ಬ್ರೇಕಿಂಗ್ ನ್ಯೂಸ್
21-11-25 11:07 pm Bangalore Correspondent ಕ್ರೈಂ
ಬೆಂಗಳೂರು, ನ.21 : ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಮಹಾನ್ ದರೋಡೆ ಪ್ರಕರಣಕ್ಕೆ ರಾಜ್ಯದ ಪೊಲೀಸ್ ಪೇದೆಯೇ “ಮಾಸ್ಟರ್ಮೈಂಡ್” ಎಂಬ ಶಂಕೆ ವ್ಯಕ್ತವಾಗಿದೆ. ಗೋವಿಂದಪುರ ಪೊಲೀಸ್ ಕಾನ್ಸ್ಟೇಬಲ್ ಅಣ್ಣಪ್ಪ ನಾಯಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು ದರೋಡೆ ತಂಡದ ಬಗ್ಗೆ ಮಹತ್ವದ ಮಾಹಿತಿ ಕಲೆಹಾಕಿದ್ದಾರೆ.
ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಅಣ್ಣಪ್ಪ ನಾಯಕ್ ಭಾಗಿಯಾಗಿರುವ ಮಾಹಿತಿ ಇದೆ. ದರೋಡೆಯಲ್ಲಿ ಗೋವಿಂದಪುರ ಠಾಣೆಗೆ ಸೇರಿದ್ದ ಮತ್ತೊಬ್ಬ ಕಾನ್ಸ್ಟೇಬಲ್ ಕೂಡ ಭಾಗಿಯಾಗಿದ್ದಾನೆಂದು ಹೇಳಲಾಗಿದೆ. ಒಟ್ಟು ದರೋಡೆ ಕೃತ್ಯಕ್ಕೆ ಇವರೇ ಆರೋಪಿಗಳಿಗೆ ಪ್ಲಾನ್ ನೀಡಿದ್ದರು. ಅಣ್ಣಪ್ಪ ನಾಯಕ್ ಯೋಜನೆಯ ಮಾಸ್ಟರ್ಮೈಂಡ್ ಆಗಿದ್ದು, ದರೋಡೆ ನಂತರ ಪೊಲೀಸರಿಂದ ಹೇಗೆ ಪಾರಾಗಬೇಕು ಎಂಬ ತಂತ್ರಗಳನ್ನು ಹೇಳಿಕೊಟ್ಟಿದ್ದಾನೆ.



ದರೋಡೆಯಲ್ಲಿ CMS ಕಂಪನಿ ಮಾಜಿ ಉದ್ಯೋಗಿ ಝೇವಿಯರ್ ಕೂಡ ಸೇರಿದ್ದಾನೆ. ಅಣ್ಣಪ್ಪ ಮತ್ತು ಈತ ಸ್ನೇಹಿತರಾಗಿದ್ದು ಒಂದು ವರ್ಷದಿಂದ ಪ್ಲಾನ್ ನಡೆಸಿದ್ದರು. ತನಿಖೆಯ ವೇಳೆ ಪೇದೆ ಅಣ್ಣಪ್ಪ ನಾಯಕ್ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರೋದು ಪತ್ತೆಯಾಗಿದೆ.
ಕುಂಬಳಗೋಡು ಠಾಣೆ ವ್ಯಾಪ್ತಿಯಲ್ಲಿ ರಾಬರಿ ಕೃತ್ಯ, ಭಾರತೀನಗರ ಪೊಲೀಸ್ ಠಾಣೆಯಲ್ಲಿ ಬೆದರಿಕೆ ಪ್ರಕರಣ, ಎಂಜಿ ರೋಡ್ ಬಳಿ ಕ್ರಿಕೆಟ್ ಬುಕ್ಕಿಗಳಿಗೆ ಬೆದರಿಕೆ, ಜೈಲಿನಲ್ಲಿ ಪರಿಚಯವಾದ ಹುಡುಗರನ್ನು ಬಳಸಿಕೊಂಡು ಅನೇಕ ಕೃತ್ಯಗಳನ್ನು ನಡೆಸಿದ್ದಾನೆ, ದೊಡ್ಡ ದರೋಡೆ ಮಾಡಿ ಸೆಟ್ಲ್ ಆಗುವ ಯೋಜನೆ ಹಾಕಿದ್ದ. ಝೇವಿಯರ್ ಮತ್ತು ಅಣ್ಣಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
A shocking revelation has emerged in Karnataka, where a police constable himself is suspected to be the mastermind behind a major multi-crore robbery. Bengaluru police have arrested Govindapura Police Constable Annappa Nayak, who is believed to have planned the heist executed in the Kumbalagodu police station limits.
10-05-26 01:04 pm
HK News Staffer
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
12ನೇ ಶತಮಾನದ ಕಾಕತೀಯರ ಕಾಲದ ಪ್ರಾಚೀನ ಶಿವ ದೇಗುಲ ಧ್...
08-05-26 08:05 pm
ಕಲಬುರಗಿ ಪೊಲೀಸರ ‘ಆಪರೇಷನ್ ಭರವಸೆ’ ಸಕ್ಸಸ್; 2 ತಿಂಗ...
08-05-26 12:21 pm
IPS Ramachandra Rao: ಸರ್ಕಾರಿ ಕಚೇರಿಯಲ್ಲೇ ತುಂಟಾ...
07-05-26 03:10 pm
10-05-26 12:26 pm
HK News Staffer
ತಮಿಳುನಾಡನ್ನು ದೇವರೇ ಕಾಪಾಡಬೇಕು ; ಟಿವಿಕೆ ಗ್ಯಾರಂಟ...
09-05-26 12:06 pm
ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ; ಶತ್ರುರಾಷ್ಟ...
09-05-26 11:14 am
ಬಂಗಾಳದಲ್ಲಿ ಕೇಸರಿ ಯುಗಾರಂಭ ; ಮೊದಲ ಬಿಜೆಪಿ ಸಿಎಂ ಆ...
08-05-26 06:45 pm
ದ್ರಾವಿಡರ ನಾಡಲ್ಲಿ ದಳಪತಿ ವಿಜಯ್ ಸರ್ಕಾರ್ ! ಮ್ಯಾಜಿ...
08-05-26 06:38 pm
09-05-26 11:51 pm
Mangalore Correspondent
ಮಂಜೇಶ್ವರ ಕ್ಷೇತ್ರ ; ಸಿಪಿಎಂ ಅಭ್ಯರ್ಥಿಗೆ ಇತಿಹಾಸದಲ...
09-05-26 02:15 pm
ಮನೆ ಕಳ್ಳತನ ತಡೆಗೆ ಉಡುಪಿ ಪೊಲೀಸರ ಹೊಸ ಹೆಜ್ಜೆ ; “ಲ...
09-05-26 02:13 pm
Kuthar, Mangalore, UT Khader: ಕುತ್ತಾರಿನಲ್ಲಿ ಕ...
08-05-26 10:33 pm
ಸುತ್ತಿ ಬಳಸಿ ಓಡಾಟಕ್ಕೆ ಬೀಳಲಿದೆ ಬ್ರೇಕ್ ; ಮಂಗಳೂರು...
08-05-26 09:05 pm
09-05-26 10:29 pm
HK News Desk
ಉಪ್ಪಿನಂಗಡಿಯಲ್ಲಿ ರೋಡ್ ರೋಲರ್ ಹರಿದು ಕೂಲಿ ಕಾರ್ಮಿಕ...
09-05-26 09:50 pm
ಸಾಲ ಕೊಟ್ಟ ಮಹಿಳೆಯ ಜೀವ ತೆಗೆದ ಕಟುಕರು; ಅಪಘಾತದ ನಾಟ...
09-05-26 08:29 pm
ಆರೋಪಿಯಿಂದಲೇ ಲಂಚ ; ಒಂದು ಲಕ್ಷ ಪಡೆಯುತ್ತಿದ್ದಾಗ ಗು...
09-05-26 06:42 pm
ಸ್ನಾನಕ್ಕೆ ತೆರಳಿದ್ದ ಸ್ನೇಹಿತೆಯರು ನದಿಯಲ್ಲಿ ಮುಳುಗ...
09-05-26 09:54 am