ಬ್ರೇಕಿಂಗ್ ನ್ಯೂಸ್
30-05-21 04:09 pm Mangaluru Correspondent ಕ್ರೈಂ
ಸುಳ್ಯ, ಮೇ 30: ಜುವೆಲ್ಲರಿ ಕಳವು ಪ್ರಕರಣಕ್ಕೆ ಸಂಬಂಧಿಸಿ ಸುಳ್ಯ ಪೊಲೀಸರು ಬಂಧಿಸಿದ್ದ ಆರೋಪಿಯೊಬ್ಬ ಚಿನ್ನದ ಉಂಗುರಗಳನ್ನೇ ನುಂಗಿರುವುದು ಬೆಳಕಿಗೆ ಬಂದಿದೆ.
ಸುಳ್ಯದ ಜುವೆಲ್ಲರಿಯಲ್ಲಿ ಚಿನ್ನಾಭರಣ ಕಳವುಗೈದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಮೇ 28 ರಂದು ಬಂಧಿಸಿದ್ದರು. ಆರೋಪಿಗಳ ಪೈಕಿ ತ್ರಿಶೂರ್ ಜಿಲ್ಲೆಯ ಮೂಲದ ಶಿಬು ಎಂಬಾತ ನಿನ್ನೆ ರಾತ್ರಿ 9 ಗಂಟೆಗೆ ತೀವ್ರ ಹೊಟ್ಟೆ ನೋವಿಗೆ ಒಳಗಾಗಿದ್ದು ಕೂಡಲೇ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಎಕ್ಸ್ ರೇ ನಡೆಸಿ ಪರೀಕ್ಷೆಗೆ ಒಳಪಡಿಸಿದಾಗ ಹೊಟ್ಟೆಯಲ್ಲಿ ಚಿನ್ನದ ಉಂಗುರ ಇರುವುದು ಪತ್ತೆಯಾಗಿದೆ. ಇಂದು ಬೆಳಗ್ಗೆ ಹೊಟ್ಟೆಯಿಂದ ಹಲವಾರು ಉಂಗುರಗಳನ್ನು ಹೊರಬಂದಿದ್ದು 35 ಗ್ರಾಮ್ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಳಿಕ ಶಿಬುವನ್ನು ವಿಚಾರಣೆ ನಡೆಸಿದಾಗ ಪೊಲೀಸರ ಕೈಗೆ ಸಿಕ್ಕಿಬೀಳುವುದನ್ನು ತಪ್ಪಿಸಲೆಂದು ಚಿನ್ನದ ಉಂಗುರಗಳನ್ನು ಐಸ್ ಕ್ರೀಂ ಜೊತೆಗೆ ನುಂಗಿದ್ದಾಗಿ ಒಪ್ಪಿಕೊಂಡಿದ್ದಾನೆ.
ಆರೋಪಿ ಆರೋಗ್ಯವಾಗಿದ್ದು ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸುಳ್ಯ ಪೇಟೆಯಲ್ಲಿರುವ ಮೋಹನ್ ಜುವೆಲ್ಲರಿಯಿಂದ ಕಳೆದ ಮಾರ್ಚ್ 31 ರಂದು ರಾತ್ರಿ ಕಳ್ಳರು ನುಗ್ಗಿ ಚಿನ್ನಾಭರಣ ಕಳವುಗೈದಿದ್ದರು. ತನಿಖೆ ನಡೆಸಿದ ಪೊಲೀಸರು ಕೇರಳದ ಕಣ್ಣೂರು ಜಿಲ್ಲೆಯ ಮಹಮ್ಮದ್ ಬಶೀರ್ ಮತ್ತು ತ್ರಿಶೂರಿನ ಶಿಬುವನ್ನು ಬಂಧಿಸಿದ್ದರು.
READ: ಸುಳ್ಯ ; ಜುವೆಲ್ಲರಿಯಿಂದ ಚಿನ್ನಾಭರಣ ದೋಚಿದ್ದ ಅಂತಾರಾಜ್ಯ ಕಳ್ಳರ ಸೆರೆ
Sullia property Gold theft case accused swallows 34 grams Gold to hide from DK Police seized.
05-05-25 01:30 pm
HK News Desk
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
05-05-25 11:10 pm
HK News Desk
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
05-05-25 10:59 pm
Mangalore Correspondent
Suhas Shetty murder, MP Brijesh Chowta, Param...
05-05-25 10:43 pm
Mangalore Suhas Shetty murder, BJP Umanath Ko...
05-05-25 07:15 pm
MLA Harish Poonja, Dinesh Gundurao: ಬುರ್ಖಾಧಾರ...
05-05-25 05:10 pm
Suhas Shetty Murder, VHP, Bajpe Police: ಸುಹಾಸ...
05-05-25 03:24 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm