ಬ್ರೇಕಿಂಗ್ ನ್ಯೂಸ್
19-12-22 06:39 pm Source: Vijayakarnataka ಡಿಜಿಟಲ್ ಟೆಕ್
ಭಾರತೀಯ ಸ್ಮಾರ್ಟ್ಫೋನ್ ಬ್ರ್ಯಾಂಡ್ Lava ದೇಶದಲ್ಲಿ ತನ್ನ ಬಹುನಿರೀಕ್ಷಿತ Lava X3 ಬಜೆಟ್ ಸ್ಮಾರ್ಟ್ಫೋನನ್ನು ಇಂದು ಬಿಡುಗಡೆಗೊಳಿಸಿದೆ. ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ಫೋನ್ ಒಂದನ್ನು ಹುಡುಕುತ್ತಿರುವ ಗ್ರಾಹಕರನ್ನು ಗುರಿಯಾಗಿಸಿಕೊಂಡು ಈ ಹೊಸ Lava X3 ಸ್ಮಾರ್ಟ್ಫೋನನ್ನು ಕೇವಲ 6,999 ರೂ.ಗಳ ಅತ್ಯುತ್ತಮ ಬೆಲೆಯಲ್ಲಿ ಪರಿಚಯಿಸಲಾಗಿದ್ದು, ಈ ಸ್ಮಾರ್ಟ್ಫೋನನ್ನು ಮುಂಗಡವಾಗಿ ಆರ್ಡರ್ ಮಾಡುವ ಗ್ರಾಹಕರಿಗೆ ಕಂಪೆನಿಯಿಂದ 2,999 ರೂಪಾಯಿ ಮೌಲ್ಯದ ಉಚಿತ ನೆಕ್ಬ್ಯಾಂಡ್ ಸಹ ನೀಡಲಾಗುವುದು ಎಂದು Lava ಕಂಪೆನಿ ತಿಳಿಸಿದೆ. !ಹಾಗಾದರೆ, ಹೊಸ Lava X3 ಸ್ಮಾರ್ಟ್ಫೋನ್ ಹೇಗಿದೆ?, ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
Lava X3 ಸ್ಮಾರ್ಟ್ಫೋನಿನ ವೈಶಿಷ್ಟ್ಯಗಳು
ನೂತನ Lava X3 ಸ್ಮಾರ್ಟ್ಫೋನಿನಲ್ಲಿ ವಾಟರ್ ಡ್ರಾಪ್ ನಾಚ್ ಶೈಲಿಯ 6.5 ಇಂಚಿನ (1600x720 ಪಿಕ್ಸೆಲ್ಸ್) IPS LCD ಡಿಸ್ಪ್ಲೇ ನೀಡಲಾಗಿದೆ. ಈ ಡಿಸ್ಪ್ಲೇಯು 60 Hz ರಿಫ್ರೆಶ್ ರೇಟ್ ಸಾಮರ್ಥ್ಯದಲ್ಲಿದೆ. ಇತ್ತ ಬ್ಯಾಕ್ ಪ್ಯಾನಲ್ನಲ್ಲಿ ಫಿಂಗರ್ಪ್ರಿಂಟ್ ಸೆನ್ಸಾರ್ ಅಳವಡಿಸಲಾಗಿದೆ. ಹುಡ್ ಅಡಿಯಲ್ಲಿ, ಬೇಸಿಕ್ ಮೀಡಿಯಾ ಟೆಕ್ ಹಿಲಿಯೊ A22 ಚಿಪ್ಸೆಟ್ ಜೊತೆಗೆ ಆಂಡ್ರಾಯ್ಡ್ 12 ಗೋ ಆವೃತ್ತಿಯಲ್ಲಿ ಕಾರ್ಯನಿರ್ವಹಿಸಲಿರುವ ಈ Lava X3 ಸ್ಮಾರ್ಟ್ಫೋನಿನಲ್ಲಿ 3GB RAM ಮತ್ತು 32GB ಆಂತರಿಕ ಸ್ಟೋರೇಜ್ ಸಾಮರ್ಥ್ಯವನ್ನು ನೀಡಲಾಗಿದೆ. ಹಾಗೆಯೇ, ಸ್ಮಾರ್ಟ್ಫೋನಿನ ಆಂತರಿಕ ಮೆಮೊರಿಯನ್ನು ಮೈಕ್ರೊ ಎಸ್ಡಿ ಕಾರ್ಡ್ ಮೂಲಕ 512GB ವರೆಗೆ ವಿಸ್ತರಿಸಕೊಳ್ಳಬಹುದಾದ ಆಯ್ಕೆ ಇದೆ.
ಕ್ಯಾಮೆರಾ ವಿಭಾಗದಲ್ಲಿ, Lava X3 ಸ್ಮಾರ್ಟ್ಫೋನ್ ಎಲ್ಇಡಿ ಫ್ಲ್ಯಾಶ್ ಜೊತೆಗೆ AI ಸಾಮರ್ಥ್ಯದ 8 ಮೆಗಾಪಿಕ್ಸೆಲ್ ಸೆನ್ಸಾರ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಸೆಲ್ಫಿಗಳಿಗಾಗಿ 5 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಈ ಸ್ಮಾರ್ಟ್ಫೋನ್ AI ಮೋಡ್, ಬ್ಯೂಟಿ ಮೋಡ್ ಮತ್ತು HDR ಮೋಡ್ ವೈಶಿಷ್ಟ್ಯಗಳನ್ನು ಹೊಂದಿದ್ದು, 1080p ವಿಡಿಯೋ ರೆಕಾರ್ಡಿಂಗ್ ಬೆಂಬಲಿಸುತ್ತದೆ ಎಂದು ಕಂಪೆನಿ ತಿಳಿಸಿದೆ. ಸಂಪರ್ಕ ಆಯ್ಕೆಗಳಲ್ಲಿ, 4G, ವೈ-ಫೈ, 3.5 ಎಂಎಂ ಹೆಡ್ಫೋನ್ ಜ್ಯಾಕ್, ಜಿಪಿಎಸ್, ಬ್ಲೂಟೂತ್ ವೈಶಿಷ್ಟ್ಯಗಳಿವೆ. ಬ್ಯಾಟರಿ ವಿಭಾಗದಲ್ಲಿ Lava X3 ಸ್ಮಾರ್ಟ್ಫೋನ್ 10W ಚಾರ್ಜಿಂಗ್ ಬೆಂಬಲಿಸುವ 4,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ.
Lava X3 ಸ್ಮಾರ್ಟ್ಫೋನಿನ ಬೆಲೆ ಮತ್ತು ಲಭ್ಯತೆ.
ಮೊದಲೇ ಹೇಳಿದಂತೆ, ಹೊಸ Lava X3 ಸ್ಮಾರ್ಟ್ಫೋನನ್ನು ಕೇವಲ 6,999 ರೂ.ಗಳ ಅತ್ಯುತ್ತಮ ಬೆಲೆಯಲ್ಲಿ ಪರಿಚಯಿಸಲಾಗಿದ್ದು, ಈ ಸ್ಮಾರ್ಟ್ಫೋನನ್ನು ಮುಂಗಡವಾಗಿ ಆರ್ಡರ್ ಮಾಡುವ ಗ್ರಾಹಕರಿಗೆ ಕಂಪೆನಿಯಿಂದ 2,999 ರೂಪಾಯಿ ಮೌಲ್ಯದ ಲಾವಾ ಪ್ರೊ ಬಡ್ಸ್ N11 ನೆಕ್ಬ್ಯಾಂಡ್ ಸಾಧನವನ್ನು ಉಚಿತವಾಗಿ ನೀಡಲಾಗುವುದು ಎಂದು Lava ಕಂಪೆನಿ ತಿಳಿಸಿದೆ. ಇನ್ನು ಇದೇ ಡಿಸೆಂಬರ್ 20 ರಿಂದ ದೇಶದಲ್ಲಿ ಮಾರಾಟಕ್ಕೆ ಬರಲಿರುವ ಈ Lava X3 ಸ್ಮಾರ್ಟ್ಫೋನನ್ನು ಆರ್ಕ್ಟಿಕ್ ಬ್ಲೂ, ಚಾರ್ಕೋಲ್ ಬ್ಲಾಕ್ ಮತ್ತು ಲುಸ್ಟರ್ ಬ್ಲೂ ಎಂಬ ಮೂರು ಬಣ್ಣಗಳಲ್ಲಿ ಖರೀದಿಸಬಹುದು ಎಂದು Lava ಕಂಪೆನಿ ಹೇಳಿದೆ.
Lava X3 With Android 12 Go Edition Officially Launched.
12-09-25 03:04 pm
HK News Desk
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 05:34 pm
Mangalore Correspondent
Mangalore Police, Sudheer Reddy: ಶಾಂತಿ ಕಾಪಾಡಲ...
12-09-25 12:58 pm
ಗುಂಡಿ ಬಿದ್ದ ಹೆದ್ದಾರಿ ತಕ್ಷಣ ದುರಸ್ತಿ ; ಸುರತ್ಕಲ್...
12-09-25 11:32 am
ಬಂಗ್ಲೆಗುಡ್ಡೆ ಕಾಡಿನಲ್ಲಿ ರಾಶಿ ರಾಶಿ ಹೆಣಗಳ ಅವಶೇಷ,...
11-09-25 10:42 pm
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
12-09-25 05:31 pm
Udupi Correspondent
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm