ಬ್ರೇಕಿಂಗ್ ನ್ಯೂಸ್
18-03-26 09:44 pm Hk Desk ಕರ್ನಾಟಕ
ಬೆಂಗಳೂರು, ಮಾರ್ಚ್ 18: ಕನ್ನಡದ ಖ್ಯಾತ ನಿರ್ದೇಶಕ ಪ್ರೇಮ್ ನಿರ್ದೇಶನ, ಧ್ರುವ ಸರ್ಜಾ ಕಾಂಬಿನೇಶನ್ ಒಳಗೊಂಡ ಕೆಡಿ- ಡೆವಿಲ್ ಚಿತ್ರದ ಹಾಡು ಭಾರೀ ವಿವಾದಕ್ಕೆ ಕಾರಣವಾಗಿದೆ. ಸಿನಿಮಾದ ‘ಸರ್ಸೆ ಸರ್ಸೆ ಸೆರಗ ನಿನ್ನ’ ಹಾಡಿಗೆ ಭಾರೀ ಆಕ್ಷೇಪ ಕೇಳಿಬಂದಿದ್ದು ಸಂಸತ್ತಿನಲ್ಲು ಪ್ರತಿಧ್ವನಿಸಿದೆ. ಅದರಲ್ಲೂ ಹಾಡಿನ ಹಿಂದಿ ಆವೃತ್ತಿಯ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದ್ದು, ಪ್ರೇಮ್ ಸೇರಿದಂತೆ ಚಿತ್ರ ತಂಡದ ವಿರುದ್ಧ ಮುಂಬೈ ಸೇರಿ ಹಲವೆಡೆ ದೂರು ದಾಖಲಾಗಿದೆ. ತೀವ್ರ ಆಕ್ಷೇಪ ಬಂದಿದ್ದರಿಂದ ಈ ಹಾಡನ್ನು ನಿಷೇಧ ಮಾಡಿರುವುದಾಗಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. ಕೇಂದ್ರ ಸೆನ್ಸಾರ್ ಮಂಡಳಿ, ಮಾನವ ಹಕ್ಕು ಆಯೋಗಕ್ಕೆ ದೂರು ಹೋಗಿದೆ. ಅಲ್ಲದೆ, ರಾಜ್ಯ ಮಹಿಳಾ ಆಯೋಗ ಕೇಂದ್ರಕ್ಕೆ ಪತ್ರ ಬರೆದು ಕಠಿಣ ಕ್ರಮಕ್ಕೆ ಆಗ್ರಹಿಸಿದೆ.
ಹಿಂದಿ, ತಮಿಳು, ಕನ್ನಡ, ತೆಲುಗು, ಮಲಯಾಳ ಭಾಷೆಯಲ್ಲಿ ಚಿತ್ರದ ಹಾಡನ್ನು ರಿಲೀಸ್ ಮಾಡಲಾಗಿತ್ತು. ಆದರೆ ಹಿಂದಿ ಹಾಡು ಬರುತ್ತಿದ್ದಂತೆ ದೇಶಾದ್ಯಂತ ಇದರ ಬಗ್ಗೆ ಟೀಕೆ ವ್ಯಕ್ತವಾಗಿದೆ. ಮಹಿಳೆಯ ಬಗ್ಗೆ ತೀರಾ ಕೀಳಾಗಿ ಬಿಂಬಿಸಿ ಸಾಹಿತ್ಯ ರಚಿಸಲಾಗಿದೆ ಎಂದು ಜಾಲತಾಣದಲ್ಲಿ ಟೀಕಿಸಿದ್ದಾರೆ. ಹಾಡಿನಲ್ಲಿ ಸಂಜಯ್ ದತ್ ಹಾಗೂ ನೋರಾ ಫತೇಹಿ ಕಾಣಿಸಿಕೊಂಡಿದ್ದು ಅವರ ಬಗ್ಗೆಯೂ ಟೀಕೆ ವ್ಯಕ್ತವಾಗಿದೆ. ಸ್ವತಃ ನೋರಾ ಫತೇಹಿ ಕೂಡ ಹಾಡಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನನಗೆ ಅರ್ಥ ತಿಳಿದಿರಲಿಲ್ಲ, ಎಐ ಬಳಸಿ ಸೃಷ್ಟಿಸಿದ್ದಾರೆ ; ಫತೇಹಿ
'ಹಾಡನ್ನು 3 ವರ್ಷಗಳ ಹಿಂದೆ ಕನ್ನಡ ಭಾಷೆಯಲ್ಲಿ ಚಿತ್ರೀಕರಿಸಿದ್ದೆ. ಸಂಜಯ್ ದತ್ ರಂತಹ ದೊಡ್ಡ ಕಲಾವಿದರು ಇರುವ ಸಿನಿಮಾ ಎಂಬ ಕಾರಣಕ್ಕೆ ಒಪ್ಪಿಕೊಂಡಿದ್ದೆ. ಕನ್ನಡ ಭಾಷೆ ನನಗೆ ತಿಳಿಯಲ್ಲ. ಶೂಟಿಂಗ್ ಮಾಡುವಾಗ ಹಾಡಿನ ಅರ್ಥ ಕೇಳಿ ತಿಳ್ಕೊಂಡಿದ್ದೆ. ಅವರು ಹೇಳಿದಾಗ ನನಗೆ ಅಸಭ್ಯ ಅಂತ ಅನಿಸಿರಲಿಲ್ಲ. ಈಗ ಹಿಂದಿಗೆ ಭಾಷಾಂತರ ಮಾಡಿರುವುದು ತುಂಬ ಆಕ್ಷೇಪಾರ್ಹವಾಗಿದೆ. ಅದರ ಬಗ್ಗೆ ನನಗೆ ಮಾಹಿತಿಯೇ ಇರಲಿಲ್ಲ. ಹಾಡು ಬಿಡುಗಡೆಗೆ ನನ್ನನ್ನು ಕರೆದಾಗ ನನ್ನ ಫೋಟೋಗಳನ್ನು ಬಳಸಿದ ರೀತಿ ಕಂಡು ನನಗೆ ಬೇಸರ ಆಯಿತು. ನನ್ನ ಮತ್ತು ಸಂಜಯ್ ದತ್ ಅವರ ಫೋಟೋಗಳನ್ನು ಎಐ ಮೂಲಕ ಸೃಷ್ಟಿಸಿ ಬಳಸಿದ್ದಾರೆ ಎಂದು ನೋರಾ ಫತೇಹಿ ಆಕ್ಷೇಪಿಸಿದ್ದಾರೆ.
ವಿವಾದ ಭುಗಿಲೇಳುತ್ತಿದ್ದಂತೆ ಹಿಂದಿ ಹಾಡನ್ನು ಯೂಟ್ಯೂಬ್ ನಿಂದ ಹಿಂಪಡೆಯಲಾಗಿದೆ. ಕನ್ನಡ ಮತ್ತು ಇತರ ಭಾಷೆಗಳಲ್ಲಿ ಹಾಡು ಇನ್ನೂ ಚಾಲ್ತಿಯಲ್ಲಿದೆ. ಇದೇ ವೇಳೆ, ನಿರ್ದೇಶಕ ಪ್ರೇಮ್ ವಿವಾದ ವಿಚಾರದಲ್ಲಿ ಜಾಲತಾಣದಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಬೇಕಂತ ಮಾಡಿಲ್ಲ, ಹರ್ಟ್ ಆಗಿದ್ದರೆ ಚೇಂಜ್ ಮಾಡ್ತೀನಿ..
ಬೇಕೆಂದೇ ಅಶ್ಲೀಲತೆ ತುಂಬಿಸಿ ಇಂತಹ ತಪ್ಪು ಮಾಡಿಲ್ಲ. ಬೇರೆಯೇ ದೃಷ್ಟಿಕೋನದಲ್ಲಿ ಹಾಡು ರಚಿಸಿದ್ದೆ. ಎಣ್ಣೆ ಬಾಟಲಿ, ಉಪ್ಪಿನಕಾಯಿ ಕಲ್ಪಿಸಿಕೊಂಡು ಹಾಡು ಬರೆದಿದ್ದೆ. ಬಾಟಲ್ನ ಮೇಲೆತ್ತಿ ಎಂದು ಬರಬೇಕಿತ್ತು. ಹಾಡಿನಲ್ಲಿ ಕುತೂಹಲ ಇರಲಿ ಎಂಬ ಕಾರಣಕ್ಕೆ ಬಾಟಲಿ ಪದವನ್ನು ಕೊನೆಯಲ್ಲಿ ಬಳಸಿದ್ದೆ. ಆದರೆ ಜನ ಅದನ್ನು ಬೇರೆಯದ್ದೇ ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದಾರೆ. ಕೆಲವರು ನನ್ನ ವಿರುದ್ಧ ಕಾಲೆಳೆಯಲು, ಹೀಗಳೆಯಲು ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಹಲವಾರು ಪದ್ಯಗಳನ್ನು ರಚಿಸಿದ್ದೇನೆ. ಈವರೆಗೂ ಕೆಟ್ಟ ಅರ್ಥದ ಹಾಡುಗಳನ್ನು ಬರೆದಿಲ್ಲ. ಇದನ್ನು ಹಿಂದೆಯೂ ಮೀಡಿಯಾ ಮುಂದೆ ಹೇಳಿದ್ದೇನೆ. ಆದರೆ ಹಾಡು ಕೇಳಿದ ಕೆಲವರಿಗೆ ಹರ್ಟ್ ಆಗಿರಬಹುದು. ಸಾಹಿತಿ ಆದ ಮೇಲೆ ಎಲ್ಲ ರೀತಿಯಲ್ಲಿಯೂ ಬರೆಯಬೇಕಾಗುತ್ತದೆ. ಆದರೆ ನಾನು ಅಶ್ಲೀಲ ಅರ್ಥದಲ್ಲಿ ಬರೆದಿಲ್ಲ. ನನ್ನಿಂದ ಬೇಸರ ಆಗಿದ್ದರೆ ಕ್ಷಮೆ ಕೇಳುತ್ತೇನೆ. ಹಾಡನ್ನು ಬೇರೆ ರೀತಿ ಬರೆದು ಮತ್ತೆ ಅಪ್ಲೋಡ್ ಮಾಡುತ್ತೀವಿ ಎಂದು ಪ್ರೇಮ್ ಹೇಳಿದ್ದಾರೆ.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 12:54 pm
HK News Staffer
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
14-10-26 02:00 pm
HK News Staffer
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm