ಬ್ರೇಕಿಂಗ್ ನ್ಯೂಸ್
29-10-26 11:02 pm HK News Desk ಕ್ರೈಂ
ಮಂಗಳೂರು, ಅ.29 ಕೆಎಸ್ಆರ್ಟಿಸಿ ಬಸ್ನಿಂದ ಇಳಿದು ಲಾಡ್ಜ್ಗೆ ತೆರಳುತ್ತಿದ್ದ ವ್ಯಕ್ತಿಯನ್ನು ಕಾರಿನಲ್ಲಿ ಬಂದಿದ್ದ ದರೋಡೆಕೋರರು ಬಲವಂತವಾಗಿ ಅಪಹರಿಸಿ, ನಗರದಾದ್ಯಂತ ಸುತ್ತಾಡಿಸಿ ಬರೋಬ್ಬರಿ ₹1.15 ಕೋಟಿ ನಗದು ಹಣ ಹಾಗೂ 2 ಮೊಬೈಲ್ ಫೋನ್ಗಳನ್ನು ದರೋಡೆ ಮಾಡಿ, ಕಾವೂರು ಬಳಿ ಬಿಟ್ಟು ಪರಾರಿಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ದಾವಣಗೆರೆಯಿಂದ ಮಂಗಳೂರಿಗೆ ಕೋಟ್ಯಂತರ ರೂಪಾಯಿ ಹಣದ ಬ್ಯಾಗ್ ಹೊತ್ತು ತಂದಿದ್ದ ಸತ್ಯನಾರಾಯಣ ಎಂಬವರು ನೀಡಿದ ದೂರಿನ ಮೇರೆಗೆ ಮಂಗಳೂರು ಪೊಲೀಸರು ಆರೋಪಿಗಳಿಗಾಗಿ ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ. ದೂರುದಾರ ಸತ್ಯನಾರಾಯಣ ಅವರ ಮಾಲೀಕರಾದ ಶಿವಮೊಗ್ಗ ಗಾಂಧಿ ಬಜಾರ್ ನಿವಾಸಿ ನಾಗರಾಜ್ ಎಂಬವರು, ಅಕ್ಟೋಬರ್ 23ರಂದು ಸತ್ಯನಾರಾಯಣ ಅವರಿಗೆ ಬರೋಬ್ಬರಿ ₹1 ಕೋಟಿ 15 ಲಕ್ಷ ನಗದು ಹಣವಿದ್ದ 2 ಬ್ಯಾಗ್ಗಳನ್ನು ನೀಡಿದ್ದರು. ಬ್ಯಾಗ್ಗಳನ್ನು ತೆಗೆದುಕೊಂಡು ಮಂಗಳೂರಿಗೆ ಹೋಗಿ ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್ ಬಳಿಯ ಲಾಡ್ಜ್ನಲ್ಲಿ ಇರು, ನಾನು ಅಲ್ಲಿಗೆ ಬರುತ್ತೇನೆ” ಎಂದು ತಿಳಿಸಿದ್ದರು.
ಮಾಲೀಕರ ಸೂಚನೆಯಂತೆ ಸತ್ಯನಾರಾಯಣ ಅಕ್ಟೋಬರ್ 27 ರಂದು ರಾತ್ರಿ 10 ಗಂಟೆಗೆ ದಾವಣಗೆರೆಯಿಂದ ಕೆಎಸ್ಆರ್ಟಿಸಿ ಬಸ್ ಏರಿ, ಅಕ್ಟೋಬರ್ 28ರಂದು ಬೆಳಗ್ಗೆ 6 ಗಂಟೆಗೆ ಮಂಗಳೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪದ ಲಾಲ್ ಬಾಗ್ ರಾಮಕೃಷ್ಣ ಹಾಸ್ಟೆಲ್ ಬಳಿ ಬಸ್ಸಿನಿಂದ ಇಳಿದಿದ್ದರು.
ಬಸ್ಸಿನಿಂದ ಇಳಿದ ಸತ್ಯನಾರಾಯಣ ಅವರು ಫುಟ್ಪಾತ್ನಲ್ಲಿ ತಿಂಡಿ ತಿನ್ನಲು ನಡೆದುಕೊಂಡು ಹೋಗುತ್ತಿದ್ದಾಗ, ಕಪ್ಪು ಬಣ್ಣದ ಕಾರಿನಲ್ಲಿ ಮುಖಕ್ಕೆ ಮಪ್ಲರ್ ಧರಿಸಿಕೊಂಡು ಬಂದ ಅಪರಿಚಿತ ನಾಲ್ವರು ದುಷ್ಕರ್ಮಿಗಳು, ಸತ್ಯನಾರಾಯಣ ಅವರನ್ನು ಬಲವಂತವಾಗಿ ಕಾರಿನೊಳಗೆ ಎಳೆದುಕೊಂಡು ಅಪಹರಿಸಿದ್ದಾರೆ. ನಂತರ ಮಂಗಳೂರು ನಗರದಾದ್ಯಂತ ಸುಮಾರು 2 ಗಂಟೆಗಳ ಕಾಲ ಕಾರಿನಲ್ಲಿ ಸುತ್ತಾಡಿಸಿದ್ದು ಸತ್ಯನಾರಾಯಣ ಅವರ ಬಳಿಯಿದ್ದ ₹1.5 ಕೋಟಿ ಹಣವಿದ್ದ 2 ಬ್ಯಾಗ್ಗಳು ಹಾಗೂ 2 ಮೊಬೈಲ್ ಫೋನ್ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ದರೋಡೆ ನಡೆಸಿದ ಬಳಿಕ ಬೆಳಗ್ಗೆ 8 ಗಂಟೆಯ ಸುಮಾರಿಗೆ ಸತ್ಯನಾರಾಯಣ ಅವರನ್ನು ಕಾವೂರು ಬಸ್ ಸ್ಟ್ಯಾಂಡ್ ಸಮೀಪದ ನಿರ್ಜನ ಗುಡ್ಡದ ಮೇಲೆ ಕಾರಿನಿಂದ ಕೆಳಗೆ ತಳ್ಳಿದ್ದಾರೆ. “ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಜೀವಸಹಿತ ಬಿಡುವುದಿಲ್ಲ, ಕೊಂದೇ ಹಾಕುತ್ತೇವೆ” ಎಂದು ಜೀವ ಬೆದರಿಕೆ ಹಾಕಿ, ದರೋಡೆಕೋರರು ಕಾರಿನಲ್ಲಿ ಪರಾರಿಯಾಗಿದ್ದಾರೆ. ಕೃತ್ಯದಿಂದ ಚೇತರಿಸಿಕೊಂಡ ಸಂತ್ರಸ್ತ ಸತ್ಯನಾರಾಯಣ ಅವರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಸಂತ್ರಸ್ತ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಕಲಂಗಳಲ್ಲಿ (ಅಪಹರಣ, ದರೋಡೆ, ಜೀವ ಬೆದರಿಕೆ) ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದರೋಡೆಕೋರರು ಬಂದ ಕಪ್ಪು ಬಣ್ಣದ ಕಾರು ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ನಗರದ ಹಲವು ಭಾಗಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ಬೃಹತ್ ಪ್ರಮಾಣದ ನಗದು ಹಣದ ಸಾಗಾಟದ ಬಗ್ಗೆ ದರೋಡೆಕೋರರಿಗೆ ಮುಂಚಿತವಾಗಿಯೇ ಮಾಹಿತಿ ಇತ್ತೇ ಎಂಬ ಆಯಾಮದಲ್ಲೂ ಪೊಲೀಸರು ವೈಜ್ಞಾನಿಕ ತನಿಖೆ ಮುಂದುವರಿಸಿದ್ದಾರೆ.
30-10-26 08:26 pm
HK News
ಸ್ಟಿಂಗ್ ಪ್ರಕರಣಕ್ಕೆ ಟ್ವಿಸ್ಟ್ ; ಕೇಂದ್ರ ಸಚಿವ ಕುಮ...
30-10-26 05:15 pm
ರಾಜ್ಯದ ಜನತೆಗೆ ಮತ್ತೆ ದರ ಏರಿಕೆ ಶಾಕ್ ; ನಂದಿನಿ ಹಾ...
29-10-26 08:21 pm
'ಮೈಸೂರು ಅರಮನೆ ಸರ್ಕಾರಕ್ಕೆ ಸೇರಿದ್ದು' ತನ್ನ ಹೇಳಿಕ...
28-10-26 10:52 pm
ವಿಧಾನ ಪರಿಷತ್ತಿನ ನಾಲ್ಕು ಸ್ಥಾನಕ್ಕೆ ಚುನಾವಣೆ ; ನಾ...
27-10-26 09:47 pm
29-10-26 09:28 pm
HK News Staffer
ಆಡಳಿತ ಬದಲಾವಣೆ ಉದ್ದೇಶದ ಹಿಂಸಾತ್ಮಕ ಪ್ರತಿಭಟನೆಗಳಲ್...
29-10-26 08:23 pm
'ಮೋದಿ ಅಪ್ಪನೂ ಜೈಲಿಗೆ ಹೋಗಬೇಕಾಗುತ್ತೆ!' ; ವಿವಾದಕ್...
25-10-26 09:40 pm
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
31-10-26 02:25 pm
HK News Staffer
ಸೌಜನ್ಯಾ ಮರು ತನಿಖೆ ; ಎಸ್ಐಟಿ ಮುಖ್ಯಸ್ಥರಾಗಿ ಚೇತನ್...
30-10-26 12:51 pm
ಸೌಜನ್ಯಾ ಪ್ರಕರಣ ತನಿಖೆಯಲ್ಲಿ ಭಾಗಿಯಾಗಿದ್ದ ಎಲ್ಲ ಪೊ...
30-10-26 12:19 pm
UPSCಯಲ್ಲಿ 42ನೇ ರ್ಯಾಂಕ್ನಿಂದ ರಫೇಲ್ ಪೈಲಟ್ ವರೆ...
30-10-26 12:16 pm
ಕುಸುಮಾವತಿಯೇ, ಇಂದಿರಾವತಿಯೇ ? ಸರ್ಕಾರಿ ಜಮೀನು ಅಕ್ರ...
29-10-26 08:19 pm
31-10-26 01:16 pm
HK News Staffer
ಕಾರವಾರದ ಮುದಗಾ ಬಂದರಿನಲ್ಲಿ ಮತ್ತೆ ವಿಷಾನಿಲ ದುರಂತ:...
31-10-26 01:05 pm
ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಶನ್ ; ಕಾಂಗ್ರೆ...
30-10-26 11:01 pm
Cyprian Pinto, Mangalore: 50ಕ್ಕೂ ಹೆಚ್ಚು ಬಾಲಕರ...
30-10-26 09:57 pm
ಆನ್ಲೈನಲ್ಲಿ ಕೇರಳ ಲಾಟರಿ ಗೆದ್ದ ಮಂಗಳೂರಿನ ವ್ಯಕ್ತಿಗ...
30-10-26 05:16 pm