ತೀಚಿಗಷ್ಟೇ ದೊರೆತಿತ್ತು. ಇದೀಗ ದೇಶದಲ್ಲಿ Redmi Note 12 Pro+ 5G ಸ್ಮಾರ್ಟ್ಫೋನಿನ ಬೆಲೆ ಎಷ್ಟಿರಬಹುದು ಮತ್ತು ಮಾರಾಟಕ್ಕೆ ಯಾವಾಗ ಬರಬಹುದು ಎಂಬ ಬಗ್ಗೆ ಮಾಹಿತಿಗಳು ಸೋರಿಕೆಯಾಗಿವೆ. ಈ ಕುರಿತಂತೆ ಸಂಪೂರ್ಣ ಮಾಹಿತಿ ಕೆಳಕಂಡಂತಿದೆ.
ಭಾರತದಲ್ಲಿ Redmi Note 12 Pro+ ಬೆಲೆ ಎಷ್ಟು? (ವದಂತಿ)
ಜನಪ್ರಿಯ ಹಾಗೂ ನಂಬಿಕಸ್ಥ ಟಿಪ್ಸ್ಟಾರ್ Paras Guglani (@passionategeekz) ಅವರು ಈ ಬಗ್ಗೆ ಮಾಹಿತಿ ಒದಗಿಸಿದ್ದು, ಭಾರತದಲ್ಲಿ Redmi Note 12 Pro+ 5G ಸ್ಮಾರ್ಟ್ಫೋನಿನ ಬೆಲೆ ವಿವರಗಳು ಮತ್ತು ಸ್ಟೋರೇಜ್ ಮಾದರಿಗಳ ಕುರಿತಂತೆ ಟ್ವೀಟ್ ಮಾಡಿ ತಿಳಿಸಿದ್ದಾರೆ. ಇವರ ಟ್ವೀಟ್ ಪ್ರಕಾರ, Redmi Note 12 Pro+ ಸ್ಮಾರ್ಟ್ಫೋನ್ ದೇಶದಲ್ಲಿ ಬೇಸ್ 6GB RAM + 128GB ಸ್ಟೋರೇಜ್ ಮಾದರಿಯಲ್ಲಿ 24,999 ರೂ.ಗೆ. 8GB RAM + 256GB ಸ್ಟೋರೇಜ್ ಮಾದರಿಯಲ್ಲಿ 26,999 ರೂ.ಗೆ, ಹಾಗೂ 12GB RAM + 256GB ಸ್ಟೋರೇಜ್ ಮಾದರಿಯಲ್ಲಿ 28,999 ರೂ.ಗೆ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ. ಈ ಬೆಲೆಗಳು ಬ್ಯಾಂಕ್ ಕೊಡುಗೆಗಳನ್ನು ಸಹ ಒಳಗೊಂಡಿವೆ ಎಂದು ಹೇಳಲಾಗಿದ್ದು, ಈ ಸ್ಮಾರ್ಟ್ಫೋನ್ ಜನವರಿ 11 ರಿಂದ ಮಾರಾಟವಾಗಲಿದೆ ಎಂದು ಹೇಳಿದ್ದಾರೆ.
ಭಾರತದಲ್ಲಿ Xiaomi 12i ಹೈಪರ್ಚಾರ್ಜ್?
ಇದೇ ಜನವರಿ 5 ರಂದು ಭಾರತಕ್ಕೆ ಬರಲಿದೆ ಎನ್ನಲಾಗಿರುವ Redmi Note 12 Pro+ ಸ್ಮಾರ್ಟ್ಫೋನನ್ನು ದೇಶದಲ್ಲಿ Xiaomi 12i ಹೈಪರ್ಚಾರ್ಜ್ ಎಂಬ ಹೆಸರಿನಲ್ಲಿ ಪರಿಚಯಿಸಲಾಗುತ್ತದೆ ಎಂಬ ಸುದ್ದಿ ಮಾರುಕಟ್ಟೆಯಲ್ಲಿ ಹರಿದಾಡುತ್ತಿದೆ. ಕಳೆದ ವರ್ಷ Redmi Note 11 Pro+ ಸ್ಮಾರ್ಟ್ಫೋನಿನ ಮರುಬ್ರಾಂಡೆಡ್ ಆವೃತ್ತಿಯಾಗಿ Xiaomi 11i ಹೈಪರ್ಚಾರ್ಜ್ ಸ್ಮಾರ್ಟ್ಫೋನನ್ನು ದೇಶದಲ್ಲಿ ಪರಿಚಯಿಸಲಾಗಿತ್ತು. ಇದೀಗ ಇದೇ ಮಾದರಿಯಲ್ಲಿ Redmi Note 12 Pro+ ಸ್ಮಾರ್ಟ್ಫೋನನ್ನು Xiaomi 12i ಹೈಪರ್ಚಾರ್ಜ್ ಎಂಬ ಹೆಸರಿನಲ್ಲಿ ಪರಿಚಯಿಸಲಾಗುತ್ತದೆ ಎಂದು ಹೇಳಲಾಗಿದೆ. MIUI ಪರೀಕ್ಷಕರಾಗಿರುವ Kacper Skrzypek ಅವರು ಕೂಡ, Redmi Note 12 Pro+ ಭಾರತಕ್ಕೆ Xiaomi 12i ಹೈಪರ್ಚಾರ್ಜ್ ಆಗಿ ಬರಲಿದೆ ಎಂದು ಟ್ವಿಟ್ಟರ್ನಲ್ಲಿ ಹೇಳಿಕೊಂಡಿದ್ದಾರೆ. ಆದರೆ, ಇದು ಅಧಿಕೃತವಾಗಿಲ್ಲ.
ಚೀನಾದಲ್ಲಿ ಬಿಡುಗಡೆಯಾಗಿರುವ Redmi Note 12 ಸರಣಿಯಲ್ಲಿ ಬಂದಿರುವ ಎಲ್ಲಾ ಸ್ಮಾರ್ಟ್ಫೋನ್ಗಳು 120Hz ರಿಫ್ರೆಶ್ ರೇಟ್ ಸಾಮರ್ಥ್ಯವಿರುವ OLED ಡಿಸ್ಪ್ಲೇಗಳೊಂದಿಗೆ ಬಂದಿವೆ Xiaomi Redmi Note 12 Pro ಸಾಧನಗಳಲ್ಲಿ ಇತ್ತೀಚಿನ MediaTek Dimensity 1080 ಚಿಪ್ಸೆಟ್ ಅನ್ನು ಪರಿಚಯಿಸಲಾಗಿದ್ದು, MIUI13 ಕಸ್ಟಮ್ ಸ್ಕಿನ್ ಔಟ್ ಆಫ್ ದಿ ಬಾಕ್ಸ್ ನಲ್ಲಿ ರನ್ ಆಗಲಿವೆ. Redmi Note 12, Redmi Note 12 Pro, ಮತ್ತು Redmi Note 12 Pro+ ಫೋನ್ಗಳು ಕ್ರಮವಾಗಿ 67W, 120W ಮತ್ತು 210W ವೇಗದ ಚಾರ್ಜಿಂಗ್ ಬೆಂಬಲಿಸಲಿವೆ. Redmi Note 12 ಸರಣಿಯಲ್ಲಿನ.ಈ ಎಲ್ಲಾ ಹೊಸ ಸಾಧನಗಳು 5G ಬೆಂಬಲವನ್ನು ಹೊಂದಿವೆ. ಕನೆಕ್ಟಿವಿಟಿ ವೈಶಿಷ್ಟ್ಯಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ 5.0, GPS ಮತ್ತು USB ಟೈಪ್-C ಚಾರ್ಜಿಂಗ್ ವೈಶಿಷ್ಟ್ಯಗಳಿವೆ.
Redmi Note 12 Pro 5g India Price, Ram And Storage Configurations Leaked.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 04:11 pm
Mangalore Correspondent
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm