ಬ್ರೇಕಿಂಗ್ ನ್ಯೂಸ್
27-10-25 04:04 pm Bangalore Correspondent ಕ್ರೈಂ
ಬೆಂಗಳೂರು, ಅ 27 : ಫೈನಾನ್ಸ್ ಕಂಪನಿಯ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (API) ಗೇಟ್ವೇ ಬ್ರೀಚ್ ಮಾಡಿ, 47 ಕೋಟಿ ರೂಪಾಯಿ ವರ್ಗಾಯಿಸಿಕೊಂಡು ವಂಚಿಸಿದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಸಿಸಿಬಿಯ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಉದಯಪುರ ಮೂಲದ ಸಂಜಯ್ ಪಟೇಲ್ ಹಾಗೂ ಬೆಳಗಾವಿ ಮೂಲದ ಇಸ್ಮಾಯಿಲ್ ರಶೀದ್ ಅತ್ತರ್ ಬಂಧಿತರು.
ವಂಚನೆಗೆ ಬಳಸಲಾಗಿದ್ದ 600ಕ್ಕೂ ಅಧಿಕ ಖಾತೆಗಳನ್ನು ಫ್ರೀಜ್ ಮಾಡಿಸಲಾಗಿದ್ದು, ಇದುವರೆಗೂ 10 ಕೋಟಿ ರೂ ಹಣ ಹಿಂಪಡೆಯಲಾಗಿದೆ. ದುಬೈನಲ್ಲಿ ಕುಳಿತು ವಂಚನೆಯ ಜಾಲ ನಡೆಸುತ್ತಿದ್ದ ಭಾರತೀಯ ಮೂಲದ ಇನ್ನಿಬ್ಬರು ಆರೋಪಿಗಳ ಮಾಹಿತಿ ಲಭ್ಯವಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ವಂಚನೆಗಾಗಿ ವರ್ಚುವಲ್ ಪ್ರೈವೇಟ್ ನೆಟ್ವರ್ಕ್ (VPN) ಬಳಸಿದ್ದ ಆರೋಪಿಗಳು, ಫೈನಾನ್ಸ್ ಕಂಪನಿಯ ಅಪ್ಲಿಕೇಶನ್ನ ಎಪಿಐ ಗೇಟ್ವೇ ಬ್ರೀಚ್ ಮಾಡಿದ್ದರು. ಈ ಕೃತ್ಯಕ್ಕಾಗಿ ಹಾಂಕಾಂಗ್, ಫಿಲಿಫೈನ್ಸ್ ಮೂಲದ ಹ್ಯಾಕರ್ಸ್ಗಳನ್ನು ಬಳಸಿಕೊಂಡಿದ್ದರು. ಎಪಿಐ ಗೇಟ್ವೇ ಬ್ರೀಚ್ ಮಾಡಿದ ಬಳಿಕ ಕಂಪನಿಯ ಖಾತೆಯಿಂದ ಸುಮಾರು 3 ಸಾವಿರ ವಿವಿಧ ಖಾತೆಗಳಿಗೆ ಹಣ ವರ್ಗಾಯಿಸಿದ್ದರು. ನಂತರ ಆ ಹಣ ವಂಚಕರ ಖಾತೆಗಳಿಗೆ ಜಮೆಯಾಗಿತ್ತು.
ವಂಚನೆಯ ಜಾಡು ಬೆನ್ನತ್ತಿದ್ದ ಸೈಬರ್ ಕ್ರೈಂ ಪೊಲೀಸರು ಐಪಿ ಅಡ್ರೆಸ್ಗಳು, ಹಣ ವರ್ಗಾವಣೆಯಾದ ಖಾತೆಗಳ ವಿವರಗಳನ್ನು ಆಧರಿಸಿ ಸಂಜಯ್ ಪಟೇಲ್ ಹಾಗೂ ಇಸ್ಮಾಯಿಲ್ ರಶೀದ್ ಅತ್ತರ್ನನ್ನು ಬಂಧಿಸಿದ್ದಾರೆ. ದುಬೈನಲ್ಲಿರುವ ವಂಚಕರ ತಂಡದೊಂದಿಗೆ ಇಸ್ಮಾಯಿಲ್ ನಿಕಟ ಸಂಪರ್ಕ ಹೊಂದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಾರತ್ ಹಳ್ಳಿ ಔಟರ್ ರಿಂಗ್ ರಸ್ತೆಯಲ್ಲಿರುವ ಬೆಂಗಳೂರು ಮೂಲದ ಫೈನಾನ್ಸ್ ಕಂಪನಿಯ ಖಾತೆಗಳಿಗೆ ಕನ್ನ ಹಾಕಲಾಗಿತ್ತು. ಆಗಸ್ಟ್ 6 ಮತ್ತು 7ರಂದು ಕಂಪನಿಯ ಅನುಮತಿ ಇಲ್ಲದೇ ಕೆಲವು ಖಾತೆಗಳಿಗೆ ಅನಿಯಮಿತ ಮತ್ತು ಅನುಮಾನಾಸ್ಪದವಾಗಿ 47 ಕೋಟಿ ರೂ ಹಣ ವರ್ಗಾವಣೆಯಾಗಿತ್ತು. ಆಗಸ್ಟ್ 7 ರಂದು ಈ ವರ್ಗಾವಣೆಗಳನ್ನ ಗಮನಿಸಿದ ಕಂಪನಿಯವರು ಕೂಡಲೇ ತಮ್ಮ ಖಾತೆ ಹೊಂದಿರುವ ಸಂಬಂಧಿತ ಬ್ಯಾಂಕ್ಗಳಿಗೆ ಮಾಹಿತಿ ನೀಡಿ, ಡೆಬಿಟ್ ಫ್ರೀಜ್ ಮಾಡಿಸಿದ್ದರು.
ಆಂತರಿಕ ತನಿಖೆ ನಡೆಸಿದಾಗ ಹಣ ವರ್ಗಾವಣೆಯಾದ ಖಾತೆಗಳು ಕಂಪನಿಯ ಕಡೆಯಿಂದ ವೇಟ್ಲಿಸ್ಟ್ ಮಾಡಲಾದ ಖಾತೆಗಳಲ್ಲ ಮತ್ತು ಅವುಗಳ ಐಪಿ ಅಡ್ರೆಸ್ಗಳು ವಿದೇಶಿ ಮೂಲದವು ಎಂದು ತಿಳಿದು ಬಂದಿತ್ತು. ಕೂಡಲೇ ಕಂಪನಿಯ ಹಿರಿಯ ವ್ಯವಸ್ಥಾಪಕರು ನೀಡಿದ ದೂರಿನನ್ವಯ ಸಿಸಿಬಿಯ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
Central Crime Branch (CCB) Cyber Crime police have arrested two men for allegedly siphoning off ₹47 crore from a Bengaluru-based finance company by breaching its Application Programming Interface (API) gateway.
14-08-26 08:42 pm
HK News Staffer
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
15-08-26 10:08 pm
HK News Staffer
Mangalore City Centre KFC raided: Six-month-o...
15-08-26 09:30 pm
ಗುಟ್ಕಾ, ಪಾನ್ ಮಸಾಲ ಪ್ರತ್ಯೇಕ ಕೊಟ್ಟರೆ ನಿರ್ಬಂಧ ಇಲ...
15-08-26 04:52 pm
Infosys Mangalore, News: ಕೊಟ್ಟಾರದ ಇನ್ಫೋಸಿಸ್ ಕ...
14-08-26 10:23 pm
ಮಂಗಳೂರು ವಿಮಾನ ದುರಂತದ ಕಹಿನೆನಪು ಬಾಲಕಿಯ ಮನದಲ್ಲಿ...
14-08-26 02:07 pm
15-08-26 09:06 pm
HK News Staffer
ಸ್ವಾತಂತ್ರ್ಯ ದಿನದಂದೇ ಚಾಮರಾಜನಗರದಲ್ಲಿ ಗುಂಡಿನ ಸದ್...
15-08-26 06:11 pm
David Dsouza Murder, Arrest: ಡೇವಿಡ್ ಹತ್ಯೆ ಪ್ರ...
15-08-26 05:09 pm
ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದಿದ್ದಕ್ಕ...
15-08-26 04:19 pm
ಕೆಲಸ ಮಾಡಿಕೊಡುವ ನೆಪದಲ್ಲಿ ಪದೇಪದೇ ಹಣಕ್ಕಾಗಿ ಒತ್ತಾ...
15-08-26 02:06 pm