ಬ್ರೇಕಿಂಗ್ ನ್ಯೂಸ್
16-12-22 06:39 pm Source: Vijayakarnataka ಡಿಜಿಟಲ್ ಟೆಕ್
ಜಾಗತಿಕ ಟೆಕ್ ಬ್ರ್ಯಾಂಡ್ Acer ಕಂಪೆನಿಯ ವಿಶ್ವದ ಅತ್ಯಂತ ಹಗುರವಾದ Acer Swift Edge ಲ್ಯಾಪ್ಟಾಪ್ ಸಾಧನವು ದೇಶದಲ್ಲಿಂದು ಬಿಡುಗಡೆಯಾಗಿದೆ. ಸಾಮಾನ್ಯ ಅಲ್ಯೂಮಿನಿಯಂಗಿಂತ 2x ಶಕ್ತಿಯುತ ಮತ್ತು 20 ಪ್ರತಿಶತದಷ್ಟು ಹಗುರವಾಗಿ ಕೇವಲ 1.17 ಕೆಜಿ ತೂಕವಿರುವ ವಿಶ್ವದ ಅತ್ಯಂತ ಹಗುರವಾದ 16-ಇಂಚಿನ OLED ಲ್ಯಾಪ್ಟಾಪ್ ಇದಾಗಿದ್ದು, ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಅತ್ಯುತ್ತಮ ಬೆಲೆಯಲ್ಲಿ ಪರಿಚಯಿಸಲಾಗಿದೆ. ಹಾಗಾದರೆ, ಹೊಸ Acer Swift Edge ಲ್ಯಾಪ್ಟಾಪ್ ಹೇಗಿದೆ?, ಬೆಲೆ ಎಷ್ಟು ನೋಡೋಣ ಬನ್ನಿ.
Acer Swift Edge ಲ್ಯಾಪ್ಟಾಪ್ ವೈಶಿಷ್ಟ್ಯಗಳು
ಮೊದಲೇ ಹೇಳಿದಂತೆ, ಹೊಸ Acer Swift Edge ಲ್ಯಾಪ್ಟಾಪ್ 16-ಇಂಚಿನ OLED ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೆಯು 4K ರೆಸಲ್ಯೂಶನ್ ((3840 x 2400 ಪಿಕ್ಸೆಲ್ಗಳು) ಮತ್ತು 500 nits ಬ್ರೈಟ್ನೆಸ್ ಹೊಂದಿದೆ. ಈ ಲ್ಯಾಪ್ಟಾಪ್ 16-ಇಂಚಿನ ಡಿಸ್ಪ್ಲೇ ಹೊಂದಿದ್ದರು ಸಹ ಈ ಲ್ಯಾಪ್ಟಾಪ್ನಲ್ಲಿ ಕೀಬೋರ್ಡ್ ನೀಡಲಾಗಿಲ್ಲ. ಆದರೆ, ಬಯೋಮೆಟ್ರಿಕ್ ಭದ್ರತೆಗಾಗಿ ಫಿಂಗರ್ಪ್ರಿಂಟ್ ರೀಡರ್ ನೀಡಲಾಗಿದೆ. ಹುಡ್ ಅಡಿಯಲ್ಲಿ, AMD Ryzen 7 6800U ಆಕ್ಟಾ-ಕೋರ್ ಪ್ರೊಸೆಸರ್ ಜೊತೆಗೆ 16GB LPDDR5 RAM ಮತ್ತು 1TB PVCI ಸ್ಟೋರೇಜ್ ಜೊತೆ ಜೋಡಿಸಲ್ಪಟ್ಟಿರುವ ಈ ಲ್ಯಾಪ್ಟಾಪ್ ಹೆಚ್ಚು ಸಂಕೀರ್ಣವಾದ ಸೈಬರ್ಟಾಕ್ಗಳ ವಿರುದ್ಧ ಹೋರಾಡಲು ಮೈಕ್ರೋಸಾಫ್ಟ್ ಪ್ಲುಟನ್ ಭದ್ರತಾ ವೈಶಿಷ್ಟ್ಯವನ್ನು ಹೊಂದಿದೆ.
Acer Swift Edge ಲ್ಯಾಪ್ಟಾಪ್ ಫುಲ್ ಹೆಚ್ಡಿ ವೆಬ್ಕ್ಯಾಮ್ನೊಂದಿಗೆ 60fps ವೀಡಿಯೋವನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪೆನಿ ತಿಳಿಸಿದೆ. ವೀಡಿಯೊ ಕರೆಗಳ ಸಮಯದಲ್ಲಿ ಸ್ಪಷ್ಟವಾದ ಧ್ವನಿಯನ್ನು ನೀಡಲು ಲ್ಯಾಪ್ಟಾಪ್ನಲ್ಲಿ "ಟೆಂಪೊರಲ್ ನಾಯ್ಸ್ ರಿಡಕ್ಷನ್" ಬೆಂಬಲವನ್ನು ಹೊಂದಿದೆ. ಲ್ಯಾಪ್ಟಾಪ್ನ ಸಂಪರ್ಕ ಆಯ್ಕೆಗಳಲ್ಲಿ, ಎರಡು USB ಟೈಪ್-C ಪೋರ್ಟ್ಗಳು, USB 3.2 Gen 1 ಪೋರ್ಟ್ ಮತ್ತು HDMI ಪೋರ್ಟ್ಗಳಿವೆ. ಇನ್ನುಳಿದಂತೆ, Wi-Fi 6E ವೈರ್ಲೆಸ್ ಕನೆಕ್ಟ್, ಸ್ಟೀರಿಯೋ ಸ್ಪೀಕರ್ಗಳು, ಬ್ಲೂಟೂತ್ 5.2 ಸಂಪರ್ಕ, ಜೊತೆಗೆ 65W PD ಅಡಾಪ್ಟರ್ನೊಂದಿಗೆ ಚಾರ್ಜ್ ಮಾಡುವ 54Wh ಬ್ಯಾಟರಿ ವೈಶಿಷ್ಟ್ಯಗಳನ್ನು Acer Swift Edge ಲ್ಯಾಪ್ಟಾಪ್ನಲ್ಲಿ ನಾವು ನೋಡಬಹುದು.
ವಿಶ್ವದ ಅತ್ಯಂತ ತೆಳ್ಳನೆಯ ಲ್ಯಾಪ್ಟಾಪ್ ಬೆಲೆ!
Acer Swift Edge ಸಾಧನವು ಸಾಮಾನ್ಯ ಅಲ್ಯೂಮಿನಿಯಂಗಿಂತ 2x ಶಕ್ತಿಯುತ ಮತ್ತು 20 ಪ್ರತಿಶತದಷ್ಟು ಹಗುರವಾಗಿ ಕೇವಲ 1.17 ಕೆಜಿ ತೂಕವಿರುವ ವಿಶ್ವದ ಅತ್ಯಂತ ಹಗುರವಾದ 16-ಇಂಚಿನ OLED ಲ್ಯಾಪ್ಟಾಪ್ ಇದಾಗಿದೆ. ಮಿಶ್ರಲೋಹದ ವಸ್ತುವನ್ನು ಬಳಕೆ ಮಾಡಲಾಗಿರುವ ಈ ಸಾಧನವನ್ನು ಏಕೈಕ ಒಲಿವೈನ್ ಬ್ಲ್ಯಾಕ್ ಬಣ್ಣದಲ್ಲಿ ಮಾತ್ರ ಪರಿಚಯಿಸಲಾಗಿದೆ. ಭಾರತದಲ್ಲಿ 1,24,999 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆಗೊಂಡಿರುವ ಈ ಸಾಧನವು ಏಸರ್ ಇಂಡಿಯಾದ ಇ-ಸ್ಟೋರ್ ಮತ್ತು ಅಮೆಜಾನ್ಗಳಲ್ಲಿ ಖರೀದಿಗೆ ಲಭ್ಯವಿದೆ.
Acer Launches Worlds Lightest 16-Inch Oled Laptop In India.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 08:32 pm
Mangalore Correspondent
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm