ಬ್ರೇಕಿಂಗ್ ನ್ಯೂಸ್
19-03-26 05:01 pm HK News Staffer ಕರ್ನಾಟಕ
ಬೆಂಗಳೂರು, ಮಾ 19: ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಭಾರೀ ಕೊರತೆ ಹೋಟೆಲ್ ಉದ್ಯಮವನ್ನು ಗಂಭೀರ ಸಂಕಷ್ಟಕ್ಕೆ ತಳ್ಳಿದೆ. ಸಿಲಿಂಡರ್ ಪೂರೈಕೆ ಸ್ಥಗಿತಗೊಂಡ ಹಿನ್ನೆಲೆ ಹಲವು ಹೋಟೆಲ್ಗಳು ಈಗಾಗಲೇ ಬಾಗಿಲು ಮುಚ್ಚಿದ್ದು, ಈ ಕ್ಷೇತ್ರವನ್ನು ಅವಲಂಬಿಸಿಕೊಂಡಿದ್ದ ಲಕ್ಷಾಂತರ ಕಾರ್ಮಿಕರು ಬದುಕಿನ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಹಿನ್ನೆಲೆಯಲ್ಲಿ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಹೈಕೋರ್ಟ್ ಮೊರೆ ಹೋಗಿದ್ದು, ಸಿಲಿಂಡರ್ ಪೂರೈಕೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ರಿಟ್ ಅರ್ಜಿ ಸಲ್ಲಿಸಿದೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ತುರ್ತು ಹಸ್ತಕ್ಷೇಪ ಮಾಡುವಂತೆ ಮನವಿ ಮಾಡಲಾಗಿದೆ.
ಬೆಂಗಳೂರು ನಗರದಲ್ಲೇ ಸುಮಾರು 40 ಸಾವಿರಕ್ಕೂ ಹೆಚ್ಚು ಹೋಟೆಲ್ಗಳು ಕಾರ್ಯನಿರ್ವಹಿಸುತ್ತಿದ್ದು, ದಿನನಿತ್ಯದ ಆಹಾರ ಸೇವೆಯನ್ನು ಒದಗಿಸುವ ಪ್ರಮುಖ ವ್ಯವಸ್ಥೆಯಾಗಿದೆ. ಆದರೆ ವಾಣಿಜ್ಯ ಸಿಲಿಂಡರ್ಗಳ ಸರಬರಾಜು ಸಂಪೂರ್ಣ ಸ್ಥಗಿತಗೊಂಡಿರುವುದು 6 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳ ಬದುಕಿಗೆ ದೊಡ್ಡ ಹೊಡೆತ ನೀಡಿದೆ.
ಆಟೋ ಮತ್ತು ಟ್ಯಾಕ್ಸಿ ಚಾಲಕರು, ಡೆಲಿವರಿ ಸಿಬ್ಬಂದಿ, ನಿರ್ಮಾಣ ಕಾರ್ಮಿಕರು, ಆಸ್ಪತ್ರೆ ರೋಗಿಗಳು ಸೇರಿದಂತೆ ಸಾಮಾನ್ಯ ಜನರು ಹೋಟೆಲ್ ಸೇವೆಗಳ ಮೇಲೆ ಅವಲಂಬಿತರಾಗಿದ್ದಾರೆ. ಹೀಗಾಗಿ ಕನಿಷ್ಠ 50 ಶೇಕಡಾ ಸಿಲಿಂಡರ್ ಪೂರೈಕೆಯನ್ನು ತಕ್ಷಣ ಆರಂಭಿಸಲು ಪೆಟ್ರೋಲಿಯಂ ಸಚಿವರಿಗೆ ಸೂಚನೆ ನೀಡುವಂತೆ ಅಸೋಸಿಯೇಷನ್ ಮನವಿ ಮಾಡಿದೆ.
ಕ್ಯಾಂಟೀನ್, ಫಾಸ್ಟ್ ಫುಡ್ ಅಂಗಡಿಗಳನ್ನು ನಡೆಸುವವರು ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ. ಬಹುತೇಕ ಫಾಸ್ಟ್ಫುಡ್ ಸೆಂಟರ್ಗಳು ಬಾಗಿಲು ಮುಚ್ಚಿವೆ ಎನ್ನುತ್ತಾರೆ ಫಾಸ್ಟ್ ಫುಡ್ ಸೆಂಟರ್ ಮಾಲೀಕರು.
ವಾಣಿಜ್ಯ ಬಳಕೆಯ ಸಿಲಿಂಡರ್ ಸ್ಥಗಿತಗೊಂಡು ಹಲವು ದಿನಗಳು ಕಳೆದಿವೆ. ಸಂಬಂಧಪಟ್ಟವರು ಯಾವುದೇ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡಿ ಎನ್ನುತ್ತಿದ್ದಾರೆ. ಆದರೆ ನಗರದ ಹೆಚ್ಚಿನ ಹೋಟೆಲ್ಗಳಲ್ಲಿ ಕಟ್ಟಿಗೆ ಒಲೆಯ ವ್ಯವಸ್ಥೆ ಇಲ್ಲ. ಬಾಡಿಗೆ ಕಟ್ಟಡದಲ್ಲಿ ಹೋಟೆಲ್ ನಡೆಸುವವರಿಗೆ ಕಟ್ಟಿಗೆ ಒಲೆ ಹಾಕಲು ಮಾಲಕರು ಬಿಡುತ್ತಿಲ್ಲ ಎಂದೂ ಹೋಟೆಲ್ ಮಾಲಕರು ಅಳಲು ತೋಡಿಕೊಂಡಿದ್ದಾರೆ.
ಕೆಲವರು ಇಂಡಕ್ಷನ್ ಸ್ಟೌ ಬಳಸುತ್ತಿದ್ದಾರೆ. ಆದರೆ ಇದರಿಂದ ವಿದ್ಯುತ್ ಬಿಲ್ ಅಧಿಕ ಬರುವ ಸಾಧ್ಯತೆ ಇದೆ. ಇಂಡಕ್ಷನ್ ಸ್ಟೌನಲ್ಲಿ ದೊಡ್ಡ ಪ್ರಮಾಣದಲ್ಲಿ ಅಡುಗೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದೂ ಹೇಳುತ್ತಾರೆ.

ಬಡವರ ಹೊಟ್ಟೆಗೆ ತಣ್ಣೀರು ಬಟ್ಟೆ:
ಕಡಿಮೆ ದುಡ್ಡಲ್ಲಿ ಕಾರ್ಮಿಕರು ಮತ್ತು ಬಡವರ ಹಸಿವು ನೀಗಿಸುತ್ತಿದ್ದ ಇಂದಿರಾ ಕ್ಯಾಂಟೀನ್ಗಳಿಗೂ ಗ್ಯಾಸ್ ಅಭಾವ ತಟ್ಟಿದೆ. ಮೆಜೆಸ್ಟಿಕ್ ಬಳಿಯ ಇಂದಿರಾ ಕ್ಯಾಂಟೀನ್ನಲ್ಲಿ ಕಳೆದ 2 ದಿನಗಳಿಂದ ಮಧ್ಯಾಹ್ನ ಹಾಗೂ ರಾತ್ರಿ ಊಟವನ್ನು ಸ್ಥಗಿತಗೊಳಿಸಲಾಗಿದೆ. ಬೆಳಗ್ಗಿನ ತಿಂಡಿ ಮಾತ್ರ ಲಭ್ಯವಿದ್ದು, ಊಟಕ್ಕಾಗಿ ಬರುವ ನೂರಾರು ಗ್ರಾಹಕರು ಹಸಿವಿನಿಂದಲೇ ವಾಪಸ್ ಹೋಗುವಂತಾಗಿದೆ. ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸುವಂತೆ ಜನರು ಸರ್ಕಾರದ ಮೊರೆ ಹೋಗಿದ್ದಾರೆ.
ಯುಗಾದಿ ಸಂಭ್ರಮಕ್ಕೆ 'ಗ್ಯಾಸ್' ಗಲಿಬಿಲಿ ಎಫೆಕ್ಟ್ ;
ಹಬ್ಬದ ಸೀಸನ್ನಲ್ಲಿ ಬೇಕರಿ ಹಾಗೂ ಸ್ವೀಟ್ ಸ್ಟಾಲ್ಗಳಿಗೂ ಟ್ರಬಲ್ ಶುರುವಾಗಿದೆ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಸಿಹಿ ತಿನಿಸುಗಳ ತಯಾರಿ ಭರದಿಂದ ಸಾಗಬೇಕಿತ್ತು. ಆದರೆ, ರಾಜಾಜಿನಗರದ ಪ್ರಸಿದ್ಧ ಕರಿಗಿರಿ ಸ್ವೀಟ್ಸ್ ಸೇರಿದಂತೆ ಹಲವೆಡೆ ಕೇವಲ ಒಂದೆರಡು ಗ್ಯಾಸ್ ಸಿಲಿಂಡರ್ ಮಾತ್ರ ಉಳಿದಿರುವುದರಿಂದ ಸ್ವೀಟ್ ತಯಾರಿಕೆ ಸ್ಥಗಿತಗೊಂಡಿದೆ. ಆರ್ಡರ್ ತೆಗೆದುಕೊಳ್ಳಲಾಗದೆ ಮಾಲೀಕರು ಆತಂಕಕ್ಕೆ ಒಳಗಾಗಿದ್ದಾರೆ.
ಒಟ್ಟಾರೆ, ಸಿಲಿಂಡರ್ ಅಭಾವದಿಂದ ಹೋಟೆಲ್ ಉದ್ಯಮವೇ ಕುಸಿಯುವ ಹಂತಕ್ಕೆ ತಲುಪಿದ್ದು, ತುರ್ತು ಪರಿಹಾರಕ್ಕಾಗಿ ಸರ್ಕಾರದ ಕ್ರಮಗಳತ್ತ ಎಲ್ಲರ ಕಣ್ಣು ನೆಟ್ಟಿದೆ.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 12:54 pm
HK News Staffer
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
14-10-26 02:00 pm
HK News Staffer
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm