ಬ್ರೇಕಿಂಗ್ ನ್ಯೂಸ್
28-09-25 04:57 pm Udupi Correspondent ಕ್ರೈಂ
ಉಡುಪಿ, ಸೆ.28 : ಎಕೆಎಂಎಸ್ ಬಸ್ ಮಾಲಕ, ರೌಡಿಶೀಟರ್ ಸೈಫುದ್ದೀನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಲ್ಪೆ ಪೊಲೀಸರು ಮೂವರು ಆರೋಪಿಗಳನ್ನು ಘಟನೆ ನಡೆದ 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉಡುಪಿ ಮಿಷನ್ ಕಂಪೌಂಡ್ ಬಳಿಯ ನಿವಾಸಿ ಮುಹಮದ್ ಫೈಸಲ್ ಖಾನ್(27), ಉಡುಪಿ ಕರಂಬಳ್ಳಿ ಜನತಾ ಕಾಲೋನಿಯ ಮುಹಮದ್ ಶರೀಫ್(37) ಹಾಗೂ ಸುರತ್ಕಲ್ ಕೃಷಾಪುರದ ಅಬ್ದುಲ್ ಶುಕೂರು ಯಾನೆ ಅದ್ದು(43) ಬಂಧಿತ ಆರೋಪಿಗಳು. ಶನಿವಾರ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರಿನ ಸಾಲ್ಮರದಲ್ಲಿ ಸೈಫುದ್ದೀನ್ ಅವರನ್ನು ಹತ್ಯೆ ಮಾಡಲಾಗಿತ್ತು. ಸೈಫುದ್ದೀನ್ ಇತ್ತೀಚೆಗೆ ಖರೀದಿಸಿದ್ದ ಮನೆಯಲ್ಲಿ ಅವರ ಸ್ನೇಹಿತರೇ ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿದ್ದರೆಂದು ತಿಳಿದುಬಂದಿತ್ತು.


ಮನೆಯ ಹೊರಗೆ ಅಂಗಳದಲ್ಲಿ ಮಚ್ಚಿನಿಂದ ಯದ್ವಾತದ್ವಾ ಕಡಿದು ಹಾಕಿದ್ದು ಸ್ಥಳದಲ್ಲಿಯೇ ಜೀವ ಹೋಗಿತ್ತು. ಸಂಪೂರ್ಣ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹವನ್ನು ಪೊಲೀಸರು ಆಸ್ಪತ್ರೆಗೆ ರವಾನಿಸಿದ್ದರು. ಉಡುಪಿ ಮತ್ತು ಹಿರಿಯಡ್ಕ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ ಸೈಫ್ ಮೇಲೆ ಕೊಲೆ, ಕೊಲೆಯತ್ನ ಸೇರಿ 18 ಕೇಸುಗಳಿದ್ದವು. ಖಾಸಗಿ ಬಸ್ಸನ್ನು ಪಾಲುದಾರಿಕೆಯಲ್ಲಿ ನಡೆಸುತ್ತಿದ್ದ ಎನ್ನಲಾಗುತ್ತಿದ್ದು ಮಣಿಪಾಲದಲ್ಲಿ ಕುಟುಂಬದ ಜತೆ ವಾಸವಾಗಿದ್ದ. ಈತನಿಗೆ ಕುಕ್ಕಿಕಟ್ಟೆಯ ನಿವಾಸಿ ಫೈಜಲ್ ಖಾನ್ ಮತ್ತು ದೊಡ್ಡಣಗುಡ್ಡೆ ನಿವಾಸಿ ಶರೀಫ್ ಹತ್ತಿರದ ಸ್ನೇಹಿತರಾಗಿದ್ದರು. ಸೈಫ್ನ ಮನೆಗೆ ಶನಿವಾರ ಬೆಳಗ್ಗೆ ಆಗಮಿಸಿದ್ದ ಫೈಜಲ್ ಖಾನ್, ಬಸ್ನ ವ್ಯವಹಾರದ ಕುರಿತು ಮಾತನಾಡಲು ಮಂಗಳೂರಿಗೆ ಹೋಗೋಣ ಎಂದು ಹೇಳಿ ಮಣಿಪಾಲದ ಕಾಯಿನ್ ಸರ್ಕಲ್ ಬಳಿ ಇರುವ ಮನೆಯ ಬಳಿಯಿಂದ ಅವನ ಕಾರಿನಲ್ಲಿ ತೆರಳಿದ್ದರು. ಆದರೆ ಇದರ ನಡುವೆಯೇ ಕಾರು ಮಲ್ಪೆ ಕಡೆಗೆ ತಿರುಗಿದ್ದು ಸಾಲ್ಮರದಲ್ಲಿ ಹೊಸ ಮನೆಯ ಎದುರಲ್ಲಿ ನಿಂತಿತ್ತು.
ಸ್ನೇಹಿತರಾದ ಫೈಜಲ್ ಖಾನ್ ಮತ್ತು ಶರೀಫ್ ಇತರರೊಂದಿಗೆ ಸೇರಿಕೊಂಡು ಸೈಫ್ ಮೇಲೆ ಹಲ್ಲೆಗೈದು ಕೊಂದು ಮುಗಿಸಿದ್ದಾರೆ. ಇವರ ನಡುವೆ ಹಣಕಾಸು ದ್ವೇಷ ಇತ್ತೇ, ಅದೇ ಕಾರಣಕ್ಕೆ ಕೃತ್ಯ ಆಗಿದೆಯೇ ಅಥವಾ ಹಳೆಯ ಕೇಸಿಗೆ ಪ್ರತೀಕಾರಕ್ಕಾಗಿ ಕೊಂದಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೊಲ್ಲುವ ಉದ್ದೇಶದಿಂದ ಸ್ನೇಹಿತರೇ ಮಲ್ಪೆಗೆ ಕರೆದುಕೊಂಡು ಹೋಗಿ ಕೊಲೆಗೈದು ಪರಾರಿಯಾಗಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಸೈಫುದ್ದೀನ್ ಅವರ ಮಗ ದೂರು ನೀಡಿದ್ದಾರೆ.
Udupi police have arrested three men within 24 hours in connection with the murder of Saifuddin, a bus operator and rowdy-sheeter facing 18 criminal cases.Saifuddin was hacked to death with machetes on Saturday at his newly purchased house in Kodavoor, allegedly by close friends Muhammad Faisal Khan (27), Muhammad Sharif (37), and Abdul Shukoor alias Addu (43).
10-05-26 01:04 pm
HK News Staffer
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
12ನೇ ಶತಮಾನದ ಕಾಕತೀಯರ ಕಾಲದ ಪ್ರಾಚೀನ ಶಿವ ದೇಗುಲ ಧ್...
08-05-26 08:05 pm
ಕಲಬುರಗಿ ಪೊಲೀಸರ ‘ಆಪರೇಷನ್ ಭರವಸೆ’ ಸಕ್ಸಸ್; 2 ತಿಂಗ...
08-05-26 12:21 pm
IPS Ramachandra Rao: ಸರ್ಕಾರಿ ಕಚೇರಿಯಲ್ಲೇ ತುಂಟಾ...
07-05-26 03:10 pm
10-05-26 09:38 pm
HK News Desk
ರಾಹುಲ್ ಗಾಂಧಿ ಸಮ್ಮುಖದಲ್ಲೇ ಪೂರ್ಣ ವಂದೇ ಮಾತರಂ ಹಾಡ...
10-05-26 09:15 pm
Vijay New CM: ತಮಿಳರ ಮುಖ್ಯಮಂತ್ರಿ ಆಗುತ್ತಲೇ ಜೋಸೆ...
10-05-26 12:26 pm
ತಮಿಳುನಾಡನ್ನು ದೇವರೇ ಕಾಪಾಡಬೇಕು ; ಟಿವಿಕೆ ಗ್ಯಾರಂಟ...
09-05-26 12:06 pm
ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ; ಶತ್ರುರಾಷ್ಟ...
09-05-26 11:14 am
09-05-26 11:51 pm
Mangalore Correspondent
ಮಂಜೇಶ್ವರ ಕ್ಷೇತ್ರ ; ಸಿಪಿಎಂ ಅಭ್ಯರ್ಥಿಗೆ ಇತಿಹಾಸದಲ...
09-05-26 02:15 pm
ಮನೆ ಕಳ್ಳತನ ತಡೆಗೆ ಉಡುಪಿ ಪೊಲೀಸರ ಹೊಸ ಹೆಜ್ಜೆ ; “ಲ...
09-05-26 02:13 pm
Kuthar, Mangalore, UT Khader: ಕುತ್ತಾರಿನಲ್ಲಿ ಕ...
08-05-26 10:33 pm
ಸುತ್ತಿ ಬಳಸಿ ಓಡಾಟಕ್ಕೆ ಬೀಳಲಿದೆ ಬ್ರೇಕ್ ; ಮಂಗಳೂರು...
08-05-26 09:05 pm
09-05-26 10:29 pm
HK News Desk
ಉಪ್ಪಿನಂಗಡಿಯಲ್ಲಿ ರೋಡ್ ರೋಲರ್ ಹರಿದು ಕೂಲಿ ಕಾರ್ಮಿಕ...
09-05-26 09:50 pm
ಸಾಲ ಕೊಟ್ಟ ಮಹಿಳೆಯ ಜೀವ ತೆಗೆದ ಕಟುಕರು; ಅಪಘಾತದ ನಾಟ...
09-05-26 08:29 pm
ಆರೋಪಿಯಿಂದಲೇ ಲಂಚ ; ಒಂದು ಲಕ್ಷ ಪಡೆಯುತ್ತಿದ್ದಾಗ ಗು...
09-05-26 06:42 pm
ಸ್ನಾನಕ್ಕೆ ತೆರಳಿದ್ದ ಸ್ನೇಹಿತೆಯರು ನದಿಯಲ್ಲಿ ಮುಳುಗ...
09-05-26 09:54 am