ಬ್ರೇಕಿಂಗ್ ನ್ಯೂಸ್
29-10-25 02:53 pm Mangalore Correspondent ಕ್ರೈಂ
ಪುತ್ತೂರು, ಅ.29 : ವಿಷನ್ ಇಂಡಿಯಾ ಲಕ್ಕಿ ಸ್ಕೀಂ ಹೆಸರಲ್ಲಿ ದುಬಾರಿ ಗಿಫ್ಟ್ ನೀಡುವುದಾಗಿ ಹೇಳಿ ಜನರನ್ನು ನಂಬಿಸಿ ಹಣ ಸಂಗ್ರಹಿಸುತ್ತಿರುವ ಪ್ರಕರಣ ಪತ್ತೆಹಚ್ಚಿರುವ ಪುತ್ತೂರು ನಗರ ಠಾಣೆ ಪೊಲೀಸರು ಮಂಗಳೂರಿನ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪುತ್ತೂರು ನಗರ ಠಾಣೆಯ ಉಪ ನಿರೀಕ್ಷಕ ಜನಾರ್ದನ ಕೆ.ಎಂ. ಅವರು ಸೋಮವಾರ ಸಂಜೆ 4.30ರ ಹೊತ್ತಿಗೆ ಪುತ್ತೂರು ಪೇಟೆಯಲ್ಲಿ ರೌಂಡ್ಸ್ ನಲ್ಲಿದ್ದಾಗ ಕೋರ್ಟ್ ರಸ್ತೆ ಮತ್ತಿತರ ಕಡೆ ಜನ ಗುಂಪು ಸೇರಿಕೊಂಡು ಲಕ್ಕಿ ಸ್ಕೀಮ್ ಬಗ್ಗೆ ಚರ್ಚಿಸುತ್ತಿರುವುದು ಕಂಡುಬಂತು. ಅವರ ಕೈಯ್ಯಲ್ಲಿ ಲಕ್ಕಿ ಸ್ಟೀಂ ಕುರಿತಾದ ಕರಪತ್ರಗಳಿರುವುದನ್ನು ನೋಡಿ ಪಿಎಸ್ಐ ವಿಚಾರಿಸಿದ್ದಾರೆ. ಒಂದು ಬಾರಿ 23,000 ರೂ. ಹೂಡಿಕೆ ಮಾಡಿದರೆ ಕಾರು, ಚಿನ್ನಾಭರಣ, ನಗದು, ಮೊಬೈಲ್, ಫ್ರೀಜ್, ಗೃಹಪಯೋಗಿ ವಸ್ತುಗಳನ್ನು ನೀಡುವ ಬಗ್ಗೆ ಜನ ಚರ್ಚಿಸುತ್ತಿದ್ದರು. ಕರಪತ್ರ ಪರಿಶೀಲಿಸಿದಾಗ ಅದರಲ್ಲಿ ಸಂಸ್ಥೆಯ ಕಚೇರಿ ವಿಳಾಸ ಇರಲಿಲ್ಲ.
ಈ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಮಂಗಳೂರಿನ ಸಲೀಂ ಮತ್ತು ಅಜೀಜ್ ಎಂಬವರು ವಿಷನ್ ಇಂಡಿಯಾ ಲಕ್ಕಿ ಸ್ಕೀಂ 15ನೇ ತಿಂಗಳ ಡ್ರಾ, ವಿಜೇತರಿಗೆ ಬಂಕರ್ ಬಹುಮಾನ ಎಂದು ಕರಪತ್ರ ಮೂಲಕ ಪ್ರಚಾರ ಮಾಡುತ್ತಿರುವುದು ತಿಳಿಯಿತು. ಅಲ್ಲದೆ, ವಿಜೇತರಿಗೆ ಸೊತ್ತುಗಳನ್ನು ನೀಡಲು ಪುತ್ತೂರಿನ ಮಾರುಕಟ್ಟೆ ರಸ್ತೆಯಲ್ಲಿ ಬಾಡಿಗೆ ಕೋಣೆ ಪಡೆದಿರುವುದು ಗೊತ್ತಾಗಿದೆ.
ಇವರು ನಿಷೇಧಿತ ಸೀಂ ನಡೆಸುತ್ತಿರುವುದು ಶಿಕ್ಷಾರ್ಹ ಅಪರಾಧವಾಗಿದ್ದು ದುಬಾರಿ ಗಿಫ್ಟ್ ಹೆಸರಲ್ಲಿ ಜನರನ್ನು ಯಾಮಾರಿಸುತ್ತಿರುವುದನ್ನು ತಿಳಿದು ವಿಷನ್ ಇಂಡಿಯಾ ಲಕ್ಕಿ ಸ್ಕೀಮ್ ಅಕ್ರಮವಾಗಿ ನಡೆಸುತ್ತಿರುವ ಮಂಗಳೂರಿನ ಅಜೀಜ್ ಮತ್ತು ಸಲಾಂ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
The Puttur City Police have registered a case against two residents of Mangaluru for allegedly running a fake “Vision India Lucky Scheme,” collecting money from the public under the pretext of offering expensive gifts.
26-06-26 08:30 pm
HK News Staffer
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಶೋಭಾ ಕರಂದ್ಲಾಜೆ ನೇ...
25-06-26 09:10 pm
ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಕಳ್ಳಾಟ ! 19 ಸಾವಿರ...
24-06-26 05:55 pm
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
26-06-26 09:42 pm
HK News Staffer
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
Mangalore Drugs, Police: ಒಂದು ವರ್ಷದಲ್ಲಿ 400 ಡ...
25-06-26 10:48 pm
27-06-26 11:46 am
HK News Staffer
Mangalore, Police, criminial escapes: ಪಾಂಡೇಶ್...
27-06-26 10:54 am
Mumbai Train Murder, Mangalore: ಮುಂಬೈ ಲೋಕಲ್ ಟ...
26-06-26 07:35 pm
ಕುಳಾಯಿಗುಡ್ಡೆಯ ಮನೆ ಮೇಲೆ ಸಿಸಿಬಿ ದಾಳಿ, 2.10 ಲಕ್ಷ...
26-06-26 04:26 pm
ಕ್ರಿಪ್ಟೊ ಕರೆನ್ಸಿ ಬಗ್ಗೆ ವಿಚಾರಿಸಿದಕ್ಕೆ ₹17.64 ಲ...
25-06-26 09:40 pm